1. “ತುತ್ತೂರಿಯನ್ನು ಹಿಡಿದು ಊದು.
ನನ್ನ ಜನರು ನನ್ನ ಒಡಂಬಡಿಕೆಯನ್ನು ಮೀರಿ, ನನ್ನ ಧರ್ಮವಿಧಿಗಳಿಗೆ ದ್ರೋಹಮಾಡಿದ್ದರಿಂದ, ಶತ್ರುವು ಹದ್ದಿನ ಹಾಗೆ ಯೆಹೋವನಾದ ನನ್ನ ನಿವಾಸದ ಮೇಲೆ ಬರುತ್ತಾನೆ. |
4. {ಇಸ್ರಾಯೇಲ್ ಕಲ್ಪಿಸಿದ ರಾಜರೂ ಮತ್ತು ದೇವರುಗಳೂ} PS ನನ್ನ ಅಪ್ಪಣೆಯಿಲ್ಲದೆ ರಾಜರನ್ನು ನೇಮಿಸಿಕೊಂಡಿದ್ದಾರೆ; ನನಗೆ ತಿಳಿಯದೆ ಅಧಿಪತಿಗಳನ್ನು ಮಾಡಿಕೊಂಡಿದ್ದಾರೆ.
ತಮ್ಮ ಬೆಳ್ಳಿ ಮತ್ತು ಬಂಗಾರಗಳಿಂದ ಬೊಂಬೆಗಳನ್ನು ನಿರ್ಮಿಸಿಕೊಂಡಿದ್ದಾರೆ; ಅವರು ನಿರ್ಮಿಸಿದ್ದೆಲ್ಲಾ ನಾಶವಾಗತಕ್ಕದ್ದೇ. |
5. ಸಮಾರ್ಯವೇ, ನಾನು ನಿನ್ನ ಬಸವನನ್ನು ತಳ್ಳಿಬಿಟ್ಟಿದ್ದೇನೆ;
ನನ್ನ ರೋಷಾಗ್ನಿಯು ನಿನ್ನವರ ಮೇಲೆ ಉರಿಯುತ್ತದೆ; ಅವರು ನಿರ್ಮಲರಾಗುವುದಕ್ಕೆ ಇನ್ನೆಷ್ಟು ಕಾಲ ಹಿಡಿಯುವುದೋ? |
7. ಅವರು ಗಾಳಿಯನ್ನು ಬಿತ್ತುತ್ತಾರೆ, ಬಿರುಗಾಳಿಯನ್ನು ಕೊಯ್ದುಕೊಳ್ಳುವರು.
ಇಸ್ರಾಯೇಲರ ಪೈರು ತೆನೆಗೆ ಬಾರದು; ಬೀಜ ಮೊಳೆತರೂ ಹಿಟ್ಟು ಸಿಕ್ಕದು; ಒಂದು ವೇಳೆ ಸಿಕ್ಕಿದರೂ ಅನ್ಯರು ಅದನ್ನು ನುಂಗಿಬಿಡುವರು. |
9. ಅದು ಒಂಟಿಯಾದ ಕಾಡುಕತ್ತೆಯಂತೆ ಮನಸ್ಸು ಬಂದ ಹಾಗೆ ನಡೆದು ಅಶ್ಶೂರಕ್ಕೆ ಹೋಗಿದೆ.
ಎಫ್ರಾಯೀಮು ಹಣಕೊಟ್ಟು ಜಾರರನ್ನು (ವ್ಯಭಿಚಾರಿಗಳನ್ನು) ಸಂಪಾದಿಸಿಕೊಂಡಿದೆ. |
10. ಅದು ಜನಾಂಗಗಳೊಳಗೆ ಜಾರರನ್ನು ಸಂಪಾದಿಸಿದರೂ, ಅದನ್ನು ನಾನು ಈಗ ಸೆರೆಗೆ ಒಳಪಡಿಸುವೆನು.
ರಾಜಾಧಿರಾಜನು ಹೊರಿಸುವ ಹೊರೆಯಿಂದ ಅದು ಕುಗ್ಗಿಹೋಗಲಿಕ್ಕೆ ಆರಂಭವಾಗುವುದು. |
11. ಎಫ್ರಾಯೀಮು ಯಜ್ಞವೇದಿಗಳನ್ನು ಹೆಚ್ಚೆಚ್ಚಾಗಿ ಕಟ್ಟಿ ಪಾಪಮಾಡಿದೆ;
ಕಟ್ಟಿದ ಯಜ್ಞವೇದಿಗಳೇ ಅದಕ್ಕೆ ಪಾಪವಾಗಿ ಪರಿಣಮಿಸಿವೆ. |
12. ನಾನು ನನ್ನ ಧರ್ಮವನ್ನು ಲಕ್ಷಾಂತರ ವಿಧಿಗಳ ರೂಪವಾಗಿ ಅದಕ್ಕೆ ಬರೆಯಿಸಿಕೊಟ್ಟರೂ,
ಅವುಗಳು ತನಗೆ ಸಂಬಂಧಪಟ್ಟವುಗಳಲ್ಲ ಎಂದು ಅದು ಭಾವಿಸುತ್ತದೆ. |
13. ಎಫ್ರಾಯೀಮ್ಯರು ಯಜ್ಞಪಶುಗಳನ್ನು ನನಗೆ ನೈವೇದ್ಯವಾಗಿ ವಧಿಸಿ ಮಾಂಸಭೋಜನ ಮಾಡುತ್ತಾರೆ;
ಯೆಹೋವನು ಆ ಯಜ್ಞಗಳನ್ನು ಮೆಚ್ಚುವುದಿಲ್ಲ; ಅವರ ಅಧರ್ಮವನ್ನು ಜ್ಞಾಪಕಕ್ಕೆ ತಂದುಕೊಂಡು ಅವರ ಪಾಪಕ್ಕೆ ದಂಡನೆಮಾಡುವನು; ಅವರು ಐಗುಪ್ತಕ್ಕೆ ಹಿಂದಿರುಗಬೇಕಾಗುವುದು. |
14. ಇಸ್ರಾಯೇಲ್ ತನ್ನ ಸೃಷ್ಟಿಕರ್ತನನ್ನು ಮರೆತು ಅರಮನೆಗಳನ್ನು ಕಟ್ಟಿಕೊಂಡಿದೆ;
ಯೆಹೂದವು ಕೋಟೆಕೊತ್ತಲಗಳ ಪಟ್ಟಣಗಳನ್ನು ಮಾಡಿಕೊಂಡಿದೆ; ಆಹಾ, ನಾನು ಆ ಪಟ್ಟಣಗಳ ಮೇಲೆ ಬೆಂಕಿಯನ್ನು ಸುರಿಸುವೆನು, ಅದು ಅವರ ಸೌಧಗಳನ್ನು ನುಂಗಿಬಿಡುವುದು.” PE |