1. {ಯೆಹೋವನ ಸವಾಲಿನ ಮುಂದುವರಿಕೆ} [PS] [* ದೈತ್ಯ ಮೊಸಳೆ.] ಲಿವ್ಯಾತಾನ್ ಮೊಸಳೆಯನ್ನು ಮೀನು ಗಾಳದಿಂದ ಎಳೆಯುವಿಯೋ? [QBR] ಹುರಿಯಿಂದ ಅದರ ನಾಲಿಗೆಯನ್ನು ಅದುಮಿ ಬಿಗಿಯುವಿಯೋ? [QBR]
2. ಅದರ ಮೂಗಿಗೆ ಗಾಳವನ್ನು ಇಡುವೆಯೋ? [QBR] ಅದರ ದವಡೆಗೆ ಮುಳ್ಳನ್ನು ಚುಚ್ಚುವಿಯೋ? [QBR]
3. ಅದು ನಿನ್ನ ಬಳಿ ವಿಜ್ಞಾಪಿಸುವುದೋ? [QBR] ನಿನ್ನ ಸಂಗಡ ಸವಿಮಾತನಾಡೀತೇ? [QBR]
4. ಅದನ್ನು ನೀನು ಸದಾ ಆಳಾಗಿ ಸೇರಿಸಿಕೊಳ್ಳುವಂತೆ, [QBR] ನಿನ್ನೊಂದಿಗೆ ಒಪ್ಪಂದ ಮಾಡಿಕೊಳ್ಳುವುದೋ? [QBR]
5. ಅದನ್ನು ಪಕ್ಷಿಯಂತೆ ಆಡಿಸುವೆಯಾ? [QBR] ನಿನ್ನ ಹುಡುಗಿಯರ ವಿನೋದಕ್ಕಾಗಿ ಅದನ್ನು ಕಟ್ಟುವೆಯಾ? [QBR]
6. ಪಾಲುಗಾರರಾದ ಬೆಸ್ತರು ಅದನ್ನು ವ್ಯಾಪಾರಕ್ಕೆ ಇಡುವರೋ? [QBR] ವರ್ತಕರಿಗೆ ಹಂಚಿ ಮಾರುವರೋ? [QBR]
7. ಅದರ ಚರ್ಮವನ್ನೆಲ್ಲ ಕೊಂಡಿಗಳಿಂದಲೂ [QBR] ಅಥವಾ ತಲೆಯನ್ನೆಲ್ಲ ಮೀನಿನ ಈಟಿಗಳಿಂದಲೂ ಚುಚ್ಚಬಲ್ಲೆಯಾ? [QBR]
8. ಅದರ ಮೇಲೆ ಕೈಹಾಕಿ ನೋಡು! [QBR] ಆ ಜಗಳವನ್ನು ನೆನಸಿಕೊಂಡರೆ ನೀನು ಮತ್ತೆ ಅದನ್ನು ಮುಟ್ಟುವುದೇ ಇಲ್ಲ. [QBR]
9. ಆಹಾ, ಅದನ್ನು ಹಿಡಿಯಬೇಕೆಂಬ ನಿರೀಕ್ಷೆಯು ವ್ಯರ್ಥ! [QBR] ಹಿಡಿಯಲು ಬಂದವನು ನೋಡಿದ ಮಾತ್ರಕ್ಕೆ ಬಿದ್ದು ಹೋಗುವನು. [QBR]
10. ಅದನ್ನು ಕೆಣಕಲು ಧೈರ್ಯಗೊಳ್ಳುವಷ್ಟು ಉಗ್ರತೆ ಯಾರಲ್ಲಿಯೂ ಇಲ್ಲ; [QBR] ಹೀಗಿರಲು ನನ್ನ ಮುಂದೆ ನಿಲ್ಲಬಲ್ಲವರು ಯಾರು? [QBR]
11. ನಾನು ಸಾಲ ತೀರಿಸಬೇಕಾದರೆ ಮೊದಲು ಅದನ್ನು ನನಗೆ ಕೊಟ್ಟವರು ಯಾರು? [QBR] ಆಕಾಶಮಂಡಲದ ಕೆಳಗಿರುವ ಸರ್ವಸ್ವವೂ ನನ್ನದೇ. [QBR]
12. ನಾನು ಅದರ ಅಂಗಗಳನ್ನೂ ಶಕ್ತಿವಿಧಾನವನ್ನೂ [QBR] ಸೊಗಸಾದ ಜೋಡಣೆಯನ್ನೂ ವರ್ಣಿಸದೆ ಸುಮ್ಮನಿರಲಾರೆನು. [QBR]
13. ಅದರ ಹೊರಕವಚವನ್ನು ಯಾರು ತೆಗೆಯುವರು? [QBR] ಜೋಡು ದವಡೆಗಳೊಳಗೆ ಪ್ರವೇಶಿಸುವವರು ಯಾರು? [QBR]
14. ಮುಖದ ಕದಗಳನ್ನು ಯಾರು ತೆರೆದಾರು? [QBR] ಭಯವು ಅದರ ಹಲ್ಲುಗಳನ್ನು ಆವರಿಸಿಕೊಂಡಿದೆ. [QBR]
15. ಗುರಾಣಿಗಳ ಸಾಲುಗಳು ಅದರ ಹೆಚ್ಚಳಕ್ಕೆ ಆಸ್ಪದವಾಗಿದೆ. [QBR] ಅವು ಬಿಗಿದು ಮುದ್ರಿಸಲ್ಪಟ್ಟಿವೆ. [QBR]
16. ಗಾಳಿಯು ಕೂಡ ನುಗ್ಗದಂತೆ [QBR] ಅವು ಒಂದಕ್ಕೊಂದು ಹೊಂದಿಕೊಂಡಿವೆ. [QBR]
17. ಪರಸ್ಪರ ಅಂಟಿಕೊಂಡು ವಿಂಗಡಿಸದ ಹಾಗೆ ಹಿಡಿದುಕೊಂಡಿವೆ. [QBR]
18. ಅದರ ಸೀನಿನ ತುಂತುರುಗಳು ತಳತಳಿಸುವವು, [QBR] ಕಣ್ಣು ಅರುಣನೇತ್ರಕ್ಕೆ ಸಮಾನವಾಗಿದೆ. [QBR]
19. ಬಾಯೊಳಗಿಂದ ಕೊಳ್ಳಿಗಳು ಹೊರಡುವವು, [QBR] ಬೆಂಕಿಕಿಡಿಗಳು ಹಾರುವವು. [QBR]
20. ಆಪುಹುಲ್ಲಿಗೆ ಬೆಂಕಿಯಿಟ್ಟು ಊದಿ ಕಾಯಿಸಿದ ಕೊಪ್ಪರಿಗೆಯಿಂದಲೋ [QBR] ಎಂಬಂತೆ ಮೂಗಿನೊಳಗಿಂದ ಹೊಗೆ ಹಾಯುವುದು. [QBR]
21. ಅದರ ಉಸಿರೇ ಇದ್ದಲನ್ನು ಹೊತ್ತಿಸುವುದು, ಜ್ವಾಲೆಯು ಬಾಯಿಂದೇಳುವುದು. [QBR]
22. ಬಲವು ಕುತ್ತಿಗೆಯಲ್ಲಿ ನೆಲೆಗೊಂಡಿದೆ, ಅದರ ಮುಂದೆ ಭಯವು ಕುಣಿದಾಡುವುದು. [QBR]
23. ಅದರ ಮಾಂಸದ ಖಂಡಗಳು ಸಡಿಲವಿಲ್ಲದೆ ಅದಕ್ಕೆ ಗಟ್ಟಿಯಾಗಿ ಅಂಟಿಕೊಂಡಿವೆ. [QBR]
24. ಅದರ ಹೃದಯವು ಬಂಡೆಯ ಹಾಗೂ ಬೀಸುವ ಕೆಳಗಲ್ಲಿನಂತೆಯೂ ಗಟ್ಟಿಯಾಗಿದೆ. [QBR]
25. ಅದು ಎದ್ದರೆ ಶೂರರು ಕೂಡ ಅಂಜಿ ಹೊಡೆತಗಳಿಂದ ಭಯಭ್ರಾಂತರಾಗುವರು. [QBR]
26. ಒಬ್ಬನು ಕತ್ತಿಯೊಡನೆ ಮೇಲೆ ಬಿದ್ದರೂ ಅದಕ್ಕೇನೂ ಆಗಲಾರದು; [QBR] ಬಾಣ ಭರ್ಜಿ ಈಟಿ ಇವುಗಳೂ ವ್ಯರ್ಥವೇ. [QBR]
27. ಅದು ಕಬ್ಬಿಣವನ್ನು ಒಣಹುಲ್ಲನ್ನಾಗಿಯೂ [QBR] ತಾಮ್ರವನ್ನು ಕೊಳೆತ ಮರವನ್ನಾಗಿಯೂ ಭಾವಿಸುವುದು. [QBR]
28. ಬಿಲ್ಲು ಅದನ್ನು ಓಡಿಸಲಾರದು, [QBR] ಕವಣೆಯ ಕಲ್ಲುಗಳು ಅದಕ್ಕೆ ಹೊಟ್ಟಿನಂತಿರುವವು. [QBR]
29. ಅದು ದೊಣ್ಣೆಗಳನ್ನು ಹುಲ್ಲುಕಡ್ಡಿಯಾಗಿ ಎಣಿಸುವುದು; [QBR] ಬಿರ್ರನೆ ಬರುವ ಈಟಿಗೆ ನಗುವುದು. [QBR]
30. ಅದರ ಕೆಳಭಾಗವು ಚೂಪಾದ ಬೋಕಿಗಳಾಗಿದೆ, [QBR] ಅದು ಕೆಸರಿನ ಮೇಲೆ ಹಲಗೆಯ ಹಾಗೆ ನೀಡಿಕೊಂಡಿರುವುದು. [QBR]
31. ಜಲನಿಧಿಯನ್ನು ಹಂಡೆಯ ನೀರಿನ ಹಾಗೆ ಕುದಿಸುವುದು; [QBR] ಸಮುದ್ರವನ್ನು ಕಲಕಿದ ತೈಲಪಾತ್ರೆಯಂತೆ ಮಾಡುವುದು. [QBR]
32. ಸಾಗರಕ್ಕೆ ನರೆ ಬಂತೋ ಎಂಬಂತೆ [QBR] ತಾನು ಬಂದ ದಾರಿಯನ್ನು ಶುಭ್ರಗೊಳಿಸುವುದು. [QBR]
33. ಇದಕ್ಕೆ ಸಮಾನವಾದದ್ದು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವುದಿಲ್ಲ, [QBR] ಭಯವಿಲ್ಲದೆ ಇರುವುದಕ್ಕಾಗಿ ಸೃಷ್ಟಿಸಲ್ಪಟ್ಟಿದೆ. [QBR]
34. ಇದು ಪ್ರತಿಯೊಂದು ದೊಡ್ಡ ಪ್ರಾಣಿಯನ್ನೂ ದಿಟ್ಟಿಸಿ ನೋಡುವುದು, [QBR] ಸೊಕ್ಕಿದ ಮೃಗಗಳಿಗೆಲ್ಲಾ ರಾಜನಾಗಿರುವುದು. [PE]