1. {#1ಇಸ್ರಾಯೇಲಿಗೆ ಸಂಭವಿಸಬೇಕಾದ ನಾಶನ } [QS]ಪೂರ್ವದಲ್ಲಿ ಎಫ್ರಾಯೀಮು ನುಡಿದ ಮಾತಿಗೆ ಎಲ್ಲರೂ ನಡುಗಿದರು, [QE][QS]ಅದು ಇಸ್ರಾಯೇಲಿನಲ್ಲಿ ಉನ್ನತಸ್ಥಿತಿಗೆ ಬಂದಿತ್ತು; [QE][QS]ಆದರೆ ಬಾಳ್ ದೇವತೆಯ ವಿಷಯದಲ್ಲಿ ದೋಷಿಯಾದಾಗ ನಾಶವಾಯಿತು. [QE]
2. [QS]ಈಗ ಎಫ್ರಾಯೀಮ್ಯರು ಹೆಚ್ಚೆಚ್ಚಾಗಿ ಪಾಪಮಾಡುತ್ತಾರೆ, [QE][QS]ತಮ್ಮ ಬೆಳ್ಳಿಯಿಂದ ಸ್ವಬುದ್ಧಿಗೆ ತಕ್ಕ ಎರಕದ ಬೊಂಬೆಗಳನ್ನು ರೂಪಿಸಿಕೊಂಡಿದ್ದಾರೆ; [QE][QS]ಅವೆಲ್ಲಾ ಶಿಲ್ಪಿಗಳ ಕೈಕೆಲಸವೇ; ಇಂಥವುಗಳನ್ನು ಮಾತನಾಡಿಸುತ್ತಾರೆ, [QE][QS]ಮನುಷ್ಯರಾದ ಪೂಜಾರಿಗಳು ಪಶುವಿನ ಮೂರ್ತಿಗಳನ್ನು ಮುದ್ದಿಸುತ್ತಾರೆ. [QE]
3. [QS]ಹೀಗಿರಲು ಅವರು ಪ್ರಾತಃಕಾಲದ ಮೋಡದ ಹಾಗೆ, [QE][QS]ಬೇಗನೆ ಮಾಯವಾಗುವ ಇಬ್ಬನಿಯಂತೆಯೂ, [QE][QS]ಬಿರುಗಾಳಿಯು ಕಣದಿಂದ ಬಡಿದುಕೊಂಡುಹೋಗುವ ಹೊಟ್ಟಿನ ಹಾಗೂ, [QE][QS]ಚಿಮಿಣಿಯಿಂದ ಹೊರಡುವ ಹೊಗೆಯೋಪಾದಿಯಲ್ಲಿಯೂ ಇರುವರು. [QE]
4. [QS]ನಾನಾದರೋ ನೀನು ಐಗುಪ್ತ ದೇಶದಲ್ಲಿದ್ದ ಕಾಲದಿಂದ ಯೆಹೋವನೆಂಬ ನಿನ್ನ ದೇವರಾಗಿದ್ದೇನೆ; [QE][QS]ನನ್ನ ಹೊರತು ಯಾವ ದೇವರೂ ನಿನಗೆ ಗೊತ್ತಿಲ್ಲ, ನನ್ನ ಹೊರತು ಯಾವ ರಕ್ಷಕನೂ ಇಲ್ಲ. [QE]
5. [QS]ಅರಣ್ಯದಲ್ಲಿ, ಘೋರ ಮರುಭೂಮಿಯಲ್ಲಿ ನಿನ್ನನ್ನು ಲಕ್ಷಿಸಿದವನು ನಾನೇ. [QE]
6. [QS]ಆಹಾರವು ನಿನ್ನವರಿಗೆ ಸಿಕ್ಕಿದಾಗ ಹೊಟ್ಟೆತುಂಬಿಸಿಕೊಂಡರು;[* ಆಹಾರವು ನಿನ್ನವರಿಗೆ ಸಿಕ್ಕಿದಾಗ ಹೊಟ್ಟೆತುಂಬಿಸಿಕೊಂಡರು; ನಾನು ಅವರನ್ನು ಪೋಷಿಸಿದಾಗ ಅವರು ತೃಪ್ತರಾದರು. ] [QE][QS]ಹೊಟ್ಟೆ ತುಂಬಿದಾಗ ಅವರ ಮನಸ್ಸು ಉಬ್ಬಿಕೊಂಡಿತು; ಇದರಿಂದ ನನ್ನನ್ನು ಮರೆತುಬಿಟ್ಟರು. [QE]
7. [QS]ಆದಕಾರಣ ನಾನು ಅವರ ಪಾಲಿಗೆ ಸಿಂಹ; ಚಿರತೆಯ ಹಾಗೆ ದಾರಿಯ ಮಗ್ಗುಲಲ್ಲಿ ಹೊಂಚುಹಾಕುವೆನು. [QE]
8. [QS]ಮರಿಗಳನ್ನು ಕಳಕೊಂಡ ಕರಡಿಯಂತೆ ಅವರಿಗೆ ಎದುರು ಬಿದ್ದು ಅವರ ಎದೆಯನ್ನು ಸೀಳಿಬಿಡುವೆನು; [QE][QS]ಅಲ್ಲೇ ಮೃಗರಾಜನಂತೆ ಅವರನ್ನು ನುಂಗುವೆನು; ಭೂಜಂತುಗಳು ಅವರನ್ನು ಹರಿದುಬಿಡುವವು. [QE]
9. [QS]ಇಸ್ರಾಯೇಲೇ, ನಾನು ನಿನ್ನನ್ನು ನಾಶಮಾಡುವೆನು, ಯಾರು[† ಯಾರು ನಿನ್ನ ಸಹಾಯವು ನನ್ನೊಂದಿಗೆ ಮಾತ್ರವಿದೆ. ] ನಿನ್ನನ್ನು ರಕ್ಷಿಸುವರು? [‡ ನೀನು ನಿನ್ನ ಬೆಂಬಲವಾದ ನನಗೆ ತಿರುಗಿಬಿದ್ದುದರಿಂದ ನಾಶವಾಗಿದ್ದಿ. ] [QE]
10. [QS]ಈಗ ನಿನ್ನ ಅರಸನು ಎಲ್ಲಿ? ನಿನ್ನ ಪಟ್ಟಣಗಳಲ್ಲೆಲ್ಲಾ ನಿನ್ನವರನ್ನು ಉದ್ಧರಿಸುವನೋ? [QE][QS]ನನಗೆ ರಾಜನನ್ನೂ ರಾಜ್ಯಾಧಿಕಾರಿಗಳನ್ನೂ ದಯಪಾಲಿಸು ಎಂದು ನನ್ನನ್ನು ಕೇಳಿಕೊಂಡಿಯಷ್ಟೆ; [QE][QS]ನಿನ್ನನ್ನು ರಕ್ಷಿಸಬಲ್ಲ ನಗರಪಾಲಕರು ಎಲ್ಲಿ? [QE]
11. [QS]ನಾನು ಕೋಪಗೊಂಡು ರಾಜರನ್ನು ಕೊಟ್ಟಿದ್ದೇನೆ; [QE][QS]ಕೋಪೋದ್ರೇಕನಾಗಿ ಅವರನ್ನು ತೆಗೆದು ಹಾಕಿದ್ದೇನೆ. [QE]
12. [QS]ಎಫ್ರಾಯೀಮಿನ ಅಧರ್ಮವು ಗಂಟುಕಟ್ಟಿದೆ, ಅದರ ಪಾಪವು ಭದ್ರಪಡಿಸಿದೆ. [QE]
13. [QS]ಅದಕ್ಕೆ ಪ್ರಸವವೇದನೆಯಾಗುತ್ತಾ ಇದೆ; [QE][QS]ಅದು ಮಂಕು ಮಗುವಿನಂತಿದೆ; ಈ ಸಮಯವು ಗರ್ಭದ್ವಾರದಲ್ಲಿ ನಿಲ್ಲತಕ್ಕ ಸಮಯವಲ್ಲ. [QE]
14. [QS]ನಾನು ಅದನ್ನು ಪಾತಾಳದ ಅಧಿಕಾರದಿಂದ ಬಿಡಿಸಲೋ? ಮರಣದಿಂದ ಉದ್ಧರಿಸಲೋ? [QE][QS]ಮರಣವೇ, ನಿನ್ನ ಉಪದ್ರವಗಳಲ್ಲಿ? ಪಾತಾಳವೇ, ನೀನು ಮಾಡುವ ನಾಶನವೆಲ್ಲಿ? [QE][QS]ಕನಿಕರವು ನನಗೆ ಕಾಣಿಸದು. [QE]
15. [QS]ಎಫ್ರಾಯೀಮು ತನ್ನ ಸಹೋದರರಲ್ಲಿ ಫಲಸಮೃದ್ಧವಾಗಿದ್ದರೂ, [QE][QS]ಕಾಡಿನಿಂದ ಯೆಹೋವನು ಬೀಸಮಾಡುವ ಮೂಡಣ ಗಾಳಿಯು ಬರಲು ಅದರ ಬುಗ್ಗೆಯು ಬತ್ತುವುದು, ಅದರ ಒರತೆಯು ಒಣಗುವುದು. [QE][QS]ಶತ್ರುವು ಅವರ ಪ್ರಿಯವಸ್ತುಗಳ ನಿಧಿಯನ್ನು ಸೂರೆಮಾಡುವನು. [QE]
16. [QS]ಸಮಾರ್ಯವು ತನ್ನ ದೇವರಿಗೆ ತಿರುಗಿಬಿದ್ದುದರಿಂದ ತನ್ನ ದೋಷಫಲವನ್ನು ಅನುಭವಿಸಲೇ ಬೇಕು; [QE][QS]ಅದರ ಜನರು ಖಡ್ಗದಿಂದ ಹತರಾಗುವರು; ವೈರಿಗಳು ಅಲ್ಲಿನ ಮಕ್ಕಳನ್ನು ಬಂಡೆಗೆ ಅಪ್ಪಳಿಸುವರು. [QE][QS]ಗರ್ಭಿಣಿಯರ ಹೊಟ್ಟೆಯನ್ನು ಸೀಳುವರು. [QE]