1. ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುತ್ತಾ, [QBR2] ಸಮಸ್ತ ಸುಜ್ಞಾನಕ್ಕೂ ರೇಗುವನು. [QBR]
2. ಮೂಢನಿಗೆ ವಿವೇಕವು ಅನಿಷ್ಟ; [QBR2] ಸ್ವಭಾವವನ್ನು ಹೊರಪಡಿಸಿಕೊಳ್ಳುವುದೇ ಅವನಿಗಿಷ್ಟ. [QBR]
3. ದುರಾಚಾರವಿದ್ದಲ್ಲಿ ತಾತ್ಸಾರ; [QBR2] ಅವಮಾನವಿದ್ದಲ್ಲಿ ಧಿಕ್ಕಾರ. [QBR]
4. ಸತ್ಪುರುಷನ ನುಡಿಯು ಆಳವಾದ ನೀರು, [QBR2] ಜ್ಞಾನದ ಬುಗ್ಗೆ, ಹರಿಯುವ ತೊರೆ. [QBR]
5. ದುಷ್ಟನಿಗೆ ಪ್ರಸನ್ನನಾಗಿ [QBR2] ಶಿಷ್ಟನಿಗೆ ನ್ಯಾಯತಪ್ಪಿಸುವುದು ಅಧರ್ಮ. [QBR]
6. ಜ್ಞಾನಹೀನನ ತುಟಿಗಳು ಜಗಳವನ್ನು ಉಂಟುಮಾಡುತ್ತವೆ, [QBR2] ಅವನ ಬಾಯಿ ಪೆಟ್ಟುತಿನ್ನುವುದಕ್ಕೆ ಕೂಗಿಕೊಳ್ಳುತ್ತದೆ. [QBR]
7. ಜ್ಞಾನಹೀನನಿಗೆ ಬಾಯಿ ನಾಶ, [QBR2] ತುಟಿಗಳು ಪಾಶ. [QBR]
8. ಚಾಡಿಕೋರನ ಮಾತುಗಳು ರುಚಿಯಾದ ತುತ್ತುಗಳು, [QBR2] ಹೊಟ್ಟೆಯೊಳಕ್ಕೇ ಇಳಿಯುವವು. [QBR]
9. ಕೆಲಸಗಳ್ಳನು ಕೆಡುಕನಿಗೆ ತಮ್ಮ. [QBR]
10. ಯೆಹೋವನ ನಾಮವು ಬಲವಾದ ಬುರುಜು, [QBR2] ಶಿಷ್ಟನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುವನು. [QBR]
11. ಧನವಂತನು ತನ್ನ ಐಶ್ವರ್ಯವನ್ನು ಬಲವಾದ ಕೋಟೆಯೆಂದು, [QBR2] ಎತ್ತರವಾದ ಗೋಡೆಯೆಂದು ಭಾವಿಸಿಕೊಳ್ಳುತ್ತಾನೆ. [QBR]
12. ಭಂಗಕ್ಕೆ ಮೊದಲು ಗರ್ವದ ಹೃದಯ, [QBR2] ಮಾನಕ್ಕೆ ಮುಂಚೆ ದೀನತೆ. [QBR]
13. ಗಮನಿಸದೆ ಉತ್ತರಕೊಡುವವನು, [QBR2] ಮೂರ್ಖನೆಂಬ ಅವಮಾನಕ್ಕೆ ಗುರಿಯಾಗುವನು. [QBR]
14. ಆತ್ಮವು ವ್ಯಾಧಿಯನ್ನು ಸಹಿಸಬಲ್ಲದು, [QBR2] ಆತ್ಮವೇ ನೊಂದರೆ ಸಹಿಸುವವರು ಯಾರು? [QBR]
15. ವಿವೇಕಿಯ ಹೃದಯವು ತಿಳಿವಳಿಕೆಯನ್ನು ಸಂಪಾದಿಸುವುದು, [QBR2] ಜ್ಞಾನಿಯ ಕಿವಿಯು ತಿಳಿವಳಿಕೆಯನ್ನು ಹುಡುಕುವುದು. [QBR]
16. ಕಾಣಿಕೆಯು ಅನುಕೂಲತೆಗೂ, [QBR2] ಶ್ರೀಮಂತರ ಸಾನ್ನಿಧ್ಯ ಪ್ರವೇಶಕ್ಕೂ ಸಾಧನ. [QBR]
17. ಮೊದಲು ವಾದಿಸುವವನು ನ್ಯಾಯವಾದಿ ಎಂದು ತೋರುವನು, [QBR2] ಪ್ರತಿವಾದಿ ಎದ್ದ ಮೇಲೆ ಅವನ ಪರೀಕ್ಷೆ ಆಗುವುದು. [QBR]
18. ಚೀಟು ಹಾಕುವುದರಿಂದ ವ್ಯಾಜ್ಯಶಮನವೂ, [QBR2] ಬಲಿಷ್ಠರ ನ್ಯಾಯಾನ್ಯಾಯಗಳ ವಿವೇಚನೆಯೂ ಆಗುವುದು. [QBR]
19. ಬಲವಾದ ಪಟ್ಟಣವನ್ನು ಗೆಲ್ಲುವುದಕ್ಕಿಂತ [QBR2] ಅನ್ಯಾಯಹೊಂದಿದ ಸಹೋದರನನ್ನು ಗೆಲ್ಲುವುದು ಅಸಾಧ್ಯ, [QBR2] ಕೋಟೆಯ ಅಗುಳಿಗಳಂತೆ ಜಗಳಗಳು ಜನರನ್ನು ಅಗಲಿಸುತ್ತವೆ. [QBR]
20. ಮನುಷ್ಯನು ತನ್ನ ಬಾಯಿಯ ಬೆಳೆಯನ್ನು ಹೊಟ್ಟೆ ತುಂಬಾ ಉಣ್ಣುವನು, [QBR2] ತನ್ನ ತುಟಿಗಳ ಫಲವನ್ನು ಸಾಕಷ್ಟು ತಿನ್ನುವನು. [QBR]
21. ಜೀವ ಮತ್ತು ಮರಣಗಳು ನಾಲಿಗೆಯ ವಶ, [QBR2] ವಚನಪ್ರಿಯರು ಅದರ ಫಲವನ್ನು ಅನುಭವಿಸುವರು, [QBR]
22. ಪತ್ನಿಲಾಭವು ರತ್ನಲಾಭ, [QBR2] ಅದು ಯೆಹೋವನ ಅನುಗ್ರಹವೇ. [QBR]
23. ಬಡವನು ಬಿನ್ನೈಸುವನು, [QBR2] ಬಲ್ಲಿದನು ಉತ್ತರವನ್ನು ಉಗ್ರವಾಗಿ ಕೊಡುವನು. [QBR]
24. ಬಹಳ ಗೆಳೆಯರನ್ನು ಸೇರಿಸಿಕೊಂಡವನಿಗೆ ನಾಶನ, [QBR2] ಸಹೋದರನಿಗಿಂತಲೂ ಹತ್ತಿರ ಹೊಂದಿಕೊಳ್ಳುವ ಮಿತ್ರನುಂಟು. [PE]