ಪವಿತ್ರ ಬೈಬಲ್

ಇಂಡಿಯನ್ ರಿವೈಸ್ಡ್ ವೆರ್ಸನ್ (ISV)
ಫಿಲಿಪ್ಪಿಯವರಿಗೆ
1. {#1ನಿಜವಾದ ನೀತಿ } [PS]ಕಡೆಯದಾಗಿ ನನ್ನ ಸಹೋದರರೇ, [* ಫಿಲಿ. 4:4, ಥೆಸ. 5:16 ]ಕರ್ತನಲ್ಲಿ ಸಂತೋಷಪಡಿರಿ. [† 2 ಪೇತ್ರ. 1:12 ]ಮೊದಲು ತಿಳಿಸಿದ ಅದೇ ಮಾತುಗಳನ್ನು ಪುನಃ ನಿಮಗೆ ಬರೆಯುವುದಕ್ಕೆ ನನಗೇನೂ ಬೇಸರವಿಲ್ಲ, ಅವುಗಳು ನಿಮ್ಮನ್ನು ಭದ್ರಪಡಿಸುವವು.
2. [‡ ಕೀರ್ತ 22:16,20, ಯೆಶಾ 56:10-11, ಪ್ರಕ 22:15, ಗಲಾ. 5:15 ]ಆ ನಾಯಿಗಳಿಗೆ ಎಚ್ಚರವಾಗಿರಿ, [§ 2 ಕೊರಿ 11:13 ]ದುಷ್ಕರ್ಮಿಗಳಿಗೆ ಎಚ್ಚರಿಕೆಯಾಗಿರಿ. ಸುನ್ನತಿಯೆಂದು ಹೇಳಿಕೊಂಡು ಅಂಗಚ್ಛೇದನ ಮಾಡುವವರಿಂದ ಎಚ್ಚರಿಕೆಯಾಗಿರಿ.
3. ನಿಜವಾದ ಸುನ್ನತಿಯವರು ಯಾರೆಂದರೆ, [* ಯೋಹಾ 4:23, ಯೂದ. 20, ಗಲಾ. 5:25 ]ದೇವರಾತ್ಮನಿಂದ ಪ್ರೇರಿತರಾಗಿ ಆರಾಧಿಸುವವರೂ, [† ರೋಮಾ. 15:17, ಗಲಾ. 6:14 ]ಕ್ರಿಸ್ತ ಯೇಸುವಿನಲ್ಲಿ ಹರ್ಷಗೊಳ್ಳುವವರೂ, ಶರೀರಸಂಬಂಧವಾದವುಗಳಲ್ಲಿ ಭರವಸವಿಲ್ಲದವರೂ ಆಗಿರುವ [‡ ರೋಮಾ. 2:29 ]ನಾವುಗಳೇ.
4. [§ 2 ಕೊರಿ 11:18 ]ನಾನಾದರೋ ಶರೀರಸಂಬಂಧವಾದವುಗಳಲ್ಲಿ ಭರವಸವಿಡುವುದಕ್ಕೂ ಆಸ್ಪದವಿದೆ. ಬೇರೆ ಯಾವನಾದರೂ ಶರೀರಸಂಬಂಧವಾದವುಗಳಲ್ಲಿ ಭರವಸವಿಡಬಹುದೆಂದು ಯೋಚಿಸುವುದಾದರೆ ನಾನು ಅವನಿಗಿಂತಲೂ ಹೆಚ್ಚಾಗಿ ಹಾಗೆ ಯೋಚಿಸಬಹುದು.
5. [* ಆದಿ 17:12 ]ಹುಟ್ಟಿದ ಎಂಟನೆಯ ದಿನದಲ್ಲಿ ನನಗೆ ಸುನ್ನತಿಯಾಯಿತು, [† 2 ಕೊರಿ 11:22 ]ನಾನು ಇಸ್ರಾಯೇಲ್ ವಂಶದವನು, [‡ ರೋಮಾ. 11:1 ]ಬೆನ್ಯಾಮೀನನ ಕುಲದವನು, [§ 2 ಕೊರಿ 11:22 ]ಇಬ್ರಿಯರಿಂದ ಹುಟ್ಟಿದ ಇಬ್ರಿಯನು, ಧರ್ಮಶಾಸ್ತ್ರಗಳ ದೃಷ್ಟಿಯಿಂದ ನೋಡಿದರೆ [* ಅ. ಕೃ. 23:6, 26:5 ]ನಾನು ಫರಿಸಾಯನು,
6. [† ಅ. ಕೃ. 8:3, 22:3-4, ಗಲಾ. 1:13-14 ]ಮತಾಸಕ್ತಿಯನ್ನು ನೋಡಿದರೆ ನಾನು ಕ್ರೈಸ್ತ ಸಭೆಯ ಹಿಂಸಕನು, [‡ ವ. 9 ನೋಡಿರಿ ]ಧರ್ಮಶಾಸ್ತ್ರದಲ್ಲಿ ಹೇಳಿರುವ ನೀತಿಯನ್ನು ನೋಡಿದರೆ ನಾನು ನಿರ್ದೋಷಿ.
7. ಆದರೆ, [§ ಲೂಕ 14:33 ]ನನಗೆ ಲಾಭವಾಗಿದ್ದಂಥವುಗಳನ್ನು [* ಇಬ್ರಿ. 11:26 ]ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ.
8. ಇಷ್ಟೇ ಅಲ್ಲದೆ, [† ಯೋಹಾ 17:3, 2 ಪೇತ್ರ. 1:3, ಯೆಶಾ 53:11, ಯೆರೆ 9:23-24 ]ನನ್ನ ಕರ್ತನಾದ ಕ್ರಿಸ್ತಯೇಸುವನ್ನರಿಯುವುದೇ ಅತಿ ಶ್ರೇಷ್ಠವಾದದ್ದೆಂದು ತಿಳಿದು [‡ 2 ಕೊರಿ 5:15 ]ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿಮಿತ್ತ ನಾನು ಎಲ್ಲವನ್ನೂ ಕಳೆದುಕೊಂಡು ಅವುಗಳನ್ನು ಕಸವೆಂದೆಣಿಸುತ್ತೇನೆ.
9. ಇದರಲ್ಲಿ ನನ್ನ ಉದ್ದೇಶವೇನೆಂದರೆ, ನಾನು ಕ್ರಿಸ್ತನನ್ನು ಸಂಪಾದಿಸಿಕೊಂಡು, [§ ರೋಮಾ. 10:5, ವ. 6 ನೋಡಿರಿ ]ಧರ್ಮಶಾಸ್ತ್ರದ ಫಲವಾಗಿರುವ ಸ್ವನೀತಿಯನ್ನಲ್ಲ, [* ರೋಮಾ. 1:17, 3:22, 1 ಕೊರಿ 1:30 ]ಕ್ರಿಸ್ತನನ್ನು ನಂಬುವುದರಿಂದ ದೊರಕುವಂಥ ಅಂದರೆ ಕ್ರಿಸ್ತನ ಮೇಲಣ ನಂಬಿಕೆಯ ಆಧಾರದಿಂದ ದೇವರು ಕೊಡುವಂಥ ನೀತಿಯನ್ನೇ ಹೊಂದಿ ಕ್ರಿಸ್ತನಲ್ಲಿರುವವನಾಗಿರಬೇಕೆಂಬುದೇ.
10. [† ಎಫೆ 4:13 ]ಆತನನ್ನೂ [‡ ರೋಮಾ. 1:4, 6:4, ಎಫೆ 1:19-20 ]ಆತನ ಪುನರುತ್ಥಾನದಲ್ಲಿರುವ ಶಕ್ತಿಯನ್ನೂ, [§ 1 ಪೇತ್ರ. 4:13, 2 ಕೊರಿ 1:5 ]ಆತನ ಬಾಧೆಗಳಲ್ಲಿ ಪಾಲುಗಾರನಾಗಿರುವ ಪದವಿಯನ್ನೂ ತಿಳಿದುಕೊಂಡು ಆತನ ಮರಣದ ವಿಷಯದಲ್ಲಿ ಆತನಂತೆ ರೂಪಾಂತರಗೊಳ್ಳಬೇಕೆಂಬುದೇ ನನ್ನ ಬಯಕೆಯಾಗಿದೆ.
11. ಹೀಗಾದರೆ [* ಲೂಕ 20:35, 1 ಕೊರಿ 15:23, ಪ್ರಕ 20:5-6, ಇಬ್ರಿ. 11:35 ]ಸತ್ತವರಲ್ಲಿ ಕೆಲವರಿಗೆ ಆಗುವ ಪುನರುತ್ಥಾನದ ಅನುಭವ ನನಗೂ ಆದೀತು. [PE]
12. {#1ಬಿರುದಿಗಾಗಿ ಓಟ } [PS]ಇಷ್ಟರೊಳಗೆ ನಾನಿದೆಲ್ಲವನ್ನೂ ಪಡಕೊಂಡು [† ಇಬ್ರಿ. 5:9, 11:40, 12:23 ]ಪರಿಪೂರ್ಣತೆಗೆ ಬಂದವನೆಂದು ಹೇಳುವುದಿಲ್ಲ. ಆದರೆ ನಾನು ಯಾವುದನ್ನು ಹೊಂದುವುದಕ್ಕಾಗಿ ಕ್ರಿಸ್ತ ಯೇಸುವು ನನ್ನನ್ನು ಹಿಡಿದುಕೊಂಡನೋ ಅದನ್ನು ಹೊಂದುವುದಕ್ಕೋಸ್ಕರ ಪ್ರಯತ್ನಿಸುತ್ತಾ ಇದ್ದೇನೆ.
13. ಸಹೋದರರೇ, ನಾನಂತೂ ಪಡೆದುಕೊಂಡವನೆಂದು ನನ್ನನ್ನು ಈ ವರೆಗೂ ಎಣಿಸಿಕೊಳ್ಳುವುದಿಲ್ಲ. ಆದರೆ ಒಂದು, ನಾನು [‡ ಲೂಕ 9:62, ಇಬ್ರಿ. 6:1 ]ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವುದಕ್ಕಾಗಿ ಎದೆಬೊಗ್ಗಿದವನಾಗಿ,
14. ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ [§ ಇಬ್ರಿ. 3:1, 1 ಪೇತ್ರ. 5:10, ರೋಮಾ. 8:28 ]ಕರೆದು ನಮ್ಮ ಮುಂದೆ ಇಟ್ಟಿರುವ [* 1 ಕೊರಿ 9:24, ಕೊಲೊ 2:18 ]ಬಿರುದನ್ನು ಹೊಂದುವ ಗುರಿಯನ್ನು ತಲುಪಲೆಂದು ಓಡುತ್ತಾ ಇದ್ದೇನೆ.
15. ನಮ್ಮಲ್ಲಿ [† 1 ಕೊರಿ 2:6 ]ಪ್ರವೀಣರಾದವರೆಲ್ಲರೂ ಈ ವಿಷಯದಲ್ಲಿ ಇದೇ ಅಭಿಪ್ರಾಯವುಳ್ಳವರಾಗಿರಿ. ಮತ್ತು ಯಾವುದಾದರೂ ಒಂದು ವಿಷಯದಲ್ಲಿ ನೀವು ಬೇರೆ ಅಭಿಪ್ರಾಯವುಳ್ಳವರಾಗಿದ್ದರೆ ಅದನ್ನು ದೇವರು ನಿಮಗೆ ತೋರಿಸಿಕೊಡುವನು.
16. ಅಂತೂ, [‡ ಗಲಾ. 6:16 ]ನಾವು ಯಾವ ಸೂತ್ರವನ್ನನುಸರಿಸಿ ಇಲ್ಲಿಯ ವರೆಗೆ ಬಂದೆವೋ ಅದನ್ನೇ ಅನುಸರಿಸಿ ನಡೆಯೋಣ. [PE]
17. [PS]ಸಹೋದರರೇ, ನೀವೆಲ್ಲರು ನನ್ನೊಂದಿಗೆ ಸೇರಿ [§ ಫಿಲಿ. 4:9, 1 ಕೊರಿ 4:16 ]ನನ್ನನ್ನು ಅನುಸರಿಸುವವರಾಗಿರಿ ಮತ್ತು ನಾವು ತೋರಿಸಿದ ಮಾದರಿಯ ಪ್ರಕಾರ ನಡೆದುಕೊಳ್ಳುವವರನ್ನು ಲಕ್ಷ್ಯಕ್ಕೆ ತಂದುಕೊಳ್ಳಿರಿ.
18. ಯಾಕೆಂದರೆ [* 2 ಕೊರಿ 11:13 ]ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ನಡೆಯುತ್ತಾರೆ. ಅವರ ವಿಷಯದಲ್ಲಿ ನಿಮಗೆ ಎಷ್ಟೋ ಸಾರಿ ಹೇಳಿದೆನು, ಈಗಲೂ [† ಅ. ಕೃ. 20:31 ]ಅಳುತ್ತಾ ಹೇಳುತ್ತೇನೆ.
19. [‡ 2 ಕೊರಿ 11:15, 2 ಥೆಸ. 1:9 ]ನಾಶನವೇ ಅವರ ಅಂತ್ಯಾವಸ್ಥೆ, ಹೊಟ್ಟೆಯೇ ಅವರ ದೇವರು, [§ 2 ಕೊರಿ 11:12, ಗಲಾ. 6:13 ]ನಾಚಿಕೆಪಡಿಸುವ ಕೆಲಸಗಳಲ್ಲಿಯೇ ಅವರಿಗೆ ಘನತೆ, [* ರೋಮಾ. 8:5, ಕೊಲೊ 3:2 ]ಅವರು ಪ್ರಪಂಚದ ಕಾರ್ಯಗಳ ಕುರಿತು ಚಿಂತಿಸುವವರು.
20. [† ಎಫೆ 2:19 ]ನಾವಾದರೋ ಪರಲೋಕದ ಪ್ರಜೆಗಳು, [‡ ಅ. ಕೃ. 1:11, 1 ಕೊರಿ 1:7, ಇಬ್ರಿ. 9:28 ]ಕರ್ತನಾದ ಯೇಸು ಕ್ರಿಸ್ತನು ಅಲ್ಲಿಂದಲೇ ರಕ್ಷಕನಾಗಿ ಬರುವುದನ್ನು ಎದುರುನೋಡುತ್ತಾ ಇದ್ದೇವೆ.
21. ಆತನು [§ 1 ಕೊರಿ 15:28 ]ಎಲ್ಲವನ್ನೂ ತನಗೆ ಅಧೀನಮಾಡಿಕೊಳ್ಳಲಾಗುವ [* ಎಫೆ 1:19 ]ಪರಾಕ್ರಮವನ್ನು ಹೊಂದಿದವನಾಗಿ [† 1 ಕೊರಿ 15:43-53 ]ದೀನಾವಸ್ಥೆಯುಳ್ಳ ನಮ್ಮ ದೇಹವನ್ನು [‡ ಫಿಲಿ. 3:10, ಕೊಲೊ 3:4, ರೋಮಾ. 8:29 ]ಪ್ರಭಾವವುಳ್ಳ ತನ್ನ ದೇಹದಂತೆ ರೂಪಾಂತರಪಡಿಸುವನು. [PE]
ಒಟ್ಟು 4 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 3 / 4
1 2 3 4
ನಿಜವಾದ ನೀತಿ 1 ಕಡೆಯದಾಗಿ ನನ್ನ ಸಹೋದರರೇ, * ಫಿಲಿ. 4:4, ಥೆಸ. 5:16 ಕರ್ತನಲ್ಲಿ ಸಂತೋಷಪಡಿರಿ. † 2 ಪೇತ್ರ. 1:12 ಮೊದಲು ತಿಳಿಸಿದ ಅದೇ ಮಾತುಗಳನ್ನು ಪುನಃ ನಿಮಗೆ ಬರೆಯುವುದಕ್ಕೆ ನನಗೇನೂ ಬೇಸರವಿಲ್ಲ, ಅವುಗಳು ನಿಮ್ಮನ್ನು ಭದ್ರಪಡಿಸುವವು. 2 ಕೀರ್ತ 22:16,20, ಯೆಶಾ 56:10-11, ಪ್ರಕ 22:15, ಗಲಾ. 5:15 ಆ ನಾಯಿಗಳಿಗೆ ಎಚ್ಚರವಾಗಿರಿ, § 2 ಕೊರಿ 11:13 ದುಷ್ಕರ್ಮಿಗಳಿಗೆ ಎಚ್ಚರಿಕೆಯಾಗಿರಿ. ಸುನ್ನತಿಯೆಂದು ಹೇಳಿಕೊಂಡು ಅಂಗಚ್ಛೇದನ ಮಾಡುವವರಿಂದ ಎಚ್ಚರಿಕೆಯಾಗಿರಿ. 3 ನಿಜವಾದ ಸುನ್ನತಿಯವರು ಯಾರೆಂದರೆ, * ಯೋಹಾ 4:23, ಯೂದ. 20, ಗಲಾ. 5:25 ದೇವರಾತ್ಮನಿಂದ ಪ್ರೇರಿತರಾಗಿ ಆರಾಧಿಸುವವರೂ, † ರೋಮಾ. 15:17, ಗಲಾ. 6:14 ಕ್ರಿಸ್ತ ಯೇಸುವಿನಲ್ಲಿ ಹರ್ಷಗೊಳ್ಳುವವರೂ, ಶರೀರಸಂಬಂಧವಾದವುಗಳಲ್ಲಿ ಭರವಸವಿಲ್ಲದವರೂ ಆಗಿರುವ ‡ ರೋಮಾ. 2:29 ನಾವುಗಳೇ. 4 § 2 ಕೊರಿ 11:18 ನಾನಾದರೋ ಶರೀರಸಂಬಂಧವಾದವುಗಳಲ್ಲಿ ಭರವಸವಿಡುವುದಕ್ಕೂ ಆಸ್ಪದವಿದೆ. ಬೇರೆ ಯಾವನಾದರೂ ಶರೀರಸಂಬಂಧವಾದವುಗಳಲ್ಲಿ ಭರವಸವಿಡಬಹುದೆಂದು ಯೋಚಿಸುವುದಾದರೆ ನಾನು ಅವನಿಗಿಂತಲೂ ಹೆಚ್ಚಾಗಿ ಹಾಗೆ ಯೋಚಿಸಬಹುದು. 5 * ಆದಿ 17:12 ಹುಟ್ಟಿದ ಎಂಟನೆಯ ದಿನದಲ್ಲಿ ನನಗೆ ಸುನ್ನತಿಯಾಯಿತು, † 2 ಕೊರಿ 11:22 ನಾನು ಇಸ್ರಾಯೇಲ್ ವಂಶದವನು, ‡ ರೋಮಾ. 11:1 ಬೆನ್ಯಾಮೀನನ ಕುಲದವನು, § 2 ಕೊರಿ 11:22 ಇಬ್ರಿಯರಿಂದ ಹುಟ್ಟಿದ ಇಬ್ರಿಯನು, ಧರ್ಮಶಾಸ್ತ್ರಗಳ ದೃಷ್ಟಿಯಿಂದ ನೋಡಿದರೆ ಅ. ಕೃ. 23:6, 26:5 ನಾನು ಫರಿಸಾಯನು, 6 ಅ. ಕೃ. 8:3, 22:3-4, ಗಲಾ. 1:13-14 ಮತಾಸಕ್ತಿಯನ್ನು ನೋಡಿದರೆ ನಾನು ಕ್ರೈಸ್ತ ಸಭೆಯ ಹಿಂಸಕನು, ‡ ವ. 9 ನೋಡಿರಿ ಧರ್ಮಶಾಸ್ತ್ರದಲ್ಲಿ ಹೇಳಿರುವ ನೀತಿಯನ್ನು ನೋಡಿದರೆ ನಾನು ನಿರ್ದೋಷಿ. 7 ಆದರೆ, § ಲೂಕ 14:33 ನನಗೆ ಲಾಭವಾಗಿದ್ದಂಥವುಗಳನ್ನು * ಇಬ್ರಿ. 11:26 ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ. 8 ಇಷ್ಟೇ ಅಲ್ಲದೆ, ಯೋಹಾ 17:3, 2 ಪೇತ್ರ. 1:3, ಯೆಶಾ 53:11, ಯೆರೆ 9:23-24 ನನ್ನ ಕರ್ತನಾದ ಕ್ರಿಸ್ತಯೇಸುವನ್ನರಿಯುವುದೇ ಅತಿ ಶ್ರೇಷ್ಠವಾದದ್ದೆಂದು ತಿಳಿದು ‡ 2 ಕೊರಿ 5:15 ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿಮಿತ್ತ ನಾನು ಎಲ್ಲವನ್ನೂ ಕಳೆದುಕೊಂಡು ಅವುಗಳನ್ನು ಕಸವೆಂದೆಣಿಸುತ್ತೇನೆ. 9 ಇದರಲ್ಲಿ ನನ್ನ ಉದ್ದೇಶವೇನೆಂದರೆ, ನಾನು ಕ್ರಿಸ್ತನನ್ನು ಸಂಪಾದಿಸಿಕೊಂಡು, § ರೋಮಾ. 10:5, ವ. 6 ನೋಡಿರಿ ಧರ್ಮಶಾಸ್ತ್ರದ ಫಲವಾಗಿರುವ ಸ್ವನೀತಿಯನ್ನಲ್ಲ, * ರೋಮಾ. 1:17, 3:22, 1 ಕೊರಿ 1:30 ಕ್ರಿಸ್ತನನ್ನು ನಂಬುವುದರಿಂದ ದೊರಕುವಂಥ ಅಂದರೆ ಕ್ರಿಸ್ತನ ಮೇಲಣ ನಂಬಿಕೆಯ ಆಧಾರದಿಂದ ದೇವರು ಕೊಡುವಂಥ ನೀತಿಯನ್ನೇ ಹೊಂದಿ ಕ್ರಿಸ್ತನಲ್ಲಿರುವವನಾಗಿರಬೇಕೆಂಬುದೇ. 10 ಎಫೆ 4:13 ಆತನನ್ನೂ ‡ ರೋಮಾ. 1:4, 6:4, ಎಫೆ 1:19-20 ಆತನ ಪುನರುತ್ಥಾನದಲ್ಲಿರುವ ಶಕ್ತಿಯನ್ನೂ, § 1 ಪೇತ್ರ. 4:13, 2 ಕೊರಿ 1:5 ಆತನ ಬಾಧೆಗಳಲ್ಲಿ ಪಾಲುಗಾರನಾಗಿರುವ ಪದವಿಯನ್ನೂ ತಿಳಿದುಕೊಂಡು ಆತನ ಮರಣದ ವಿಷಯದಲ್ಲಿ ಆತನಂತೆ ರೂಪಾಂತರಗೊಳ್ಳಬೇಕೆಂಬುದೇ ನನ್ನ ಬಯಕೆಯಾಗಿದೆ. 11 ಹೀಗಾದರೆ * ಲೂಕ 20:35, 1 ಕೊರಿ 15:23, ಪ್ರಕ 20:5-6, ಇಬ್ರಿ. 11:35 ಸತ್ತವರಲ್ಲಿ ಕೆಲವರಿಗೆ ಆಗುವ ಪುನರುತ್ಥಾನದ ಅನುಭವ ನನಗೂ ಆದೀತು. ಬಿರುದಿಗಾಗಿ ಓಟ 12 ಇಷ್ಟರೊಳಗೆ ನಾನಿದೆಲ್ಲವನ್ನೂ ಪಡಕೊಂಡು ಇಬ್ರಿ. 5:9, 11:40, 12:23 ಪರಿಪೂರ್ಣತೆಗೆ ಬಂದವನೆಂದು ಹೇಳುವುದಿಲ್ಲ. ಆದರೆ ನಾನು ಯಾವುದನ್ನು ಹೊಂದುವುದಕ್ಕಾಗಿ ಕ್ರಿಸ್ತ ಯೇಸುವು ನನ್ನನ್ನು ಹಿಡಿದುಕೊಂಡನೋ ಅದನ್ನು ಹೊಂದುವುದಕ್ಕೋಸ್ಕರ ಪ್ರಯತ್ನಿಸುತ್ತಾ ಇದ್ದೇನೆ. 13 ಸಹೋದರರೇ, ನಾನಂತೂ ಪಡೆದುಕೊಂಡವನೆಂದು ನನ್ನನ್ನು ಈ ವರೆಗೂ ಎಣಿಸಿಕೊಳ್ಳುವುದಿಲ್ಲ. ಆದರೆ ಒಂದು, ನಾನು ಲೂಕ 9:62, ಇಬ್ರಿ. 6:1 ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವುದಕ್ಕಾಗಿ ಎದೆಬೊಗ್ಗಿದವನಾಗಿ, 14 ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ § ಇಬ್ರಿ. 3:1, 1 ಪೇತ್ರ. 5:10, ರೋಮಾ. 8:28 ಕರೆದು ನಮ್ಮ ಮುಂದೆ ಇಟ್ಟಿರುವ * 1 ಕೊರಿ 9:24, ಕೊಲೊ 2:18 ಬಿರುದನ್ನು ಹೊಂದುವ ಗುರಿಯನ್ನು ತಲುಪಲೆಂದು ಓಡುತ್ತಾ ಇದ್ದೇನೆ. 15 ನಮ್ಮಲ್ಲಿ 1 ಕೊರಿ 2:6 ಪ್ರವೀಣರಾದವರೆಲ್ಲರೂ ಈ ವಿಷಯದಲ್ಲಿ ಇದೇ ಅಭಿಪ್ರಾಯವುಳ್ಳವರಾಗಿರಿ. ಮತ್ತು ಯಾವುದಾದರೂ ಒಂದು ವಿಷಯದಲ್ಲಿ ನೀವು ಬೇರೆ ಅಭಿಪ್ರಾಯವುಳ್ಳವರಾಗಿದ್ದರೆ ಅದನ್ನು ದೇವರು ನಿಮಗೆ ತೋರಿಸಿಕೊಡುವನು. 16 ಅಂತೂ, ಗಲಾ. 6:16 ನಾವು ಯಾವ ಸೂತ್ರವನ್ನನುಸರಿಸಿ ಇಲ್ಲಿಯ ವರೆಗೆ ಬಂದೆವೋ ಅದನ್ನೇ ಅನುಸರಿಸಿ ನಡೆಯೋಣ. 17 ಸಹೋದರರೇ, ನೀವೆಲ್ಲರು ನನ್ನೊಂದಿಗೆ ಸೇರಿ § ಫಿಲಿ. 4:9, 1 ಕೊರಿ 4:16 ನನ್ನನ್ನು ಅನುಸರಿಸುವವರಾಗಿರಿ ಮತ್ತು ನಾವು ತೋರಿಸಿದ ಮಾದರಿಯ ಪ್ರಕಾರ ನಡೆದುಕೊಳ್ಳುವವರನ್ನು ಲಕ್ಷ್ಯಕ್ಕೆ ತಂದುಕೊಳ್ಳಿರಿ. 18 ಯಾಕೆಂದರೆ * 2 ಕೊರಿ 11:13 ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ನಡೆಯುತ್ತಾರೆ. ಅವರ ವಿಷಯದಲ್ಲಿ ನಿಮಗೆ ಎಷ್ಟೋ ಸಾರಿ ಹೇಳಿದೆನು, ಈಗಲೂ † ಅ. ಕೃ. 20:31 ಅಳುತ್ತಾ ಹೇಳುತ್ತೇನೆ. 19 2 ಕೊರಿ 11:15, 2 ಥೆಸ. 1:9 ನಾಶನವೇ ಅವರ ಅಂತ್ಯಾವಸ್ಥೆ, ಹೊಟ್ಟೆಯೇ ಅವರ ದೇವರು, § 2 ಕೊರಿ 11:12, ಗಲಾ. 6:13 ನಾಚಿಕೆಪಡಿಸುವ ಕೆಲಸಗಳಲ್ಲಿಯೇ ಅವರಿಗೆ ಘನತೆ, * ರೋಮಾ. 8:5, ಕೊಲೊ 3:2 ಅವರು ಪ್ರಪಂಚದ ಕಾರ್ಯಗಳ ಕುರಿತು ಚಿಂತಿಸುವವರು. 20 ಎಫೆ 2:19 ನಾವಾದರೋ ಪರಲೋಕದ ಪ್ರಜೆಗಳು, ‡ ಅ. ಕೃ. 1:11, 1 ಕೊರಿ 1:7, ಇಬ್ರಿ. 9:28 ಕರ್ತನಾದ ಯೇಸು ಕ್ರಿಸ್ತನು ಅಲ್ಲಿಂದಲೇ ರಕ್ಷಕನಾಗಿ ಬರುವುದನ್ನು ಎದುರುನೋಡುತ್ತಾ ಇದ್ದೇವೆ. 21 ಆತನು § 1 ಕೊರಿ 15:28 ಎಲ್ಲವನ್ನೂ ತನಗೆ ಅಧೀನಮಾಡಿಕೊಳ್ಳಲಾಗುವ * ಎಫೆ 1:19 ಪರಾಕ್ರಮವನ್ನು ಹೊಂದಿದವನಾಗಿ † 1 ಕೊರಿ 15:43-53 ದೀನಾವಸ್ಥೆಯುಳ್ಳ ನಮ್ಮ ದೇಹವನ್ನು ‡ ಫಿಲಿ. 3:10, ಕೊಲೊ 3:4, ರೋಮಾ. 8:29 ಪ್ರಭಾವವುಳ್ಳ ತನ್ನ ದೇಹದಂತೆ ರೂಪಾಂತರಪಡಿಸುವನು.
ಒಟ್ಟು 4 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 3 / 4
1 2 3 4
×

Alert

×

Kannada Letters Keypad References