1. {#1ದೆಬೋರಳ ಜಯಗೀತೆ }
2. [PS]ಆ ದಿನದಲ್ಲಿ ದೆಬೋರಳೂ ಅಬೀನೋವಮನ ಮಗನಾದ ಬಾರಾಕನೂ ಈ ಗೀತೆಯನ್ನು ಹಾಡಿದರು: [PE][QS]“[* ಅಥವಾ ಯೆಹೋವನು ಇಸ್ರಾಯೇಲರಿಗಾಗಿ ನೀತಿಯನ್ನು ಸ್ಥಾಪಿಸಿದ್ದಾನೆ. ]ಇಸ್ರಾಯೇಲರಲ್ಲಿ ಸೇನಾ ನಾಯಕರು ಎದ್ದಿದ್ದಾರೆ; [QE][QS2]ಜನರು ಸ್ವಇಚ್ಛೆಯಿಂದ ಸೈನ್ಯದಲ್ಲಿ ಸೇರಿದ್ದಾರೆ, [QE][QS2]ಯೆಹೋವನನ್ನು ಕೊಂಡಾಡಿರಿ. [QE]
3. [QS]“ಅರಸರೇ, ಕೇಳಿರಿ! ಪ್ರಭುಗಳೇ, ಕಿವಿಗೊಡಿರಿ! [QE][QS2]ನಾನು ಯೆಹೋವನನ್ನು ಕೀರ್ತಿಸುವೆನು; [QE][QS2]ನಾನು ಇಸ್ರಾಯೇಲ್ ದೇವರಾದ ಯೆಹೋವನಿಗೆ ಸ್ತುತಿ ಗೀತೆ ಹಾಡುವೆನು. [QE]
4. [QS]“ಯೆಹೋವನೇ, ನೀನು ಹೊರಟು [QE][QS2]ಎದೋಮ್ಯರ ಪ್ರಾಂತ್ಯವಾದ ಸೇಯೀರಿನ ಮಾರ್ಗವಾಗಿ ಪಯಣಮಾಡುತ್ತಾ ಬರುವಾಗ [QE][QS2][† 2 ಸಮು 22:8; ನಹೂ. 1:5. ]ಭೂಲೋಕವು ಕಂಪಿಸಿತು, ಆಕಾಶವು ನಡುಗಿತು; [QE][QS2]ಮೇಘಮಂಡಲವು ಮಳೆಗರೆಯಿತು. [QE]
5. [QS]ಯೆಹೋವನ ಮುಂದೆ ಪರ್ವತಗಳು ಕರಗಿಹೋದವು, [QE][QS2][‡ ಯೆಶಾ 64: 1 ]ಇಸ್ರಾಯೇಲಿನ ದೇವರಾದ ಯೆಹೋವನ ಎದುರಿಗೆ ಆ ಸೀನಾಯಿಬೆಟ್ಟವೂ ನೀರಾಯಿತು. [QE]
6. [QS]“ಅನಾತನ ಮಗನಾದ ಶಮ್ಗರನ ಕಾಲದಲ್ಲಿಯೂ, [QE][QS2]ಯಾಯೇಲಳ ದಿನಗಳಲ್ಲಿಯೂ ರಾಜಮಾರ್ಗಗಳಲ್ಲಿ ಸಂಚಾರವು ನಿಂತುಹೋಯಿತು. [QE][QS2]ಪ್ರಯಾಣಿಕರು ಅಂಕುಡೊಂಕಾದ ದಾರಿಹಿಡಿದು ಹೋದರು. [QE]
7. [QS]ದೆಬೋರಳಾದ ನಾನು ಇಸ್ರಾಯೇಲರಲ್ಲಿ ತಾಯಿಯಂತೆ ಎದ್ದುಬರುವವರೆಗೆ [QE][QS2]ಇಸ್ರಾಯೇಲ್ ಗ್ರಾಮಗಳು ಹಾಳುಬಿದ್ದಿದ್ದವು. [QE]
8. [QS]ಜನರು ಅನ್ಯದೇವತೆಗಳನ್ನು ಆರಿಸಿಕೊಂಡಿದ್ದರು; [QE][QS2]ಯುದ್ಧವು ಉರುಬಾಗಿಲವರೆಗೂ ಬಂದಿತ್ತು. [QE][QS2]ಇಸ್ರಾಯೇಲರ ನಲ್ವತ್ತು ಸಾವಿರ ಸೈನಿಕರ ಮಧ್ಯದಲ್ಲಿ ಗುರಾಣಿ ಬರ್ಜಿಗಳು ಇರಲೇ ಇಲ್ಲ. [QE]
9. [QS]ನನ್ನ ಹೃದಯವು ಇಸ್ರಾಯೇಲರ ಸೇನಾಧಿಪತಿಗಳಲ್ಲಿಯೂ, [QE][QS2]ಸ್ವಇಚ್ಛೆಯಿಂದ ಸೈನ್ಯದಲ್ಲಿ ಸೇರಿದ ಜನರಲ್ಲಿಯೂ ಸಂತೋಷಿಸುತ್ತದೆ; [QE][QS2]ಅವರಿಗೋಸ್ಕರ ಯೆಹೋವನನ್ನು ಕೊಂಡಾಡುತ್ತೇವೆ. [QE]
10. [QS]“ಬಿಳೀ ಕತ್ತೆಗಳ ಮೇಲೆ ಸವಾರಿಮಾಡುವವರೇ, [QE][QS2]ರತ್ನಗಂಬಳಿಗಳ ಮೇಲೆ ಕುಳಿತುಕೊಳ್ಳುವವರೇ, ಕಾಲ್ನಡಿಗೆಯಲ್ಲಿ ಪ್ರಯಾಣಿಸುವವರೇ, ಗಾನಮಾಡಿರಿ. [QE]
11. [QS]ಸೇದುವ ಬಾವಿಗಳ ಬಳಿಯಲ್ಲಿ [§ ಸಂಗೀತಗಾರರ. ]ಬಿಲ್ಲುಗಾರರ ಧ್ವನಿಗಿಂತ ಗಟ್ಟಿಯಾಗಿ [QE][QS2]ಯೆಹೋವನ ನೀತಿಸಾಧನೆಯ ವರ್ಣನೆಯನ್ನು ಕೇಳಿರಿ. [QE][QS2]ಆತನು ತನ್ನ ಪ್ರಜೆಗಳಾಗಿರುವ ಇಸ್ರಾಯೇಲ್ ಗ್ರಾಮಸ್ಥರ ನ್ಯಾಯವನ್ನು ಸ್ಥಾಪಿಸಿದ್ದಾನಲ್ಲಾ. [QE][QS2]ಆ ಕಾಲದಲ್ಲಿ ಯೆಹೋವನ ಜನರು ಊರುಬಾಗಿಲುಗಳಿಗೆ ಇಳಿದು ಬಂದರು. [QE]
12. [QS]‘ಎಚ್ಚರವಾಗು, ದೆಬೋರಳೇ! ಎಚ್ಚರವಾಗು, [QE][QS2]ಎಚ್ಚರವಾಗು, ಎಚ್ಚರವಾಗಿ ಗಾನಮಾಡು. [QE][QS2]ಬಾರಾಕನೇ, ಏಳು; [QE][QS2]ಅಬೀನೋವಮನ ಮಗನೇ, ನೀನು ಸೆರೆಹಿಡಿದವರನ್ನು ಸಾಗಿಸಿಕೊಂಡು ಹೋಗು.’ [QE]
13. [QS]“ಆಗ ಚದರಿಹೋದವರು ನಾಯಕರ ಬಳಿಗೆ ಕೂಡಿಬಂದರು. [QE][QS2]ಯೆಹೋವನ ಜನರು ವೀರರಾಗಿ ನನ್ನ ಸಹಾಯಕ್ಕೆ ನೆರೆದು ಬಂದರು. [QE]
14. [QS]ಅಮಾಲೇಕ್ಯರ ಪ್ರದೇಶದಲ್ಲಿ ನೆಲೆಗೊಂಡಿರುವ ಎಫ್ರಾಯೀಮ್ಯರೂ [QE][QS2]ಅವರ ಜೊತೆಯಲ್ಲಿ ಬೆನ್ಯಾಮೀನ್ಯರೂ ಬಂದರು. [QE][QS2]ಮಾಕೀರನ ಗೋತ್ರದಿಂದ ಪ್ರಧಾನರೂ [QE][QS2]ಜೆಬುಲೂನ್ ಕುಲದಿಂದ ದಂಡಧಾರಿಗಳಾದ ಸೇನಾನಾಯಕರೂ [QE]
15. [QS]ದೆಬೋರಳ ಜೊತೆಯಲ್ಲಿ ಇಸ್ಸಾಕಾರ್ ಕುಲಪ್ರಭುಗಳೂ [QE][QS2]ಇಸ್ಸಾಕಾರರೊಡನೆ ಬಾರಾಕನೂ ಆಗಮಿಸಿದರು. [QE][QS2]ಇವರೆಲ್ಲರೂ ಬಾರಾಕನ ಹೆಜ್ಜೆಹಿಡಿದು ತಟ್ಟನೆ ತಗ್ಗಿನ ಪ್ರದೇಶಕ್ಕೆ ಬಂದರು. [QE][QS2]ರೂಬೇನ್ಯರ ಗೋತ್ರದವರು ಬಹಳಷ್ಟು ತಮ್ಮ ಹೃದಯಗಳಲ್ಲಿ ವಿಶ್ಲೇಷಿಸಿದರೂ ತೀರ್ಮಾನಿಸಲಾಗಲ್ಲಿಲ್ಲ [QE]
16. [QS]ರೂಬೇನ್ಯರೇ, ನೀವು ಕುರಿಹಟ್ಟಿಗಳಲ್ಲಿ, [QE][QS2]ಮಂದೆಗಳ ಮಧ್ಯದಲ್ಲಿ ಕೊಳಲೂದುವುದನ್ನು ಕೇಳಬೇಕೆಂದು ಅಲ್ಲಿಯೇ ಕುಳಿತಿರುವುದೇಕೆ? [QE][QS2]ರೂಬೇನ್ಯರು ಗೋತ್ರದವರು ಬಹಳಷ್ಟು ತಮ್ಮ ಹೃದಯಗಳಲ್ಲಿ ವಿಶ್ಲೇಷಿಸಿದರೂ ತೀರ್ಮಾನಿಸಲಾಗಲ್ಲಿಲ್ಲ. [QE]
17. [QS]ಗಿಲ್ಯಾದ್ಯರು ಯೊರ್ದನಿನ ಆಚೆಯಲ್ಲೇ ಉಳಿದರು. [QE][QS2]ದಾನ್ ಕುಲದವರು ಹಡಗುಗಳಲ್ಲಿಯೇ ಉಳಿದದ್ದೇಕೆ? [QE][QS2]ಆಶೇರ್ ಕುಲದವರು ತಮ್ಮ ರೇವುಗಳನ್ನು ಬಿಡದೆ ಸಮುದ್ರ ತೀರದಲ್ಲಿ ಸುಮ್ಮನೆ ಕುಳಿತುಬಿಟ್ಟರು. [QE]
18. [QS]ಜೆಬುಲೂನ್ಯರು ತಮ್ಮ ಜೀವವನ್ನು ಮರಣದ ಆಪತ್ತಿಗೆ ಒಪ್ಪಿಸಲು ಸಿದ್ಧರಿದರು, [QE][QS2]ನಫ್ತಾಲ್ಯರು ಸಹ ರಣರಂಗದಲ್ಲಿಯೇ ಇದ್ದರು. [QE]
19. [QS]“ಅರಸರು ಬಂದು ಯುದ್ಧಮಾಡಿದರು; [QE][QS2]ಕಾನಾನ್ಯ ರಾಜರು ಮೆಗಿದ್ದೋ ನೀರಿನ ಕಾಲುವೆಗಳ ಬಳಿಯಲ್ಲಿರುವ ತಾನಾಕದಲ್ಲಿ ಕೂಡಿಬಂದು ಹೋರಾಡಿದರು. [QE][QS2]ಅವರಿಗೆ ದ್ರವ್ಯವೇನೂ ಸಿಕ್ಕಲಿಲ್ಲ. [QE]
20. [QS]ನಕ್ಷತ್ರಗಳೂ ಆಕಾಶಪಥದಲ್ಲಿದ್ದು ಸೀಸೆರನೊಡನೆ ಯುದ್ಧಮಾಡಿದವು. [QE]
21. [QS]ಪೂರ್ವಪ್ರಸಿದ್ಧವಾದ ಕೀಷೋನ್ ಹೊಳೆಯು ಶತ್ರುಗಳನ್ನು ಕೊಚ್ಚಿಕೊಂಡು ಹೋಯಿತು. [QE][QS2]ನನ್ನ ಮನವೇ ನೀನು ಧೈರ್ಯದಿಂದ ಮುಂದಕ್ಕೆ ಹೊರಡು. [QE]
22. [QS]ಆಗ ಅತಿವೇಗವಾಗಿ ಓಡುತ್ತಿದ್ದ ಅವರ ಬಲವಾದ ಕುದುರೆಗಳ ಗೊರಸುಗಳ ಪೆಟ್ಟಿನಿಂದ ನೆಲವು ಕಂಪಿಸಿತು. [QE]
23. [QS]ಮೇರೋಜ್ ಊರನ್ನು ಶಪಿಸಿರೆಂದು ಯೆಹೋವನ ದೂತನು ಹೇಳುತ್ತಾನೆ. [QE][QS2]‘ಅದರ ನಿವಾಸಿಗಳು ಯೆಹೋವನ ಸಹಾಯಕ್ಕೆ ಬರಲಿಲ್ಲ. [QE][QS2]ಯುದ್ಧವೀರರ ಹೋರಾಟದ ವಿರುದ್ಧ ಯೆಹೋವನ ಸಹಾಯಕ್ಕೆ ಬರಲಿಲ್ಲವಲ್ಲಾ; [QE][QS2]ಅವರನ್ನು ಶಪಿಸೇ ಶಪಿಸಿರಿ!’ [QE]
24. [QS]“ಎಲ್ಲಾ ಸ್ತ್ರೀಯರಲ್ಲಿ ಕೇನ್ಯನಾದ ಹೆಬೆರನ ಹೆಂಡತಿ ಯಾಯೇಲಳೆ ಭಾಗ್ಯವಂತಳು. [QE][QS2]ಗುಡಾರಗಳಲ್ಲಿ ವಾಸಿಸುವ ಸ್ತ್ರೀಯರಲ್ಲಿ ಆಕೆಯೇ ಆಶೀರ್ವದಿಸಲ್ಪಟ್ಟವಳು. [QE]
25. [QS]ನೀರು ಕೇಳಿದನು, ಹಾಲು ಕೊಟ್ಟಳು; [QE][QS2]ಉತ್ತಮ ಪಾತ್ರೆಯಲ್ಲಿ ಮಜ್ಜಿಗೆ ಕೊಟ್ಟಳು. [QE]
26. [QS]ಕೈಚಾಚಿ ಗೂಟವನ್ನು ತೆಗೆದುಕೊಂಡಳು; [QE][QS2]ಬಲಗೈಯಲ್ಲಿ ದೊಡ್ಡ ಸುತ್ತಿಗೆಯನ್ನು ಹಿಡಿದಳು; [QE][QS2]ಆ ಸುತ್ತಿಗೆಯಿಂದ ಸೀಸೆರನ ತಲೆಯನ್ನು ಒಡೆದುಬಿಟ್ಟಳು. [QE][QS2]ಅವನ ನೆತ್ತಿಗೆ ತಿವಿದು ಜಡಿದಳು. [QE]
27. [QS]ಅವನು ಆಕೆಯ ಕಾಲುಗಳ ಬಳಿಯಲ್ಲಿ ಉರುಳಿ ಬಿದ್ದನು; [QE][QS2]ಅವನು ಆಕೆಯ ಕಾಲುಗಳ ಬಳಿಯಲ್ಲಿ ಮುದುರಿಕೊಂಡು ಉರುಳಿದನು. [QE][QS2]ಅವನು ಬಿದ್ದಲ್ಲೇ ಸತ್ತನು. [QE]
28. [QS]“ಸೀಸೆರನ ತಾಯಿಯು ಕಿಟಿಕಿಯಿಂದ ನೋಡಿದಳು; [QE][QS2]ಸೀಸೆರನ ತಾಯಿಯು ಕಿಟಿಕಿಯ ಜಾಲರಿಗಳಿಂದ ಕೂಗಿದಳು. [QE][QS2]‘ಅವನ ರಥವು ಬರುವುದಕ್ಕೆ ಏಕೆ ಇಷ್ಟುಹೊತ್ತಾಯಿತು! [QE][QS2]ಅವನ ಕುದುರೆಗಳ ಗೊರಸುಗಳಿಗೆ ಇಷ್ಟು ಸಾವಕಾಶವೇಕೆ’ ಅಂದಳು. [QE]
29. [QS]ಬುದ್ಧಿವಂತೆಯರಾದ ಸ್ತ್ರೀಯರು ಕೊಟ್ಟ ಉತ್ತರವನ್ನೇ [QE][QS2]ಈಕೆಯು ತನ್ನಲ್ಲಿ ತಾನೇ ಅಂದುಕೊಳ್ಳುತ್ತಿದ್ದದ್ದು ಏನೆಂದರೆ, [QE]
30. [QS]‘ನಿಶ್ಚಯವಾಗಿ ಅವರಿಗೆ ಕೊಳ್ಳೆ ಸಿಕ್ಕಿರುತ್ತದೆ; ಅದನ್ನು ಹಂಚಿಕೊಳ್ಳುತ್ತಿದ್ದಾರಲ್ಲವೋ?. [QE][QS2]ಪ್ರತಿಯೊಬ್ಬ ಪುರುಷನಿಗೆ ಒಬ್ಬಿಬ್ಬರು ಹೆಂಗಸರೂ, ಸೀಸೆರನಿಗೆ ನಾನಾ ವರ್ಣಗಳುಳ್ಳ ಬಟ್ಟೆಗಳೂ, ವಿಚಿತ್ರವಾಗಿ ಕಸೂತಿಹಾಕಿದ ಎರಡು ವಸ್ತ್ರಗಳೂ, [* ಕೊಳ್ಳೆಯವರ ಕಂಠ. ]ಕಂಠಮಾಲೆಯೂ ದೊರಕಿರುತ್ತವೆ.’ [QE]
31. [QS]ಯೆಹೋವನ ಎಲ್ಲಾ ಶತ್ರುಗಳೂ ಹೀಗೆಯೇ ನಾಶವಾಗಲಿ. [QE][QS2]ಆತನನ್ನು ಪ್ರೀತಿಸುವ ಭಕ್ತರು ಪ್ರಕಾಶದಿಂದ ಉದಯಿಸುವ ಸೂರ್ಯನಂತಿರಲಿ.” [QE][MS]ಅನಂತರ ದೇಶದಲ್ಲಿ ನಲವತ್ತು ವರ್ಷ ಸಮಾಧಾನವಿತ್ತು. [ME]