1. {#1ಆಗೂರನ ಮಾತುಗಳು }
2. [PS]ದೈವೋಕ್ತಿ. ಯಾಕೆ[* ಯಾಕೆ ಜಾಕೆ ] ಎಂಬುವವನ ಮಗನಾದ ಆಗೂರನ ಮಾತುಗಳು. ಇವನು ಇಥಿಯೇಲನಿಗೆ [† ಇಥಿಯೇಲ ಅಂದರೆ ಓ ದೇವರೇ ನಾನು ದಣಿದಿದ್ದೇನೆ. ], ಇಥಿಯೇಲನಿಗೂ ಉಕ್ಕಾಲನಿಗೂ [‡ ಉಕ್ಕಾಲ ಅಂದರೆ ನಾನು ಸಂಪೂರ್ಣವಾಗಿ ದಣಿದಿದ್ದೇನೆ. ] ಹೀಗೆ ಹೇಳಿದನು. [PE][QS]ಮನುಷ್ಯರಲ್ಲಿ ನನ್ನಂಥ ಪಶುಪ್ರಾಯನು ಇಲ್ಲವಷ್ಟೆ, [QE][QS2]ಮಾನುಷ ವಿವೇಕವು ನನಗಿಲ್ಲ. [QE]
3. [QS]ನಾನು ಜ್ಞಾನವನ್ನು ಪಡೆದುಕೊಂಡಿಲ್ಲ, [QE][QS2]ಪರಿಶುದ್ಧನ ವಿಷಯವಾದ ತಿಳಿವಳಿಕೆಯನ್ನು ಹೊಂದಿಲ್ಲ. [QE]
4. [QS]ಆಕಾಶಕ್ಕೆ ಏರಿ ಇಳಿದಿರುವವನಾರು? [QE][QS2]ಮುಷ್ಠಿಯಲ್ಲಿ ಗಾಳಿಯನ್ನು ಕೂಡಿಸಿರುವವರು ಯಾರು? [QE][QS2]ತನ್ನ ಬಟ್ಟೆಯಲ್ಲಿ ನೀರನ್ನು ಮೂಟೆಕಟ್ಟಿರುವವರು ಯಾರು? [QE][QS2]ಭೂಮಿಯ ಎಲ್ಲೆಗಳನ್ನೆಲ್ಲಾ ಸ್ಥಾಪಿಸಿರುವವರು ಯಾರು? [QE][QS2]ಅವನ ಹೆಸರೇನು? ಅವನ ಮಗನ ಹೆಸರೇನು? ನೀನೇ ಬಲ್ಲವನು. [QE]
5. [QS]ದೇವರ ಪ್ರತಿಯೊಂದು ಮಾತು ಶುದ್ಧವಾದದ್ದು, [QE][QS2]ಆತನು ಶರಣಾಗತರಿಗೆ ಗುರಾಣಿಯಾಗಿದ್ದಾನೆ. [QE]
6. [QS]ಆತನ ಮಾತುಗಳಿಗೆ ಯಾವುದನ್ನೂ ಸೇರಿಸಬೇಡ, [QE][QS2]ಆತನು ನಿನ್ನನ್ನು ಖಂಡಿಸುವಾಗ ನೀನು ಸುಳ್ಳುಗಾರನೆಂದು ತೋರಿಬಂದೀಯೆ. [QE]
7. [QS]ನಿನ್ನಿಂದ ಎರಡು ವರಗಳನ್ನು ಬೇಡಿಕೊಂಡಿದ್ದೇನೆ, [QE][QS2]ಅನುಗ್ರಹಿಸದಿರಬೇಡ, ನಾನು ಸಾಯುವುದರೊಳಗಾಗಿ ಅವುಗಳನ್ನು ಕೈಗೂಡಿಸು. [QE]
8. [QS]ನನ್ನಿಂದ ಕಪಟವನ್ನೂ, ಸುಳ್ಳುಮಾತನ್ನೂ ತೊಲಗಿಸು, [QE][QS2]ಬಡತನವನ್ನಾಗಲಿ, ಐಶ್ವರ್ಯವನ್ನಾಗಲಿ ಕೊಡದೆ ನನಗೆ ತಕ್ಕಷ್ಟು ಆಹಾರವನ್ನು ಭೋಜನಮಾಡಿಸು. [QE]
9. [QS]ಹಾಗಾಗದೆ ಹೊಟ್ಟೆತುಂಬಿದವನಾದರೆ, “ಯೆಹೋವನು ಯಾರೋ?” ಎಂದು ನಿನ್ನನ್ನು ತಿರಸ್ಕರಿಸೇನು, [QE][QS2]ಬಡವನಾದರೆ ಕಳ್ಳತನಮಾಡಿ ನನ್ನ ದೇವರಾದ ನಿನ್ನ ಹೆಸರನ್ನು ಅಯೋಗ್ಯವಾಗಿ ಎತ್ತೆನು. [QE]
10. [QS]ಆಳಿನ ಮೇಲೆ ದಣಿಗೆ ದೂರನ್ನು ಹೇಳಬೇಡ, [QE][QS2]ಅವನು ಶಪಿಸಾನು, ನಿನ್ನಲ್ಲೇ ದೋಷವು ಕಂಡು ಬಂದೀತು. [QE]
11. [QS]ತಾಯಿಗೆ ಶುಭವನ್ನು ಕೋರದೆ, [QE][QS2]ತಂದೆಯನ್ನು ಶಪಿಸುವ ಒಂದು ತರದವರು ಉಂಟು. [QE]
12. [QS]ತಮ್ಮ ಕೊಳೆಯನ್ನು ತೊಳಕೊಳ್ಳದೆ ತಾವೇ ಶುದ್ಧರೆಂದು, [QE][QS2]ಎಣಿಸಿಕೊಳ್ಳುವ ಬೇರೊಂದು ತರದವರು ಉಂಟು. [QE]
13. [QS]ಕಣ್ಣುರೆಪ್ಪೆಗಳನ್ನೆತ್ತಿಕೊಂಡು, ಎಷ್ಟೋ ಮೇಲೆ [QE][QS2]ಎಷ್ಟೋ ಮೇಲೆ ಮೇಲೆಯೇ ನೋಡುತ್ತಿರುವ ಇನ್ನೊಂದು ತರದವರು ಉಂಟು. [QE]
14. [QS]ಖಡ್ಗದಂತಿರುವ ಹಲ್ಲುಗಳೂ ಕತ್ತಿಯಂತಿರುವ ಕೋರೆಗಳೂ ಉಳ್ಳವರಾಗಿ [QE][QS2]ಭೂಮಿಯೊಳಗಿಂದ ಬಡವರನ್ನೂ, ಮನುಷ್ಯರ ಮಧ್ಯದೊಳಗಿಂದ ದಿಕ್ಕಿಲ್ಲದವರನ್ನೂ, [QE][QS2]ಅಗೆದು ನುಂಗಿಬಿಡುವ ಮತ್ತೊಂದು ತರದವರು ಉಂಟು. [QE]
15. [QS]ಕೊಡು, ಕೊಡು ಅನ್ನುವ ಎರಡು ಹೆಣ್ಣು ಮಕ್ಕಳು ಜಿಗಣೆಗೆ ಉಂಟು. [QE][QS2]ತೃಪ್ತಿಪಡದವುಗಳು ಮೂರು ಉಂಟು, [QE][QS2]ಹೌದು, ಸಾಕೆನ್ನದವುಗಳು ನಾಲ್ಕು ಉಂಟು. [QE]
16. [QS]ಯಾವುವೆಂದರೆ, ಪಾತಾಳ, ಹೆರದ ಗರ್ಭ, [QE][QS2]ನೀರಿನಿಂದ ತೃಪ್ತಿಪಡದ ಭೂಮಿ, [QE][QS2]ಸಾಕಾಯಿತೆಂದು ಹೇಳದ ಬೆಂಕಿ, ಇವೇ. [QE]
17. [QS]ತಂದೆಯನ್ನು ಹಾಸ್ಯಮಾಡಿ ತಾಯಿಯ ಅಪ್ಪಣೆಯನ್ನು, [QE][QS2]ಧಿಕ್ಕರಿಸುವವನ ಕಣ್ಣನ್ನು, [QE][QS2]ಹಳ್ಳಕೊಳ್ಳದ ಕಾಗೆಗಳು ಕುಕ್ಕುವವು, ರಣಹದ್ದುಗಳು ತಿಂದುಬಿಡುವವು. [QE]
18. [QS]ಮೂರು ವಿಷಯಗಳು ನನ್ನ ಬುದ್ಧಿಯನ್ನು ಮೀರಿವೆ, [QE][QS2]ಹೌದು, ನಾಲ್ಕನ್ನು ಗ್ರಹಿಸಲಾರೆನು; [QE]
19. [QS]ಯಾವುವೆಂದರೆ, ಆಕಾಶದಲ್ಲಿ ಹದ್ದಿನ ಹಾದಿ, [QE][QS2]ಬಂಡೆಯ ಮೇಲೆ ಸರ್ಪದ ಸರಣಿ, [QE][QS2]ಸಾಗರದ ನಡುವೆ ಹಡಗಿನ ಮಾರ್ಗ, [QE][QS2]ಸ್ತ್ರೀಯಲ್ಲಿ ಪುರುಷನ ಪದ್ಧತಿ, ಇವೇ. [QE]
20. [QS]ಜಾರಳ ನಡತೆಯು ಹೀಗೆಯೇ ಸರಿ, [QE][QS2]ಅವಳು ತಿಂದು ಬಾಯಿ ಒರೆಸಿಕೊಂಡು, [QE][QS2]“ನಾನು ತಪ್ಪುಮಾಡಲಿಲ್ಲವಲ್ಲವೆ” ಅಂದುಕೊಳ್ಳುವಳು. [QE]
21. [QS]ಮೂರರ ಭಾರದಿಂದ ಭೂಮಿಯು ಕಂಪಿಸುತ್ತದೆ, [QE][QS2]ಹೌದು, ನಾಲ್ಕರ ಹೊರೆಯನ್ನು ತಾಳಲಾರದು. [QE]
22. [QS]ಯಾವುವೆಂದರೆ, ಪಟ್ಟಕ್ಕೆ ಬಂದ ದಾಸನು, [QE][QS2]ಹೊಟ್ಟೆತುಂಬಿದ ನೀಚನು, [QE]
23. [QS]ಮದುವೆಯಾದ ಚಂಡಿಯು, [QE][QS2]ಸವತಿಯಾದ ತೊತ್ತು, ಇವೇ. [QE]
24. [QS]ಭೂಮಿಯ ಮೇಲೆ ಅಧಿಕ ಜ್ಞಾನವುಳ್ಳ ನಾಲ್ಕು ಸಣ್ಣ ಜಂತುಗಳುಂಟು. [QE]
25. [QS]ಇರುವೆಗಳು ದುರ್ಬಲಜಾತಿಯಾವಾದರೂ, [QE][QS2]ಸುಗ್ಗಿಯಲ್ಲಿ ತಮ್ಮ ಆಹಾರವನ್ನು ಸಿದ್ಧಮಾಡಿಕೊಳ್ಳುವವು. [QE]
26. [QS]ಬೆಟ್ಟದ ಮೊಲಗಳು ದೊಡ್ಡ ಜಾತಿಯಲ್ಲದಿದ್ದರೂ, [QE][QS2]ಬಂಡೆಗಳಲ್ಲಿ ತಮ್ಮ ಮನೆಗಳನ್ನು ಮಾಡಿಕೊಳ್ಳುವವು. [QE]
27. [QS]ಮಿಡತೆಗಳಿಗೆ ಅರಸನಿಲ್ಲ, [QE][QS2]ಆದರೂ ಅವೆಲ್ಲಾ ದಂಡುದಂಡಾಗಿ ಹೊರಡುವವು. [QE]
28. [QS]ಹಲ್ಲಿಯನ್ನು[§ ಹಲ್ಲಿಯನ್ನುಅಥವಾ ಜೇಡರಹುಳವು ಬಲೆಯನ್ನು ತನ್ನ ಕೈಯಿಂದ ಹೆಣೆಯುತ್ತದೆ. ] ಅಂಗೈಯಿಂದ ಹಿಡಿಯಬಹುದಾದರೂ, [QE][QS2]ಅದು ಅರಮನೆಗಳಲ್ಲಿ ವಾಸಮಾಡುವುದು. [QE]
29. [QS]ಗಂಭೀರಾಗಮನದ ಮೂರು ಪ್ರಾಣಿಗಳುಂಟು, [QE][QS2]ಹೌದು, ಗಂಭೀರಗತಿಯ ನಾಲ್ಕುಂಟು. [QE]
30. [QS]ಯಾವುದಕ್ಕೂ ಹೆದರಿ ಓರೆಯಾಗದ, [QE][QS2]ಮೃಗರಾಜನಾದ ಸಿಂಹ, [QE]
31. [QS]ಹೆಮ್ಮೆಯಿಂದ ನಡೆಯುವ ಹುಂಜ,[* ಹೆಮ್ಮೆಯಿಂದ ನಡೆಯುವ ಹುಂಜ, ಅಥವಾ ಬೇಟೆನಾಯಿ ಅಥವಾ ಯುದ್ಧ-ಕುದುರೆ. ] ಹೋತವು ಸಹ, [QE][QS2]ಸೈನ್ಯಸಮೇತನಾದ ರಾಜ. [QE]
32. [QS]ನೀನು ಉಬ್ಬಿಕೊಂಡು ಮೂರ್ಖನಾಗಿ ನಡೆದಿದ್ದರೆ, [QE][QS2]ಅಥವಾ ದುರಾಲೋಚನೆಮಾಡಿದ್ದರೆ ಬಾಯಿಯ ಮೇಲೆ ಕೈಯಿಟ್ಟುಕೋ. [QE]
33. [QS]ಹಾಲು ಕಡೆಯುವುದರಿಂದ ಬೆಣ್ಣೆ, [QE][QS2]ಮೂಗು ಹಿಂಡುವುದರಿಂದ ರಕ್ತ, [QE][QS2]ಕೋಪಕಲಕುವುದರಿಂದ ಜಗಳ. [QE]