1. {ಫರೋಹನಿಗಾಗಿ ಶೋಕ ಗೀತೆ} PS (ಯೆಹೋಯಾಖೀನನು ಸೆರೆಯಾದ) ಹನ್ನೆರಡನೆಯ ವರ್ಷದ, ಹನ್ನೆರಡನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು, “ನರಪುತ್ರನೇ, ನೀನು ಐಗುಪ್ತದ
|
2. ಅರಸನಾದ ಫರೋಹನ ವಿಷಯವಾಗಿ ಶೋಕ ಗೀತೆಯನ್ನು ಹಾಡಿ ಅವನಿಗೆ ಹೀಗೆ ನುಡಿ,
‘ನೀನು ಜನಾಂಗಗಳಲ್ಲಿ ಸಿಂಹದ ಮರಿಗೆ ಸಮನಾಗಿರುವೆ ಮತ್ತು ಸಮುದ್ರಗಳಲ್ಲಿರುವ ತಿಮಿಂಗಿಲದ ಹಾಗಿರುವೆ. ನೀನಿದ್ದ ನದಿಗಳನ್ನು ಭೇದಿಸಿಕೊಂಡು ಬಂದು, ನೀರನ್ನು ನಿನ್ನ ಕಾಲುಗಳಿಂದ ಕಲಕಿ, ಜನಾಂಗಗಳ ಹೊಳೆಗಳನ್ನೂ ತುಳಿದು ಬದಿಮಾಡಿದೆ.’ ” PEPS |
3. ಕರ್ತನಾದ ಯೆಹೋವನು ಇಂತೆನ್ನುತ್ತಾನೆ,
“ಗುಂಪಾಗಿ ಕೂಡಿದ ಬಹು ಜನಾಂಗಗಳವರ ಮೇಲೆ ನಾನು ನನ್ನ ಬಲೆಯನ್ನು ಬೀಸುವೆನು; ಅವರು ನಿನ್ನನ್ನು ಆ ಬಲೆಯಿಂದ ಮೇಲಕ್ಕೆ ಎಳೆಯುವರು. |
4. ನಾನು ನಿನ್ನನ್ನು ನೆಲದ ಮೇಲೆ ಹಾಕಿಬಿಡುವೆನು;
ನಿನ್ನನ್ನು ಬಯಲಿನಲ್ಲಿ ಎಸೆದು ಆಕಾಶದ ಪಕ್ಷಿಗಳೆಲ್ಲಾ ನಿನ್ನ ಮೇಲೆ ಎರಗುವಂತೆ ಮಾಡಿ, ಸಮಸ್ತ ಭೂಜಂತುಗಳನ್ನು ನಿನ್ನಿಂದ ತೃಪ್ತಿಗೊಳಿಸುವೆನು. |
7. ಫರೋಹನನೇ, ಆಗ ನಾನು ನಿನ್ನ ಬೆಳಕನ್ನು ನಂದಿಸುವಾಗ, ಆಕಾಶಕ್ಕೆ ಮುಸುಕುಹಾಕಿ,
ಅಲ್ಲಿನ ನಕ್ಷತ್ರಗಳನ್ನು ಮಸುಕುಮಾಡಿ, ಸೂರ್ಯನನ್ನು ಮೋಡದಿಂದ ಮುಚ್ಚಿಬಿಡುವೆನು, ಚಂದ್ರನೂ ಪ್ರಕಾಶಿಸನು. |
8. ನಿನ್ನ ಮೇಲೆ ಆಕಾಶದಲ್ಲಿ ಮಿನುಗುವ ಸಕಲ ಜ್ಯೋತಿಗಳನ್ನೂ ನಾನು ಮಸುಕುಮಾಡಿ,
ನಿನ್ನ ದೇಶವನ್ನು ಕತ್ತಲು ಮಾಡುವೆನು” ಇದು ಕರ್ತನಾದ ಯೆಹೋವನ ನುಡಿ. PEPS |
9. “ನಾನು ನಿನ್ನ ನಾಶದ ಸುದ್ದಿಯನ್ನು, ಜನಾಂಗಗಳಲ್ಲಿ ನಿನಗೆ ತಿಳಿಯದ ದೇಶಗಳಿಗೂ ಮುಟ್ಟಿಸುವಾಗ, ಅವರ ಮನಸ್ಸಿನಲ್ಲಿ ಗಲಿಬಿಲಿಯನ್ನು ಎಬ್ಬಿಸುವೆನು.
|
10. ಹೌದು, ಅನೇಕ ಜನಾಂಗಗಳು ನಿನ್ನ ವಿಷಯದಲ್ಲಿ ಬೆಚ್ಚಿಬೆರಗಾಗುವಂತೆ ಮಾಡುವೆನು, ನಾನು ನನ್ನ ಖಡ್ಗವನ್ನು ಅವುಗಳ ಅರಸರ ಕಣ್ಣೆದುರಿಗೆ ಬೀಸುವಾಗ, ಅವರು ನಿನ್ನ ದುರ್ಗತಿಯನ್ನು ನೆನಸಿ ಭಯಭ್ರಾಂತರಾಗುವರು; ನಿನ್ನ ಸೋಲಿನ ದಿನದಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಪ್ರಾಣದ ಬಗ್ಗೆ ಕ್ಷಣಕ್ಷಣವೂ ನಡುಗುವನು.” PEPS
|
12. ನಾನು ನಿನ್ನ ಪ್ರಜೆಯನ್ನು ಅತಿಭಯಂಕರ ಜನಾಂಗದವರಾದ ಬಲಿಷ್ಠರ ಕತ್ತಿಗಳಿಂದ ಸಂಹರಿಸುವೆನು.
ಅವರು ಐಗುಪ್ತದ ಮಹತ್ತನ್ನು ನಾಶ ಮಾಡುವರು. ಅದರ ಜನ ಸಮೂಹವೆಲ್ಲಾ ನಿರ್ನಾಮವಾಗುವುದು. |
13. ನಾನು ಬಹು ಪ್ರವಾಹಗಳ ತೀರದಲ್ಲಿನ ಪಶುಗಳನ್ನೆಲ್ಲಾ ನಾಶಪಡಿಸುವೆನು;
ಇನ್ನು ಮೇಲೆ ಯಾವ ಮನುಷ್ಯನ ಕಾಲಾಗಲಿ, ಯಾವ ಪಶುವಿನ ಗೊರಸಾಗಲಿ ನೀರಿನಲ್ಲಿ ಹೆಜ್ಜೆಯಿಡುವುದಿಲ್ಲ. |
14. ಆಗ ಆ ನೀರು ತಿಳಿಯಾಗುವಂತೆಯೂ, ಆ ಪ್ರವಾಹಗಳು ಎಣ್ಣೆಯ ಹಾಗೆ ಹರಿಯುವಂತೆಯೂ ಮಾಡುವೆನು”
ಇದು ಕರ್ತನಾದ ಯೆಹೋವನ ನುಡಿ. |
15. “ಐಗುಪ್ತದಲ್ಲಿ ತುಂಬಿದ್ದ ಸೊತ್ತನ್ನೆಲ್ಲಾ ನಾನು ಧ್ವಂಸಗೊಳಿಸಿ,
ಆ ದೇಶವನ್ನು ಹಾಳುಮಾಡಿ, ಅಲ್ಲಿನ ಸಕಲ ನಿವಾಸಿಗಳನ್ನು ಸಂಹರಿಸಿದಾಗ ನಾನೇ ಯೆಹೋವನು ಎಂದು ಗೊತ್ತಾಗುವುದು. |
16. ಪ್ರಲಾಪಿಸುವವರು ಈ ಶೋಕ ಗೀತವನ್ನೆತ್ತಲಿ; ಜನಾಂಗಗಳ ಯುವತಿಯರು ಹೀಗೆ ಗೋಳಾಡಲಿ; ಐಗುಪ್ತಕ್ಕಾಗಿಯೂ,
ಅಲ್ಲಿನ ಬಹು ಪ್ರಜೆಗಳಿಗಾಗಿಯೂ ದುಃಖಿಸಿ ಈ ಗೀತೆಯನ್ನು ಹಾಡಲಿ” ಇದು ಕರ್ತನಾದ ಯೆಹೋವನ ನುಡಿ. PS |
17. {ಫರೋಹನ ಪಾತಾಳಪ್ರವೇಶ} PS (ಯೆಹೋಯಾಖೀನನು ಸೆರೆಯಾದ) ಹನ್ನೆರಡನೆಯ ವರ್ಷದ, ತಿಂಗಳಿನ ಹದಿನೈದನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
|
18. “ನರಪುತ್ರನೇ, ನೀನು ಐಗುಪ್ತದ ಅಸಂಖ್ಯಾತ ಪ್ರಜೆಗಾಗಿ ಗೋಳಾಡಿ,
ಅವರನ್ನೂ ಮತ್ತು ಘನವಾದ ಜನಾಂಗಗಳವರನ್ನೂ ಅಧೋಲೋಕಕ್ಕೆ, ಪ್ರೇತಗಳ ಜೊತೆಗೆ ತಳ್ಳಿಬಿಡು. |
21. ಪಾತಾಳದೊಳಗಿನ ಬಲಿಷ್ಠ ಶೂರರು ಅದನ್ನೂ, ಅದರ ಸಹಾಯಕರನ್ನೂ ನೋಡಿ,
‘ಇವರು ಸುನ್ನತಿಯಿಲ್ಲದವರಾಗಿಯೂ, ಖಡ್ಗದಿಂದ ಹತರಾದವರಾಗಿಯೂ ಇಳಿದು ಬಂದಿದ್ದಾರೆ’ ಅಂದುಕೊಳ್ಳುವರು. |
22. ಅಶ್ಶೂರವೂ ಮತ್ತು ಅದರ ಎಲ್ಲಾ ಗುಂಪು ಅಲ್ಲಿರುತ್ತವೆ. ಆ ಜನರ ಗೋರಿಗಳು ಅದನ್ನು ಸುತ್ತಿಕೊಂಡಿವೆ;
ಅವರೆಲ್ಲರೂ ಸಂಹೃತರು, ಖಡ್ಗದಿಂದ ಹತರಾದವರು. |
23. ಅವರ ಗೋರಿಗಳು ಅಧೋಲೋಕದ ಅಗಾಧ ಸ್ಥಳಗಳಲ್ಲಿ ಹರಡಿಕೊಂಡಿವೆ; ಸಂಹೃತರಾದವರು,
ಖಡ್ಗದಿಂದ ಹತರಾದವರು ಗೋರಿಯ ಸುತ್ತಲಿದ್ದಾರೆ; ಜೀವಲೋಕದಲ್ಲಿ ಹತರಾದವರು ಜೀವಿತರ ದೇಶದಲ್ಲಿ ಭಯವನ್ನು ಉಂಟುಮಾಡಿದ್ದಾರೆ. |
24. ಅಲ್ಲಿ ಏಲಾಮು ಮತ್ತು ಅದರ ಸಮೂಹವು ಗೋರಿಯನ್ನು ಸುತ್ತಿಕೊಂಡಿದೆ;
ಅವರೆಲ್ಲರೂ ಸಂಹೃತರು, ಖಡ್ಗದಿಂದ ಹತರಾದವರು; ಜೀವಲೋಕದಲ್ಲಿ ಭೀಕರರಾಗಿದ್ದ ಆ ಸುನ್ನತಿಹೀನರು ಅಧೋಲೋಕಕ್ಕೆ ಇಳಿದು ಪ್ರೇತಗಳ ಸಂಗಡ ಸೇರಿ ನಿಂದೆಯನ್ನು ಹೊತ್ತುಕೊಂಡಿದ್ದಾರೆ. |
25. ಏಲಾಮು ಮಲಗುವುದಕ್ಕೆ ಹತರಾದ ಅದರ ಸಮೂಹಕ್ಕೆ ಸ್ಥಳವನ್ನು ಏರ್ಪಡಿಸಿದ್ದಾರೆ, ಅವರ ಗೋರಿಗಳು ಅದರ ಸುತ್ತುಮುತ್ತಲಿವೆ;
ಅವರೆಲ್ಲರೂ ಸುನ್ನತಿಹೀನರು, ಖಡ್ಗದಿಂದ ಹತರಾದವರು; ಅವರು ಜೀವಲೋಕದಲ್ಲಿ ಭೀಕರರಾಗಿದ್ದು, ಪ್ರೇತಗಳ ಜೊತೆಗೆ ಸೇರಿ ನಿಂದೆಯನ್ನು ಹೊತ್ತುಕೊಂಡಿದ್ದಾರೆ. ಸಂಹೃತರ ಮಧ್ಯದಲ್ಲೇ ಏಲಾಮಿಗೆ ಸ್ಥಳವು ಏರ್ಪಾಡಾಗಿದೆ. |
26. ಅಲ್ಲಿ ಮೆಷೆಕ್ ತೂಬಲ್ ಮತ್ತು ಅವುಗಳ ಎಲ್ಲಾ ಸಮೂಹವು ಅಲ್ಲಿರುತ್ತವೆ; ಆ ಪ್ರಜೆಗಳ ಗೋರಿಗಳು ಅವುಗಳನ್ನು ಸುತ್ತಿಕೊಂಡಿವೆ;
ಅವರೆಲ್ಲರೂ ಸುನ್ನತಿಹೀನರು, ಖಡ್ಗದಿಂದ ಹತರಾದವರು; ಜೀವಲೋಕದಲ್ಲಿ ಭೀಕರರಾಗಿದ್ದಾರೆ. |
27. ಸುನ್ನತಿಯಿಲ್ಲದವರಲ್ಲಿ ಶೂರರು ಜೀವಲೋಕದೊಳಗೆ ಬಲಿಷ್ಠರಿಗೂ ಭೀಕರರಾಗಿದ್ದು ಹತರಾಗಿ,
ಆಯುಧ ಸಹಿತ ಪಾತಾಳಕ್ಕೆ ಇಳಿದು, ಕತ್ತಿಗಳನ್ನು ತಲೆದಿಂಬು ಮಾಡಿಕೊಂಡು, ತಮ್ಮ ಎಲಬುಗಳ ಮೇಲೆ ತಮ್ಮ ದುಷ್ಕೃತ್ಯಗಳ ಭಾರವನ್ನು ಹೊತ್ತುಕೊಂಡಿದ್ದಾರೋ ಅವರ ನಡುವೆ ಮೆಷೆಕಿನವರೂ ತೂಬಲಿನವರೂ ಒರಗದೆ ಹೋಗುವರೇ? |
29. ಅಲ್ಲಿ ಎದೋಮು, ಅದರ ಅರಸರೂ ಮತ್ತು ಎಲ್ಲಾ ಸರದಾರರೂ ಅಲ್ಲಿದ್ದಾರೆ; ಅವರು ಬಲಾತ್ಕಾರಿಗಳಾಗಿದ್ದು ಖಡ್ಗದಿಂದ ಹತರಾದವರ ಸಂಗಡ ಬಿದ್ದಿರುತ್ತಾರೆ; ಸುನ್ನತಿಹೀನರೊಡನೆ ಪ್ರೇತಗಳ ಸಂಗಡ ಮಲಗಿದ್ದಾರೆ. PEPS
|
30. “ಉತ್ತರ ದೇಶದ ಸಕಲ ಪ್ರಭುಗಳೂ ಸಮಸ್ತ ಮತ್ತು ಚೀದೋನ್ಯರೂ ಸಂಹೃತರೊಂದಿಗೆ ಇಳಿದು ಅಲ್ಲಿದ್ದಾರೆ; ಭಯಂಕರವಾಗಿದ್ದ ತಮ್ಮ ಶೌರ್ಯಕ್ಕೆ ನಾಚಿಕೊಂಡು ಖಡ್ಗದಿಂದ ಹತರಾದವರ ಮಧ್ಯೆ ಸುನ್ನತಿಹೀನರಾಗಿ ಬಿದ್ದು, ಪ್ರೇತಗಳ ಸಂಗಡ ಸೇರಿ ನಿಂದೆಯನ್ನು ಹೊತ್ತುಕೊಂಡಿದ್ದಾರೆ.
|
31. ಫರೋಹನು ಇವರೆಲ್ಲರನ್ನೂ ನೋಡಿ ತನ್ನ ಸಮಸ್ತ ಪ್ರಜೆಯ ವಿಷಯದಲ್ಲಿ ಸಮಾಧಾನ ಹೊಂದುವನು; ಹೌದು, ಫರೋಹನೂ ಮತ್ತು ಖಡ್ಗದಿಂದ ಹತರಾದ ಅವನ ಸಕಲ ಸೈನಿಕರೂ ಸಮಾಧಾನ ಹೊಂದುವರು” ಇದು ಕರ್ತನಾದ ಯೆಹೋವನ ನುಡಿ.
|
32. “ಇಗೋ, ಜೀವಲೋಕದಲ್ಲಿ ನಾನು ನನ್ನ ಭಯವನ್ನು ಹುಟ್ಟಿಸಿದ್ದೇನೆ; ಫರೋಹನೂ ಮತ್ತು ಅವನ ಸಮಸ್ತ ಪ್ರಜೆಯೂ ಸುನ್ನತಿಹೀನರ ಮಧ್ಯೆ, ಖಡ್ಗದಿಂದ ಹತರಾದವರ ನಡುವೆ ಮಲಗುವರು” ಎಂಬುದು ಕರ್ತನಾದ ಯೆಹೋವನ ನುಡಿ. PE
|