1. {#1ದೇವರು ನಮ್ಮ ತಂದೆ } [PS](1-2)ಆದಕಾರಣ ಇಷ್ಟು ಸಾಕ್ಷಿಗಳ ದೊಡ್ಡ ಗುಂಪು ಮೇಘದಂತೆ ನಮ್ಮ ಸುತ್ತಲು ಇರುವುದರಿಂದ ನಮಗೆ ಅಭ್ಯಂತರಪಡಿಸುವ ಎಲ್ಲಾ ಭಾರವನ್ನೂ, ಸುಲಭವಾಗಿ [* ಎಫೆ 4:22: ]ಮುತ್ತಿಕೊಳ್ಳುವ ಪಾಪವನ್ನು ಸಹ ನಾವು ತೆಗೆದಿಟ್ಟು, [† ಇಬ್ರಿ. 2:10: ]ನಂಬಿಕೆಯನ್ನು ಹುಟ್ಟಿಸುವಾತನೂ ಅದನ್ನು ಪರಿಪೂರ್ಣಗೊಳಿಸುವಾತನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ [‡ 1 ಕೊರಿ 9:24: ]ಓಟವನ್ನು ಸಹನೆಯಿಂದ ಓಡೋಣ. [§ ಲೂಕ 24:26; ಫಿಲಿ. 2:8; ಯೆಶಾ 53:11: ]ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ [* ಕೀರ್ತ 22:6,7; 69:19; ಯೆಶಾ 53:3: ]ಅಪಮಾನವನ್ನು ಅಲಕ್ಷ್ಯಮಾಡಿ, ಶಿಲುಬೆಯ ಮರಣವನ್ನು ಸಹಿಸಿಕೊಂಡು, [† ಇಬ್ರಿ. 1:3: ]ದೇವರ ಸಿಂಹಾಸನದ ಬಲಗಡೆಯಲ್ಲಿ ಆಸೀನನಾಗಿದ್ದಾನೆ.
2.
3. ನೀವು ಮನಗುಂದಿದವರಾಗಿ [‡ ಗಲಾ. 6:9: ]ಬೇಸರಗೊಳ್ಳದಂತೆ [§ ಮತ್ತಾ 10:24: ]ಯೇಸುವನ್ನು ಕುರಿತು ಯೋಚಿಸಿರಿ. [* ಕೆಲವು ಪ್ರತಿಗಳಲ್ಲಿ, ಪಾಪಿಗಳು ತಮ್ಮ ಸ್ವಂತ ಹಾನಿಗೆ ಮಾಡಿದ ವಿರೋಧವನ್ನು ಎಷ್ಟಾಗಿ ಸಹಿಸಿಕೊಂಡನು ಎಂದು ಬರೆದದೆ. ]ಆತನು ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡನು.
4. ನೀವು ಪಾಪಕ್ಕೆ ವಿರೋಧವಾಗಿ ಹೋರಾಡುವುದರಲ್ಲಿ ರಕ್ತವನ್ನು ಸುರಿಸುವಷ್ಟು ಹೋರಾಡಲಿಲ್ಲವಲ್ಲ.
5. ಮಕ್ಕಳಿಗೆ ಹೇಳುವಂತೆ ನಿಮಗೆ ಹೇಳಿದ ಎಚ್ಚರಿಕೆಯ ಮಾತುಗಳನ್ನು ಮರೆತುಬಿಟ್ಟಿದ್ದೀರೋ? ಅದೇನೆಂದರೆ, [PE][QS]“ನನ್ನ [† ಜ್ಞಾ. 3:11,12; ಯೋಬ 5:17: ]ಮಗನೇ, ಕರ್ತನ ಶಿಕ್ಷೆಯನ್ನು ಕಡೆಗಣಿಸಬೇಡ. [QE][QS2]ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.” [QE]
6. [QS]ಏಕೆಂದರೆ [‡ ಕೀರ್ತ 94:12; 119:67,75; ಪ್ರಕ 3:19: ]ಕರ್ತನು ಯಾರನ್ನು ಪ್ರೀತಿಸುತ್ತಾನೋ ಅವರನ್ನು ಶಿಕ್ಷಿಸುತ್ತಾನೆ. [QE][QS2]ತಾನು ಮಗನಂತೆ ಸ್ವೀಕರಿಸುವ ಪ್ರತಿಯೊಬ್ಬನನ್ನು ದಂಡಿಸುತ್ತಾನೆ ಎಂಬುದಾಗಿದೆ. [QE]
7. [MS] ನಿಮ್ಮ ಶಿಸ್ತಿಗಾಗಿಯೇ, ನಿಮಗೆ ಶಿಕ್ಷೆಯಾಗುತ್ತದೆಂದು ಅದನ್ನು ಸಹಿಸಿಕೊಳ್ಳಿರಿ. [§ ಧರ್ಮೋ 8:5; 2 ಸಮು 7:14; ಜ್ಞಾ. 13:24: ]ದೇವರು ನಿಮ್ಮನ್ನು ಮಕ್ಕಳೆಂದು ನಡೆಸುತ್ತಾನೆ. ಯಾಕೆಂದರೆ ತಂದೆಯಿಂದ ಶಿಕ್ಷೆ ಹೊಂದದ ಮಗನೆಲ್ಲಿದ್ದಾನೆ?
8. ಎಲ್ಲರೂ ಪಾಲುಗಾರರಬೇಕಾದ [* 1 ಪೇತ್ರ. 5:9: ]ಶಿಕ್ಷೆಯು ನಿಮಗುಂಟಾಗದಿದ್ದರೆ ನೀವು ಹಾದರದಿಂದ ಹುಟ್ಟಿದವರೇ ಹೊರತು ಆತನ ಮಕ್ಕಳಲ್ಲ.
9. ಇದು ಮಾತ್ರವಲ್ಲದೆ ನಮ್ಮನ್ನು ಶಿಕ್ಷಿಸಿದ ಲೌಕಿಕ ತಂದೆಗಳನ್ನು ನಾವು ಸನ್ಮಾನಿಸಿತ್ತೇವಲ್ಲ. ನಮ್ಮ ಆತ್ಮಗಳಿಗೆ [† ಅರಣ್ಯ 16:22: ]ತಂದೆಯಾಗಿರುವಾತನಿಗೆ ನಾವು ಇನ್ನೂ ಹೆಚ್ಚಾಗಿ ಅಧೀನರಾಗಿ [‡ ಯೆಶಾ 38:16: ]ಜೀವಿಸಬೇಕಲ್ಲವೇ?
10. ನಮ್ಮ ಲೌಕಿಕ ತಂದೆಗಳು [§ ಅಥವಾ, ಕೆಲವು ದಿನಗಳ ತನಕ. ]ಮನಸ್ಸಿಗೆ ಸರಿದೋರಿದಂತೆ ಕೆಲವು ಕಾಲ ಮಾತ್ರ ನಮ್ಮನ್ನು ಶಿಕ್ಷಿಸಿದರು. ಆದರೆ [* 2 ಪೇತ್ರ. 1:4; ಯಾಜ 11:44: ]ದೇವರು ತನ್ನ ಪರಿಶುದ್ಧತೆಯಲ್ಲಿ ನಾವು ಪಾಲುಗಾರರಾಗಬೇಕೆಂದು ನಮ್ಮ ಹಿತಕ್ಕಾಗಿಯೇ ಶಿಕ್ಷಿಸುತ್ತಾನೆ.
11. ಯಾವ ಶಿಕ್ಷೆಯಾದರೂ [† 1 ಪೇತ್ರ. 1:6: ]ತತ್ಕಾಲಕ್ಕೆ ಸಂತೋಷಕರವಾಗಿ ತೋರದೆ, ದುಃಖಕರವಾಗಿ ತೋರುತ್ತದೆ. ಆದರೆ ಶಿಸ್ತಿನ ಅಭ್ಯಾಸವನ್ನು ಹೊಂದಿದವರು, ಮುಂದೆ [‡ ಯಾಕೋಬ. 3:17,18: ]ಸಮಾಧಾನವುಳ್ಳ ನೀತಿಯ ಫಲವನ್ನು ಪಡೆಯುತ್ತಾರೆ.
12. ಆದುದ್ದರಿಂದ [§ ಯೆಶಾ 35:3; ಯೋಬ. 4:3,4: ]ಜೋಲುಬಿದ್ದ ಕೈಗಳನ್ನೂ ಮತ್ತು ನಡುಗುವ ಮೊಣಕಾಲುಗಳನ್ನೂ ಬಲಪಡಿಸಿರಿ.
13. [* ಜ್ಞಾ. 4:26,27: ]ನಿಮ್ಮ ಪಾದಗಳಿಗೆ ನೇರವಾದ ದಾರಿಯನ್ನು ಮಾಡಿಕೊಳ್ಳಿರಿ. ಹೀಗೆ ಮಾಡಿದರೆ ಕುಂಟುವ ಕಾಲು ಉಳುಕಿ ಹೋಗದೇ ವಾಸಿಯಾಗುವುದು. [ME]
14. {#1ದೇವರ ಕೃಪೆಯನ್ನು ತಿರಸ್ಕರಿಸುವುದರ ಬಗ್ಗೆ ಎಚ್ಚರಿಕೆ } [PS] [† ರೋಮಾ. 14:19: ]ಎಲ್ಲರೊಂದಿಗೆ ಸಮಾಧಾನದಿಂದ ಜೀವಿಸಲು ಮತ್ತು [‡ 1 ಥೆಸ. 4:7: ]ಪರಿಶುದ್ಧರಾಗಿರಲು ಪ್ರಯತ್ನಮಾಡಿರಿ. ಪರಿಶುದ್ಧತೆಯಿಲ್ಲದೆ ಯಾವನೂ ಕರ್ತನನ್ನು ಕಾಣುವುದಿಲ್ಲ.
15. ನಿಮ್ಮಲ್ಲಿ ಯಾವನೂ [§ ಇಬ್ರಿ. 4:1; 2 ಕೊರಿ 6:1; ಗಲಾ. 5:4: ]ದೇವರ ಕೃಪೆಯಿಂದ ತಪ್ಪಿ ಹಿಂಜಾರಿ ಹೋಗದಂತೆಯೂ, [* ಧರ್ಮೋ 29:18; ಅ. ಕೃ. 8:23: ]ಯಾವ ಕಹಿಯಾದ ಬೇರೂ ನಿಮ್ಮಲ್ಲಿ ಚಿಗುರಿ ಅಸಮಾಧಾನವನ್ನು ಹುಟ್ಟಿಸಿ ಅನೇಕರನ್ನು ಮಲಿನಪಡಿಸದಂತೆ ನೋಡಿಕೊಳ್ಳಿರಿ.
16. ಯಾವ ಜಾರನಾಗಲಿ, ಏಸಾವನಂಥ ಪ್ರಾಪಂಚಿಕನಾಗಲಿ ನಿಮ್ಮಲ್ಲಿ ಇರದಂತೆ ಜಾಗ್ರತೆ ವಹಿಸಿಕೊಳ್ಳಿರಿ. [† ಆದಿ 25:33: ]ಆ ಏಸಾವನು ಒಂದೇ ಒಂದು ಊಟಕ್ಕೋಸ್ಕರ ತನ್ನ ಚೊಚ್ಚಲುತನದ ಹಕ್ಕನ್ನು ಮಾರಿಬಿಟ್ಟನು.
17. [‡ ಆದಿ 27:34,36,38. ]ಅನಂತರದಲ್ಲಿ ತನ್ನ ತಂದೆಯ ಆಶೀರ್ವಾದವನ್ನು ಬಾಧ್ಯವಾಗಿ ಹೊಂದಬೇಕೆಂದು ಕಣ್ಣೀರು ಸುರಿಸುತ್ತಾ ಬೇಡಿಕೊಂಡರೂ, ಪಶ್ಚಾತ್ತಾಪಕ್ಕೆ [§ ಅಥವಾ. ಮಾನಸಾಂತರಕ್ಕೆ. ]ಮಾರ್ಗವಿಲ್ಲದೆ ನಿರಾಕರಿಸಲ್ಪಟ್ಟನೆಂದು ನೀವು ಬಲ್ಲವರಾಗಿದ್ದೀರಿ. [PE]
18. [PS](18-19)ನೀವು [* ವಿಮೋ 19:18; 20:18; ಧರ್ಮೋ 4:11; 5:22: ]ಮುಟ್ಟಬಹುದಾದ ಮತ್ತು ಬೆಂಕಿ ಹೊತ್ತಿದಂಥ ಬೆಟ್ಟಕ್ಕೂ, ಕಾರ್ಮೋಡ, ಕಗ್ಗತ್ತಲೆ, ಬಿರುಗಾಳಿ, [† ವಿಮೋ 19:16,19: ]ತುತ್ತೂರಿಯ ಶಬ್ದ, ಮಾತುಗಳ ಧ್ವನಿ ಎಂಬಿವುಗಳ ಬಳಿಗಲ್ಲ ನೀವು ಬಂದಿರುವುದು. ಆ ಧ್ವನಿಯನ್ನು ಕೇಳಿದವರು ಇನ್ನೆಂದಿಗೂ ಆ ಧ್ವನಿ [‡ ವಿಮೋ 20:19; ಧರ್ಮೋ 5:5,23,25; 18:16: ] ತಮ್ಮೊಂದಿಗೆ ಮಾತನಾಡುವುದೇ ಬೇಡವೆಂದು ಕೇಳಿಕೊಂಡರು.
19.
20. ಏಕೆಂದರೆ, [§ ವಿಮೋ 19:12,13: ]“ಒಂದು ಮೃಗವಾದರೂ ಬೆಟ್ಟವನ್ನು ಮುಟ್ಟಿದರೆ ಅದನ್ನು ಕಲ್ಲೆಸೆದು ಕೊಲ್ಲಬೇಕೆಂಬ” ವಿಧಿಯನ್ನು ಅವರಿಂದ ತಾಳಲಾಗಲಿಲ್ಲ.
21. ಇದಲ್ಲದೆ ಆ ದೃಶ್ಯವು ಅತಿ ಭಯಾನಕವಾಗಿದ್ದದರಿಂದ ಮೋಶೆಯು, [* ವಿಮೋ 19:16; ಧರ್ಮೋ 9:19: ]“ನಾನು ಹೆದರಿ, ನಡುಗುತ್ತಿದ್ದೇನೆ” ಎಂದು ಹೇಳಿದನು. [PE]
22. [PS]ಆದರೆ ನೀವು [† ಪ್ರಕ 14:1: ]ಚೀಯೋನ್ ಪರ್ವತಕ್ಕೂ, ಜೀವಸ್ವರೂಪನಾದ ದೇವರ ಪಟ್ಟಣವಾಗಿರುವ [‡ ಗಲಾ. 4:26: ]ಪರಲೋಕದ ಯೆರೂಸಲೇಮಿಗೂ, ಉತ್ಸವ ಸಂಘದಲ್ಲಿ ಕೂಡಿರುವ [§ ಯೂದ. 14: ]ಕೋಟ್ಯಾನುಕೋಟಿ ದೇವದೂತರ ಬಳಿಗೂ,
23. ಪರಲೋಕದಲ್ಲಿ [* ಲೂಕ 10:20: ]ಹೆಸರು ಬರೆಸಿಕೊಂಡಿರುವ [† ಇಬ್ರಿ. 2:12: ]ಚೊಚ್ಚಲ ಮಕ್ಕಳ ಸಭೆಗೂ, [‡ ಆದಿ 18:25; ಕೀರ್ತ 58:11: ]ಎಲ್ಲರಿಗೆ ನ್ಯಾಯಾಧಿಪತಿಯಾಗಿರುವ ದೇವರ ಬಳಿಗೂ, ಪರಿಪೂರ್ಣರಾಗಿರುವ ನೀತಿವಂತರ ಆತ್ಮಗಳ ಬಳಿಗೂ,
24. [§ ಇಬ್ರಿ. 8:6; 9:15 ]ಹೊಸ ಒಡಂಬಡಿಕೆಗೆ ಮಧ್ಯಸ್ಥನಾಗಿರುವ ಯೇಸುವಿನ ಬಳಿಗೂ, [* ಇಬ್ರಿ. 11:4; ಆದಿ 4:10: ]ಹೇಬೆಲನ ರಕ್ತಕ್ಕಿಂತ ಉತ್ತಮವಾಗಿ ಮಾತನಾಡುವ [† ಇಬ್ರಿ. 10:22: ]ಪ್ರೋಕ್ಷಣ ರಕ್ತದ ಬಳಿಗೂ ಬಂದಿದ್ದೀರಿ.
25. ಮಾತನಾಡುತ್ತಿರುವಾತನನ್ನು ನೀವು ಅಸಡ್ಡೆ ಮಾಡದಂತೆ ನೋಡಿಕೊಳ್ಳಿರಿ. ಏಕೆಂದರೆ [‡ ಅರಣ್ಯ 16:24-35; ಇಬ್ರಿ. 2:3: ]ಭೂಮಿಯ ಮೇಲೆ ದೈವೋಕ್ತಿಗಳನ್ನಾಡಿದವನನ್ನು ಅಸಡ್ಡೆಮಾಡಿದವರು ದಂಡನೆಗೆ ತಪ್ಪಿಸಿಕೊಳ್ಳಲಾಗದಿದ್ದರೆ, ಪರಲೋಕದಿಂದ ಮಾತನಾಡುವಾತನನ್ನು ಬಿಟ್ಟು ದೂರವಾಗಿ ನಾವು ಹೋದರೆ ದಂಡನೆಯಿಂದ ಹೇಗೆ ತಪ್ಪಿಸಿಕೊಂಡೆವು?
26. [§ ವಿಮೋ 19:18: ]ಆತನ ಧ್ವನಿಯು ಆಗ ಭೂಮಿಯನ್ನು ಕದಲಿಸಿತು. ಈಗಲಾದರೋ ಆತನು, [* ಹಗ್ಗಾ. 2:6: ]“ಇನ್ನೊಂದೇ ಸಾರಿ ನಾನು ಭೂಮಿಯನ್ನು ಮಾತ್ರವಲ್ಲದೆ ಪರಲೋಕವನ್ನೂ ಕದಲಿಸುತ್ತೇನೆ” ಎಂದು ವಾಗ್ದಾನಮಾಡಿ ಹೇಳಿದ್ದಾನೆ.
27. “ಇನ್ನೊಂದೇ ಸಾರಿ,” ಎಂಬ ಈ ಮಾತನ್ನು ಯೋಚಿಸಿದರೆ, ಕದಲಿಸಿರುವ ವಸ್ತುಗಳು ನಿರ್ಮಿತವಾದವುಗಳಾದ್ದರಿಂದ ತೆಗೆದುಹಾಕಲ್ಪಡುತ್ತವೆಂಬುದು ಸ್ಪಷ್ಟವಾಗುತ್ತದೆ. [† ಕೀರ್ತ 102:26: ]ಆಗ, ಕದಲಿಸದೇ ಇರುವ ವಸ್ತುಗಳು ಸ್ಥಿರವಾಗಿ ನಿಲ್ಲುವವು.
28. ಆದ್ದರಿಂದ [‡ ದಾನಿ. 2:44: ]ಯಾರೂ ಕದಲಿಸಲಾರದ ರಾಜ್ಯವನ್ನು ಪಡೆದುಕೊಳ್ಳುವವರಾದ ನಾವು [§ ಅಥವಾ, ದೇವರ ಕೃಪೆಯನ್ನು ಹಿಡಿದುಕೊಂಡು. ]ಕೃತಜ್ಞತೆಯುಳ್ಳವರಾಗಿ, ಆತನಿಗೆ ಸಮರ್ಪಕವಾದ ಆರಾಧನೆಯನ್ನು ಭಕ್ತಿಯಿಂದಲೂ ಮತ್ತು ಭಯದಿಂದಲೂ ಮಾಡೋಣ.
29. ಏಕೆಂದರೆ [* ಧರ್ಮೋ 4:24; 2 ಥೆಸ. 1:8: ]ನಮ್ಮ ದೇವರು ದಹಿಸುವ ಅಗ್ನಿಯಾಗಿದ್ದಾನೆ. [PE]