ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ನ್ಯಾಯಸ್ಥಾಪಕರು
1. {ಮೀಕನ ಮನೆಯ ವಿಗ್ರಹ} [PS] ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿ ಮೀಕನೆಂಬ ಒಬ್ಬ ಮನುಷ್ಯನಿದ್ದನು. ಅವನು ಒಂದು ದಿನ ತನ್ನ ತಾಯಿಗೆ, “ಅಮ್ಮಾ, ಕಳವಾಗಿದ್ದ ನಿನ್ನ ಸಾವಿರದ ನೂರು ರೂಪಾಯಿಗಳಿಗೋಸ್ಕರ ನೀನು ನನಗೆ ಕೇಳಿಸುವಂತೆ ಶಪಿಸಿದಿಯಲ್ಲಾ;
2. ಇಗೋ, ಆ [* ಸುಮಾರು 13 ಕಿಲೋಗ್ರಾಂ.] ಸಾವಿರದ ನೂರು ರೂಪಾಯಿಗಳು ನನ್ನ ಹತ್ತಿರ ಇವೆ; ನಾನು ತೆಗೆದುಕೊಂಡಿದ್ದೆನು” ಎಂದು ಹೇಳಿದನು. ಆಕೆಯು, “ನನ್ನ ಮಗನೇ, ಯೆಹೋವನು ನಿನ್ನನ್ನು ಆಶೀರ್ವದಿಸಲಿ” ಅಂದಳು.
3. ಅವನು ಆ ಸಾವಿರದ ನೂರು ರೂಪಾಯಿಗಳನ್ನು ತನ್ನ ತಾಯಿಗೆ ಹಿಂದಕ್ಕೆ ಕೊಡಲು ಆಕೆಯು, “ನನ್ನ ಮಗನಿಗೆ ಹಿತವಾಗಲೆಂದು ಈ ಹಣವನ್ನು ಯೆಹೋವನಿಗೆ ಹರಕೆಮಾಡಿದ್ದೇನೆ; ಇದರಿಂದ ಒಂದು ಎರಕದ ವಿಗ್ರಹವನ್ನು ಮಾಡಿಸಿ ನಿನ್ನ ವಶಕ್ಕೆ ಕೊಡುವೆನು” ಎಂದು ಹೇಳಿ,
4. ಮಗನು ಹಿಂದಕ್ಕೆ ಕೊಟ್ಟ ರೂಪಾಯಿಗಳಲ್ಲಿ ಇನ್ನೂರು ರೂಪಾಯಿಗಳನ್ನು ತೆಗೆದು ಅಕ್ಕಸಾಲಿಗನಿಗೆ ಕೊಟ್ಟಳು. ಅವನು ಅವುಗಳಿಂದ ಕೆತ್ತನೆಯ ಮತ್ತು ಎರಕದ ವಿಗ್ರಹಗಳನ್ನು ಮಾಡಿಕೊಟ್ಟನು. ಮೀಕನು ಅದನ್ನು ತನ್ನ ಮನೆಯಲ್ಲಿಟ್ಟುಕೊಂಡನು. [PE][PS]
5. ಈ ಮೀಕನು ಏಫೋದನ್ನೂ ವಿಗ್ರಹಗಳನ್ನೂ ಮಾಡಿಸಿ, ಅವುಗಳನ್ನು ತಾನು ಕಟ್ಟಿಸಿದ ದೇವಸ್ಥಾನದಲ್ಲಿಟ್ಟು, ತನ್ನ ಮಕ್ಕಳಲ್ಲಿ ಒಬ್ಬನನ್ನು ಅರ್ಚಕ ಸೇವೆಗಾಗಿ ಪ್ರತಿಷ್ಠಿಸಿದನು.
6. ಆ ಕಾಲದಲ್ಲಿ ಇಸ್ರಾಯೇಲರೊಳಗೆ ಅರಸನಿರಲಿಲ್ಲ. ಪ್ರತಿಯೊಬ್ಬನೂ ಮನಸ್ಸಿಗೆ ಬಂದ ಹಾಗೆಯೇ ನಡೆದುಕೊಳ್ಳುತ್ತಿದ್ದನು. [PE][PS]
7. ಯೆಹೂದದ ಬೇತ್ಲೆಹೇಮಿನವನೂ, ಯೆಹೂದ ಕುಲದವನೂ ಆಗಿದ್ದ ಒಬ್ಬ ಯೌವನಸ್ಥನಾದ ಲೇವಿಯು ಉಪಜೀವನಕ್ಕೆ ಅನುಕೂಲವಾಗುವಂತೆ
8. ವಾಸಮಾಡಲು ತನ್ನ ಸ್ವಂತ ಊರನ್ನು ಬಿಟ್ಟು, ಪ್ರಯಾಣಮಾಡುತ್ತಾ ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿದ್ದ ಮೀಕನ ಮನೆಗೆ ಬಂದನು.
9. “ನೀನು ಎಲ್ಲಿಂದ ಬಂದಿ” ಎಂದು ಮೀಕನು ಅವನನ್ನು ಕೇಳಲು ಅವನು, “ನಾನು ಯೆಹೂದದ ಬೇತ್ಲೆಹೇಮಿನವನಾದ ಲೇವಿಯನು; ಉಪಜೀವನಕ್ಕೆ ಅನುಕೂಲವಾದ ವಾಸಸ್ಥಳವನ್ನು ಹುಡುಕಿಕೊಂಡು ಹೊರಟಿದ್ದೇನೆ” ಎಂದು ಉತ್ತರಕೊಟ್ಟನು.
10. ಮೀಕನು ಅವನಿಗೆ, “ನೀನು ನಮ್ಮಲ್ಲಿರು; ನಮಗೆ ತಂದೆಯೂ, ಯಾಜಕನೂ ಆಗು. ನಿನಗೆ ವರ್ಷಕ್ಕೆ [† ಸುಮಾರು 115 ಗ್ರಾಂ.] ಹತ್ತು ಬೆಳ್ಳಿ ನಾಣ್ಯಗಳನ್ನೂ, ಬಟ್ಟೆಯನ್ನೂ, ಆಹಾರವನ್ನೂ ಕೊಡುತ್ತೇನೆ” ಅನ್ನಲು
11. ಆ ಲೇವಿಯನು ಒಪ್ಪಿಕೊಂಡು ಅಲ್ಲೇ ವಾಸಮಾಡಿದನು; ಹೀಗೆ ಆ ಯೌವನಸ್ಥನು ಅವನ ಮಕ್ಕಳಲ್ಲೊಬ್ಬನಂತಾದನು.
12. ಮೀಕನು ಯೌವನಸ್ಥನಾದ ಆ ಲೇವಿಯನನ್ನು ಯಾಜಕಸೇವೆಗೋಸ್ಕರ ಪ್ರತಿಷ್ಠಿಸಿ ತನ್ನ ಮನೆಯಲ್ಲಿಟ್ಟುಕೊಂಡು,
13. “ಒಬ್ಬ ಲೇವಿಯು ನನ್ನ ಮನೆಯಲ್ಲಿ ಯಾಜಕನಾಗಿರುವುದರಿಂದ ಯೆಹೋವನು ನನ್ನನ್ನು ಆಶೀರ್ವದಿಸುವನೆಂದು ಬಲ್ಲೆನು” ಅಂದುಕೊಂಡನು. [PE]

Notes

No Verse Added

Total 21 Chapters, Current Chapter 17 of Total Chapters 21
1 2 3 4 5 6 7 8
9 10 11 12 13 14 15 16 17 18 19 20 21
ನ್ಯಾಯಸ್ಥಾಪಕರು 17:12
1. {ಮೀಕನ ಮನೆಯ ವಿಗ್ರಹ} PS ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿ ಮೀಕನೆಂಬ ಒಬ್ಬ ಮನುಷ್ಯನಿದ್ದನು. ಅವನು ಒಂದು ದಿನ ತನ್ನ ತಾಯಿಗೆ, “ಅಮ್ಮಾ, ಕಳವಾಗಿದ್ದ ನಿನ್ನ ಸಾವಿರದ ನೂರು ರೂಪಾಯಿಗಳಿಗೋಸ್ಕರ ನೀನು ನನಗೆ ಕೇಳಿಸುವಂತೆ ಶಪಿಸಿದಿಯಲ್ಲಾ;
2. ಇಗೋ, * ಸುಮಾರು 13 ಕಿಲೋಗ್ರಾಂ. ಸಾವಿರದ ನೂರು ರೂಪಾಯಿಗಳು ನನ್ನ ಹತ್ತಿರ ಇವೆ; ನಾನು ತೆಗೆದುಕೊಂಡಿದ್ದೆನು” ಎಂದು ಹೇಳಿದನು. ಆಕೆಯು, “ನನ್ನ ಮಗನೇ, ಯೆಹೋವನು ನಿನ್ನನ್ನು ಆಶೀರ್ವದಿಸಲಿ” ಅಂದಳು.
3. ಅವನು ಸಾವಿರದ ನೂರು ರೂಪಾಯಿಗಳನ್ನು ತನ್ನ ತಾಯಿಗೆ ಹಿಂದಕ್ಕೆ ಕೊಡಲು ಆಕೆಯು, “ನನ್ನ ಮಗನಿಗೆ ಹಿತವಾಗಲೆಂದು ಹಣವನ್ನು ಯೆಹೋವನಿಗೆ ಹರಕೆಮಾಡಿದ್ದೇನೆ; ಇದರಿಂದ ಒಂದು ಎರಕದ ವಿಗ್ರಹವನ್ನು ಮಾಡಿಸಿ ನಿನ್ನ ವಶಕ್ಕೆ ಕೊಡುವೆನು” ಎಂದು ಹೇಳಿ,
4. ಮಗನು ಹಿಂದಕ್ಕೆ ಕೊಟ್ಟ ರೂಪಾಯಿಗಳಲ್ಲಿ ಇನ್ನೂರು ರೂಪಾಯಿಗಳನ್ನು ತೆಗೆದು ಅಕ್ಕಸಾಲಿಗನಿಗೆ ಕೊಟ್ಟಳು. ಅವನು ಅವುಗಳಿಂದ ಕೆತ್ತನೆಯ ಮತ್ತು ಎರಕದ ವಿಗ್ರಹಗಳನ್ನು ಮಾಡಿಕೊಟ್ಟನು. ಮೀಕನು ಅದನ್ನು ತನ್ನ ಮನೆಯಲ್ಲಿಟ್ಟುಕೊಂಡನು. PEPS
5. ಮೀಕನು ಏಫೋದನ್ನೂ ವಿಗ್ರಹಗಳನ್ನೂ ಮಾಡಿಸಿ, ಅವುಗಳನ್ನು ತಾನು ಕಟ್ಟಿಸಿದ ದೇವಸ್ಥಾನದಲ್ಲಿಟ್ಟು, ತನ್ನ ಮಕ್ಕಳಲ್ಲಿ ಒಬ್ಬನನ್ನು ಅರ್ಚಕ ಸೇವೆಗಾಗಿ ಪ್ರತಿಷ್ಠಿಸಿದನು.
6. ಕಾಲದಲ್ಲಿ ಇಸ್ರಾಯೇಲರೊಳಗೆ ಅರಸನಿರಲಿಲ್ಲ. ಪ್ರತಿಯೊಬ್ಬನೂ ಮನಸ್ಸಿಗೆ ಬಂದ ಹಾಗೆಯೇ ನಡೆದುಕೊಳ್ಳುತ್ತಿದ್ದನು. PEPS
7. ಯೆಹೂದದ ಬೇತ್ಲೆಹೇಮಿನವನೂ, ಯೆಹೂದ ಕುಲದವನೂ ಆಗಿದ್ದ ಒಬ್ಬ ಯೌವನಸ್ಥನಾದ ಲೇವಿಯು ಉಪಜೀವನಕ್ಕೆ ಅನುಕೂಲವಾಗುವಂತೆ
8. ವಾಸಮಾಡಲು ತನ್ನ ಸ್ವಂತ ಊರನ್ನು ಬಿಟ್ಟು, ಪ್ರಯಾಣಮಾಡುತ್ತಾ ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿದ್ದ ಮೀಕನ ಮನೆಗೆ ಬಂದನು.
9. “ನೀನು ಎಲ್ಲಿಂದ ಬಂದಿ” ಎಂದು ಮೀಕನು ಅವನನ್ನು ಕೇಳಲು ಅವನು, “ನಾನು ಯೆಹೂದದ ಬೇತ್ಲೆಹೇಮಿನವನಾದ ಲೇವಿಯನು; ಉಪಜೀವನಕ್ಕೆ ಅನುಕೂಲವಾದ ವಾಸಸ್ಥಳವನ್ನು ಹುಡುಕಿಕೊಂಡು ಹೊರಟಿದ್ದೇನೆ” ಎಂದು ಉತ್ತರಕೊಟ್ಟನು.
10. ಮೀಕನು ಅವನಿಗೆ, “ನೀನು ನಮ್ಮಲ್ಲಿರು; ನಮಗೆ ತಂದೆಯೂ, ಯಾಜಕನೂ ಆಗು. ನಿನಗೆ ವರ್ಷಕ್ಕೆ ಸುಮಾರು 115 ಗ್ರಾಂ. ಹತ್ತು ಬೆಳ್ಳಿ ನಾಣ್ಯಗಳನ್ನೂ, ಬಟ್ಟೆಯನ್ನೂ, ಆಹಾರವನ್ನೂ ಕೊಡುತ್ತೇನೆ” ಅನ್ನಲು
11. ಲೇವಿಯನು ಒಪ್ಪಿಕೊಂಡು ಅಲ್ಲೇ ವಾಸಮಾಡಿದನು; ಹೀಗೆ ಯೌವನಸ್ಥನು ಅವನ ಮಕ್ಕಳಲ್ಲೊಬ್ಬನಂತಾದನು.
12. ಮೀಕನು ಯೌವನಸ್ಥನಾದ ಲೇವಿಯನನ್ನು ಯಾಜಕಸೇವೆಗೋಸ್ಕರ ಪ್ರತಿಷ್ಠಿಸಿ ತನ್ನ ಮನೆಯಲ್ಲಿಟ್ಟುಕೊಂಡು,
13. “ಒಬ್ಬ ಲೇವಿಯು ನನ್ನ ಮನೆಯಲ್ಲಿ ಯಾಜಕನಾಗಿರುವುದರಿಂದ ಯೆಹೋವನು ನನ್ನನ್ನು ಆಶೀರ್ವದಿಸುವನೆಂದು ಬಲ್ಲೆನು” ಅಂದುಕೊಂಡನು. PE
Total 21 Chapters, Current Chapter 17 of Total Chapters 21
1 2 3 4 5 6 7 8
9 10 11 12 13 14 15 16 17 18 19 20 21
×

Alert

×

kannada Letters Keypad References