1. {ಯುಗದ ಸಮಾಪ್ತಿಯ ಗುರುತುಗಳು} (ಮತ್ತಾ 24; ಲೂಕ 21:5-36) PS ಯೇಸು ದೇವಾಲಯದಿಂದ ಹೊರಗೆ ಹೋಗುತ್ತಿದ್ದಾಗ ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ, “ಗುರುವೇ, ನೋಡು, ಎಂಥಾ * ಭಾರಿ, ಅಥವಾ ದೊಡ್ಡ. ಅದ್ಭುತವಾದ ಕಲ್ಲುಗಳು! ಎಂಥಾ ಮಹಾಕಟ್ಟಡಗಳು!” ಎಂದು ಹೇಳಿದನು.
|
2. ಯೇಸು, “ಈ ದೊಡ್ಡ ಕಟ್ಟಡಗಳನ್ನು ನೋಡುತ್ತೀಯಲ್ಲವೇ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವುದಿಲ್ಲ; ಎಲ್ಲವೂ ಕೆಡವಲ್ಪಡುವುದು” ಎಂದನು. PEPS
|
3. ಬಳಿಕ ಆತನು † ಆಲಿವ್ ಮರಗಳ ಗುಡ್ಡ. ಎಣ್ಣೆ ಮರಗಳ ಗುಡ್ಡದ ಮೇಲೆ ದೇವಾಲಯಕ್ಕೆ ಎದುರಾಗಿ ಕುಳಿತುಕೊಂಡಿದ್ದಾಗ ಪೇತ್ರ, ಯಾಕೋಬ, ಯೋಹಾನ ಹಾಗೂ ಅಂದ್ರೆಯ,
|
4. ಇವರು ಪ್ರತ್ಯೇಕವಾಗಿ ಆತನಿಗೆ, “ಇವೆಲ್ಲಾ ಯಾವಾಗ ಆಗುವವು? ಇವೆಲ್ಲವು ನೆರವೇರುವುದಕ್ಕೆ ಸೂಚನೆ ಏನು? ನಮಗೆ ಹೇಳು” ಎಂದು ಆತನನ್ನು ಕೇಳಿದರು.
|
6. ಅನೇಕರು ಬಂದು ನನ್ನ ಹೆಸರನ್ನು ಹೇಳಿಕೊಂಡು, ‡ ನಾನೇ ಆತನಾಗಿದ್ದೇನೆ ‘ನಾನೇ ಕ್ರಿಸ್ತನು’ ಎಂದು ಹೇಳಿ ಎಷ್ಟೋ ಜನರನ್ನು ಮೋಸಗೊಳಿಸುವರು.
|
7. ಇದಲ್ಲದೆ ಯುದ್ಧಗಳಾಗುವುದನ್ನೂ, ಯುದ್ಧವಾಗುವ ಹಾಗಿದೆ ಎಂಬ ಸುದ್ದಿಗಳನ್ನೂ ನೀವು ಕೇಳುವಾಗ ಕಳವಳಪಡಬೇಡಿರಿ. ಹಾಗಾಗುವುದು ಅಗತ್ಯ. ಆದರೂ ಇದು ಇನ್ನೂ ಅಂತ್ಯಕಾಲವಲ್ಲ.
|
8. ಜನಾಂಗಕ್ಕೆ ವಿರೋಧವಾಗಿ ಜನಾಂಗವೂ, ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು. ಮತ್ತು ನಾನಾ ಕಡೆಗಳಲ್ಲಿ ಭೂಕಂಪಗಳೂ, ಬರಗಾಲಗಳೂ, ಉಂಟಾಗುವವು. ಆದರೆ ಇವೆಲ್ಲಾ ಪ್ರಸವ ವೇದನೆಯ ಪ್ರಾರಂಭ ಮಾತ್ರ. PEPS
|
9. “ಆದರೆ ನೀವು ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಜನರು ನಿಮ್ಮನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಎಳೆದುಕೊಂಡು ಹೋಗುವರು. ಸಭಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು, ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿಕಾರಿಗಳ ಮತ್ತು ಅರಸುಗಳ ಮುಂದೆ ಅವರಿಗೆ ಸಾಕ್ಷಿಗಳಾಗಿ ನಿಲ್ಲಿಸುವರು,
|
11. “ನಿಮ್ಮನ್ನು ಹಿಡಿದುಕೊಂಡು ಹೋಗಿ ಒಪ್ಪಿಸುವಾಗ ಏನು ಹೇಳಬೇಕು ಎಂದು ಮುಂಚಿತವಾಗಿಯೇ ಚಿಂತಿಸಬೇಡಿರಿ, ನೀವು ಏನು ಹೇಳಬೇಕೋ ಅದು ನಿಮಗೆ ಆ ಗಳಿಗೆಯಲ್ಲಿ ಕೊಡಲ್ಪಡುವುದು, ಏಕೆಂದರೆ ಮಾತನಾಡುವವರು ನೀವಲ್ಲ, ಆದರೆ ಪವಿತ್ರಾತ್ಮನೇ ನಿಮ್ಮ ಮೂಲಕವಾಗಿ ಮಾತನಾಡುವನು,
|
12. ಇದಲ್ಲದೆ ಸಹೋದರನು ಸಹೋದರನನ್ನೂ, ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು. ಮಕ್ಕಳು ಹೆತ್ತವರಿಗೆ ವಿರೋಧವಾಗಿ ಎದ್ದು ಅವರನ್ನು ಕೊಲ್ಲಿಸುವರು,
|
13. ಮತ್ತು ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ದ್ವೇಷಿಸುವರು, ಆದರೆ ಕೊನೆಯವರೆಗೂ ತಾಳುವವನೇ ರಕ್ಷಣೆ ಹೊಂದುವನು.” PEPS
|
14. “ಇದಲ್ಲದೆ § ದಾನಿ. 9:27; 12:11: ವಿನಾಶಕಾರಕ ಅಸಹ್ಯ ಮೂರ್ತಿಯು ನಿಲ್ಲಬಾರದ ಸ್ಥಳದಲ್ಲಿ ನಿಂತಿರುವುದನ್ನು ನೀವು ನೋಡುವಾಗ (ಇದನ್ನು ಓದುವವನು ತಿಳಿದುಕೊಳ್ಳಲಿ). ಯೂದಾಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಲಿ.
|
19. ಅಂಥ ಸಂಕಟವು ದೇವರು ಜಗತ್ತನ್ನು ಸೃಷ್ಟಿಸಿದ ದಿನದಿಂದ ಮೊದಲುಗೊಂಡು ಈ ದಿನದವರೆಗೂ ಆಗಲಿಲ್ಲ; ಇನ್ನು ಮುಂದೆ ಆಗುವುದೂ ಇಲ್ಲ.
|
20. ಕರ್ತನು ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಒಂದು ನರಪ್ರಾಣಿಯಾದರೂ ಉಳಿಯುವುದಿಲ್ಲ. ಆದರೆ ತಾನು ಆರಿಸಿಕೊಂಡವರಿಗಾಗಿ ಆ ದಿನಗಳನ್ನು ಕಡಿಮೆ ಮಾಡಿದ್ದಾನೆ. PEPS
|
22. ಏಕೆಂದರೆ ಸುಳ್ಳು ಕ್ರಿಸ್ತರೂ, ಸುಳ್ಳುಪ್ರವಾದಿಗಳೂ ಎದ್ದು ಸಾಧ್ಯವಾದರೆ ದೇವರು ಆರಿಸಿಕೊಂಡವರನ್ನು ಮೋಸಗೊಳಿಸುವುದಕ್ಕೋಸ್ಕರ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸುವರು.
|
25. ಚಂದ್ರನು ತನ್ನ ಬೆಳಕು ಕೊಡದೆ ಇರುವನು.
ನಕ್ಷತ್ರಗಳು ಆಕಾಶದಿಂದ ಬೀಳುವವು. ಮತ್ತು ಪರಲೋಕದಲ್ಲಿ ಶಕ್ತಿಗಳು ಕದಲುವವು.’ |
27. ಮತ್ತು ಆತನು ತನ್ನ ದೂತರನ್ನು ಕಳುಹಿಸಿ ಭೂಮಿಯ ಕಟ್ಟಕಡೆಯಿಂದ ಆಕಾಶದ ಕಟ್ಟಕಡೆಯವರೆಗೆ ತಾನು ಆರಿಸಿಕೊಂಡವರನ್ನು ನಾಲ್ಕುದಿಕ್ಕುಗಳಿಂದ ಒಟ್ಟುಗೂಡಿಸುವನು.” PS
|
28. {ಅಂಜೂರ ಮರದ ಪಾಠ} PS “ಅಂಜೂರ ಮರವನ್ನು ನೋಡಿ ಒಂದು ಪಾಠವನ್ನು ಕಲಿತುಕೊಳ್ಳಿ. ಅದರ ಕೊಂಬೆಗಳಲ್ಲಿ ಇನ್ನೂ ಎಳೆದಾಗಿ ಎಲೆಗಳು ಚಿಗುರುವಾಗ ಬೇಸಿಗೆಯು ಸಮೀಪಿಸಿತು ಎಂದು ಅರಿತುಕೊಳ್ಳುತ್ತಿರಲ್ಲಾ.
|
32. {ಆ ದಿನವೂ ಗಳಿಗೆಯೂ ಯಾರಿಗೂ ತಿಳಿಯದು} PS “ಇದಲ್ಲದೆ ಆ ದಿನದ ಮತ್ತು ಆ ಗಳಿಗೆಯ ವಿಷಯವಾಗಿ ನನ್ನ ತಂದೆಗೆ ಹೊರತು ಮತ್ತಾರಿಗೂ ತಿಳಿಯದು, ಪರಲೋಕದಲ್ಲಿರುವ ದೂತರಿಗಾಗಲಿ, ಮಗನಿಗಾಗಲಿ ತಿಳಿಯದು.
|
33. ಆ ಕಾಲವು ಯಾವಾಗ ಬರುವುದು ಎಂದು ನಿಮಗೆ ತಿಳಿಯದೆ ಇರುವುದರಿಂದ ನೀವು § ಮಾರ್ಕ 14:38; ಮತ್ತಾ 26:41; ಎಫೆ 6:18: ಎಚ್ಚರವಾಗಿರಿ, * ಕೆಲವು ಪ್ರತಿಗಳಲ್ಲಿ ಜಾಗರೂಕರಾಗಿರಿ, ದೇವರನ್ನು ಪ್ರಾರ್ಥಿಸಿರಿ. ಜಾಗರೂಕರಾಗಿರಿ.
|
34. ಅದು † ಮತ್ತಾ 25:14; ಲೂಕ 19:12: ಒಬ್ಬ ಮನುಷ್ಯನು ತನ್ನ ಮನೆಯನ್ನು ಬಿಟ್ಟು ದೂರಪ್ರಯಾಣಕ್ಕೆ ಹೋಗುವಾಗ ತನ್ನ ಸೇವಕರಿಗೆ ಮನೇ ಅಧಿಕಾರವನ್ನು ಒಪ್ಪಿಸಿಕೊಟ್ಟು ಪ್ರತಿಯೊಬ್ಬನಿಗೆ ಅವನವನ ಕೆಲಸಗಳನ್ನು ಕೊಟ್ಟು ಬಾಗಿಲು ಕಾಯುವವನಿಗೆ, ನೀನು ಜಾಗರೂಕನಾಗಿರಬೇಕೆಂದು ಆಜ್ಞಾಪಿಸಿದವನ ಹಾಗೆ ಇರುತ್ತದೆ” ಎಂದು ನಾನು ನಿಮಗೆ ಹೇಳುತ್ತಿದ್ದೇನೆ. PEPS
|
35. “ಮನೆ ಯಜಮಾನನು ಸಂಜೆಯಲ್ಲಿಯೋ, ಮಧ್ಯರಾತ್ರಿಯಲ್ಲಿಯೋ, ಕೋಳಿ ಕೂಗುವಾಗಲೋ ಬೆಳಕಾಗುವಾಗಲೋ ಯಾವಾಗ ಬರುತ್ತಾನೋ ನಿಮಗೆ ಗೊತ್ತಿಲ್ಲದ ಕಾರಣ ಎಚ್ಚರವಾಗಿರಿ!
|