5. ನನ್ನ ವಿರುದ್ಧವಾಗಿ ನಿಮ್ಮನ್ನು ನೀವೇ ಹೆಚ್ಚಿಸಿಕೊಂಡು
ನನಗಾದ ಅವಮಾನವನ್ನು ನ್ಯಾಯವೆಂದು ಸ್ಥಾಪಿಸುವುದಕ್ಕೆ ನಿಜವಾಗಿ ಇಷ್ಟಪಡುವಿರೋ? |
6. ಹೀಗಾದರೆ ನನ್ನ ನ್ಯಾಯವನ್ನು ತಿರುಗಿಸಿಬಿಟ್ಟು ನನ್ನ ಸುತ್ತಲೂ
ತನ್ನ ಬಲೆಯನ್ನೊಡ್ಡಿದವನು ದೇವರೇ ಎಂದು ತಿಳಿದುಕೊಳ್ಳಿರಿ. |
8. ನಾನು ಮುಂದೆ ಹೋಗದ ಹಾಗೆ ಆತನು ನನ್ನ ದಾರಿಗೆ ಅಡ್ಡಗೋಡೆ ಹಾಕಿ,
ನನ್ನ ಹಾದಿಗಳನ್ನು ಕತ್ತಲು ಕವಿಯುವಂತೆ ಮಾಡಿದ್ದಾನೆ. |
10. ಆತನು ನನ್ನನ್ನು ಸುತ್ತುಮುತ್ತಲೂ ಕೆಡವಿದ್ದರಿಂದ ಇಲ್ಲದೆ ಹೋದೆನು.
ಮರವನ್ನು ಕೀಳುವ ಹಾಗೆ ನನ್ನ ನಿರೀಕ್ಷೆಯನ್ನು ಕಿತ್ತುಬಿಟ್ಟಿದ್ದಾನೆ. |
17. ನನ್ನ ಉಸಿರು ನನ್ನ ಹೆಂಡತಿಗೆ ಅಸಹ್ಯವಾಗಿದೆ,
ನನ್ನ ಒಡಹುಟ್ಟಿದವರಿಗೂ * ಒಡಹುಟ್ಟಿದವರಿಗೂ ಅಥವಾ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗೂ. ಹೇಸಿಕೆಯಾಗಿದ್ದೇನೆ. |
19. ನನ್ನ ಆಪ್ತಮಿತ್ರರೆಲ್ಲರೂ ನನ್ನನ್ನು ನೋಡಿ ಹೇಸಿಕೊಳ್ಳುತ್ತಾರೆ;
ನನ್ನ ಪ್ರೀತಿಪಾತ್ರರು ಸಹ ನನ್ನ ಮೇಲೆ ತಿರುಗಿಬಿದ್ದಿದ್ದಾರೆ. |
20. ನನ್ನ ಎಲುಬು ಚರ್ಮಕ್ಕೂ, ಮಾಂಸಕ್ಕೂ ಅಂಟಿಹೋಗಿದೆ,
ಹಲ್ಲಿನ ಪರೆಯನ್ನು ಮಾತ್ರ ಉಳಿಸಿಕೊಂಡು (ಮರಣಕ್ಕೆ) ಓರೆಯಾಗಿದ್ದೇನೆ. |
25. ನಾನಂತು ನನ್ನ ನ್ಯಾಯಸ್ಥಾಪಕನು ಜೀವಸ್ವರೂಪನೆಂದು ಬಲ್ಲೆನು,
ಕೊನೆಯಲ್ಲಿ ಆತನು ಭೂಮಿಗೆ † ಭೂಮಿಗೆ ಹೀಬ್ರೂ ಪದವಾದ “ಧೂಳು” ಎಂಬ ಪದವನ್ನು ಭೂಮಿ ಎಂದು ಭಾಷಾಂತರಿಸಲಾಗಿದೆ, ಆದ್ದರಿಂದ ಕೆಲವರು ಇದನ್ನು ಸಮಾಧಿ “ಅಥವಾ, ನನ್ನ ಸಮಾಧಿಯ ಮೇಲೆ” ಎಂಬುದಾಗಿ ಸೂಚಿಸುತ್ತಾರೆ. ಆದರೆ ಬಹುತೇಕ ಪಂಡಿತರು, ಭೂಮಿಯ ಮೇಲೆ ನಿಂತುಕೊಳ್ಳುವನು ಎಂಬುದು 31:14 ರಲ್ಲಿರುವ ನ್ಯಾಯಾಲಯದಲ್ಲಿ “ಸಾಕ್ಷಿಯಾಗಿ ನಿಲ್ಲುವನು” ಎಂಬರ್ಥವನ್ನು ವ್ಯಕ್ತಪಡಿಸುವ ಅಭಿವ್ಯಕ್ತಿಯಾಗಿದೆ ಎಂದು ಒಪ್ಪುತ್ತಾರೆ; ಧರ್ಮೋ 19:16; ಕೀರ್ತನೆ. 12:5; ಯೆಶಾಯ 19:21. ಇಳಿದು ಬರುವನು. |
27. ಕಣ್ಣಾರೆ ಕಾಣುವೆನು, ನಾನೇ ನಾನಾಗಿ ನೋಡುವೆನು,
ಮತ್ತೊಬ್ಬನಾಗಿ ಅಲ್ಲ. ನನ್ನ ಹೃದಯವು ಹಂಬಲಿಕೆಯಿಂದ ನನ್ನಲ್ಲಿ ಕುಂದಿದೆ. |
28. ಅವನಿಗೆ, ‘ಆದಷ್ಟು ಹಿಂಸೆಯನ್ನು ಮಾಡೋಣ,
ಅವನಿಗೆ ಸಂಭವಿಸಿದ್ದಕ್ಕೆ ಮೂಲವು ಅವನಲ್ಲಿಯೇ ಅಡಗಿದೆ’ ಎಂದು ನೀವು ಆಡಿಕೊಂಡ ಕಾರಣ, |
29. ಕತ್ತಿಗೆ ಭಯಪಡಿರಿ,
ಏಕೆಂದರೆ ಕತ್ತಿಯ ದಂಡನೆಗಳು ತೀಕ್ಷ್ಣವಾಗಿದೆ, ಇದರಿಂದ ನ್ಯಾಯನಿರ್ಣಯವುಂಟೆಂದು ತಿಳಿದುಕೊಳ್ಳುವಿರಿ.” PE |