2. ಯೆಹೋವನು, “ಜನಾಂಗಗಳ ಆಚರಣೆಯನ್ನು ಅಭ್ಯಾಸ ಮಾಡಿಕೊಳ್ಳಬೇಡಿರಿ, ಜನಾಂಗಗಳು ಹೆದರುವ ಆಕಾಶದ ಉತ್ಪಾತಗಳಿಗೆ ನೀವು ಹೆದರಬೇಡಿರಿ.
|
5. ಇಂಥಾ ಬೊಂಬೆಗಳು ಸೌತೆಕಾಯಿ ತೋಟದ ಬೆದರುಗಂಬದಂತಿವೆ, ಮಾತನಾಡಲಾರವು;
ಹೊತ್ತುಕೊಂಡು ಹೋಗಬೇಕು, ನಡೆಯಲಾರವು. ಅವುಗಳಿಗೆ ಹೆದರಬೇಡಿರಿ, ಕೇಡುಮಾಡಲಾರವು; ಒಳ್ಳೆಯದನ್ನು ಮಾಡಲಿಕ್ಕೂ ಅವುಗಳಿಗೆ ಸಾಮರ್ಥ್ಯವಿಲ್ಲ” ಎಂದು ಹೇಳುತ್ತಾನೆ |
7. ಜನಾಂಗಗಳ ಅರಸನೇ, ಯಾರು ನಿನಗೆ ಹೆದರದೆ ಇದ್ದಾರು? ಇದು ನಿನಗೆ ತಕ್ಕದ್ದು; ಜನಾಂಗಗಳ ಜ್ಞಾನಿಗಳಲ್ಲಿಯೂ, ರಾಜಪರಂಪರೆಯಲ್ಲಿಯೂ ನಿನಗೆ ಸಮಾನನು ಯಾರೂ ಇಲ್ಲವಷ್ಟೆ.
|
9. ಬೆಳ್ಳಿಯ ತಗಡುಗಳು ತಾರ್ಷೀಷಿನಿಂದಲೂ, ಕೆತ್ತನೆಗಾರನ ಮತ್ತು ಎರಕದವನ ಕೈಕೆಲಸವಾದ ಚಿನ್ನವೂ ಊಫಜಿನಿಂದಲೂ ಸಾಗಿಬರುತ್ತವೆ.
ನೀಲಧೂಮ್ರ ವಸ್ತ್ರಗಳು ಅವುಗಳ ಉಡುಪಾಗಿವೆ, ಇವೆಲ್ಲಾ ಕುಶಲಕರ್ಮಿಗಳ ಕೌಶಲ್ಯ. |
10. ಯೆಹೋವನಾದರೋ ಸತ್ಯದೇವರು; ಆತನು ಚೈತನ್ಯಸ್ವರೂಪನಾದ ದೇವನೂ ಮತ್ತು ಶಾಶ್ವತ ರಾಜನೂ ಆಗಿದ್ದಾನೆ.
ಆತನ ಕೋಪಕ್ಕೆ ಭೂಲೋಕವು ನಡುಗುತ್ತದೆ, ಜನಾಂಗಗಳು ಆತನ ರೋಷವನ್ನು ತಾಳಲಾರವು. |
11. ನೀವು ಅವುಗಳಿಗೆ, “ಭೂಮ್ಯಾಕಾಶಗಳನ್ನು ಸೃಷ್ಟಿಸದಿರುವ ದೇವರುಗಳು ಭೂಮಿಯ ಮೇಲಿನಿಂದ, ಆಕಾಶದ ಕೆಳಗಿನಿಂದ, ಅಳಿದುಹೋಗುವವು” ಎಂದು ಹೇಳಿರಿ.
|
12. ಆತನು ತನ್ನ ಶಕ್ತಿಯಿಂದ ಭೂಮಿಯನ್ನು ನಿರ್ಮಿಸಿ, ತನ್ನ ಜ್ಞಾನದಿಂದ ಲೋಕವನ್ನು ಸ್ಥಾಪಿಸಿ, ತನ್ನ ವಿವೇಕದಿಂದ ಆಕಾಶಮಂಡಲವನ್ನು ಹರಡಿದ್ದಾನೆ.
|
13. ಆತನ ಗರ್ಜನೆಗೆ ಆಕಾಶದಲ್ಲಿ ನೀರು ಭೋರ್ಗರೆಯುವಂತೆ; ಆತನು ಭೂಮಿಯ ಕಟ್ಟಕಡೆಯಿಂದ ಮೋಡಗಳನ್ನು ಏರಮಾಡುತ್ತಾನೆ.
ಮಳೆಗೋಸ್ಕರ ಮಿಂಚನ್ನು ಹೊಳೆಯಮಾಡುತ್ತಾನೆ; ತನ್ನ ಭಂಡಾರದಿಂದ ಗಾಳಿಯನ್ನು ಬೀಸಮಾಡುತ್ತಾನೆ. |
14. ಎಲ್ಲರೂ ತಿಳಿವಳಿಕೆಯಿಲ್ಲದೆ ಪಶುಪ್ರಾಯರಾಗಿದ್ದಾರೆ; ತಾನು ಕೆತ್ತಿದ ವಿಗ್ರಹದ ನಿಮಿತ್ತ ಪ್ರತಿಯೊಬ್ಬ ಅಕ್ಕಸಾಲಿಗನೂ ಅವಮಾನಕ್ಕೆ ಗುರಿಯಾಗುವನು.
ಅವನು ಎರಕ ಹೊಯ್ದ ಪುತ್ತಳಿಯು ಸುಳ್ಳು, ಅವುಗಳಲ್ಲಿ ಶ್ವಾಸವೇ ಇಲ್ಲ. |
16. ಯಾಕೋಬ್ಯರ ಸ್ವಾಸ್ತ್ಯವಾದಾತನು ಅವುಗಳ ಹಾಗಲ್ಲ; ಆತನು ಸಮಸ್ತವನ್ನೂ ನಿರ್ಮಿಸಿದವನು.
ಇಸ್ರಾಯೇಲ್ ಆತನ ಸ್ವಾಸ್ತ್ಯವಾದ ವಂಶ; ಸೇನಾಧೀಶ್ವರನಾದ ಯೆಹೋವನೆಂಬುದು ಆತನ ನಾಮಧೇಯ. |
18. “ಇಗೋ, ನಾನು ಈ ಸಾರಿ ದೇಶನಿವಾಸಿಗಳನ್ನು ಎಸೆದೇ ಬಿಡುವೆನು,
ಅವರಿಗೆ ಬುದ್ಧಿ ಬರಲೆಂದು ಅವರನ್ನು ಬಾಧಿಸುವೆನು” ಎಂದು ಯೆಹೋವನು ನುಡಿಯುತ್ತಾನೆ. |
19. ಅಯ್ಯೋ, ನನ್ನ ಗಾಯ! ನನಗೆ ಬಿದ್ದ ಪೆಟ್ಟು ಭೀಕರ! ಆದರೂ ನಾನು, “ಇದು ನನಗೆ ವ್ಯಾಧಿಯೇ ಸರಿ, ಸಹಿಸಬೇಕು” ಅಂದುಕೊಂಡಿದ್ದೇನೆ.
|
20. ನನ್ನ ಗುಡಾರವು ಹಾಳಾಗಿದೆ, ಹಗ್ಗಗಳು ಹರಿದುಹೋಗಿವೆ, ಮಕ್ಕಳು ನನ್ನೊಳಗಿಂದ ತೊಲಗಿ ಇಲ್ಲವಾಗಿದ್ದಾರೆ.
ನನ್ನ ಗುಡಾರವನ್ನು ಹಾಕುವುದಕ್ಕೂ, ನನ್ನ ಪರದೆಗಳನ್ನು ಬಿಗಿಯುವುದಕ್ಕೂ ಇನ್ನು ಯಾರೂ ಇರುವುದಿಲ್ಲ. |
21. ಏಕೆಂದರೆ ಪಾಲಕರು ಪಶುಪ್ರಾಯರಾಗಿ ಯೆಹೋವನ ಕಡೆಗೆ ನೋಡದೆ ಇದ್ದಾರೆ.
ಆದಕಾರಣ ಅವರ ಕಾರ್ಯವು ಸಾರ್ಥಕವಾಗಲಿಲ್ಲ, ಅವರ ಹಿಂಡುಗಳು ಚದರಿಹೋದವು. |
22. ಇಗೋ, ಒಂದು ಸದ್ದು! ಆಹಾ, ಬರುತ್ತಿದೆ! ಯೆಹೂದದ ಪಟ್ಟಣಗಳನ್ನು ನಾಶಪಡಿಸಿ ನರಿಗಳ ಹಕ್ಕೆಯನ್ನಾಗಿ ಮಾಡುವುದಕ್ಕೆ ಉತ್ತರದೇಶದಿಂದ ಮಹಾಕಂಪನವು ಸಂಭವಿಸುತ್ತದೆ.
|
23. {ಯೆರೆಮೀಯನ ವಿಜ್ಞಾಪನೆ} PS ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿ ಇಲ್ಲವೆಂದು ನನಗೆ ಗೊತ್ತು.
ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನು ಇಡಲಾರನು. |
25. ನಿನ್ನನ್ನು ಅರಿಯದ ಅನ್ಯಜನಾಂಗಗಳ ಮೇಲೆಯೂ, ನಿನ್ನ ನಾಮವನ್ನು ಉಚ್ಚರಿಸದ ವಂಶಗಳ ಮೇಲೆಯೂ ನಿನ್ನ ರೌದ್ರವನ್ನು ಸುರಿದುಬಿಡು.
ಅವರು ಯಾಕೋಬ್ಯರನ್ನು ನುಂಗಿ ಹೌದು, ಪೂರಾ ನುಂಗಿಬಿಟ್ಟು ಅವರ ವಾಸಸ್ಥಳವನ್ನು ಹಾಳುಮಾಡಿದ್ದಾರಲ್ಲಾ. PE |