1. [QS]ಸಜ್ಜನರು ನಾಶವಾಗುತ್ತಾರೆ, ಯಾರೂ ಮನಸ್ಸಿಗೆ ತಾರರು; ಸದ್ಭಕ್ತರು ಗತಿಸುತ್ತಾರೆ, [QE][QS]ಆಹಾ, ಶಿಷ್ಟರು ಕೇಡಿನಿಂದ ಪಾರಾಗಿದ್ದಾರೆ ಎಂದು ಯಾರೂ ಯೋಚಿಸರು. [QE]
2. [QS]ಇವರು ಸಮಾಧಾನದಲ್ಲಿ ಸೇರಿದ್ದಾರಲ್ಲಾ; [QE][QS]ನೀತಿಯುಳ್ಳವನಾಗಿ ನಡೆಯುವ ಪ್ರತಿಯೊಬ್ಬನು ತನ್ನ ತನ್ನ ದೀರ್ಘನಿದ್ರಾಸ್ಥಾನದಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದಾನೆ. [QE]
3. {#1ಇಸ್ರಾಯೇಲಿನ ವಿಗ್ರಹಾರಾಧನೆಯನ್ನು ಖಂಡಿಸಿದ್ದು } [QS]ಮಾಟಗಾತಿಯ ಮಕ್ಕಳೇ, [QE][QS]ವ್ಯಭಿಚಾರ ಮತ್ತು ವ್ಯಭಿಚಾರಿಯ ಸಂತಾನದವರೇ, ನೀವು ಇಲ್ಲಿಗೆ ಬನ್ನಿರಿ! [QE]
4. [QS]ಯಾರನ್ನು ಗೇಲಿಮಾಡಿ ವಿನೋದಪಡುತ್ತೀರಿ? [QE][QS]ಯಾರನ್ನು ನೋಡಿ ಬಾಯಿದೆರೆದು ನಾಲಿಗೆಯನ್ನು ಚಾಚುತ್ತೀರಿ? [QE]
5. [QS]ಏಲಾ ಮರಗಳ ತೋಪುಗಳಲ್ಲಿಯೂ, ಸೊಂಪಾಗಿ ಬೆಳೆದಿರುವ ಪ್ರತಿಯೊಂದು ಮರದ ನೆರಳಿನಲ್ಲಿಯೂ ಮದವೇರಿಸಿಕೊಂಡು, [QE][QS]ಕಣಿವೆಗಳಲ್ಲಿಯೂ, ಬೆಟ್ಟದ ಗವಿಗಳಲ್ಲಿಯೂ ಮಕ್ಕಳನ್ನು ಕೊಂದುಹಾಕುವ ನೀವು [QE][QS]ದ್ರೋಹದ ಸಂತಾನವೂ, ಸುಳ್ಳಿನ ಸಂತತಿಯೂ ಆಗಿದ್ದೀರಿ. [QE]
6. [QS]ಕೆಟ್ಟ ಸಂತಾನವೇ, ಹೊಳೆಯ ನುಣುಪಾದ ಕಲ್ಲುಗಳೇ ನಿನಗೆ ಗತಿ, ಅವುಗಳೇ ನಿನ್ನ ಪಾಲು; [QE][QS]ಅವುಗಳಿಗೆ ನೀನು ಪಾನದ್ರವ್ಯವನ್ನು ನೈವೇದ್ಯವಾಗಿ ಸುರಿದು, ಧಾನ್ಯದ್ರವ್ಯವನ್ನು ಅರ್ಪಿಸಿದ್ದಿ. [QE][QS]ನಾನು ಇದನ್ನೆಲ್ಲಾ ನೋಡಿ ಕೋಪವನ್ನು ಅಡಗಿಸಿಕೊಳ್ಳಲು ಆಗುವುದೇ? [QE]
7. [QS]ಮಹೋನ್ನತ ಪರ್ವತದಲ್ಲಿ ನೀನು ಮಂಚವನ್ನು ಹಾಕಿಕೊಂಡಿದ್ದಿ, ಯಜ್ಞಮಾಡಲು ಆ ಬೆಟ್ಟವನ್ನೇರಿದ್ದಿ. [QE]
8. [QS]ಬಾಗಿಲಿನ ಮತ್ತು ನಿಲುವಿನ ಹಿಂಭಾಗದಲ್ಲಿ ನೀನು ವಿಗ್ರಹವನ್ನು ಇಟ್ಟುಕೊಂಡಿದ್ದಿ; [QE][QS]ನನ್ನನ್ನು ಬಿಟ್ಟುಬಿಟ್ಟು, ನಿನ್ನ ಮಂಚದ ಗವಸಣಿಗೆಯನ್ನು ತೆಗೆದು, [QE][QS]ಅದನ್ನು ಹತ್ತಿ ಅದರಲ್ಲಿ ಅನ್ಯರಿಗೆ ಸ್ಥಳಕೊಟ್ಟು ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಿ. [QE][QS]ಅವರ ಸಂಗಮವನ್ನು ಆಶಿಸಿ, ನಿನ್ನನ್ನು ತೋರ್ಪಡಿಸಿಕೊಂಡಿದ್ದಿ. [QE]
9. [QS]ಬಹು ಸುಗಂಧದ್ರವ್ಯಗಳನ್ನು ಕೂಡಿಸಿ, ತೈಲವನ್ನೂ ತೆಗೆದುಕೊಂಡು, ಪರರಾಜನ[* ಪರರಾಜನ ಅಥವಾ ಮೊಲೆಕೆಂಬ ವಿಗ್ರಹ. ] ಬಳಿಗೆ ಪ್ರಯಾಣಮಾಡಿದ್ದಿ; [QE][QS]ನಿನ್ನ ರಾಯಭಾರಿಗಳನ್ನು ದೂರ ದೂರ ಕಳುಹಿಸಿದ್ದಿ; ನಿನ್ನನ್ನು ಪಾತಾಳದವರೆಗೂ ತಗ್ಗಿಸಿಕೊಂಡಿದ್ದಿ. [QE]
10. [QS]ನೀನು ನಡೆದು ನಡೆದು ಆಯಾಸಗೊಂಡರೂ ದಿಕ್ಕಿಲ್ಲವಲ್ಲಾ ಅಂದುಕೊಳ್ಳಲಿಲ್ಲ; [QE][QS]ಹೊಸ ಬಲವನ್ನು ತಂದುಕೊಂಡಿ; ಆದುದರಿಂದ ನೀನು ಸೋತುಹೋಗಲಿಲ್ಲ. [QE]
11. [QS]ನೀನು ಯಾರಿಗೆ ಹೆದರಿ ನನ್ನನ್ನು ಮರೆತು ನನಗೆ ಮೋಸಮಾಡಿದಿ? [QE][QS]ಈ ದ್ರೋಹಕ್ಕೂ ಹಿಂದೆಗೆಯಲಿಲ್ಲವಲ್ಲಾ! ನೀನು ನನಗೆ ಅಂಜದೆ ಇರುವುದಕ್ಕೆ ನಾನು ಬಹುಕಾಲದಿಂದ ಸುಮ್ಮನೆ ಇದ್ದದ್ದೇ ಕಾರಣವಲ್ಲವೇ?. [QE]
12. [QS]ನಾನು ನಿನ್ನ ಧರ್ಮವನ್ನು ಬಯಲಿಗೆ ತರುವೆನು, ನಿನ್ನ ಕಾರ್ಯಗಳು ನಿನಗೆ ನಿಷ್ಪ್ರಯೋಜನ. [QE]
13. [QS]ನೀನು ಕೂಗಿಕೊಳ್ಳುವಾಗ ನೀನು ಕೂಡಿಹಾಕಿಕೊಂಡಿರುವ ವಿಗ್ರಹಗಳು ನಿನ್ನನ್ನುದ್ಧರಿಸಲಿ. [QE][QS]ಆದರೆ ಇವುಗಳನ್ನೆಲ್ಲಾ ಗಾಳಿಯು ಬಡಿದುಕೊಂಡು ಹೋಗುವುದು, ಉಸಿರು ಅದನ್ನು ಒಯ್ಯುವುದು. [QE][QS]ನನ್ನನ್ನು ಆಶ್ರಯಿಸುವವನೋ ದೇಶವನ್ನು ಅನುಭವಿಸಿ ನನ್ನ ಪರಿಶುದ್ಧ ಪರ್ವತವನ್ನು ಬಾಧ್ಯವಾಗಿ ಹೊಂದುವನು. [QE]
14. {#1ಪಶ್ಚಾತ್ತಾಪ ಪಡುವವರಿಗೆ ಕ್ಷಮಾಪಣೆ } [QS]“ಮಣ್ಣು ಹಾಕಿರಿ, ಹಾಕಿರಿ, ಮಾರ್ಗವನ್ನು ಸರಿಮಾಡಿರಿ; [QE][QS]ನನ್ನ ಜನರ ದಾರಿಯೊಳಗಿಂದ ಅಡಚಣೆಗಳನ್ನು ನಿರ್ಮೂಲಮಾಡಿರಿ” ಎಂದು ಒಂದು ವಾಣಿಯು ನುಡಿಯುತ್ತದೆ. [QE]
15. [QS]ಸದಮಲನೆನಿಸಿಕೊಂಡು ಶಾಶ್ವತಲೋಕದಲ್ಲಿ ನಿತ್ಯನಿವಾಸಿಯಾದ ಮಹೋನ್ನತನು ಹೀಗೆನ್ನುತ್ತಾನೆ, [QE][QS]“ಉನ್ನತಲೋಕವೆಂಬ ಪವಿತ್ರಾಲಯದಲ್ಲಿ ವಾಸಿಸುವ ನಾನು, ಜಜ್ಜಿಹೋದ ದೀನಮನದೊಂದಿಗೆ ಇದ್ದುಕೊಂಡು, [QE][QS]ದೀನನ ಆತ್ಮವನ್ನೂ ಜಜ್ಜಿಹೋದವನ ಮನಸ್ಸನ್ನೂ ಉಜ್ಜೀವಿಸುವವನಾಗಿದ್ದೇನೆ. [QE]
16. [QS]ನಾನು ಸರ್ವದಾ ವ್ಯಾಜ್ಯವಾಡುವುದಿಲ್ಲ, ಕಡೆಯ ತನಕ ಕೋಪಿಸಿಕೊಳ್ಳೆನು, [QE][QS]ಹೀಗೆ ಮಾಡಿದರೆ ಮನುಷ್ಯನ ಆತ್ಮವೂ, ನಾನು ಸೃಷ್ಟಿಸಿದ ಜೀವವೂ ನನ್ನಿಂದ ಕುಂದಿಹೋದಾವು. [QE]
17. [QS]ನನ್ನ ಜನರು ಲಾಭವನ್ನು ದೋಚಿಕೊಂಡ ಅನ್ಯಾಯವನ್ನು ನಾನು ನೋಡಿ ಕೋಪಗೊಂಡು ಅವರನ್ನು ಹೊಡೆದೆನು, [QE][QS]ನನ್ನ ಮುಖವನ್ನು ಮುಚ್ಚಿಕೊಂಡು ರೋಷಭರಿತನಾಗಿದ್ದೆನು; [QE][QS]ಅವರೋ ತಿರುಗಿಕೊಂಡು ಮನಸ್ಸಿಗೆ ತೋರಿದ ಹಾಗೆಯೇ ನಡೆಯುತ್ತಾ ಬಂದಿದ್ದಾರೆ. [QE]
18. [QS]ಅವರ ಮಾರ್ಗಗಳನ್ನು ನೋಡಿದ್ದೇನೆ, ಅವರನ್ನು ಸ್ವಸ್ಥಮಾಡಿ ನಡೆಸುತ್ತಾ ಅವರಿಗೆ, [QE][QS]ಅವರಲ್ಲಿನ ದುಃಖಿತರಿಗೆ, ಆದರಣೆಯನ್ನು ಪ್ರತಿಫಲವಾಗಿ ಕೊಡುವೆನು.” [QE]
19. [QS]ಯೆಹೋವನು ಮನುಷ್ಯರ ಬಾಯಿಯ ಯೋಗ್ಯಫಲವಾಗಿರುವ ಸ್ತೋತ್ರವನ್ನು ಉಂಟುಮಾಡುವವನಾಗಿ, “ದೂರದವನಿಗೂ ಸಮೀಪದವನಿಗೂ ಕ್ಷೇಮವಿರಲಿ, [QE][QS]ಸುಕ್ಷೇಮವಿರಲಿ, ನಾನು ಅವರನ್ನು ಸ್ವಸ್ಥಮಾಡುವೆನು” ಎಂದು ಹೇಳುತ್ತಾನೆ. [QE]
20. [QS]ದುಷ್ಟರಾದರೋ ಅಲ್ಲೋಲಕಲ್ಲೋಲವಾದ ಸಮುದ್ರದಂತಿದ್ದಾರೆ; [QE][QS]ಅದು ಸುಮ್ಮನಿರದು, ಅದರ ತೆರೆಗಳು ಕೆಸರನ್ನೂ, ಹೊಲಸನ್ನೂ ಕಾರುತ್ತಲಿರುತ್ತವೆ. [QE]
21. [QS]“ದುಷ್ಟರಿಗೆ ಸಮಾಧಾನವೇ ಇಲ್ಲ” ಎಂದು ನನ್ನ ದೇವರು ನುಡಿಯುತ್ತಾನೆ. [QE]