1. {#1ಇಸ್ರಾಯೇಲರಿಗೆ ದಂಡನೆ } [QS]ಇಸ್ರಾಯೇಲೇ, ಇತರ ಜನಾಂಗಗಳಂತೆ ಮಿತಿಮೀರಿ ಉಲ್ಲಾಸಿಸಬೇಡ. [QE][QS]ನೀನು ನಿನ್ನ ದೇವರನ್ನು ಬಿಟ್ಟು ವ್ಯಭಿಚಾರ ನಡೆಸಿದ್ದಿ; [QE][QS]ಎಲ್ಲಾ ಕಣಗಳಲ್ಲಿನ ಫಲವನ್ನು ಅದರ ಪ್ರತಿಫಲವನ್ನಾಗಿ ಆಶಿಸಿದ್ದಿ. [QE]
2. [QS]ಕಣವೂ, ದ್ರಾಕ್ಷಿಯ ತೊಟ್ಟಿಯೂ ನಿನ್ನ ಜನರಿಗೆ ಜೀವನ ಆಧಾರವಾಗುವುದಿಲ್ಲ; [QE][QS]ಹೊಸ ದ್ರಾಕ್ಷಾರಸದ ನಿರೀಕ್ಷೆಯು ಅವರಿಗೆ ವ್ಯರ್ಥವಾಗಿ ಹೋಗುವುದು. [QE]
3. [QS]ಅವರು ಯೆಹೋವನ ದೇಶದಲ್ಲಿ ಇನ್ನು ವಾಸಿಸರು. [QE][QS]ಎಫ್ರಾಯೀಮ್ಯರು ಐಗುಪ್ತಕ್ಕೆ ಹಿಂದಿರುಗುವರು, [QE][QS]ಅಶ್ಶೂರದಲ್ಲಿ ಅವರು ಹೊಲಸಾದ ಆಹಾರವನ್ನು ತಿನ್ನುವರು.[* ಹೊಲಸಾದ ಆಹಾರವನ್ನು ತಿನ್ನುವರು. “ಕೆಲವು ಆಹಾರಗಳು ಸಂಸ್ಕಾರ ಸಂಬಂಧವಾಗಿ ಅಶುದ್ಧವಾದವು ಎಂದು ಮೋಶೆಯ ಧರ್ಮಶಾಸ್ತ್ರವು ಘೋಷಿಸುತ್ತದೆ ಹಾಗಾಗಿ ಅವುಗಳನ್ನು ತಿನ್ನಬಾರದು. ] [QE]
4. [QS]ಯೆಹೋವನಿಗೆ ದ್ರಾಕ್ಷಾರಸವನ್ನು ನೈವೇದ್ಯವಾಗಿ ಸುರಿಯರು, [QE][QS]ಅವರ ಯಜ್ಞಗಳು ಆತನಿಗೆ ಮೆಚ್ಚಿಕೆಯಾಗುವುದಿಲ್ಲ. [QE][QS]ಅವರ ಆಹಾರವು ಸತ್ತವರ ಮನೆಯ ಆಹಾರದಂತಿರುವುದು; [QE][QS]ಅದನ್ನು ತಿನ್ನುವವರೆಲ್ಲರೂ ಅಶುದ್ಧರಾಗುವರು, [QE][QS]ಅದು ಅವರ ಹೊಟ್ಟೆತುಂಬುವುದಕ್ಕೆ ಮಾತ್ರ ಅನುಕೂಲವಾಗುವುದು, [QE][QS]ಅದು ಯೆಹೋವನ ಆಲಯಕ್ಕೆ ಬರಲು ಯೋಗ್ಯವಲ್ಲ. [QE]
5. [QS]ನೀವು ಹಬ್ಬದ ದಿನದಲ್ಲಿ, ಯೆಹೋವನ ಮಹೋತ್ಸವ ದಿನದಲ್ಲಿ ಏನು ಮಾಡುವಿರಿ? [QE]
6. [QS]ಆಹಾ, ಅವರು ವಿನಾಶದ ದೇಶವನ್ನು ಬಿಟ್ಟುಹೋಗುವರು; [QE][QS]ಐಗುಪ್ತವು ಅವರಿಗೆ ಸ್ಮಶಾನವಾಗುವುದು, ಮೋಫ್ ಪಟ್ಟಣವು ಅವರನ್ನು ಹೂಣಿಡುವುದು; [QE][QS]ಅವರ ಇಷ್ಟದ ಬೆಳ್ಳಿಯ ಒಡವೆಗಳು ಮುಳ್ಳು ಪೊದೆಗಳ ಪಾಲಾಗುವವು; [QE][QS]ಮುಳ್ಳುಗಿಡಗಳು ಅವರ ಗುಡಾರಗಳಲ್ಲಿ ಹುಟ್ಟಿಕೊಳ್ಳುವವು. [QE]
7. [QS]ದಂಡನೆಯ ದಿನಗಳು ಹತ್ತಿರವಾಗಿದೆ, ಮುಯ್ಯಿತೀರಿಸುವ ದಿನಗಳು ಸಮೀಪಿಸಿವೆ. [QE][QS]ಅದು ಇಸ್ರಾಯೇಲಿನ ಅನುಭವಕ್ಕೆ ಬಂದೇ ಬರುವವು; [QE][QS]ಇಸ್ರಾಯೇಲೇ, ನಿನ್ನ ಅಧರ್ಮವು ಬಹಳವಾಗಿರುವುದರಿಂದಲೂ, ವಿರೋಧವು ಹೆಚ್ಚಾಗಿರುವುದರಿಂದಲೂ, [QE][QS]“ಪ್ರವಾದಿಯು ಮೂರ್ಖನು ಮತ್ತು ದೇವರಾತ್ಮ ಪ್ರೇರಿತನು ಹುಚ್ಚನು” ಅಂದುಕೊಳ್ಳುತ್ತೀ. [QE]
8. [QS]ಎಫ್ರಾಯೀಮು ನನ್ನ ದೇವರ ವಿಷಯವಾಗಿ ಹೊಂಚು ಹಾಕುತ್ತದೆ; [QE][QS]ಪ್ರವಾದಿಯ ಮಾರ್ಗಗಳಲ್ಲೆಲ್ಲಾ ಬೇಟೆಗಾರನ ಬಲೆಯು ಒಡ್ಡಿದೆ, [QE][QS]ಅವನ ದೇವರ ಆಲಯದಲ್ಲಿಯೂ ಶತ್ರುವಿನ ವಿರೋಧವು ಕಾದಿದೆ. [QE]
9. [QS]ಪೂರ್ವದಲ್ಲಿ ಗಿಬ್ಯದವರು ಕೆಡಿಸಿಕೊಂಡಂತೆ ಎಫ್ರಾಯೀಮ್ಯರು ತಮ್ಮನ್ನು ತೀರಾ ಕೆಡಿಸಿಕೊಂಡಿದ್ದಾರೆ. [QE][QS]ದೇವರು ಅವರ ಅಧರ್ಮವನ್ನು ಜ್ಞಾಪಕಕ್ಕೆ ತಂದುಕೊಂಡು ಅವರ ಪಾಪಗಳಿಗೆ ಪ್ರತಿದಂಡನೆ ಮಾಡುವನು. [QE]
10. {#1ಇಸ್ರಾಯೇಲಿನ ಕ್ಷಯ } [QS]ಕಾಡಿನಲ್ಲಿ ದ್ರಾಕ್ಷಿಯ ಹಣ್ಣು ಸಿಕ್ಕಿದಂತೆ ಇಸ್ರಾಯೇಲು ನನಗೆ ಸಿಕ್ಕಿತು; [QE][QS]ಹೊಸದಾಗಿ ಫಲಕ್ಕೆ ಬಂದ ಅಂಜೂರದ ಗಿಡದಲ್ಲಿ ಮೊದಲು ಮಾಗಿದ ಹಣ್ಣನ್ನು ಕಂಡ ಹಾಗೆ ನಿಮ್ಮ ಪೂರ್ವಿಕರನ್ನು ಕಂಡೆನು. [QE][QS]ಆದರೆ ಅವರು ಬಾಳ್ ಪೆಗೋರಿಗೆ ಬಂದು ಬಾಳ್ ದೇವತೆಯ ಭಕ್ತರಾಗಿ ದೀಕ್ಷೆಗೊಂಡು, [QE][QS]ತಾವು ಪ್ರೀತಿಸಿದ ದೇವತೆಯ ಹಾಗೆ ಅಸಹ್ಯರಾದರು. [QE]
11. [QS]ಎಫ್ರಾಯೀಮ್ಯರ ಮಹಿಮೆಯು ಪಕ್ಷಿಯಂತೆ ಹಾರಿಹೋಗುವುದು; ಯಾರೂ ಹೆರರು, ಗರ್ಭಿಣಿಯಾಗುವುದಿಲ್ಲ, ಗರ್ಭಧರಿಸರು. [QE]
12. [QS]ಒಂದು ವೇಳೆ ಮಕ್ಕಳನ್ನು ಹೆತ್ತು ಸಾಕಿದರೂ, [QE][QS]ಯಾರೂ ಉಳಿಯದಂತೆ ಮಾಡಿ ಅವರಿಗೆ ಪುತ್ರ ಶೋಕವನ್ನು ಉಂಟುಮಾಡುತ್ತಲೇ ಬರುವೆನು; [QE][QS]ಹೌದು, ನಾನು ಅವರಿಗೆ ವಿಮುಖನಾಗಲು ಅವರ ಗತಿಯನ್ನು ಏನೆಂದು ಹೇಳಲಿ! [QE]
13. [QS]ತೂರು ಹೇಗೆ ಕಾಣಿಸುತ್ತದೋ ಹಾಗೆಯೇ ಎಫ್ರಾಯೀಮು ಹುಲ್ಗಾವಲಿನಲ್ಲಿ ನೆಟ್ಟಿರುವುದಾಗಿ ಕಾಣಿಸುತ್ತದೆ; [QE][QS]ಆದರೆ ಎಫ್ರಾಯೀಮು ತನ್ನ ಮಕ್ಕಳನ್ನು ಹತ್ಯಗೆ ಈಡಾಗುವಂತೆ ಕಳುಹಿಸುವುದು. [QE]
14. [QS]ಯೆಹೋವನೇ, ಅವರಿಗೆ ತಕ್ಕ ಗತಿಯನ್ನು ವಿಧಿಸು; ಏನು ವಿಧಿಸುತ್ತೀಯೋ? [QE][QS]ಅವರಿಗೆ ಗರ್ಭಸ್ರಾವವನ್ನು ಮಾಡು, ಮೊಲೆಯನ್ನು ಬತ್ತಿಸು. [QE]
15. [QS]ಅವರ ದುಷ್ಟತನವು ಗಿಲ್ಗಾಲಿನಲ್ಲಿ ತುಂಬಿದೆ; ಅಲ್ಲೇ ನನ್ನ ದ್ವೇಷಕ್ಕೆ ಗುರಿಯಾಗಿದ್ದಾರೆ; [QE][QS]ಅವರ ದುಷ್ಕೃತ್ಯಗಳ ನಿಮಿತ್ತ ನಾನು ಅವರನ್ನು ನನ್ನ ನಿವಾಸದೊಳಗಿಂದ ಓಡಿಸಿಬಿಡುವೆನು; [QE][QS]ಅವರನ್ನು ಇನ್ನು ಪ್ರೀತಿಸೆನು; ಅವರ ಅಧಿಕಾರಿಗಳೆಲ್ಲರೂ ದ್ರೋಹಿಗಳೇ ಸರಿ. [QE]
16. [QS]ಎಫ್ರಾಯೀಮ್ಯರಿಗೆ ಘಾತವಾಗಿದೆ; ಅವರ ವಂಶಮೂಲವು ಒಣಗಿಹೋಗಿದೆ. [QE][QS]ಅವರು ಫಲಹೀನರಾಗುವರು; ಹೌದು, ಅವರು ಮಕ್ಕಳನ್ನು ಹೆತ್ತರೂ ಅವರ ಗರ್ಭದ ಪ್ರಿಯಫಲವನ್ನು ಸಾಯಿಸುವೆನು. [QE]
17. [QS]ನನ್ನ ದೇವರು ಅವರನ್ನು ತಳ್ಳಿಬಿಡುವನು; ಅವರು ಆತನ ಮಾತಿಗೆ ಕಿವಿಗೊಡಲಿಲ್ಲ; [QE][QS]ಅವರಿಗೆ ಜನಾಂಗಗಳಲ್ಲಿ ಅಲೆದಾಡುವ ಗತಿಯಾಗುವುದು. [QE]