1. {#1ಸೆರೆಯಿಂದ ಹಿಂತಿರುಗಿ ಬಂದವರ ಪಟ್ಟಿ } [PS]ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಬಾಬಿಲೋನಿಗೆ ಸೆರೆ ಒಯ್ಯಲ್ಪಟ್ಟವರಲ್ಲಿ ಯೆರೂಸಲೇಮಿಗೂ ಯೆಹೂದ ಪ್ರಾಂತ್ಯದ ಸ್ವಂತ ಪಟ್ಟಣಗಳಿಗೂ ಸೆರೆಯಿಂದ ಹಿಂತಿರುಗಿ ಬಂದ (ಯೆಹೂದ) ಸಂಸ್ಥಾನದವರ ಜನಗಣತಿ.
2. ಅವರು ಜೆರುಬ್ಬಾಬೆಲ್, ಯೇಷೂವ, ನೆಹೆಮೀಯ, ಸೆರಾಯ, ರೆಗೇಲಾಯ, ಮೊರ್ದೆಕೈ, ಬಿಲ್ಷಾನ್, ಮಿಸ್ಪಾರ್, ಬಿಗ್ವೈ, ರೆಹೂಮ್ ಮತ್ತು ಬಾಣ ಎಂಬ ನಾಯಕರೊಡನೆ ಹಿಂತಿರುಗಿ ಬಂದವರು: [PE]
3. [LS] ಪರೋಷಿನವರು 2,172 [LE]
4. [LS] ಶೆಫಟ್ಯನವರು 372 [LE]
5. [LS] ಆರಹನವರು 775 [LE]
6. [LS] ಪಹತ್ ಮೋವಾಬಿನವರಾದ ಯೇಷೂವ ಮತ್ತು ಯೋವಾಬ್ ಸಂತಾನದವರು 2,812 [LE]
7. [LS] ಏಲಾಮಿನವರು 1,254 [LE]
8. [LS] ಜತ್ತೂವಿನವರು 945 [LE]
9. [LS] ಜಕ್ಕೈಯವರು 760 [LE]
10. [LS] ಬಾನೀಯವರು 642 [LE]
11. [LS] ಬೇಬೈಯವರು 623 [LE]
12. [LS] ಅಜ್ಗಾದಿನವರು 1,222 [LE]
13. [LS] ಅದೋನೀಕಾಮಿನವರು 666 [LE]
14. [LS] ಬಿಗ್ವೈಯವರು 2,056 [LE]
15. [LS] ಆದೀನನವರು 454 [LE]
16. [LS] ಆಟೇರಿನವರಾದ ಹಿಜ್ಕೀಯನ ಸಂತಾನದವರು 98 [LE]
17. [LS] ಬೇಚೈಯವರು 323 [LE]
18. [LS] ಯೋರನವರು 112 [LE]
19. [LS] ಹಾಷುಮಿನವರು 223 [LE]
20. [LS] ಗಿಬ್ಬಾರಿನವರು 95 [LE]
21. [LS] ಬೇತ್ಲೆಹೇಮಿನವರು 123 [LE]
22. [LS] ನೆಟೋಫ ಊರಿನವರು 56 [LE]
23. [LS] ಅನಾತೋತ್ ಊರಿನವರು 128 [LE]
24. [LS] ಅಜ್ಮಾವೆತಿನವರು 42 [LE]
25. [LS] ಕಿರ್ಯತ್ಯಾರೀಮ್, ಕೆಫೀರ ಮತ್ತು ಬೇರೋತ್ ಊರುಗಳವರು 743 [LE]
26. [LS] ರಾಮಾ ಮತ್ತು ಗೆಬ ಊರುಗಳವರು 621 [LE]
27. [LS] ಮಿಕ್ಮಾಸಿನವರು 122 [LE]
28. [LS] ಬೇತೇಲ್ ಮತ್ತು ಆಯಿ ಎಂಬ ಊರುಗಳವರು 223 [LE]
29. [LS] ನೆಬೋವಿನವರು 52 [LE]
30. [LS] ಮಗ್ಬೀಷಿನವರು 156 [LE]
31. [LS] ಬೇರೆ ಏಲಾಮಿನವರು 1,254 [LE]
32. [LS] ಹಾರಿಮನವರು 320 [LE]
33. [LS] ಲೋದ್, ಹಾದೀದ್ ಮತ್ತು ಓನೋ ಎಂಬ ಊರುಗಳವರು 725 [LE]
34. [LS] ಯೆರಿಕೋವಿನವರು 345 [LE]
35. [LS] ಸೆನಾಹನವರು 3,630 [LE]
36. [LS] ಯಾಜಕರಲ್ಲಿ - ಯೆದಾಯನವರಾದ ಯೇಷೂವನ ಮನೆಯವರು 973 [LE]
37. [LS] ಇಮ್ಮೇರನವರು 1,052 [LE]
38. [LS] ಪಷ್ಹೂರನವರು 1,247 [LE]
39. [LS] ಹಾರಿಮನವರು 1,017 [LE]
40. [LS] ಲೇವಿಯರಲ್ಲಿ: ಹೋದವ್ಯನವರಾದ ಯೇಷೂವ ಮತ್ತು ಕದ್ಮೀಯೇಲ್ ಇವರ ಸಂತಾನದವರು 74 [LE]
41. [LS] ಗಾಯಕರಲ್ಲಿ: ಆಸಾಫ್ಯರು 128 [LE]
42. [LS] ದ್ವಾರಪಾಲಕರ ಸಂತಾನದವರು: ಶಲ್ಲೂಮ್ ಸಂತಾನದವರು, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟ ಮತ್ತು ಶೋಬೈ ಇವರು ಒಟ್ಟು 139. [LE]
43. [PS]ದೇವಸ್ಥಾನದಾಸರಲ್ಲಿ: ಜೀಹ ಸಂತಾನದವರು ಮತ್ತು ಹಸೂಫ, ಟಬ್ಬಾವೋತ್,
44. ಕೇರೋಸ್, ಸೀಯಹಾ, ಪಾದೋನ್,
45. ಲೆಬಾನ, ಹಗಾಬ, ಅಕ್ಕೂಬ್,
46. ಹಾಗಾಬ, ಶಮ್ಲೈ, ಮತ್ತು ಹಾನಾನ್,
47. ಗಿದ್ದೇಲನ ಸಂತಾನದವರು, ಗಹರ್, ರೆವಾಯ,
48. ರೆಚೀನ್, ನೆಕೋದ, ಗಜ್ಜಾಮ್,
49. ಉಜ್ಜ, ಪಾಸೇಹ, ಬೇಸೈ,
50. ಅಸ್ನ, ಮೆಗೂನೀಮ್ ಮತ್ತು ನೆಫೀಸೀಮ್,
51. ಬಕ್ಬೂಕ್ ಸಂತಾನದವರು, ಹಕ್ಕೂಫ, ಹರ್ಹೂರ್,
52. ಬಚ್ಲೂತ್, ಮೆಹೀದ, ಹರ್ಷ,
53. ಬರ್ಕೋಸ್, ಸೀಸೆರ, ತೆಮಹ,
54. ನೆಚೀಹ ಮತ್ತು ಹಟೀಫ.
55. ಸೊಲೊಮೋನನ ದಾಸರ ಸಂತಾನದವರು; ಸೋಟೈ ಸಂತಾನದವರು, ಹಸ್ಲೋಫೆರೆತ್, ಪೆರೂದ,
56. ಯಾಲ, ದರ್ಕೋನ್ ಗಿದ್ದೇಲ್,
57. ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್ ಮತ್ತು ಆಮಿ.
58. ಎಲ್ಲಾ ಸಂತಾನದವರನ್ನು ದೇವಸ್ಥಾನದ ಸೇವೆಗಾಗಿ ನೇಮಿಸಿದರು ಮತ್ತು ಸೊಲೊಮೋನನ ದಾಸರೂ ಒಟ್ಟು 392.
59. ಉಳಿದ ತೇಲ್ಮೆಲಹ, ತೇಲ್ಹರ್ಷ, ಕೆರೂಬ್, ಅದ್ದಾನ್ ಮತ್ತು ಇಮ್ಮೇರ್ ಎಂಬ ಊರುಗಳಿಂದ ಬಂದವರಾಗಿ ತಮ್ಮ ಗೋತ್ರವಂಶಾವಳಿಗಳನ್ನು ತೋರಿಸಿದರು.
60. ಆದರೂ ತಾವು ಇಸ್ರಾಯೇಲರೆಂಬುದನ್ನು ಸ್ಥಾಪಿಸಿಲಾರದವರಾದ ದೆಲಾಯ, ಟೋಬೀಯ ಮತ್ತು ನೆಕೋದ ಇವರ ಸಂತಾನದವರು 652.
61. ಯಾಜಕರಲ್ಲಿ: ಹಬಯ್ಯ, ಹಕ್ಕೋಜ್ ಮತ್ತು ಬರ್ಜಿಲ್ಲೈ ಇವರ ಸಂತಾನದವರು. (ಈ ಬರ್ಜಿಲ್ಲೈ ಎಂಬವನು ಗಿಲ್ಯಾದ್ಯನಾದ ಬರ್ಜಿಲ್ಲೈಯ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಮದುವೆಮಾಡಿಕೊಂಡು ಅವನ ಹೆಸರನ್ನೂ ಇಟ್ಟುಕೊಂಡಿದ್ದನು.)
62. ಇವರು ತಮ್ಮ ವಂಶಾವಳಿಯ ಪತ್ರಗಳನ್ನು ಹುಡುಕಿದರೂ ಅವು ಸಿಕ್ಕದ ಕಾರಣ ಅಶುದ್ಧರೆಂದು ಯಾಜಕೋದ್ಯೋಗದಿಂದ ತಿರಸ್ಕರಿಸಲ್ಪಟ್ಟರು.
63. ಊರೀಮ್ ಮತ್ತು ತುಮ್ಮೀಮುಗಳ ಮೂಲಕ ದೈವನಿರ್ಣಯವನ್ನು ತಿಳಿಸಬಲ್ಲವನಾದ ಯಾಜಕನು ಬರುವ ತನಕ ಇವರು ಮಹಾಪರಿಶುದ್ಧ ಪದಾರ್ಥಗಳಲ್ಲಿ ಭೋಜನ ಮಾಡಬಾರದೆಂಬುದಾಗಿ ದೇಶಾಧಿಪತಿಯು ತೀರ್ಪುಮಾಡಿದನು. [PE]
64. [PS]ಸರ್ವಸಮೂಹದವರ ಒಟ್ಟು ಸಂಖ್ಯೆಯು ನಲ್ವತ್ತೆರಡು ಸಾವಿರದ ಮುನ್ನೂರ ಆರವತ್ತು.
65. ಈ ಸಂಖ್ಯೆಯಲ್ಲಿ ಲೆಕ್ಕಿಸಲ್ಪಡದ ಅವರ ದಾಸದಾಸಿಯರು ಏಳು ಸಾವಿರದ ಮುನ್ನೂರ ಮೂವತ್ತೇಳು ಜನರು. ಅವರಲ್ಲಿ ಗಾಯಕರೂ, ಗಾಯಕಿಯರೂ ಇನ್ನೂರು ಜನರು ಇದ್ದರು.
66. ಅವರಿಗೆ ಏಳು ನೂರ ಮೂವತ್ತಾರು ಕುದುರೆಗಳೂ, ಇನ್ನೂರ ನಲ್ವತ್ತೈದು ಹೇಸರಗತ್ತೆಗಳೂ,
67. ನಾನೂರ ಮೂವತ್ತೈದು ಒಂಟೆಗಳೂ, ಆರು ಸಾವಿರದ ಏಳು ನೂರ ಇಪ್ಪತ್ತು ಕತ್ತೆಗಳೂ ಇದ್ದವು.
68. ಗೋತ್ರಪ್ರಧಾನರಲ್ಲಿ ಕೆಲವರು ಯೆರೂಸಲೇಮಿನಲ್ಲಿ ಯೆಹೋವನ ಆಲಯವಿದ್ದ ಸ್ಥಳಕ್ಕೆ ಬಂದಾಗ ದೇವಾಲಯವನ್ನು ಪುನಃ ಅದರ ಸ್ಥಳದಲ್ಲಿ ಕಟ್ಟುವುದಕ್ಕೋಸ್ಕರ ಕಾಣಿಕೆಗಳನ್ನು ಕೊಟ್ಟರು.
69. ಅವರು ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಕಟ್ಟಡದ ಭಂಡಾರಕ್ಕೆ ಕೊಟ್ಟದ್ದು ಅರುವತ್ತೊಂದು ಸಾವಿರ ಬಂಗಾರದ ಪವನುಗಳು,[* ಅರುವತ್ತೊಂದು ಸಾವಿರ ಬಂಗಾರದ ಪವನುಗಳು, ಅಂದರೆ 500 ಕಿಲೋಗ್ರಾಂ. ] ಎರಡು ಲಕ್ಷದ ಐವತ್ತು ಸಾವಿರ ತೊಲಾ ಬೆಳ್ಳಿ [† ಎರಡು ಲಕ್ಷದ ಐವತ್ತು ಸಾವಿರ ತೊಲಾ ಬೆಳ್ಳಿ ಆದರೆ 2,800 ಕಿಲೋಗ್ರಾಂ. ] ಮತ್ತು ನೂರು ಯಾಜಕವಸ್ತ್ರಗಳು. [PE]
70. [PS]ದೇವಸ್ಥಾನದ ಸೇವೆಗಾಗಿ ಇದ್ದ ಯಾಜಕರು, ಲೇವಿಯರು, ಗಾಯಕರು, ದ್ವಾರಪಾಲಕರು ಮತ್ತು ಸಾಧಾರಣಜನರಲ್ಲಿ ಕೆಲವರು ಅವರವರಿಗೆ ನೇಮಕವಾದ ಪಟ್ಟಣಗಳಲ್ಲಿ ವಾಸಿಸಿದರು; ಬೇರೆ ಎಲ್ಲಾ ಇಸ್ರಾಯೇಲರು ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸಿದರು. [PE]