1.
2. [PS]ಇದಲ್ಲದೆ ಯೆಹೋವನು ಯೋಬನಿಗೆ, [PE][QS]“ತರ್ಕಮಾಡುವವನು ಸರ್ವಶಕ್ತನಾದ ದೇವರ ಸಂಗಡಲೂ ವ್ಯಾಜ್ಯವಾಡುವನೋ? [QE][QS]ದೇವರೊಂದಿಗೆ ವಿವಾದಮಾಡುವವನು ಇದಕ್ಕೆಲ್ಲಾ ಉತ್ತರಕೊಡಲಿ” ಎಂದು ಹೇಳಿದನು. [QE]
3. {#1ಯೋಬನು ಯೆಹೋವನಿಗೆ ನೀಡಿದ ಪ್ರತ್ಯುತ್ತರ }
4. [PS]ಆಗ ಯೋಬನು ಯೆಹೋವನಿಗೆ ಉತ್ತರವಾಗಿ, [PE][QS]“ಅಯ್ಯೋ, ನಾನು ಅಲ್ಪನೇ ಸರಿ, ನಿನಗೆ ಪ್ರತ್ಯುತ್ತರವಾಗಿ ಏನು ಹೇಳಲಿ? [QE][QS]ಬಾಯಿಯ ಮೇಲೆ ಕೈಯಿಟ್ಟುಕೊಳ್ಳುವೆನು. [QE]
5. [QS]ಒಂದು ಸಾರಿ ಮಾತನಾಡಿದ್ದೇನೆ, ಪ್ರತಿವಾದ ಮಾಡಲಾರೆನು; [QE][QS]ಎರಡು ಸಲ ಹೌದು, ಇನ್ನೇನೂ ನುಡಿಯಲಾರೆನು” ಎಂದು ಹೇಳಿದನು. [QE]
6.
7. [PS]ಆ ಮೇಲೆ ಯೆಹೋವನು ಬಿರುಗಾಳಿಯೊಳಗಿಂದ ಯೋಬನಿಗೆ ಪ್ರತ್ಯುತ್ತರವಾಗಿ ಹೀಗೆಂದನು, [PE][QS]“ಶೂರನಂತೆ ನಡುಕಟ್ಟಿಕೋ! ನಾನು ಪ್ರಶ್ನೆಮಾಡುವೆನು, [QE][QS]ನೀನೇ ನನಗೆ ಉಪದೇಶಿಸು. [QE]
8. [QS]ನನ್ನ ನೀತಿಯನ್ನು ಖಂಡಿಸಿಬಿಡುವಿಯಾ? [QE][QS]ನಿನ್ನ ನ್ಯಾಯವನ್ನು ಸ್ಥಾಪಿಸಿಕೊಳ್ಳಲಿಕ್ಕೆ ನನ್ನನ್ನು ಕೆಟ್ಟವನೆಂದು ನಿರ್ಣಯಿಸುವೆಯೋ? [QE]
9. [QS]ನಿನ್ನ ಕೈಯೂ, ದೇವರ ಕೈಯೂ ಸಮವೋ? [QE][QS]ದೇವರ ಧ್ವನಿಯಂತೆ ಗುಡುಗಬಲ್ಲಿಯಾ? [QE]
10. [QS]ನಿನ್ನನ್ನು ನೀನೇ ಮಹಿಮೆ ಘನತೆಗಳಿಂದ ಭೂಷಿಸಿಕೊಂಡು [QE][QS]ಪ್ರಭಾವ ಮಹತ್ವಗಳನ್ನು ಧರಿಸಿಕೋ. [QE]
11. [QS]ತುಂಬಿ ತುಳುಕುವ ನಿನ್ನ ಕೋಪವನ್ನು ಎರಚಿ, [QE][QS]ಪ್ರತಿಯೊಬ್ಬ ಗರ್ವಿಷ್ಠನ ಮೇಲೆ ಕಣ್ಣಿಟ್ಟು ಅವನನ್ನು ತಗ್ಗಿಸು. [QE]
12. [QS]ಪ್ರತಿಯೊಬ್ಬ ಗರ್ವಿಷ್ಠನ ಮೇಲೆ ಕಣ್ಣಿಟ್ಟು ಕುಗ್ಗಿಸಿ, [QE][QS]ದುಷ್ಟರನ್ನು ತಟ್ಟನೆ ಕೆಡವಿಬಿಡು. [QE]
13. [QS]ಅವರನ್ನು ಒಟ್ಟಿಗೆ ಧೂಳಿನಲ್ಲಿ ಅಡಗಿಸಿ, [QE][QS]ಅಂಧಕಾರ ಲೋಕದಲ್ಲಿ ಅವರ ಮುಖಕ್ಕೆ ಮುಸುಕು ಹಾಕು. [QE]
14. [QS]ಹೀಗಾದರೆ ನಿನ್ನ ಬಲಭುಜವು ನಿನ್ನನ್ನು ರಕ್ಷಿಸಬಲ್ಲದೆಂದು ನಾನೇ ನಿನ್ನನ್ನು ಹೊಗಳುವೆನು. [QE]
15. [QS]ನಿನ್ನಂತೆ ನನ್ನ ಸೃಷ್ಟಿಯಾಗಿರುವ [* ಮೂಲತಃ ಬೆಹೆಮೋತ್ ಅಂದರೆ ದೈತ್ಯಕಾರದ ಮೃಗ. ]ನೀರಾನೆಯನ್ನು ನೋಡು; [QE][QS]ಎತ್ತಿನ ಹಾಗೆ ಹುಲ್ಲನ್ನು ಮೇಯುವುದು. [QE]
16. [QS]ಇಗೋ, ಅದರ ಬಲವು ಸೊಂಟದಲ್ಲಿಯೂ, [QE][QS]ಅದರ ಶಕ್ತಿಯು ಹೊಟ್ಟೆಯ ನರಗಳಲ್ಲಿಯೂ ಸೇರಿಕೊಂಡಿವೆ. [QE]
17. [QS]ತನ್ನ ಬಾಲವನ್ನು ದೇವದಾರುವಿನ ಮರದಂತೆ ಬಾಗಿಸುವುದು; [QE][QS]ಅದರ ತೊಡೆಯ ನರಗಳು ಹೆಣೆದುಕೊಂಡಿವೆ. [QE]
18. [QS]ಅದರ ಮೂಳೆಗಳು ತಾಮ್ರದ ನಳಗಳಂತೆಯೂ, [QE][QS]ಅದರ ಎಲುಬುಗಳು ಕಬ್ಬಿಣದ ಹಾರೆಗಳಂತೆಯೂ ಇರುವವು. [QE]
19. [QS]ಅದು ದೇವರ ಸೃಷ್ಟಿಗಳಲ್ಲಿ ಮುಖ್ಯವಾದದ್ದು. [QE][QS]ಅದನ್ನು ನಿರ್ಮಿಸಿದವನು ಅದಕ್ಕೆ ಕೋರೆ ಹಲ್ಲೆಂಬ ಶಸ್ತ್ರವನ್ನೂ ಒದಗಿಸಿದ್ದಾನೆ. [QE]
20. [QS]ಗುಡ್ಡಗಳು ಅದಕ್ಕೆ ಮೇವನ್ನು ಕೊಡುವವು; [QE][QS]ಕಾಡುಮೃಗಗಳೆಲ್ಲಾ ಅಲ್ಲಿ ಆಡುತ್ತಿರುವವು; [QE]
21. [QS]ತಾವರೆಯ ಗಿಡಗಳ ಕೆಳಗೂ, ಆಪಿನ ಮರೆಯಲ್ಲಿಯೂ, [QE][QS]ಜವುಗು ಭೂಮಿಯಲ್ಲಿಯೂ ಮಲಗಿಕೊಳ್ಳುವುದು. [QE]
22. [QS]ತಾವರೆ ಗಿಡಗಳು ತಮ್ಮ ನೆರಳನ್ನು ಅದರ ಮೇಲೆ ಹರಡುವವು, [QE][QS]ನದಿಯ ನೀರವಂಜಿಗಳು ಅದನ್ನು ಸುತ್ತಿಕೊಂಡಿರುವವು. [QE]
23. [QS]ಓಹೋ, ಹೊಳೆಯು ಉಕ್ಕಿ ಬಂದರೂ ಅದು ಹೆದರುವುದಿಲ್ಲ. [QE][QS]ಪ್ರವಾಹವು ಅದರ ಬಾಯೊಳಗೆ ನುಗ್ಗಿದರೂ ಧೈರ್ಯದಿಂದಿರುವುದು. [QE]
24. [QS]ಯಾರಾದರೂ ಕಣ್ಣೆದುರಿಗೆ ಬಂದು ಅದನ್ನು ಹಿಡಿದಾನೇ? [QE][QS]ಗಾಳದಿಂದ ಅದರ ಮೂಗನ್ನು ಚುಚ್ಚಬಲ್ಲನೇ?” ಎಂದನು. [QE]