1. {#1ಸೊಲೊಮೋನನ ಜ್ಞಾನೋಕ್ತಿಗಳು } [QS]ಜ್ಞಾನಿಯಾದ ಮಗನಿಂದ ತಂದೆಗೆ ಆನಂದ, [QE][QS2]ಅಜ್ಞಾನಿಯಾದ ಮಗನಿಂದ ತಾಯಿಗೆ ದುಃಖ. [QE]
2. [QS]ಅನ್ಯಾಯದ ಸಂಪತ್ತು ವ್ಯರ್ಥ, [QE][QS2]ಧರ್ಮವು ಮೃತ್ಯುವಿನಿಂದ ರಕ್ಷಿಸುವಂತದ್ದು. [QE]
3. [QS]ಯೆಹೋವನು ನೀತಿವಂತರನ್ನು ಹಸಿವೆಗೊಳಿಸನು, [QE][QS2]ದುಷ್ಟನ ಆಶೆಯನ್ನು ಭಂಗಪಡಿಸುತ್ತಾನೆ. [QE]
4. [QS]ಜೋಲುಗೈ ದಾರಿದ್ರ್ಯ, [QE][QS2]ಚುರುಕು ಕೈ ತರುವುದು ಐಶ್ವರ್ಯ. [QE]
5. [QS]ಸುಗ್ಗಿಯಲ್ಲಿ ಕೂಡಿಸುವವನು ಬುದ್ಧಿವಂತನು, [QE][QS2]ಕೊಯ್ಲಿನಲ್ಲಿ ತೂಕಡಿಸುವವನು ನಾಚಿಕೆಗೆಟ್ಟವನು. [QE]
6. [QS]ಶಿಷ್ಟನ ತಲೆ ಆಶೀರ್ವಾದದ ನೆಲೆ, [QE][QS2]ದುಷ್ಟನ ಬಾಯಿಗೆ ಬಲಾತ್ಕಾರವೇ ಮುಚ್ಚಳ. [QE]
7. [QS]ಶಿಷ್ಟರ ಸ್ಮರಣೆಯು ಆಶೀರ್ವಾದಕ್ಕಾಸ್ಪದ, [QE][QS2]ದುಷ್ಟರ ನಾಮವು ನಿರ್ನಾಮಕಾಸ್ಪದ. [QE]
8. [QS]ಜ್ಞಾನಹೃದಯನು ಆಜ್ಞೆಗಳನ್ನು ಪಾಲಿಸುವನು, [QE][QS2]ಹರಟೆಯ ಮೂರ್ಖನು ಕೆಡವಲ್ಪಡುವನು. [QE]
9. [QS]ನಿರ್ದೋಷದ ನಡತೆಯವನು ನಿರ್ಭಯವಾಗಿ ನಡೆಯುವನು, [QE][QS2]ವಕ್ರಮಾರ್ಗಿಯು ಬೈಲಿಗೆ ಬೀಳುವನು. [QE]
10. [QS]ಕಣ್ಣು ಮಿಟಕಿಸುವವನು ಕಷ್ಟಕ್ಕೆ ಕಾರಣನು, [QE][QS2][* ಅಥವಾ ಹರಟೆಯ ಮೂರ್ಖನು ಕೆಡವಲ್ಪಡುವನು. ]ಧೈರ್ಯದಿಂದ ಗದರಿಸುವವನು ಸಮಾಧಾನಕರನು. [QE]
11. [QS]ಶಿಷ್ಟನ ಬಾಯಿ ಜೀವದ ಬುಗ್ಗೆ, [QE][QS2]ದುಷ್ಟನ ಬಾಯಲ್ಲಿ ಬಲಾತ್ಕಾರವು ತುಂಬಿ ತುಳುಕುತ್ತದೆ. [QE]
12. [QS]ದ್ವೇಷವು ಜಗಳಗಳನ್ನೆಬ್ಬಿಸುತ್ತದೆ, [QE][QS2]ಪ್ರೀತಿಯು ಪಾಪಗಳನ್ನೆಲ್ಲಾ ಮುಚ್ಚುತ್ತದೆ. [QE]
13. [QS]ವಿವೇಕಿಯ ತುಟಿಗಳಿಂದ ಜ್ಞಾನ, [QE][QS2]ಬುದ್ಧಿಹೀನನ ಬೆನ್ನಿಗೆ ಬೆತ್ತ. [QE]
14. [QS]ಜ್ಞಾನಿಗಳು ತಿಳಿದ ಸಂಗತಿಯನ್ನು ಹೊರಪಡಿಸುವುದಿಲ್ಲ, [QE][QS2]ಮೂರ್ಖನ ಭಾಷಣ ನಾಶನಕ್ಕೆ ಸಮೀಪ. [QE]
15. [QS]ಐಶ್ವರ್ಯವಂತನಿಗೆ ಐಶ್ವರ್ಯವು ಬಲವಾದ ಕೋಟೆ, [QE][QS2]ಬಡವನಿಗೆ ಅವನ ಬಡತನವೇ ನಾಶನ. [QE]
16. [QS]ಶಿಷ್ಟನ ದುಡಿತ ಜೀವಾಸ್ಪದ, [QE][QS2]ದುಷ್ಟನ ಆದಾಯ ಪಾಪಾಸ್ಪದ. [QE]
17. [QS]ಶಿಕ್ಷೆಯನ್ನು ಕೈಕೊಳ್ಳುವವನು ಜೀವದ ಮಾರ್ಗವನ್ನು ತೋರಿಸುವನು, [QE][QS2]ಗದರಿಕೆಯನ್ನು ಕೈಕೊಳ್ಳದವನು ಸನ್ಮಾರ್ಗದಿಂದ ತಪ್ಪಿಸುವನು. [QE]
18. [QS]ಹೊಟ್ಟೆಯಲ್ಲಿ ಹಗೆಯನ್ನಿಟ್ಟುಕೊಂಡವನು ಸುಳ್ಳುಗಾರ, [QE][QS2]ಚಾಡಿಗಾರನು ಜ್ಞಾನಹೀನ. [QE]
19. [QS]ಮಾತಾಳಿಗೆ ಪಾಪ ತಪ್ಪದು, [QE][QS2]ಮೌನಿಯು ವಿವೇಕಿ. [QE]
20. [QS]ಶಿಷ್ಟರ ನಾಲಿಗೆ ಚೊಕ್ಕ ಬೆಳ್ಳಿ, [QE][QS2]ದುಷ್ಟನ ಹೃದಯ ಮೌಲ್ಯವಿಲ್ಲದ್ದು. [QE]
21. [QS]ಶಿಷ್ಟರ ಭಾಷಣ ಬಹುಜನ ಪೋಷಣ, [QE][QS2]ಬುದ್ಧಿಯ ಕೊರತೆ ಮೂರ್ಖರ ನಾಶನ. [QE]
22. [QS]ಯೆಹೋವನ ಆಶೀರ್ವಾದವು ಭಾಗ್ಯದಾಯಕವು, [QE][QS2]ಅದು ವ್ಯಸನವನ್ನು ಸೇರಿಸದು. [QE]
23. [QS]ಅವಿವೇಕಿಗೆ ಕುಯುಕ್ತಿ ವಿನೋದ [QE][QS2]ವಿವೇಕಿಗೆ ಜ್ಞಾನ ವಿನೋದ. [QE]
24. [QS]ದುಷ್ಟನಿಗೆ ಶಂಕಿಸಿದ್ದೇ ಸಂಭವಿಸುವುದು, [QE][QS2]ಶಿಷ್ಟನಿಗೆ ಇಷ್ಟವು ಲಭಿಸುವುದು. [QE]
25. [QS]ಬಿರುಗಾಳಿ ಬೀಸಿದರೆ ದುಷ್ಟನು ಎಲ್ಲೋ! [QE][QS2]ಶಿಷ್ಟನು ಶಾಶ್ವತವಾದ ಕಟ್ಟಡ. [QE]
26. [QS]ಹಲ್ಲುಗಳಿಗೆ ಹುಳಿಯೂ, ಕಣ್ಣುಗಳಿಗೆ ಹೊಗೆಯೂ ಹೇಗೋ, [QE][QS2]ಯಜಮಾನನಿಗೆ ಸೋಮಾರಿಯು ಹಾಗೆ. [QE]
27. [QS]ಯೆಹೋವನಿಗೆ ಭಯಪಡುವವರ ದಿನಗಳಿಗೆ ವೃದ್ಧಿ, [QE][QS2]ದುಷ್ಟರ ವರ್ಷಗಳು ಅಲ್ಪ. [QE]
28. [QS]ಶಿಷ್ಟನ ನಂಬಿಕೆಗೆ ಆನಂದವು ಫಲ, [QE][QS2]ದುಷ್ಟನ ನಿರೀಕ್ಷೆ ನಿಷ್ಫಲ. [QE]
29. [QS]ಯೆಹೋವನು ಸನ್ಮಾರ್ಗಿಗೆ ಆಶ್ರಯ, [QE][QS2]ಕೆಡುಕನಿಗೆ ನಾಶನ. [QE]
30. [QS]ಶಿಷ್ಟರು ಎಂದಿಗೂ ಕದಲರು, [QE][QS2]ದುಷ್ಟರು ದೇಶದಲ್ಲಿ ನಿಲ್ಲರು. [QE]
31. [QS]ಶಿಷ್ಟನ ಬಾಯಲ್ಲಿ ಜ್ಞಾನವು ಮೊಳೆಯುವುದು, [QE][QS2]ನೀಚನ ನಾಲಿಗೆ ಕತ್ತರಿಸಲ್ಪಡುವುದು. [QE]
32. [QS]ಶಿಷ್ಟನ ತುಟಿಯಲ್ಲಿ ಹಿತವಚನ, [QE][QS2]ದುಷ್ಟನ ಬಾಯಲ್ಲಿ ನೀಚವಚನ. [QE]