1. {ಲಾಜರನ ಮರಣ} PS ಮಾರ್ಥಳು ಮತ್ತು ಆಕೆಯ ಸಹೋದರಿಯಾದ, ಮರಿಯಳ ಊರಾದ, ಬೇಥಾನ್ಯದಲ್ಲಿ ಲಾಜರನೆಂಬುವನೊಬ್ಬನು ಅಸ್ವಸ್ಥನಾಗಿದ್ದನು.
|
2. * ಯೋಹಾ 12:3; ಮತ್ತಾ 26:7; ಮಾರ್ಕ 14:3: ಈ ಮರಿಯಳು ಕರ್ತನಿಗೆ ತೈಲವನ್ನು ಹಚ್ಚಿ ಆತನ ಪಾದಗಳನ್ನು ತನ್ನ ತಲೆ ಕೂದಲಿನಿಂದ ಒರಸಿದವಳು. ಈಕೆಯ ಸಹೋದರನಾದ ಲಾಜರನೇ ಅಸ್ವಸ್ಥನಾಗಿದ್ದನು.
|
3. ಹೀಗಿರಲಾಗಿ ಅವನ ಸಹೋದರಿಯರು, “ಕರ್ತನೇ ಇಗೋ, ನೀನು ಪ್ರೀತಿಸುವವನು ಅಸ್ವಸ್ಥನಾಗಿದ್ದಾನೆ” ಎಂಬುದಾಗಿ ಯೇಸುವಿನ ಬಳಿಗೆ ಹೇಳಿ ಕಳುಹಿಸಿದರು.
|
4. ಯೇಸು ಇದನ್ನು ಕೇಳಿ, “ಈ ರೋಗವು ಮರಣಕ್ಕಾಗಿ ಬಂದದ್ದಲ್ಲ; ಇದರಿಂದ ದೇವಕುಮಾರನಿಗೆ ಮಹಿಮೆ ಉಂಟಾಗುವಂತೆ ದೇವರ ಮಹಿಮೆಗೋಸ್ಕರ ಬಂದದ್ದು” ಎಂದು ಹೇಳಿದನು.
|
8. ಆತನ ಶಿಷ್ಯರು ಆತನಿಗೆ, “ಗುರುವೇ, ಆಗಲೇ † ಯೋಹಾ 8:59; 10:31: ಯೆಹೂದ್ಯರು ನಿನ್ನ ಮೇಲೆ ಕಲ್ಲೆಸೆಯಬೇಕೆಂದು ಹುಡುಕುತ್ತಿದ್ದಾರೆ, ಪುನಃ ನೀನು ಅಲ್ಲಿಗೆ ಹೋಗಬೇಕೆಂದಿರುವಿಯಾ?” ಎಂದರು.
|
9. ಯೇಸು, “ಹಗಲಿಗೆ ಹನ್ನೆರಡು ತಾಸುಗಳು ಉಂಟಲ್ಲವೇ? ಒಬ್ಬನು ಹಗಲಿನಲ್ಲಿ ನಡೆದರೆ, ಈ ಲೋಕದ ಬೆಳಕು ಕಾಣಿಸುವುದರಿಂದ ಅವನು ಎಡವುದಿಲ್ಲ.
|
11. ಇದನ್ನು ಹೇಳಿದ ಮೇಲೆ ಆತನು ಅವರಿಗೆ, “ನಮ್ಮ ಮಿತ್ರನಾದ ಲಾಜರನು ನಿದ್ರೆ ಮಾಡುತ್ತಿದ್ದಾನೆ, ಆದುದರಿಂದ ನಾನು ಹೋಗಿ ಅವನನ್ನು ನಿದ್ರೆಯಿಂದ ಎಬ್ಬಿಸಬೇಕಾಗಿದೆ” ಎಂದು ಹೇಳಿದನು.
|
13. ಯೇಸು ಅವನ ಮರಣವನ್ನು ಕುರಿತು ಅದನ್ನು ಹೇಳಿದ್ದನು, ಆದರೆ ಅವರು ವಿಶ್ರಾಂತಿಗಾಗಿ ಮಲಗಿದ್ದಾನೆಂಬುದಾಗಿ ಹೇಳಿದನೆಂದು ಯೋಚಿಸಿದರು.
|
15. ನಾನು ಅಲ್ಲಿ ಇಲ್ಲದೆ ಹೋದದ್ದು ಒಳ್ಳೆಯದೇ, ನಿಮಗೆ ನನ್ನಲ್ಲಿ ನಂಬಿಕೆ ಬರುವಂತೆ ಇದೆಲ್ಲಾ ನಡೆದಿದೆ. ಬನ್ನಿ, ನಾವು ಅವನ ಬಳಿಗೆ ಹೋಗೋಣ” ಎಂದು ಹೇಳಿದನು
|
16. ಆಗ ದಿದುಮನೆಂಬ ತೋಮನು ತನ್ನ ಜೊತೆ ಶಿಷ್ಯರಿಗೆ, “ನಾವು ಸಹ ಯೇಸುವಿನೊಂದಿಗೆ ಸಾಯುವುದಕ್ಕೆ ಹೋಗೋಣ” ಎಂದು ಹೇಳಿದನು. PS
|
17. {ಮಾರ್ಥ ಮತ್ತು ಮರಿಯಳನ್ನು ಯೇಸು ಸಂತೈಸಿದ್ದು} PS ಯೇಸು ಬಂದಾಗ ಲಾಜರನನ್ನು ಸಮಾಧಿಯಲ್ಲಿಟ್ಟು ಆಗಲೇ ನಾಲ್ಕು ದಿನಗಳಾಯಿತೆಂದು ಆತನಿಗೆ ತಿಳಿದು ಬಂದಿತು.
|
18. ಬೇಥಾನ್ಯವು ಯೆರೂಸಲೇಮಿಗೆ ಸಮೀಪವಾಗಿತ್ತು. ಯೆರುಸಲೇಮಿನಿಂದ ಸುಮಾರು ಒಂದು ‡ ಸುಮಾರು ಮೂರು ಕಿಲೋಮೀಟರಿನಷ್ಟು ದೂರವಿತ್ತು. ಹದಿನೈದು ಸ್ತಾದ್ಯಗಳು. ಎರಡು ಮೈಲಿಗಳು. ಹರಿದಾರಿಯಷ್ಟು ಅಂತರವಿತ್ತು.
|
20. ಹೀಗಿರುವಲ್ಲಿ ಮಾರ್ಥಳು ಯೇಸು ಬರುತ್ತಾನೆಂದು ಕೇಳಿ ಆತನನ್ನು ಎದುರುಗೊಳ್ಳುವುದಕ್ಕೆ ಎದ್ದು ಹೋದಳು. ಆದರೆ ಮರಿಯಳು ಮನೆಯಲ್ಲೇ ಉಳಿದುಕೊಂಡಿದ್ದಳು.
|
22. ಈಗಲಾದರೂ ನೀನು ದೇವರನ್ನು ಏನು ಕೇಳಿಕೊಂಡರೂ ಅದನ್ನು ದೇವರು ನಿನಗೆ ಅನುಗ್ರಹಿಸುವನೆಂದು ನಾನು ಬಲ್ಲೆನು” ಎಂದು ಹೇಳಿದಳು.
|
24. ಮಾರ್ಥಳು ಆತನಿಗೆ, “ಸತ್ತವರಿಗೆ ಕಡೆಯ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ಎದ್ದು ಬರುವನೆಂದು ನಾನು ಬಲ್ಲೆನು” ಅಂದಳು.
|
26. ಮತ್ತು ಜೀವಿಸುವ ಪ್ರತಿಯೊಬ್ಬನು ನನ್ನಲ್ಲಿ ನಂಬಿಕೆಯಿಟ್ಟರೆ, ಅವನು ಎಂದಿಗೂ ಸಾಯುವುದಿಲ್ಲ. ಇದನ್ನು ನೀನು ನಂಬುತ್ತೀಯೋ?” ಎಂದು ಕೇಳಿದಕ್ಕೆ,
|
27. ಆಕೆಯು ಆತನಿಗೆ, “ಹೌದು ಕರ್ತನೇ, * ಯೋಹಾ 6:69; ಮತ್ತಾ 16:16; ಮಾರ್ಕ 8:29; ಲೂಕ 9:20: ಲೋಕಕ್ಕೆ ಬರಬೇಕಾದ ದೇವಕುಮಾರನಾದ ಕ್ರಿಸ್ತನು ನೀನೇ ಎಂದು ನಾನು ನಂಬಿದ್ದೇನೆ” ಅಂದಳು. PEPS
|
28. ಇದನ್ನು ಹೇಳಿ ಆಕೆ ಹೋಗಿ ತನ್ನ ತಂಗಿಯಾದ ಮರಿಯಳನ್ನು ಗುಪ್ತವಾಗಿ ಕರೆದು, “ಗುರುವು ಬಂದಿದ್ದಾರೆ, ನಿನ್ನನ್ನು ಕರೆಯುತ್ತಿದ್ದಾರೆ” ಎಂದಳು.
|
31. ಮರಿಯಳೊಂದಿಗೆ ಮನೆಯಲ್ಲಿ ಇದ್ದುಕೊಂಡು ಆಕೆಯನ್ನು ಸಂತೈಸುತ್ತಿದ್ದ ಯೆಹೂದ್ಯರು ಆಕೆಯು ತಟ್ಟನೆ ಎದ್ದು ಹೊರಗೆ ಹೋಗುವುದನ್ನು ಕಂಡು, ಆಕೆಯು ಅಳುವುದಕ್ಕಾಗಿ ಸಮಾಧಿಗೆ ಹೋಗುತ್ತಿದ್ದಾಳೆಂದು ಭಾವಿಸಿ ಆಕೆಯ ಹಿಂದೆ ಹೋದರು.
|
32. ಮರಿಯಳು ಯೇಸು ಇದ್ದಲ್ಲಿಗೆ ಬಂದು ಆತನನ್ನು ಕಂಡು ಆತನ ಪಾದಗಳಿಗೆ ಅಡ್ಡಬಿದ್ದು ಆತನಿಗೆ, “ಕರ್ತನೇ, ನೀನು ಇಲ್ಲಿ ಇದ್ದಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ” ಎಂದಳು.
|
33. ಆಕೆಯು ಅಳುವುದನ್ನು ಮತ್ತು ಆಕೆಯೊಂದಿಗೆ ಬಂದಿದ್ದ ಯೆಹೂದ್ಯರು ಅಳುವುದನ್ನು ಯೇಸು ನೋಡಿದಾಗ ಯೇಸುವು ಆತ್ಮದಲ್ಲಿ ವ್ಯಸನಪಟ್ಟು ನೊಂದುಕೊಂಡು,
|
37. ಅವರಲ್ಲಿ ಕೆಲವರು, “ಈತನು ಆ ಕುರುಡನಿಗೆ ಕಣ್ಣು ಕೊಟ್ಟನಲ್ಲಾ, ಈ ಮನುಷ್ಯನನ್ನು ಸಾಯದ ಹಾಗೆ ಮಾಡಬಹುದಿತ್ತಲ್ಲಾ?” ಎಂದರು. PS
|
38. {ಯೇಸು ಲಾಜರನನ್ನು ಮರಣದಿಂದ ಎಬ್ಬಿಸಿದ್ದು} PS ಯೇಸು ತಿರುಗಿ ತನ್ನ ಮನದಲ್ಲಿ ನೊಂದುಕೊಳ್ಳುತ್ತಾ ಸಮಾಧಿಯ ಬಳಿಗೆ ಬಂದನು. ಅದು ಒಂದು ಗವಿಯಾಗಿತ್ತು, ಅದರ ಬಾಯಿಗೆ ಒಂದು ಕಲ್ಲನ್ನು ಮುಚ್ಚಿಡಲಾಗಿತ್ತು.
|
39. ಯೇಸು, “ಆ ಕಲ್ಲನ್ನು ತೆಗೆದು ಹಾಕಿರಿ” ಎನ್ನಲು, ತೀರಿಹೋದವನ ಸಹೋದರಿಯಾದ ಮಾರ್ಥಳು ಆತನಿಗೆ, “ಕರ್ತನೇ, ಅವನು ಸತ್ತು ನಾಲ್ಕು ದಿನಗಳಾದವು, ಈಗ ದುರ್ವಾಸನೆ ಬಂದಿರಬಹುದು” ಎಂದಳು.
|
40. ಯೇಸು ಆಕೆಗೆ, † ಯೋಹಾ 11:4, 23, 26: “ನೀನು ನಂಬಿದರೆ ದೇವರ ಮಹಿಮೆಯನ್ನು ಕಾಣುವಿ ಎಂದು ನಾನು ನಿನಗೆ ಹೇಳಲಿಲ್ಲವೇ?” ಎಂದು ಉತ್ತರ ಕೊಟ್ಟನು
|
41. ಆಗ ಅವರು ಕಲ್ಲನ್ನು ತೆಗೆದು ಹಾಕಿದರು. ಯೇಸು ಕಣ್ಣೆತ್ತಿ ಮೇಲಕ್ಕೆ ನೋಡಿ, “ತಂದೆಯೇ ನೀನು ನನಗೆ ಕಿವಿಗೊಟ್ಟಿದ್ದಕ್ಕಾಗಿ ನಿನಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
|
42. ನೀನು ನನಗೆ ಯಾವಾಗಲೂ ಕಿವಿಗೊಡುತ್ತೀ ಎಂದು ನನಗೆ ತಿಳಿದೇ ಇದೆ. ಆದರೂ ನೀನೇ ನನ್ನನ್ನು ಕಳುಹಿಸಿಕೊಟ್ಟಿರುವಿ ಎಂದು ಸುತ್ತಲೂ ನಿಂತಿರುವ ಈ ಜನರು ನಂಬುವಂತೆ ಅವರಿಗೋಸ್ಕರ ಈ ಮಾತುಗಳನ್ನಾಡಿದ್ದೇನೆ” ಎಂದು ಹೇಳಿದನು.
|
44. ಸತ್ತಿದ್ದವನು ಹೊರಗೆ ಬಂದನು. ಅವನ ಕೈಕಾಲುಗಳು ಶವ ವಸ್ತ್ರಗಳಿಂದ ಸುತ್ತಿದ್ದವು. ಅವನ ಮುಖಕ್ಕೆ ವಸ್ತ್ರ ಸುತ್ತಲಾಗಿತ್ತು. ಯೇಸು ಅವರಿಗೆ, “ಅವನನ್ನು ಬಿಡಿಸಿರಿ, ಅವನು ಹೋಗಲಿ” ಎಂದು ಹೇಳಿದನು. ಯೆಹೂದ್ಯರ ಹಿರೀಸಭೆಯವರು ಯೇಸುವನ್ನು ಕೊಲ್ಲಬೇಕೆಂದು ಆಲೋಚನೆ ಮಾಡಿಕೊಂಡಿದ್ದು; PEPS
|
45. ಆದುದರಿಂದ ‡ ಯೋಹಾ 11:19, 31. ಮರಿಯಳ ಬಳಿಗೆ ಬಂದಿದ್ದ ಯೆಹೂದ್ಯರಲ್ಲಿ ಅನೇಕರು ಯೇಸುವಿನ ಕಾರ್ಯವನ್ನು ನೋಡಿ ಆತನಲ್ಲಿ ನಂಬಿಕೆಯಿಟ್ಟರು.
|
47. ಆಗ ಮುಖ್ಯಯಾಜಕರೂ ಫರಿಸಾಯರೂ ಹಿರೀಸಭೆಯನ್ನು ಕೂಡಿಸಿ, “ನಾವು ಈಗ ಏನುಮಾಡಬೇಕು? ಈ ಮನುಷ್ಯನು ಬಹು ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ.
|
48. ನಾವು ಅವನನ್ನು ಹೀಗೆಯೇ ಬಿಟ್ಟರೆ ಎಲ್ಲರೂ ಆತನ್ನನ್ನೇ ನಂಬುವರು. ರೋಮನ್ನರು ಬಂದು ನಮ್ಮ ಸ್ಥಳವನ್ನೂ ಮತ್ತು ರಾಷ್ಟ್ರವನ್ನೂ ವಶ ಮಾಡಿಕೊಂಡಾರು” ಎಂದರು.
|
49. ಆಗ ಅವರಲ್ಲಿ ಆ ವರ್ಷಕ್ಕೆ ಮಹಾಯಾಜಕನಾಗಿದ್ದ § ಮತ್ತಾ 26:3,57. ಕಾಯಫನೆಂಬುವನು ಅವರಿಗೆ, “ನಿಮಗೇನೂ ತಿಳಿಯುತ್ತಿಲ್ಲ.
|
50. ಇಡೀ * ಯೋಹಾ 18:14. ರಾಷ್ಟ್ರವೇ ನಾಶವಾಗುವುದಕ್ಕಿಂತ ಒಬ್ಬ ಮನುಷ್ಯನು ಜನರಿಗೋಸ್ಕರ ಸಾಯುವುದು ನಿಮಗೆ ಹಿತವೆಂದು ನೀವು ಆಲೋಚಿಸುವುದೂ ಇಲ್ಲ” ಎಂಬುದಾಗಿ ಹೇಳಿದನು.
|
51. ಇದನ್ನು ಅವನು ತನ್ನಷ್ಟಕ್ಕೆ ತಾನೇ ಹೇಳಲಿಲ್ಲ, ಆದರೆ ತಾನು ಆ ವರ್ಷದಲ್ಲಿ ಮಹಾಯಾಜಕನಾಗಿದ್ದುದರಿಂದ, ಯೇಸು ಆ ಜನರಿಗೋಸ್ಕರ ಹಾಗೂ
|
52. ಆ ಜನತೆಗಾಗಿ ಮಾತ್ರವಲ್ಲದೆ ಚದರಿರುವ ದೇವರ ಮಕ್ಕಳನ್ನು ಸಹ ಒಟ್ಟುಗೂಡಿಸುವುದಕ್ಕಾಗಿಯೂ ಸಾಯುವುದಕ್ಕಿದ್ದನು, ಎಂಬುದಾಗಿ ಪ್ರವಾದಿಸಿದನು
|
54. ಹೀಗಿರಲಾಗಿ ಯೇಸು ಇನ್ನೂ ಯೆಹೂದ್ಯರೊಳಗೆ ಬಹಿರಂಗವಾಗಿ ತಿರುಗಾಡದೆ, ಅಲ್ಲಿಂದ ಅಡವಿಯ ಹತ್ತಿರದ ಪ್ರದೇಶಕ್ಕೆ ಹೋಗಿ, ಎಫ್ರಾಯೀಮ್ ಎಂಬ ಊರಲ್ಲಿ ತನ್ನ ಶಿಷ್ಯರ ಜೊತೆ ಇದ್ದನು. PEPS
|
55. ಆಗ ಯೆಹೂದ್ಯರ ಪಸ್ಕಹಬ್ಬ ಹತ್ತಿರವಾಗಿರಲಾಗಿ, ಬಹು ಜನರು ತಮ್ಮನ್ನು ಶುದ್ಧ ಮಾಡಿಕೊಳ್ಳುವುದಕ್ಕಾಗಿ ಹಬ್ಬಕ್ಕಿಂತ ಮೊದಲೇ ಹಳ್ಳಿಗಳಿಂದ ಯೆರೂಸಲೇಮಿಗೆ ಬಂದರು.
|
56. ಅವರು ಯೇಸುವನ್ನು ಹುಡುಕುತ್ತಾ ದೇವಾಲಯದಲ್ಲಿ ನಿಂತುಕೊಂಡು, “ಅವನು ಹಬ್ಬಕ್ಕೆ ಬಾರದೇ ಇದ್ದಾನೋ? ನಿಮಗೆ ಹೇಗೆ ತೋರುತ್ತದೆ?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಾ ಇದ್ದರು.
|
57. ಆಗ ಮುಖ್ಯಯಾಜಕರೂ ಮತ್ತು ಫರಿಸಾಯರೂ ಆತನನ್ನು ಹಿಡಿಯಬೇಕೆಂಬುದಾಗಿ ಯೋಚಿಸಿ, ಅವನಿರುವ ಸ್ಥಳವು ಯಾರಿಗಾದರೂ ಗೊತ್ತಾದರೆ ಅದನ್ನು ತಮಗೆ ತಿಳಿಸಬೇಕೆಂದು ಅಪ್ಪಣೆ ಕೊಟ್ಟಿದ್ದರು. PE
|