1. {#1ಯೆರೂಸಲೇಮಿಗಾಗಿ ಯೆಶಾಯನ ಪ್ರಾರ್ಥನೆ } [QS]ಚೀಯೋನಿನ ಧರ್ಮವು ಪ್ರಕಾಶಗೊಳ್ಳುವ ತನಕ, ಯೆರೂಸಲೇಮಿನ ರಕ್ಷಣೆಯು ದೀವಿಟಿಗೆಯಂತೆ ಪ್ರಜ್ವಲಿಸುವವರೆಗೆ, [QE][QS]ನಾನು ಮೌನವಾಗಿರದೆ ಚೀಯೋನಿನ ಹಿತವನ್ನು ಲಕ್ಷಿಸುತ್ತಿರುವೆನು; ಮೌನವಾಗಿರದೆ ಯೆರೂಸಲೇಮಿನ ಕ್ಷೇಮವನ್ನು ಚಿಂತಿಸುತ್ತಿರುವೆನು. [QE]
2. [QS]ಜನಾಂಗಗಳು ನಿನ್ನ ಧರ್ಮವನ್ನು, ಸಕಲ ರಾಜರು ನಿನ್ನ ವೈಭವವನ್ನು ನೋಡುವರು; [QE][QS]ಯೆಹೋವನ ಬಾಯಿ ನೇಮಿಸಿದ ಹೊಸ ಹೆಸರು ನಿನಗೆ ದೊರೆಯುವುದು. [QE]
3. [QS]ನೀನು ಯೆಹೋವನ ಕೈಯಲ್ಲಿ ಸುಂದರವಾದ ಕಿರೀಟವಾಗಿಯೂ, ನಿನ್ನ ದೇವರ ಹಸ್ತದಲ್ಲಿ ರಾಜಶಿರೋಭೂಷಣವಾಗಿಯೂ ಇರುವಿ. [QE]
4. [QS]ನೀನು ಇನ್ನು ಮೇಲೆ “ತ್ಯಜಿಸಲ್ಪಟ್ಟವಳು” ಎನಿಸಿಕೊಳ್ಳುವುದಿಲ್ಲ, ನಿನ್ನ ಸೀಮೆಗೆ “ನಿರ್ಜನ ಪ್ರದೇಶ” ಎಂಬ ಹೆಸರು ಇನ್ನು ಇರದು; [QE][QS]ನೀನು “ನನ್ನ ಉಲ್ಲಾಸಿನಿ[* ಉಲ್ಲಾಸಿನಿ ಎಫ್ಸಿಬ್. ]” ಎನಿಸಿಕೊಳ್ಳುವಿ, ನಿನ್ನ ಸೀಮೆಗೆ “ವಿವಾಹಿತೆ [† ವಿವಾಹಿತೆ ಬ್ಯೂಲ್. ]” ಎಂಬ ಹೆಸರಾಗುವುದು; [QE][QS]ಏಕೆಂದರೆ ಯೆಹೋವನು ನಿನ್ನಲ್ಲಿ ಉಲ್ಲಾಸಗೊಳ್ಳುತ್ತಾನೆ, ನಿನ್ನ ಸೀಮೆಗೆ ವಿವಾಹವಾಗುವುದು. [‡ ನಿನ್ನ ಸೀಮೆಗೆ ವಿವಾಹವಾಗುವುದು. ನೀನು ನಿನ್ನ ದೇಶಕ್ಕೆ ಮದಲಿಂಗಿತ್ತಿಯಂತೆ ಇರುವಿ. ] [QE]
5. [QS]ಯುವಕನು ಯುವತಿಯನ್ನು ವರಿಸುವಂತೆ, ನಿನ್ನ ಮಕ್ಕಳು [§ ಮಕ್ಕಳು ನಿನ್ನನ್ನು ಉಂಟುಮಾಡಿದವನು. ]ನಿನ್ನನ್ನು ವರಿಸುವರು; [QE][QS]ವರನು ವಧುವಿನಲ್ಲಿ ಆನಂದಿಸುವ ಹಾಗೆ ನಿನ್ನ ದೇವರು ನಿನ್ನಲ್ಲಿ ಆನಂದಿಸುವನು. [QE]
6. [QS]ಯೆರೂಸಲೇಮೇ, ನಾನು ನಿನ್ನ ಪೌಳಿಗೋಡೆಗಳಲ್ಲಿ ಕಾವಲುಗಾರರನ್ನು ನೇಮಿಸಿದ್ದೇನೆ; [QE][QS]ಅವರು ಹಗಲೂ, ಇರುಳೂ ಮೌನವಾಗಿರರು. [QE][QS]ಯೆಹೋವನನ್ನು ಸ್ಮರಿಸುವವರೇ, [QE]
7. [QS]ಆತನು ಯೆರೂಸಲೇಮನ್ನು ಭದ್ರಪಡಿಸಿ, ಲೋಕಪ್ರಸಿದ್ಧಿಗೆ ತರುವ ತನಕ ನಿಮಗೂ ವಿರಾಮ ಇಲ್ಲದಿರಲಿ, ಅತನಿಗೂ ವಿರಾಮ ಇಲ್ಲದಿರಲಿ. [QE]
8. [QS]ಯೆಹೋವನು ತನ್ನ ಬಲಗೈಯ ಮೇಲೆಯೂ, ತನ್ನ ಭುಜಬಲದ ಮೇಲೆಯೂ ಆಣೆಯಿಟ್ಟು, [QE][QS]“ನಿನ್ನ ದವಸವನ್ನು ನಿನ್ನ ಶತ್ರುಗಳ ಆಹಾರಕ್ಕೆ ಇನ್ನು ಕೊಡುವುದೇ ಇಲ್ಲ. ನೀನು ಶ್ರಮಿಸಿ ಪಡೆದು ದ್ರಾಕ್ಷಾರಸವನ್ನು ಅನ್ಯರು ಕುಡಿಯುವುದೇ ಇಲ್ಲ; [QE]
9. [QS]ನಿನ್ನ ಬೆಳೆಯನ್ನು ಕೊಯ್ದು ಕುಪ್ಪೆಹಾಕಿದವರೇ ಅದನ್ನು ಊಟಮಾಡಿ ಯೆಹೋವನನ್ನು ಸ್ತುತಿಸುವರು. [QE][QS]ನಿನ್ನ ದ್ರಾಕ್ಷಿಯನ್ನು ಕಿತ್ತು ತಂದವರೇ ಅದರ ರಸವನ್ನು ನನ್ನ ಪವಿತ್ರಾಲಯದ ಪ್ರಾಕಾರಗಳಲ್ಲಿ ಕುಡಿಯುವರು” ಎಂದು ಹೇಳಿದ್ದಾನೆ. [QE]
10. [QS]ಊರ ಬಾಗಿಲುಗಳಲ್ಲಿ ಹಾದು ಬನ್ನಿರಿ, ಹಾದು ಬನ್ನಿರಿ, [QE][QS]ಜನರಿಗೆ ದಾರಿಯನ್ನು ಸರಿಮಾಡಿರಿ, ರಾಜಮಾರ್ಗವನ್ನು ಎತ್ತರಿಸಿರಿ, ಸರಿಪಡಿಸಿರಿ. [QE][QS]ಕಲ್ಲುಗಳನ್ನು ತೆಗೆದುಹಾಕಿರಿ, ಜನಾಂಗಗಳಲ್ಲಿ ಧ್ವಜವನ್ನೆತ್ತಿರಿ! [QE]
11. [QS]“ಇಗೋ, ನಿನ್ನ ರಕ್ಷಣೆಯು ಸಮೀಪವಾಯಿತು, ಯೆಹೋವನು ದಯಪಾಲಿಸುವ ಬಹುಮಾನವು ಆತನ ಮುಂದಿದೆ ಎಂದು ಚೀಯೋನೆಂಬಾಕೆಗೆ ಹೇಳಿರಿ” [QE][QS]ಎಂಬುದಾಗಿ ಯೆಹೋವನು ಭೂಮಿಯ ಕಟ್ಟಕಡೆಯವರೆಗೂ ಅಪ್ಪಣೆಮಾಡಿದ್ದಾನೆ. [QE]
12. [QS]ನಿನ್ನ ಜನರು, “ಪರಿಶುದ್ಧಜನರು, ಯೆಹೋವನು ವಿಮೋಚಿಸಿದವರು” ಎಂದು ಅನ್ನಿಸಿಕೊಳ್ಳುವರು, ನಿನಗೋ, “ಪತಿಯು ವರಿಸಿ,[* ವರಿಸಿ, ಅಥವಾ ಪ್ರೀತಿಸಿ. ] ತ್ಯಜಿಸದ ಪಟ್ಟಣ” ಎಂದು ಹೆಸರು ಬರುವುದು. [QE]