1. [QS]ಕೆಟ್ಟವರನ್ನು ನೋಡಿ ಹೊಟ್ಟೆಕಿಚ್ಚುಪಡಬೇಡ, [QE][QS2]ಅವರ ಸಹವಾಸವನ್ನು ಬಯಸಬೇಡ. [QE]
2. [QS]ಅವರ ಮನಸ್ಸು ಹಿಂಸೆಯನ್ನು ಯೋಚಿಸುತ್ತಿರುವುದು, [QE][QS2]ಅವರ ತುಟಿಯು ಹಾನಿಯನ್ನು ಪ್ರಸ್ತಾಪಿಸುತ್ತಿರುವುದು. [QE]
3. [QS]ಮನೆಯನ್ನು ಕಟ್ಟುವುದಕ್ಕೆ ಜ್ಞಾನವೇ ಸಾಧನ, [QE][QS2]ಅದನ್ನು ಸ್ಥಿರಪಡಿಸುವುದಕ್ಕೆ ವಿವೇಕವೇ ಆಧಾರ, [QE]
4. [QS]ಅದರ ಕೋಣೆಗಳನ್ನು ಅಮೂಲ್ಯವಾದ ಎಲ್ಲಾ, [QE][QS2]ಇಷ್ಟ ಸಂಪತ್ತಿನಿಂದ ತುಂಬಿಸುವುದಕ್ಕೆ, [QE][QS2]ತಿಳಿವಳಿಕೆಯೇ ಉಪಕರಣ. [QE]
5. [QS]ಜ್ಞಾನಿಗೆ ತ್ರಾಣ, [QE][QS2]ಬಲ್ಲವನಿಗೆ ಬಹು ಬಲ. [QE]
6. [QS]ಮಂತ್ರಾಲೋಚನೆಯಿಂದ ಯುದ್ಧವನ್ನು ನಡೆಸು, [QE][QS2]ಬಹು ಸುಮಂತ್ರಿಗಳು ಇರುವಲ್ಲಿ ಸುರಕ್ಷಣೆಯಿರುವುದು. [QE]
7. [QS]ಜ್ಞಾನವು ಮೂರ್ಖನಿಗೆ ನಿಲುಕದು, [QE][QS2]ಅವನು ನ್ಯಾಯಸ್ಥಾನದಲ್ಲಿ ಬಾಯಿಬಿಡಲಾರನು. [QE]
8. [QS]ಕೇಡನ್ನು ಕಲ್ಪಿಸುವವನು, [QE][QS2]ಕುಯುಕ್ತಿಯುಳ್ಳವನು ಎನಿಸಿಕೊಳ್ಳುವನು. [QE]
9. [QS]ಮೂರ್ಖನ ಸಂಕಲ್ಪವು ಪಾಪವೇ, [QE][QS2]ಧರ್ಮನಿಂದಕನು ಮನುಷ್ಯರಿಗೆ ಅಸಹ್ಯ. [QE]
10. [QS]ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ, [QE][QS2]ನಿನ್ನ ಬಲವೂ ಇಕ್ಕಟ್ಟೇ. [QE]
11. [QS]ಕೊಲೆಗೆ ಸೆಳೆಯಲ್ಪಟ್ಟವರನ್ನು ರಕ್ಷಿಸು, [QE][QS2]ಸಂಹಾರಕ್ಕೆ ಗುರಿಯಾದವರನ್ನು ತಪ್ಪಿಸು. [QE]
12. [QS]“ಇದು ನನಗೆ ಗೊತ್ತಿರಲಿಲ್ಲ” ಎಂದು ನೀನು ನೆವ ಹೇಳಿದರೆ, [QE][QS2]ಹೃದಯಶೋಧಕನು ಗ್ರಹಿಸುವುದಿಲ್ಲವೋ? [QE][QS]ನಿನ್ನ ಆತ್ಮವನ್ನು ಕಾಯುವಾತನು ತಿಳಿಯುವುದಿಲ್ಲವೋ? [QE][QS2]ಪ್ರತಿಯೊಬ್ಬನ ಕರ್ಮಕ್ಕೆ ಪ್ರತಿಫಲವನ್ನು ಕೊಡದೆ ಬಿಟ್ಟಾನೇ? [QE]
13. [QS]ಕಂದಾ, ಜೇನು ಚೆನ್ನಾಗಿದೆಯಲ್ಲವೆ, [QE][QS2]ಜೇನುತುಪ್ಪವು ನಿನ್ನ ಬಾಯಿಗೆ ಸಿಹಿಯಷ್ಟೆ, ಅದನ್ನು ತಿನ್ನು. [QE]
14. [QS]ಜ್ಞಾನವು ನಿನ್ನ ಆತ್ಮಕ್ಕೆ ಹೀಗೆಯೇ ಇರುವುದೆಂದು ತಿಳಿದುಕೋ, [QE][QS2]ಅದನ್ನು ಪಡೆದುಕೊಂಡರೆ ಮುಂದೆ ಫಲಕಾಲ ಬರುವುದು, [QE][QS2]ನಿನ್ನ ನಿರೀಕ್ಷೆಯು ನಿರರ್ಥಕವಾಗದು. [QE]
15. [QS]ದುಷ್ಟನೇ, ಶಿಷ್ಟನ ಮನೆಗೆ ಹೊಂಚುಹಾಕಬೇಡ, [QE][QS2]ಅವನ ನಿವಾಸವನ್ನು ಸೂರೆಮಾಡಬೇಡ. [QE]
16. [QS]ಶಿಷ್ಟನು ಏಳು ಸಾರಿ ಬಿದ್ದರೂ ಮತ್ತೆ ಏಳುವನು, [QE][QS2]ದುಷ್ಟನು ಕೇಡಿನಿಂದ ಬಿದ್ದೇಹೋಗುವನು. [QE]
17. [QS]ನಿನ್ನ ಶತ್ರು ಬಿದ್ದರೆ ಹಿಗ್ಗಬೇಡ, [QE][QS2]ಎಡವಿದರೆ ನಿನ್ನ ಹೃದಯವು ಹರ್ಷಿಸದಿರಲಿ. [QE]
18. [QS]ಯೆಹೋವನು ನಿನ್ನ ಹರ್ಷವನ್ನು ಕಂಡು ಬೇಸರಗೊಂಡು, [QE][QS2]ತನ್ನ ಕೋಪವನ್ನು ಅವನ ಕಡೆಯಿಂದ ತಿರುಗಿಸಾನು. [QE]
19. [QS]ಕೆಡುಕರ ಮೇಲೆ ಉರಿಗೊಳ್ಳದಿರು, [QE][QS2]ದುಷ್ಟರನ್ನು ನೋಡಿ ಹೊಟ್ಟೆಕಿಚ್ಚುಪಡದಿರು. [QE]
20. [QS]ಕೆಟ್ಟವನಿಗೆ ಶುಭಕಾಲವು ಬಾರದು, [QE][QS2]ದುಷ್ಟರ ದೀಪವು ಆರಿಯೇ ಹೋಗುವುದು. [QE]
21. [QS]ಮಗನೇ, ಯೆಹೋವನಿಗೂ ಮತ್ತು ರಾಜನಿಗೂ ಭಯಪಡು, [QE][QS2]ತಿರುಗಿಬೀಳುವವರ ಗೊಡವೆಗೆ ಹೋಗಬೇಡ. [QE]
22. [QS]ಅವರಿಬ್ಬರು ವಿಧಿಸುವ ವಿಪತ್ತು ಫಕ್ಕನೆ ಸಂಭವಿಸುವುದು, [QE][QS2]ಅವರಿಂದಾಗುವ ನಾಶವು ಯಾರಿಗೆ ತಿಳಿದೀತು? [QE]
23. {#1ಬೇರೆ ಕೆಲವು ಹೇಳಿಕೆಗಳು } [QS]ಇವು ಕೂಡ ಜ್ಞಾನಿಗಳ ಮಾತುಗಳು: [QE][QS2]ನ್ಯಾಯವಿಚಾರಣೆಯಲ್ಲಿ ಪಕ್ಷಪಾತವು ಧರ್ಮವಲ್ಲ. [QE]
24. [QS]ಯಾವನು ಅಧರ್ಮಿಗೆ, “ನೀನು ಧರ್ಮಾತ್ಮನು” ಎಂದು ಹೇಳುತ್ತಾನೋ, [QE][QS2]ಅವನನ್ನು ಜನರು ಶಪಿಸುವರು, ಪ್ರಜೆಗಳು ದೂಷಿಸುವರು. [QE]
25. [QS]ದುಷ್ಟನನ್ನು ಗದರಿಸುವವರಿಗಾದರೋ ಶುಭವಾಗುವುದು, [QE][QS2]ಸುಖಕರವಾದ ಆಶೀರ್ವಾದವೂ ಲಭಿಸುವುದು. [QE]
26. [QS]ಯಥಾರ್ಥವಾದ ಉತ್ತರವು, [QE][QS2]ತುಟಿಗೆ ಮುದ್ದು. [QE]
27. [QS]ನಿನ್ನ ಕೆಲಸದ ಸಾಮಾನುಗಳನ್ನು ಸಿದ್ಧಮಾಡು, [QE][QS2]ನಂತರ ಹೊಲಗದ್ದೆಗಳ ಕೆಲಸವನ್ನು ಮುಗಿಸು, [QE][QS2]ಆಮೇಲೆ ನಿನ್ನ ಮನೆಯನ್ನು ಕಟ್ಟು. [QE]
28. [QS]ಕಾರಣವಿಲ್ಲದೆ ನೆರೆಯವನಿಗೆ ವಿರುದ್ಧವಾಗಿ ಸಾಕ್ಷಿ ಹೇಳಬೇಡ, [QE][QS2]ಮಾತಿನಿಂದ ಮೋಸಮಾಡಬೇಡ. [QE]
29. [QS]“ಅವನು ನನಗೆ ಮಾಡಿದಂತೆ ನಾನೂ ಅವನಿಗೆ ಮಾಡುವೆನು, [QE][QS2]ಅವನು ಮಾಡಿದ್ದಕ್ಕೆ ಸರಿಯಾಗಿ ಮುಯ್ಯಿತೀರಿಸುವೆನು” ಅಂದುಕೊಳ್ಳಬೇಡ. [QE]
30. [QS]ಸೋಮಾರಿಯ ಹೊಲದ ಮೇಲೆಯೂ, [QE][QS2]ಬುದ್ಧಿಹೀನನ ದ್ರಾಕ್ಷಿಯ ತೋಟದ ಮೇಲೆಯೂ ಹಾದು ಹೋದೆನು. [QE]
31. [QS]ಆಹಾ, ಮುಳ್ಳುಗಿಡಗಳು ಅದರಲ್ಲಿ ಹರಡಿಕೊಂಡಿದ್ದವು, [QE][QS2]ಕಳೆಗಳು ಅದನ್ನು ಮುಚ್ಚಿದ್ದವು, [QE][QS2]ಅದರ ಕಲ್ಲಿನ ಗೋಡೆಯು ಹಾಳಾಗಿತ್ತು. [QE]
32. [QS]ಆಗ ನಾನು ನೋಡಿ ಆಲೋಚಿಸಿದೆನು, [QE][QS2]ದೃಷ್ಟಿಸಿ ಶಿಕ್ಷಿತನಾದೆನು. [QE]
33. [QS]ಇನ್ನು ಸ್ವಲ್ಪ ನಿದ್ದೆ, ಇನ್ನು ತುಸ ತೂಕಡಿಕೆ, [QE][QS2]ಇನ್ನೂ ಕೊಂಚ ನಿದ್ದೆಗಾಗಿ ಕೈಮುದುರಿಕೊಳ್ಳುವೆ ಅಂದುಕೊಳ್ಳುವಿಯಾ? [QE]
34. [QS]ಬಡತನವು ದಾರಿಗಳ್ಳನ ಹಾಗೂ, [QE][QS2]ಕೊರತೆಯು ಪಂಜುಗಳ್ಳನಂತೆಯೂ ನಿನ್ನ ಮೇಲೆ ಬೀಳುವವು. [QE]