1. ಯೇಸುವು ಪುನಃ ಸಮುದ್ರದ ದಡದಲ್ಲಿ ಉಪದೇಶ ಮಾಡತೊಡಗಿದ್ದನು. ಬಹುಜನರು ಆತನ ಬಳಿಗೆ ಸೇರಿಬಂದಿದ್ದರಿಂದ ಆತನು ಸಮುದ್ರದಲ್ಲಿದ್ದ ದೋಣಿಹತ್ತಿ ಕುಳಿತುಕೊಂಡನು; ಆ ಜನರೆಲ್ಲರು ಸಮುದ್ರದ ದಡದಲ್ಲಿ ಸುತ್ತಲೂ ನೆರೆದುಬಂದಿದ್ದರು.
|
5. ಬೇರೆ ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಬಂಡೆಯ ನೆಲದ ಮೇಲೆ ಬಿದ್ದವು; ಅಲ್ಲಿ ಮಣ್ಣು ಆಳವಾಗಿಲ್ಲದ್ದರಿಂದ ಅವು ಬೇಗ ಮೊಳೆತವು;
|
7. ಮತ್ತೆ ಕೆಲವು ಬೀಜಗಳು ಮುಳ್ಳುಗಿಡಗಳಲ್ಲಿ ಬಿದ್ದವು; ಮುಳ್ಳುಗಿಡಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟದ್ದರಿಂದ ಅವು ಫಲಕೊಡಲಿಲ್ಲ.
|
8. ಇನ್ನು ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದು ಮೊಳೆತು ಬೆಳೆದು ಬಂದು ಫಲಕೊಟ್ಟವು; ಅವುಗಳಲ್ಲಿ ಕೆಲವು ಮೂವತ್ತರಷ್ಟು, ಕೆಲವು ಅರುವತ್ತರಷ್ಟು, ಕೆಲವು ನೂರರಷ್ಟು ಫಲವನ್ನು ಕೊಟ್ಟವು.”
|
10. ಆತನು ಒಬ್ಬನೇ ಇದ್ದಾಗ, ಆತನಿಗೆ ಹತ್ತಿರವಾಗಿದ್ದವರು ಹನ್ನೆರಡು ಮಂದಿ ಶಿಷ್ಯರ ಸಂಗಡ ಆ ಸಾಮ್ಯಗಳ ವಿಷಯವಾಗಿ ಆತನನ್ನು ಕೇಳಿದರು.
|
11. ಆತನು ಅವರಿಗೆ, “ದೇವರ ರಾಜ್ಯದ ರಹಸ್ಯ ನಿಮಗೆ ದೊರೆತಿದೆ; ಆದರೆ ಹೊರಗಿನವರಿಗೆ ಎಲ್ಲವನ್ನು ಸಾಮ್ಯಗಳ ರೂಪದಲ್ಲಿ ಹೇಳಿದ್ದೇನೆ.”
|
12. † ಯೆಶಾ 6:9, 10: “ಅವರು ಕಣ್ಣಾರೆ ಕಂಡರೂ ಗ್ರಹಿಸಲಿಲ್ಲ,
ಕಿವಿಯಾರೆ ಕೇಳಿದರೂ ತಿಳಿದುಕೊಳ್ಳಲಿಲ್ಲ, ಹಾಗೆ ಕಂಡು ತಿಳಿದುಕೊಂಡಿದ್ದರೆ ಅವರು ದೇವರ ಕಡೆಗೆ ತಿರುಗಿಕೊಂಡು ಪಾಪಕ್ಷಮೆಯನ್ನು ಹೊಂದುತ್ತಿದ್ದರು.” PEPS |
13. ಅನಂತರ ಆತನು ಅವರಿಗೆ ಹೇಳಿದ್ದೇನಂದರೆ, “ಈ ಸಾಮ್ಯದ ಅರ್ಥ ನಿಮಗೆ ಗೊತ್ತಾಗಲಿಲ್ಲವೋ? ಹಾಗಾದರೆ ಎಲ್ಲಾ ಸಾಮ್ಯಗಳನ್ನು ಹೇಗೆ ತಿಳಿದುಕೊಳ್ಳುವಿರಿ?
|
15. ಕೆಲವರು ವಾಕ್ಯವನ್ನು ಕೇಳಿದ ಕೂಡಲೇ ಸೈತಾನನು ಬಂದು ಅವರಲ್ಲಿ ಬಿತ್ತಿದ್ದ ವಾಕ್ಯವನ್ನು ತೆಗೆದುಬಿಡುತ್ತಾನೆ. ಇವರೇ ದಾರಿಯ ಮಗ್ಗುಲಲ್ಲಿ ಬಿತ್ತಲ್ಪಟ್ಟ ಬೀಜವಾಗಿರುವರು. PEPS
|
17. ಆದರೆ ಅವರಿಗೆ ಬೇರಿಲ್ಲದ ಕಾರಣ ಇವರು ಸ್ವಲ್ಪ ಕಾಲ ಮಾತ್ರವೇ ಇದ್ದು, ಬಳಿಕ ಆ ವಾಕ್ಯದ ನಿಮಿತ್ತವಾಗಿ ಸಂಕಟವಾಗಲಿ ಹಿಂಸೆಯಾಗಲಿ ಬಂದರೆ ಬೇಗ ಎಡವಿಬೀಳುತ್ತಾರೆ; ಇವರೇ ಬಂಡೆಯ ನೆಲದಲ್ಲಿ ಬಿತ್ತಲ್ಪಟ್ಟ ಬೀಜವಾಗಿರುವರು. PEPS
|
19. ಇವರು ವಾಕ್ಯವನ್ನು ಕೇಳಿದಾಗ್ಯೂ ಪ್ರಪಂಚದ ಚಿಂತೆಗಳೂ, ಐಶ್ವರ್ಯದಿಂದುಂಟಾಗುವ ವ್ಯಾಮೋಹವೂ, ಇತರ ವಿಷಯಗಳ ಮೇಲಣ ಆಸೆಗಳೂ ಸೇರಿ ಆ ವಾಕ್ಯವನ್ನು ಅಡಗಿಸಿಬಿಡುವುದರಿಂದ ನಿಷ್ಫಲರಾಗಿರುತ್ತಾರೆ.
|
20. ಮತ್ತೆ ಕೆಲವರು ವಾಕ್ಯವನ್ನು ಕೇಳಿ ಕೈಕೊಂಡು ಮೂವತ್ತರಷ್ಟಾಗಲಿ ಅರವತ್ತರಷ್ಟಾಗಲಿ ನೂರರಷ್ಟಾಗಲಿ ಫಲವನ್ನು ಕೊಡುತ್ತಾರೆ; ಇವರೇ ಒಳ್ಳೆಯ ನೆಲದಲ್ಲಿ ಬಿದ್ದ ಬೀಜವಾಗಿರುವವರು” ಅಂದನು. PS
|
21. {ದೀಪಸ್ತಂಭದ ಸಾಮ್ಯ} PS ಇದಲ್ಲದೆ ಯೇಸು ಅವರಿಗೆ, ‡ ಮತ್ತಾ 5:15; ಲೂಕ 8:16; 11:33: “ದೀಪವನ್ನು ತಂದು ಕೊಳಗದೊಳಗಾಗಲಿ, ಮಂಚದ ಕೆಳಗಾಗಲಿ ಇಡುವುದುಂಟೇ? ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರಲ್ಲವೇ?
|
22. ಮರೆಯಾಗಿರುವಂಥ ಎಲ್ಲವೂ ಬೆಳಕಿಗೆ ಬಾರದೇ ಇರುವುದಿಲ್ಲ; § ಮತ್ತಾ 10:26; ಲೂಕ 8:17; 12:2: ಬಹಿರಂಗವಾಗದಿರುವ ಯಾವ ರಹಸ್ಯಗಳು ಇರುವುದಿಲ್ಲ.
|
23. * ಮಾರ್ಕ 4:9; ಮತ್ತಾ 11:15; ಪ್ರಕ 2:7,11,17,29; 3:6,13,22. ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ” ಎಂದು ಹೇಳಿದನು. PEPS
|
24. ಮತ್ತು ಆತನು ಅವರಿಗೆ; “ನೀವು ಕಿವಿಗೊಡುವ ವಿಷಯದಲ್ಲಿ ಎಚ್ಚರಿಕೆಯಾಗಿರಿ. † ಮತ್ತಾ 7:2; ಲೂಕ 6:38: ನೀವು ಅಳೆಯುವ ಅಳತೆಯಿಂದಲೇ ನಿಮ್ಮನ್ನೂ ಅಳೆಯುವರು; ನಿಮಗೆ ಇನ್ನೂ ಅಧಿಕವಾಗಿ ಸೇರಿಸಿಕೊಡುವರು.
|
25. ‡ ಮತ್ತಾ 25:29; ಲೂಕ 8:18; 19:26: ಇದ್ದವನಿಗೆ ಕೊಡಲ್ಪಡುವುದು; ಇಲ್ಲದವನ ಕಡೆಯಿಂದ ಇದ್ದುದನ್ನೂ ತೆಗೆಯಲ್ಪಡುವುದು” ಎಂದು ಹೇಳಿದನು. PS
|
26. {ಬೆಳೆಯುವ ಬೀಜದ ಸಾಮ್ಯ} PS ಇದಲ್ಲದೆ ಆತನು ಅವರಿಗೆ ಮತ್ತೆ ಹೇಳಿದೇನಂದರೆ; “ಒಬ್ಬನು ಭೂಮಿಯಲ್ಲಿ ಬೀಜವನ್ನು ಬಿತ್ತಿದ ನಂತರ ಅವನು ರಾತ್ರಿಯಲ್ಲಿ ಮಲಗಿದ್ದಾಗಲೂ, ಹಗಲು ಎಚ್ಚರವಿರುವಾಗಲೂ
|
28. ಭೂಮಿಯು ಮೊದಲು ಮೊಳಕೆಯನ್ನೂ, ಆ ಮೇಲೆ ತೆನೆಯನ್ನೂ, ತರುವಾಯ ತೆನೆಯಲ್ಲಿ ತುಂಬಾ ಕಾಳನ್ನೂ ತನ್ನಷ್ಟಕ್ಕೆ ತಾನೇ ಹುಟ್ಟಿಸುತ್ತದೆ.
|
29. ಆದರೆ ಫಲಮಾಗಿದಾಗ ಸುಗ್ಗಿಕಾಲ ಬಂದಿತೆಂದು ವ್ಯವಸಾಯಗಾರನು ಅದನ್ನು ಕೊಯ್ಯಲು ಕುಡುಗೋಲನ್ನು ಬಳಸುತ್ತಾನೆ” ಅಂದನು. PS
|
30. {ಸಾಸಿವೆಕಾಳಿನ ಸಾಮ್ಯ} PS ಇನ್ನೂ ಆತನು ಹೇಳಿದ್ದು; “ದೇವರ ರಾಜ್ಯವನ್ನು ಯಾವುದಕ್ಕೆ ಹೋಲಿಸೋಣ? ಯಾವ ಸಾಮ್ಯದಿಂದ ಅದನ್ನು ತೋರಿಸಿಕೊಡೋಣ?
|
32. ಬಿತ್ತಿದ ಮೇಲೆ ಅದು ಬೆಳೆದು ಎಲ್ಲಾ ಗಿಡಗಳಿಗಿಂತ ದೊಡ್ಡದಾಗಿ ದೊಡ್ಡದೊಡ್ಡ ಕೊಂಬೆಗಳನ್ನು ಬಿಡುವುದರಿಂದ ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ನೆರಳಿನಲ್ಲಿ ವಾಸಮಾಡುವುದಕ್ಕಾಗುತ್ತದೆ” ಅಂದನು. PEPS
|
34. ಸಾಮ್ಯಗಳಿಲ್ಲದೆ ಆತನು ಒಂದನ್ನೂ ಹೇಳಲಿಲ್ಲಾ. ಆದರೆ ಏಕಾಂತವಾಗಿರುವಾಗ ಆತನು ತನ್ನ ಆಪ್ತ ಶಿಷ್ಯರಿಗೆ ಎಲ್ಲವನ್ನು ವಿವರಿಸಿ ಹೇಳುತ್ತಿದ್ದನು. PS
|
35. {ಯೇಸು ಸಮುದ್ರದ ಮೇಲಣ ಬಿರುಗಾಳಿಯನ್ನು ನಿಲ್ಲಿಸಿದ್ದು} (ಮತ್ತಾ 8:23-27; ಲೂಕ 8:22-25) PS ಆ ದಿನ ಸಾಯಂಕಾಲವಾದಾಗ ಆತನು ಅವರಿಗೆ, “ಆಚೇದಡಕ್ಕೆ ಹೋಗೋಣ” ಎಂದು ಹೇಳಿದನು.
|
36. ಅವರು ಆ ಜನರ ಗುಂಪನ್ನು ಬಿಟ್ಟು ಆತನನ್ನು ಅದೇ ದೋಣಿಯಲ್ಲಿ ಹಾಗೆಯೇ ಕರೆದುಕೊಂಡು ಹೋದರು. ಬೇರೆ ದೋಣಿಗಳೂ ಸಹ ಆತನ ಸಂಗಡ ಇದ್ದವು.
|
37. ತರುವಾಯ ದೊಡ್ಡ ಬಿರುಗಾಳಿ ಎದ್ದು ಅಲೆಗಳು ಆ ದೋಣಿಗೆ ಬಡಿದು ನೀರು ಒಳಗೆ ನುಗ್ಗಿದ್ದರಿಂದ ಆ ದೋಣಿ ಆಗಲೇ ತುಂಬುವುದಕ್ಕೆ ಬಂದಿತ್ತು.
|
38. ಆದರೆ ಆತನು ದೋಣಿಯ ಹಿಂಭಾಗದಲ್ಲಿ ತಲೆದಿಂಬನ್ನು ಒರಗಿ ನಿದ್ದೆಮಾಡುತ್ತಿದ್ದನು. ಅವರು ಆತನನ್ನು ಎಬ್ಬಿಸಿ, “ಗುರುವೇ, ನಾವು ಮುಳುಗಿಹೋಗುವುದರಲ್ಲಿ ನಿನಗೆ ಚಿಂತೆಯಿಲ್ಲವೇ” ಎಂದು ಕೇಳಿದರು.
|
39. ಆತನು ಎದ್ದು ಗಾಳಿಯನ್ನು ಗದರಿಸಿ, ಸಮುದ್ರಕ್ಕೆ “ಶಾಂತವಾಗಿರು, ಮೊರೆಯಬೇಡ” ಎಂದು ಅಪ್ಪಣೆಕೊಡುತ್ತಲೇ ಗಾಳಿ ನಿಂತುಹೋಗಿ ಸಮುದ್ರವು ಶಾಂತವಾಯಿತು.
|
41. ಅವರು ಬಹು ಭಯಪಟ್ಟು, “ಈತನು ಯಾರಿರಬಹುದು? ಗಾಳಿಯೂ, ಸಮುದ್ರವೂ ಸಹ ಈತನು ಹೇಳಿದ ಹಾಗೆ ಕೇಳುತ್ತವಲ್ಲಾ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. PE
|