1. {ನೂತನ ದೇವಾಲಯದ ವಿಧಾನ} PS ನಾವು ಸೆರೆಯಾದ ಇಪ್ಪತ್ತೈದನೆಯ ವರ್ಷದ, ಮೊದಲನೆಯ ತಿಂಗಳಿನ, ಹತ್ತನೆಯ ದಿನದಲ್ಲಿ, ಪಟ್ಟಣವು ಹಾಳಾದ ಮೇಲೆ ಹದಿನಾಲ್ಕನೆಯ ವರ್ಷದ ಆ ದಿನದಲ್ಲೇ ಯೆಹೋವನ ಹಸ್ತಸ್ಪರ್ಶದಿಂದ ನಾನು ಪರವಶನಾಗಲು, ಆತನು ನನ್ನನ್ನು ಅಲ್ಲಿಗೆ ಬರಮಾಡಿದನು.
|
2. ಯೆಹೋವನು ನನ್ನನ್ನು ಇಸ್ರಾಯೇಲ್ ದೇಶಕ್ಕೆ ತಂದು, ಅತ್ಯುನ್ನತ ಪರ್ವತದ ಮೇಲೆ ಇಳಿಸಿದನೆಂದು ದೇವರ ದರ್ಶನದಲ್ಲಿ ನನಗೆ ಕಂಡುಬಂದಿತು. ದಕ್ಷಿಣದ ಕಡೆ ಆ ಪರ್ವತದ ಮೇಲೆ ಪಟ್ಟಣದಂತಿರುವ ಕಟ್ಟಡಗಳು ಕಾಣಿಸಿತು.
|
3. ಆಮೇಲೆ ಆತನು ನನ್ನನ್ನು ಅಲ್ಲಿಗೆ ತಂದಾಗ, ಇಗೋ, ತಾಮ್ರದಂತೆ ಹೊಳೆಯುವ ಒಬ್ಬ ಪುರುಷನು ನಾರಿನ ನೂಲನ್ನು, ಅಳತೆಯ ಕೋಲನ್ನೂ ಕೈಯಲ್ಲಿ ಹಿಡಿದುಕೊಂಡು ಬಾಗಿಲಲ್ಲೇ ನಿಂತುಕೊಂಡಿದ್ದನು.
|
4. ಆ ಪುರುಷನು ನನಗೆ, “ನರಪುತ್ರನೇ, ನೀನು ಕಣ್ಣಿಟ್ಟು ನೋಡು, ಕಿವಿಗೊಟ್ಟು ಕೇಳು; ನಾನು ನಿನಗೆ ತೋರಿಸುವುದನ್ನೆಲ್ಲಾ ಮನಸ್ಸಿಟ್ಟು ತಿಳಿದುಕೋ. ನಾನು ನಿನಗೆ ತೋರಿಸುವುದನ್ನು ನೀನು ನೋಡಬೇಕೆಂದೇ ಇಲ್ಲಿಗೆ ಬರಮಾಡಿದ್ದೇನೆ. ನೀನು ನೋಡುವುದನ್ನೆಲ್ಲಾ ಇಸ್ರಾಯೇಲ್ ವಂಶದವರಿಗೆ ಪ್ರಕಟಿಸು” ಎಂದು ಹೇಳಿದನು. PS
|
5. {ಪೂರ್ವದಿಕ್ಕಿನ ಹೆಬ್ಬಾಗಿಲು} PS ಇಗೋ, ಒಂದು ಗೋಡೆಯು ಆ ಕಟ್ಟಡವನ್ನು ಸುತ್ತಿಕೊಂಡಿತ್ತು. ಆ ಪುರುಷನ ಕೈಯಲ್ಲಿ ಆರು ಮೊಳ ಉದ್ದದ ಅಳತೆ ಕೋಲು ಇತ್ತು. (ಉದ್ದಮೊಳ ಅಂದರೆ ಮೊಳದ ಮೇಲೆ ಒಂದು ಹಿಡಿ ಉದ್ದ); ಅವನು ಆ ಗೋಡೆಯ ಅಗಲವನ್ನು ಅಳತೆ ಮಾಡಿದಾಗ ಅದರ ಅಗಲವೂ ಮತ್ತು ಎತ್ತರವೂ ಒಂದೇ ಕೋಲಾಗಿತ್ತು.
|
6. ಆಮೇಲೆ ಅವನು ಪೂರ್ವದಿಕ್ಕಿನ ಹೆಬ್ಬಾಗಿಲಿಗೆ ಬಂದು, ಮೆಟ್ಟಿಲುಗಳನ್ನು ಹತ್ತಿ, ಹೊಸ್ತಿಲಿನ ಅಗಲವನ್ನು ಅಳೆದನು. ಅದು ಒಂದೇ ಕೋಲು ಅಗಲವಾಗಿತ್ತು. ಅಗಲವಾದ ಹೊಸ್ತಿಲಿನ ಬಾಗಿಲೂ ಅಲ್ಲಿ ಇತ್ತು.
|
7. ಅಲ್ಲಿ ಗೋಡೆಯಲ್ಲಿದ್ದ ಒಂದೊಂದು ಕೋಣೆಯು ಒಂದು ಕೋಲು ಉದ್ದವಾಗಿಯೂ, ಒಂದು ಕೋಲು ಅಗಲವಾಗಿಯೂ ಇತ್ತು. ದೇವಸ್ಥಾನಕ್ಕೆ ಎದುರಾಗಿರುವ ಹೆಬ್ಬಾಗಿಲ ಕೈಸಾಲೆಯ ಹೊಸ್ತಿಲಿನ ಅಗಲವು ಒಂದು ಕೋಲು. ಆ ಗೋಡೆಕೋಣೆಗಳು ಒಂದಕ್ಕೊಂದು ಐದೈದು ಮೊಳ ದೂರವಾಗಿದ್ದವು; ದೇವಸ್ಥಾನಕ್ಕೆ ಎದುರಾಗಿರುವ ಹೆಬ್ಬಾಗಿಲ ಕೈಸಾಲೆಯ ಹೊಸ್ತಿಲಿನ ಅಗಲವು ಒಂದು ಕೋಲು. PEPS
|
9. ಆಮೇಲೆ ಅವನು ಹೆಬ್ಬಾಗಿಲ ಕೈಸಾಲೆಯನ್ನು ಎಂಟು ಮೊಳವೆಂದೂ; ಅದರ ಕಂಬಗಳನ್ನು ಎರಡು ಮೊಳವೆಂದೂ ಅಳೆದನು. ಹೆಬ್ಬಾಗಿಲಿನ ಕೈಸಾಲೆಯು ದೇವಸ್ಥಾನಕ್ಕೆ ಎದುರಾಗಿತ್ತು. PEPS
|
10. ಪೂರ್ವದಿಕ್ಕಿನ ಹೆಬ್ಬಾಗಿಲಿನ ಎರಡು ಪಕ್ಕಗಳಲ್ಲಿ ಮೂರು ಗೋಡೆಕೋಣೆಗಳಿದ್ದವು. ಆ ಮೂರಕ್ಕೂ ಒಂದೇ ಅಳತೆ ಇತ್ತು. ಎರಡು ಪಕ್ಕಗಳಲ್ಲಿನ ಕಂಬಗಳೂ ಒಂದೇ ಅಳತೆಯಾಗಿದ್ದವು.
|
13. ಅವನು ಒಂದು ಕಡೆಯ ಗೋಡೆಕೋಣೆಗಳ ಮಾಳಿಗೆಯ ಹೊರಗಡೆಯಿಂದ ಇನ್ನೊಂದು ಕಡೆಯ ಗೋಡೆಕೋಣೆಗಳ ಮಾಳಿಗೆಯ ಹೊರಗಡೆ ಅಂದರೆ ಒಂದು ಕೋಣೆಯ ಬಾಗಿಲಿಂದ ಇನ್ನೊಂದು ಕೋಣೆಯ ಬಾಗಿಲಿಗೆ ಹೆಬ್ಬಾಗಿಲಿನ ಅಗಲವನ್ನು ಅಳೆಯಲು ಇಪ್ಪತ್ತೈದು ಮೊಳವಾಗಿತ್ತು. PEPS
|
14. ಅಂಗಳದಲ್ಲಿನ ಕಂಬಗಳನ್ನು ಅಳತೆ ಮಾಡಲು ಅರವತ್ತು ಮೊಳವಿದ್ದವು; ಅದನ್ನು ಹೆಬ್ಬಾಗಿಲಿನ ಸುತ್ತುಮುತ್ತಲಿರುವ ಕಂಬದವರೆಗೂ ಅಳೆದನು.
|
16. ಗೋಡೆ ಕೋಣೆಗಳಲ್ಲಿಯೂ ಒಳ ಎರಡು ಕಡೆಯ ನಿಲುವು ಕಂಬಗಳಲ್ಲಿಯೂ, ಕೈಸಾಲೆಗಳಲ್ಲಿಯೂ ಸಹ ಒಳಗಡೆ ಸುತ್ತಲೂ ಇಕ್ಕಟಾದ ಕಿಟಕಿಗಳಿದ್ದವು. ಒಂದೊಂದು ಗೋಡೆಯ ಮೇಲೆ ಖರ್ಜೂರ ಮರಗಳ ಚಿತ್ರಗಳಿದ್ದವು. PS
|
17. {ಹೊರಗಿನ ಅಂಗಳ} PS ಆ ಮೇಲೆ ಅವನು ನನ್ನನ್ನು ಹೊರಗಿನ ಅಂಗಳಕ್ಕೆ ಕರೆದು ತಂದನು; ಇಗೋ, ಕೋಣೆಗಳೂ ಅಂಗಳದ ಸುತ್ತಲೂ ಕಲ್ಲುಹಾಸಿದ ನೆಲವೂ ಕಾಣಿಸಿದವು; ಕಲ್ಲುಹಾಸಿದ ನೆಲದ ಮೇಲೆ ಒಟ್ಟಾಗಿ ಮೂವತ್ತು ಕೊಠಡಿಗಳಿದ್ದವು.
|
18. ಆ ಕೆಳಗಣ ಕಲ್ಲುಹಾಸಿದ ನೆಲವೂ ಹೆಬ್ಬಾಗಿಲುಗಳ ಎರಡು ಪಕ್ಕಗಳವರೆಗೂ ಹಾಸಲ್ಪಟಿತ್ತು. ಅದರ ಅಗಲವೂ ಬಾಗಿಲುಗಳ ಉದ್ದಕ್ಕೆ ಸಮನಾಗಿತ್ತು. ಇದು ಕೆಳಗಿನ ಕಲ್ಲುಹಾಸಿದ ನೆಲವಾಗಿತ್ತು.
|
19. ಅವನು ಪೂರ್ವಕ್ಕೂ, ಉತ್ತರಕ್ಕೂ ಕೆಳಗಣ ಹೆಬ್ಬಾಗಿಲಿನ ಒಳಗಡೆಯಿಂದ ಒಳಗಣ ಅಂಗಳದ ಹೊರಗಡೆಯ ತನಕ ಅಳೆಯಲು, ಅದು ನೂರು ಮೊಳವಿತ್ತು. PS
|
21. ಅದರೊಳಗೆ ಎರಡು ಕಡೆ ಮೂರು ಗೋಡೆಕೋಣೆಗಳಿದ್ದವು; ಅಲ್ಲಿನ ಕಂಬಗಳೂ ಕೈಸಾಲೆಯೂ ಮೊದಲನೆಯ ಹೆಬ್ಬಾಗಿಲಿನ ಅಳತೆಯಂತಿದ್ದವು. ಆ ಹೆಬ್ಬಾಗಿಲಿನ ಉದ್ದವೂ ಐವತ್ತು ಮೊಳ, ಅಗಲವೂ ಇಪ್ಪತ್ತೈದು ಮೊಳವಾಗಿತ್ತು. PEPS
|
22. ಅಲ್ಲಿನ ಕಿಟಕಿಗಳೂ, ಕೈಸಾಲೆಯೂ, ಚಿತ್ರಿತವಾಗಿದ್ದ ಖರ್ಜೂರ ಮರಗಳೂ ಮೂಡಣ ಹೆಬ್ಬಾಗಿಲಿನ ಕಡೆಗೆ ಅಭಿಮುಖವಾಗಿದ್ದವು. ಅವರು ಏಳು ಮೆಟ್ಟಿಲುಗಳನ್ನು ಹತ್ತಿ, ಅಲ್ಲಿಗೆ ಸೇರುತ್ತಿದ್ದರು. ಕೈಸಾಲೆಯು ಅದರ ಒಳಗಡೆಯಿತ್ತು.
|
23. ಹೊರಗಣ ಅಂಗಳದ ಉತ್ತರ ಮತ್ತು ಪೂರ್ವಕ್ಕಿರುವ ಹೆಬ್ಬಾಗಿಲುಗಳಿಗೆ ಎದುರಾಗಿ ಒಳಗಣ ಹೆಬ್ಬಾಗಿಲುಗಳು ಇದ್ದವು; ಒಂದು ಬಾಗಿಲಿನಿಂದ ಎದುರು ಬಾಗಿಲಿಗೆ ನೂರು ಮೊಳ ಅಳತೆ ಮಾಡಿದನು. PS
|
24. {ದಕ್ಷಿಣದ ಬಾಗಿಲು} PS ಆ ಮೇಲೆ ಅವನು ನನ್ನನ್ನು ದಕ್ಷಿಣಕ್ಕೆ ಕರೆ ತಂದನು. ಇಗೋ, ಅಲ್ಲಿಯೂ ಒಂದು ಹೆಬ್ಬಾಗಿಲು ಇತ್ತು; ಅವನು ಅಲ್ಲಿನ ಕಂಬಗಳನ್ನೂ, ಕೈಸಾಲೆಯನ್ನೂ ಈ ಅಳತೆಯ ಪ್ರಕಾರವೇ ಅಳೆದನು.
|
25. ಅದರ ಕೈಸಾಲೆಗಳಲ್ಲಿಯೂ ಸುತ್ತಲೂ ಕಿಟಕಿಗಳೇ ಇದ್ದವು; ಅದರ ಉದ್ದವೂ ಐವತ್ತು ಮೊಳ ಮತ್ತು ಅಗಲವೂ ಇಪ್ಪತ್ತೈದು ಮೊಳವಾಗಿತ್ತು.
|
26. ಅಲ್ಲಿ ಹತ್ತುವುದಕ್ಕೆ ಏಳು ಮೆಟ್ಟಿಲುಗಳಿದ್ದವು. ಕೈಸಾಲೆಯ ಎರಡು ಪಕ್ಕದ ಕಂಬಗಳಲ್ಲಿ ಖರ್ಜೂರ ಮರಗಳ ಚಿತ್ರಗಳಿದ್ದವು.
|
27. ಒಳಗಿನ ಅಂಗಳದಲ್ಲಿ ದಕ್ಷಿಣದ ಕಡೆಗೆ ಹೆಬ್ಬಾಗಿಲಿತ್ತು; ದಕ್ಷಿಣದ ಒಂದು ಬಾಗಿಲಿಂದ ಮತ್ತೊಂದು ಬಾಗಿಲಿಗೆ ನೂರು ಮೊಳ ಅಳೆದನು. PS
|
28. {ಒಳಗಿನ ಅಂಗಳದ ಬಾಗಿಲು} PS ಆಮೇಲೆ ಅವನು ನನ್ನನ್ನು ದಕ್ಷಿಣ ಬಾಗಿಲಿನ ಮಾರ್ಗವಾಗಿ ಒಳಗಣ ಅಂಗಳಕ್ಕೆ ಕರೆದು ತಂದನು. ಅವನು ಆ ದಕ್ಷಿಣ ಹೆಬ್ಬಾಗಿಲನ್ನೂ, ಅಲ್ಲಿನ ಗೋಡೆಕೋಣೆ, ಕಂಬ, ಕೈಸಾಲೆ ಇವುಗಳನ್ನೂ ಅಳೆಯಲು, ಅದರ ಅಳತೆಗಳೆಲ್ಲ ಸಮನಾಗಿದ್ದವು.
|
29. ಅದರಲ್ಲಿಯೂ, ಅದರ ಕೈಸಾಲೆಯಲ್ಲಿಯೂ ಕಿಟಕಿಗಳು ಎಲ್ಲಾ ಕಡೆಯಿದ್ದವು; ಹೆಬ್ಬಾಗಿಲಿನ ಉದ್ದ ಐವತ್ತು ಮೊಳ ಮತ್ತು ಅಗಲ ಇಪ್ಪತ್ತೈದು ಮೊಳವಾಗಿತ್ತು.
|
31. ಆ ಹೆಬ್ಬಾಗಿಲ ಕೈಸಾಲೆಯು ಹೊರಗಣ ಅಂಗಳಕ್ಕೆ ಅಭಿಮುಖವಾಗಿತ್ತು. ಅದರ ಕಂಬಗಳಲ್ಲಿ ಖರ್ಜೂರ ಮರಗಳು ಚಿತ್ರಿತವಾಗಿದ್ದವು. ಅಲ್ಲಿ ಹತ್ತುವುದಕ್ಕೆ ಎಂಟು ಮೆಟ್ಟಿಲುಗಳಿದ್ದವು.
|
32. ಅವನು ನನ್ನನ್ನು ಒಳಗಣ ಅಂಗಳದ ಪೂರ್ವಕ್ಕೆ ಕರೆದು ತಂದು, ಅಲ್ಲಿನ ಹೆಬ್ಬಾಗಿಲನ್ನೂ ಅಳೆಯಲು, ಅದರ ಅಳತೆಗಳೆಲ್ಲಾ ಒಂದೇ ಆಗಿ ಕಂಡುಬಂದವು.
|
33. ಅದರಲ್ಲಿಯೂ ಮತ್ತು ಅದರ ಕೈಸಾಲೆಯಲ್ಲಿಯೂ ಎಲ್ಲಾ ಕಡೆ ಕಿಟಕಿಗಳಿದ್ದವು; ಆ ಹೆಬ್ಬಾಗಿಲಿನ ಉದ್ದ ಐವತ್ತು ಮೊಳ ಮತ್ತು ಅಗಲ ಇಪ್ಪತ್ತೈದು ಮೊಳವಾಗಿತ್ತು.
|
34. ಅದರ ಕೈಸಾಲೆಯು ಹೊರಗಿನ ಅಂಗಳಕ್ಕೆ ಅಭಿಮುಖವಾಗಿತ್ತು; ಕೈಸಾಲೆಯ ಎದುರುಬದುರಿನ ಕಂಬಗಳಲ್ಲಿ ಖರ್ಜೂರ ಮರಗಳು ಚಿತ್ರಿತವಾಗಿದ್ದವು; ಅಲ್ಲಿ ಹತ್ತುವುದಕ್ಕೆ ಎಂಟು ಮೆಟ್ಟಿಲುಗಳಿದ್ದವು.
|
35. ಆ ಮೇಲೆ ಅವನು ನನ್ನನ್ನು ಉತ್ತರದ ಬಾಗಿಲಿಗೆ ಕರೆದು ತಂದನು. ಅದರ ಗೋಡೆಕೋಣೆ, ಕಂಬ, ಕೈಸಾಲೆ ಇವುಗಳನ್ನೂ ಆ ಅಳತೆಯ ಪ್ರಕಾರವೇ ಅಳೆದನು.
|
36. ಅಲ್ಲಿನ ಕೋಣೆಗಳ, ಕಂಬಗಳ, ಕೈಸಾಲೆಗಳ ಎಲ್ಲಾ ಕಡೆಗಳಲ್ಲಿಯೂ ಕಿಟಕಿಗಳಿದ್ದವು; ಅದರ ಉದ್ದ ಐವತ್ತು ಮೊಳ ಮತ್ತು ಅಗಲ ಇಪ್ಪತ್ತೈದು ಮೊಳವಾಗಿತ್ತು.
|
37. ಅದರ ಕಂಬಗಳು, ಕೈಸಾಲೆಗಳು ಹೊರಗಣ ಅಂಗಳಕ್ಕೆ ಅಭಿಮುಖವಾಗಿದ್ದವು; ಆ ಎದುರುಬದುರಿನ ಕಂಬಗಳಲ್ಲಿ ಖರ್ಜೂರ ಮರಗಳು ಚಿತ್ರಿತವಾಗಿದ್ದವು; ಅಲ್ಲಿ ಹತ್ತುವುದಕ್ಕೆ ಎಂಟು ಮೆಟ್ಟಿಲುಗಳಿದ್ದವು. PS
|
38. {ಯಜ್ಞಗಳನ್ನು ಸಿದ್ಧಪಡಿಸುವ ಕೋಣೆಗಳು} PS ಹೆಬ್ಬಾಗಿಲ ಕಂಬಗಳ ಪಕ್ಕದಲ್ಲಿ ಒಂದು ಕೋಣೆಯೂ, ಅದರ ದ್ವಾರವೂ ಕಾಣಿಸಿದವು. ಆ ಕೋಣೆಯೊಳಗೆ ಸರ್ವಾಂಗಹೋಮ ಪಶುಗಳ ಮಾಂಸವನ್ನು ತೊಳೆಯುತ್ತಿದ್ದರು.
|
39. ಹೆಬ್ಬಾಗಿಲಿನ ಕೈಸಾಲೆಯಲ್ಲಿ ಎರಡು ಕಡೆಯಲ್ಲಿಯೂ ಎರಡೆರಡು ಪೀಠಗಳಿದ್ದವು; ಅವುಗಳ ಮೇಲೆ ಸರ್ವಾಂಗಹೋಮ ಪಶು, ದೋಷಪರಿಹಾರಕ ಯಜ್ಞ ಪಶು, ಪ್ರಾಯಶ್ಚಿತ್ತಯಜ್ಞ ಪಶು ಇವುಗಳನ್ನು ವಧಿಸುತ್ತಿದ್ದರು.
|
41. ಹೆಬ್ಬಾಗಿಲಿನ ಎರಡು ಪಕ್ಕಗಳಲ್ಲಿ ನಾಲ್ಕು ನಾಲ್ಕು ಪೀಠಗಳು, ಒಟ್ಟಿಗೆ ಯಜ್ಞಪಶುಗಳನ್ನು ವಧಿಸುವ ಎಂಟು ಪೀಠಗಳಿದ್ದವು.
|
42. ಇದಲ್ಲದೆ ಸರ್ವಾಂಗಹೋಮಕ್ಕಾಗಿ ಉಪಯುಕ್ತವಾದ ಕೆತ್ತಿದ ಕಲ್ಲಿನ ನಾಲ್ಕು ಪೀಠಗಳಿದ್ದವು. ಅವುಗಳ ಅಗಲ ಒಂದುವರೆ ಮೊಳ, ಉದ್ದ ಒಂದುವರೆ ಮೊಳ, ಎತ್ತರ ಒಂದುವರೆ ಮೊಳವಾಗಿತ್ತು. ಅವುಗಳ ಮೇಲೆ ಸರ್ವಾಂಗಹೋಮ ಪಶುಗಳನ್ನು ವಧಿಸುವ ಉಪಕರಣಗಳನ್ನು ಇಡುತ್ತಿದ್ದರು.
|
44. {ಯಾಜಕರ ಕೋಣೆಗಳು} PS ಆ ಮೇಲೆ ಅವನು ನನ್ನನ್ನು ಒಳಗಣ ಅಂಗಳಕ್ಕೆ ಕರೆ ತಂದನು. ಇಗೋ, ಅಲ್ಲಿ ಎರಡು ಕೋಣೆಗಳು ಕಾಣಿಸಿದವು. ಉತ್ತರದ ಹೆಬ್ಬಾಗಿಲ ಪಕ್ಕದಲ್ಲಿ ಒಂದು ಕೋಣೆಯು ದಕ್ಷಿಣಕ್ಕೆ ಅಭಿಮುಖವಾಗಿತ್ತು; ಒಂದು ಕೋಣೆಯು ಉತ್ತರಕ್ಕೂ, ಇನ್ನೊಂದು ಕೋಣೆಯು ದಕ್ಷಿಣಕ್ಕೂ ಇತ್ತು.
|
45. ಆಗ ಅವನು ನನಗೆ, “ದಕ್ಷಿಣಕ್ಕೆ ಅಭಿಮುಖವಾಗಿರುವ ಈ ಕೋಣೆಯು ದೇವಾಲಯದ ಮೇಲ್ವಿಚಾರಣೆಯನ್ನು ನಡೆಸುವ ಯಾಜಕರಿಗೆ ನೇಮಕವಾಗಿದೆ.
|
46. ಉತ್ತರಕ್ಕೆ ಅಭಿಮುಖವಾಗಿರುವ ಆ ಕೋಣೆಯು ಯಜ್ಞವೇದಿಯ ಕಾರ್ಯದರ್ಶಿಗಳಾದ ಯಾಜಕರಿಗೆ ನೇಮಕವಾಗಿದೆ. ಚಾದೋಕನ ಸಂತತಿಯವರಾದ ಇವರು ಲೇವಿಯ ಕುಲದವರಲ್ಲಿ ಯೆಹೋವನ ಸನ್ನಿಧಿ ಸೇವಕರಾಗಿದ್ದಾರೆ” ಎಂದು ಹೇಳಿದನು.
|
47. ಆ ಮೇಲೆ ಅವನು ಅಂಗಳವನ್ನು ಅಳೆಯಲು, ಅದು ನೂರು ಮೊಳ ಉದ್ದವಾಗಿಯೂ, ನೂರು ಮೊಳ ಅಗಲವಾಗಿಯೂ ಚಚ್ಚೌಕವಾಗಿತ್ತು. ಯಜ್ಞವೇದಿಯು ದೇವಸ್ಥಾನದ ಮುಂದೆ ಇತ್ತು. PS
|
48. {ದೇವಾಲಯದ ದ್ವಾರಮಂಟಪ} PS ಕೂಡಲೆ ಅವನು ನನ್ನನ್ನು ದೇವಸ್ಥಾನದ ದ್ವಾರಮಂಟಪಕ್ಕೆ ಕರೆ ತಂದನು. ಅದನ್ನು ಅಳೆಯಲು, ಅದರ ಎದುರುಬದುರಿನ ಕಂಬಗಳ ಅಗಲ ಐದೈದು ಮೊಳ, ಬಾಗಿಲಿನ ಎರಡು ಪಕ್ಕದ ಗೋಡೆಗಳ ಅಗಲ ಮೂರು ಮೂರು ಮೊಳವಾಗಿತ್ತು.
|
49. ದ್ವಾರಮಂಟಪದ ಉದ್ದ ಇಪ್ಪತ್ತು ಮೊಳ, ಅಗಲ ಹನ್ನೊಂದು ಮೊಳ ಇದ್ದವು. ಹತ್ತು ಮೆಟ್ಟಿಲುಗಳನ್ನು ಹತ್ತಿ, ಅಲ್ಲಿಗೆ ಸೇರುತ್ತಿದ್ದರು. ಎರಡು ಕಡೆಯ ಕಂಬಗಳ ಪಕ್ಕದಲ್ಲಿ ಒಂದೊಂದು ಉಪಸ್ತಂಭವು ಇತ್ತು. PE
|