1. [PS](1-2)ಆದುದರಿಂದ ಕ್ರಿಸ್ತನ ವಿಷಯವಾದ ಪ್ರಾಥಮಿಕ ಉಪದೇಶವನ್ನು ಬಿಟ್ಟು, [* ಇಬ್ರಿ. 9:14: ]ನಿರ್ಜೀವ ಕ್ರಿಯೆಗಳಿಂದ ಮಾನಸಾಂತರವೂ, ದೇವರಲ್ಲಿ ನಂಬಿಕೆಯೂ, [† ಅ. ಕೃ. 19:4,5. ]ದೀಕ್ಷಾಸ್ನಾನಗಳ ಬೋಧನೆಯೂ, [‡ ಅ. ಕೃ. 8:17; 19:6: ]ಹಸ್ತಾರ್ಪಣೆಯೂ, [§ ಅ. ಕೃ. 17:31, 32: ]ಸತ್ತವರಿಗೆ ಪುನರುತ್ಥಾನವೂ ಮತ್ತು [* ಅ. ಕೃ. 10:42; 17:31; 2 ಕೊರಿ 5:10: ]ನಿತ್ಯವಾದ ನ್ಯಾಯತೀರ್ಪೂ ಉಂಟೆಂಬುದರ ಕುರಿತು ಪದೇಪದೇ ಅಸ್ತಿವಾರವನ್ನೆ ಹಾಕುತಿರದೆ ನಾವು ಪರಿಪಕ್ವತೆಯೆಡೆಗೆ [† ಇಬ್ರಿ. 5:12; ಫಿಲಿ. 3:12-14: ]ಸಾಗೋಣ.
2.
3. ದೇವರು ಅನುಮತಿಸುವುದಾದರೆ ನಾವು ಇವುಗಳನ್ನು ಮಾಡುವೆವು.
4. ಒಂದು ಸಾರಿ [‡ ಇಬ್ರಿ. 10:32: ]ಬೆಳಕಿನಲ್ಲಿ ಸೇರಿದವರು ಸ್ವರ್ಗೀಯ [§ ಯೋಹಾ 4:10; ಎಫೆ 2:8: ]ದಾನವನ್ನು ಅನುಭವಿಸಿದವರು, [* ಗಲಾ. 3:2, 5: ]ಪವಿತ್ರಾತ್ಮನಲ್ಲಿ ಪಾಲುಗಾರರಾದವರು,
5. ದೇವರ ವಾಕ್ಯದ ಶ್ರೇಷ್ಠತೆಯನ್ನೂ ಮುಂದಣ ಯುಗದ ಶಕ್ತಿಯನ್ನೂ ಅನುಭವಿಸಿದವರು ಅದರಿಂದ ಹಿಂಜಾರಿಹೋದರೆ,
6. [† 1 ಯೋಹಾ 5:16: ]ಅವರಲ್ಲಿ ತಿರುಗಿ ಮಾನಸಾಂತರವನ್ನು ಹುಟ್ಟಿಸುವುದು ಅಸಾಧ್ಯ, ಯಾಕೆಂದರೆ [‡ ಇಬ್ರಿ. 10:29: ]ಅವರು ತಾವಾಗಿಯೇ ದೇವರ ಮಗನನ್ನು ಪುನಃ ಶಿಲುಬೆಗೆ ಹಾಕುವವರೂ ಆತನನ್ನು ಬಹಿರಂಗವಾಗಿ ಅವಮಾನಪಡಿಸುವವರೂ ಆಗಿರುತ್ತಾರೆ.
7. ಭೂಮಿಯು ತನ್ನ ಮೇಲೆ ಅನೇಕಾವರ್ತಿ ಸುರಿಯುವ ಮಳೆಯನ್ನು ಹೀರಿಕೊಂಡು, ಅದು ಯಾರ ನಿಮಿತ್ತವಾಗಿ ವ್ಯವಸಾಯ ಮಾಡಲ್ಪಡುತ್ತದೋ, ಅವರಿಗೆ ಅನುಕೂಲವಾದ ಬೆಳೆಯನ್ನು ಕೊಡುತ್ತದೆ, ಅದು ದೇವರ ಆಶೀರ್ವಾದವನ್ನು ಹೊಂದುತ್ತದೆ.
8. [§ ಯೆಶಾ 5:1-7; ಲೂಕ 13:6-9: ]ಆದರೆ ಅದು ಮುಳ್ಳುಗಿಡಗಳನ್ನೂ ಕಳೆಗಳನ್ನೂ ಬೆಳೆಸಿದರೆ, ಅಯೋಗ್ಯವಾದದ್ದಾಗಿ ಶಾಪಕ್ಕೆ ಗುರಿಯಾಗುತ್ತದೆ. [* ಮಲಾ. 4:1; ಯೋಹಾ 15:6: ]ಕೊನೆಗದು ಸುಡಲ್ಪಡುತ್ತದೆ.
9. ಪ್ರಿಯರೇ, ಈ ರೀತಿಯಾಗಿ ನಾವು ಮಾತನಾಡಿದರೂ ನಿಮ್ಮ ವಿಷಯವಾಗಿಯೂ ರಕ್ಷಣೆಗೆ ಸಂಬಂಧಿಸಿದವುಗಳಲ್ಲಿಯೂ ನೀವು ಉತ್ತಮರಾಗಿದ್ದೀರೆಂದು ನಂಬಿದ್ದೇವೆ.
10. [† ರೋಮಾ. 15:31; 2 ಕೊರಿ 8:4; 9:1, 12; 2 ತಿಮೊ. 1:18; ಪ್ರಕ 2:19: ]ನೀವು ದೇವಜನರಿಗೆ ಉಪಚಾರ ಮಾಡಿದ್ದೀರಿ, ಇನ್ನೂ ಮಾಡುತ್ತಾ ಇದ್ದಿರಿ. ಈ ಕೆಲಸವನ್ನು ಮತ್ತು ಇದರಲ್ಲಿ ನೀವು ಆತನ ನಾಮದ ಕಡೆಗೆ ತೋರಿಸಿದ ಪ್ರೀತಿಯನ್ನು [‡ ಜ್ಞಾ. 19:17; ಮತ್ತಾ 10:42; 25:40; ಮಾರ್ಕ 9:41: ]ಆತನು ಮರೆಯುವುದಿಲ್ಲ, ಯಾಕೆಂದರೆ ದೇವರು ಅನೀತಿಯುಳ್ಳವನಲ್ಲ.
11. ನಿರೀಕ್ಷೆಯ ಸಂಪೂರ್ಣ ನಿಶ್ಚಯತ್ವವನ್ನು ಹೊಂದುವುದಕ್ಕಾಗಿ ಅಂತ್ಯದವರೆಗೂ ನೀವು ಅದೇ [§ ರೋಮಾ. 5:2-5: ]ಶ್ರದ್ಧೆಯನ್ನು ತೋರಿಸಬೇಕೆಂದು ನಾನು ಬಹಳವಾಗಿ ಅಪೇಕ್ಷಿಸುತ್ತೇವೆ.
12. ನೀವು ಸೋಮಾರಿಗಳಾಗಿರಬೇಕೆಂದು ಅಪೇಕ್ಷಿಸುವುದಿಲ್ಲ, ಬದಲಿಗೆ ನಂಬಿಕೆಯಿಂದಲೂ, ತಾಳ್ಮೆಯಿಂದಲೂ, ವಾಗ್ದಾನಗಳನ್ನು ಬಾಧ್ಯವಾಗಿ [* ಇಬ್ರಿ. 13:7; ಇಬ್ರಿ. 10:36; 13:7: ]ಹೊಂದುವವರನ್ನು ಅನುಸರಿಸುವವರಾಗಬೇಕೆಂದು ಕೋರುತ್ತೇನೆ. [PE]
13. {#1ದೇವರ ವಾಗ್ದಾನಗಳು ಎಷ್ಟು ಮಾತ್ರಕ್ಕೂ ತಪ್ಪುವುದಿಲ್ಲ } [PS]ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದಾಗ ತನಗಿಂತಲೂ ಹೆಚ್ಚಿನವರು ಯಾರೂ ಇಲ್ಲದ್ದರಿಂದ [† ಆದಿ 22:16, 17: ]ತನ್ನ ಮೇಲೆ ಆಣೆಯಿಟ್ಟು,
14. “ಖಂಡಿತವಾಗಿಯೂ ನಾನು ನಿನ್ನನ್ನು ಆಶೀರ್ವದಿಸುವೆನು. ನಿನ್ನ ಸಂತಾನವನ್ನು ಅಭಿವೃದ್ಧಿಪಡಿಸುವೆನು” ಎಂದು ಹೇಳಿದನಷ್ಟೆ.
15. ಹೀಗೆ [‡ ರೋಮಾ. 4:13: ]ಅಬ್ರಹಾಮನು ತಾಳ್ಮೆಯಿಂದ ಕಾದುಕೊಂಡಿದ್ದು ವಾಗ್ದಾನವನ್ನು ಪಡೆದುಕೊಂಡನು.
16. ಮನುಷ್ಯರು ತಮಗಿಂತಲೂ ಹೆಚ್ಚಿನವನ ಮೇಲೆ ಆಣೆಯಿಡುತ್ತಾರಷ್ಟೆ, [§ ವಿಮೋ 22:11: ]ಆಣೆಯನ್ನು ದೃಢಪಡಿಸಿದ ಮೇಲೆ ವಿವಾದವು ಅಂತ್ಯವಾಗುವುದು.
17. ಹಾಗೆಯೇ ದೇವರು [* ವ. 18; ಕೀರ್ತ 110:4; ಜ್ಞಾ. 19:21: ]ತನ್ನ ಸಂಕಲ್ಪವು ಬದಲಾಗಲಾರದ್ದೆಂಬುದನ್ನು, [† ಇಬ್ರಿ. 11:9: ]ವಾಗ್ದಾನದ ಬಾಧ್ಯಸ್ಥರಿಗೆ ಬಹು ಸ್ಪಷ್ಟವಾಗಿ ತೋರಿಸಬೇಕೆಂದು ಆಣೆಯಿಟ್ಟು ಸ್ಥಿರಪಡಿಸಿದನು.
18. ದೇವರ ವಾಗ್ದಾನ ಮತ್ತು ಆಣೆ ಇವೆರಡೂ ನಿಶ್ಚಲವಾದ ಆಧಾರಗಳು ಏಕೆಂದರೆ ದೇವರು ಸುಳ್ಳಾಡುವವನಲ್ಲ. ಅದುದರಿಂದ ಆಶ್ರಯವನ್ನು ಹೊಂದಬೇಕೆಂದು ಓಡಿಬಂದು, [‡ ಇಬ್ರಿ. 12:1,2. ]ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ಹಿಡಿದುಕೊಂಡವರಾದ ನಮಗೆ ಬಲವಾದ ಪ್ರೋತ್ಸಾಹ ಉಂಟಾಯಿತು.
19. [§ ತೀತ. 1:2: ]ಆ ನಿರೀಕ್ಷೆಯು ನಮ್ಮ ಪ್ರಾಣಕ್ಕೆ ವಿಶ್ವಾಸಾರ್ಹವಾದದ್ದೂ ಸ್ಥಿರವಾದದ್ದೂ ಆದ [* ಅಂದರೆ ಆಧಾರವಾಗಿರುವುದು. ]ಲಂಗರವಾಗಿದೆ. ಅದು ಅತಿ ಪರಿಶುದ್ಧ ಸ್ಥಳದ [† ಇಬ್ರಿ. 9:7; ಯಾಜ 16:15: ]ತೆರೆಯ ಒಳಗಡೆ ಪ್ರವೇಶಿಸುವಂಥದ್ದಾಗಿದೆ.
20. ಅಲ್ಲಿಗೆ [‡ ಇಬ್ರಿ. 3:1; 5:6, 10; 7:17, 21 ]ಯೇಸು ಸದಾಕಾಲವೂ ಮೆಲ್ಕಿಜೆದೇಕನ ತರಹದ ಮಹಾಯಾಜಕನಾಗಿ, [§ ಇಬ್ರಿ. 4:14; 8:1; 9:24: ]ನಮಗೋಸ್ಕರ ಮುಂಚಿತವಾಗಿಯೇ ಹೋಗಿ ಆ ಸಾನ್ನಿಧ್ಯವನ್ನು ಪ್ರವೇಶಿಸಿದ್ದಾನೆ. [PE]