1. {ಆಜ್ಞಾಶಾಸನಗಳ ಪೆಟ್ಟಿಗೆ} (ವಿಮೋ 25:10-22) PS ಬೆಚಲೇಲನು ಜಾಲೀಮರದಿಂದ ಮಂಜೂಷವನ್ನು ಮಾಡಿಸಿದನು. ಅದು ಎರಡುವರೆ ಮೊಳ ಉದ್ದ, ಒಂದುವರೆ ಮೊಳ ಅಗಲ ಹಾಗೂ ಒಂದುವರೆ ಮೊಳ ಎತ್ತರವೂ ಆಗಿತ್ತು.
|
2. ಚೊಕ್ಕ ಬಂಗಾರದ ತಗಡುಗಳನ್ನು ಅದರ ಹೊರಗಡೆಯೂ ಮತ್ತು ಒಳಗಡೆಯೂ ಹೊದಿಸಿದನು. ಅದರ ಮೇಲೆ ಸುತ್ತಲು ಚಿನ್ನದ ಕಿರೀಟವನ್ನು ಕಟ್ಟಿಸಿದನು.
|
3. ನಾಲ್ಕು ಬಂಗಾರದ ಬಳೆಗಳನ್ನು ಎರಕಹೊಯಿಸಿ ಅದರ ನಾಲ್ಕು ಮೂಲೆಗಳಲ್ಲಿ ಅಂದರೆ, ಒಂದೊಂದು ಕಡೆಯಲ್ಲಿ ಎರಡೆರಡು ಬಳೆಗಳನ್ನು ಇರಿಸಿದನು.
|
6. ಇದಲ್ಲದೆ ಚೊಕ್ಕಬಂಗಾರದಿಂದ * ಮುಚ್ಚಳ. ಕೃಪಾಸನವನ್ನು ಮಾಡಿದನು. ಅದು ಎರಡುವರೆ ಮೊಳ ಉದ್ದವು, ಒಂದುವರೆ ಮೊಳ ಅಗಲವೂ ಆಗಿತ್ತು.
|
9. ಆ ಕೆರೂಬಿಗಳು ಮೇಲಕ್ಕೆ ರೆಕ್ಕೆಗಳನ್ನು ಚಾಚಿರುವಂತೆಯೂ, ಕೃಪಾಸನವನ್ನು ತಮ್ಮ ರೆಕ್ಕೆಗಳಿಂದ ಮುಚ್ಚುವಂತೆಯೂ ಇದ್ದವು. ಅವುಗಳ ಮುಖಗಳು ಎದುರು ಬದುರಾಗಿ ಕೃಪಾಸನವನ್ನು ನೋಡುತ್ತಿದ್ದವು. PS
|
10. {ರೊಟ್ಟಿಯ ಮೇಜನ್ನು ಮಾಡಿದ್ದು} (ವಿಮೋ 25:23-30) PS ಬೆಚಲೇಲನು ಜಾಲೀಮರದಿಂದ ಮೇಜನ್ನು ಮಾಡಿದನು. ಅದು ಎರಡು ಮೊಳ ಉದ್ದವೂ ಒಂದು ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಆಗಿತ್ತು.
|
13. ಮೇಜನ್ನು ಎತ್ತುವ ಕಂಬಗಳನ್ನು ಸೇರಿಸುವುದಕ್ಕಾಗಿ ಅದಕ್ಕೆ ನಾಲ್ಕು ಚಿನ್ನದ ಬಳೆಗಳನ್ನು ಎರಕಹೊಯಿಸಿ ಅದರ ನಾಲ್ಕು ಕಾಲುಗಳಲ್ಲಿ ಜೋಡಿಸಿದನು.
|
15. ಮೇಜನ್ನು ಹೊತ್ತುಕೊಂಡು ಹೋಗುವವರಿಗಾಗಿ ಜಾಲೀಮರದಿಂದ ಕಂಬಗಳನ್ನು ಮಾಡಿ, ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿದನು.
|
16. ಮೇಜಿನ ಮೇಲೆ ಇಡಬೇಕಾದ ಉಪಕರಣಗಳನ್ನು ಅಂದರೆ ಹರಿವಾಣಗಳು, ಧೂಪಾರತಿಗಳು, ಹೂಜಿಗಳು, ಪಾನದ್ರವ್ಯವನ್ನು ಅರ್ಪಿಸುವುದಕ್ಕೆ ಬೇಕಾದ ಬಟ್ಟಲುಗಳು ಇವುಗಳನ್ನು ಚೊಕ್ಕ ಬಂಗಾರದಿಂದ ಮಾಡಿದನು. PS
|
17. {ಬಂಗಾರದ ದೀಪಸ್ತಂಭವನ್ನು ಮಾಡಿದ್ದು} (ವಿಮೋ 25:31-40) PS ಮತ್ತು ಚೊಕ್ಕ ಬಂಗಾರದ ದೀಪಸ್ತಂಭವನ್ನು ಮಾಡಿದನು. ಅದರ ಬುಡವನ್ನು ಮತ್ತು ಕಂಬವನ್ನು ನಕಾಸಿಕೆಲಸದಿಂದ ಮಾಡಿದನು. ಆ ದೀಪಸ್ತಂಭವನ್ನು ಅಖಂಡವಾಗಿ ಪುಷ್ಪದಗೊಂಚಲುಗಳು, ಪುಷ್ಪಗಳು, ಮೊಗ್ಗುಗಳು ಅಲಂಕಾರವಾಗಿ ಅದರಿಂದಲೇ ಹೊರಟಂತೆ ಕೆತ್ತಲಾಗಿತ್ತು.
|
19. ಪ್ರತಿಯೊಂದು ಕೊಂಬೆಯಲ್ಲಿ ಬಾದಾಮಿ ಹೂವುಗಳಂತಿರುವ ಮೂರು ಮೂರು ಪುಷ್ಪಾಕೃತಿಗಳಿದ್ದವು; ಒಂದೊಂದು ಆಕೃತಿಗೆ ಒಂದೊಂದು ಪುಷ್ಪವೂ, ಒಂದು ಮೊಗ್ಗು ಇದ್ದವು. ಆರು ಕೊಂಬೆಗಳಲ್ಲಿಯೂ ಹಾಗೆಯೇ ಇದ್ದವು.
|
20. ದೀಪಸ್ತಂಭದಲ್ಲಿ ಬಾದಾಮಿ ಹೂವುಗಳಂತಿರುವ ಪುಷ್ಪಗಳೂ, ಮೊಗ್ಗುಗಳೂ ಇರುವ ಹೂ ಗೊಂಚಲುಗಳಂತೆ ನಾಲ್ಕು ಪುಷ್ಪಾಕೃತಿಗಳು ಇದ್ದವು.
|
21. ಎರಡೆರಡು ಕೊಂಬೆಗಳು ಕವಲು ಒಡೆದಿರುವ ಸ್ಥಳಗಳಲ್ಲೆಲ್ಲಾ ಒಂದೊಂದು ಮೊಗ್ಗು, ಕೊಂಬೆಗಳ ಕೆಳಗೆ ಕವಲೊಡೆದಿರುವ ಜಾಗಗಳಲ್ಲಿಯೂ ಒಂದೊಂದು ಮೊಗ್ಗು ಹೀಗೆ ಕೊಂಬೆಗಳ ಆರು ಶಾಖೆಗಳಲ್ಲಿಯೂ ಮೊಗ್ಗುಗಳಿದ್ದವು.
|
22. ಮೊಗ್ಗುಗಳು, ಶಾಖೆಗಳು ಒಂದೇ ಕಡೆಯಿಂದ ಉದ್ಭವಗೊಂಡಿದ್ದವು. ದೀಪಸ್ತಂಭವನ್ನೆಲ್ಲಾ ಒಟ್ಟಿಗೆ ಚೊಕ್ಕಬಂಗಾರದಿಂದ ಏಕವಾಗಿ ಮಾಡಲಾಗಿತ್ತು.
|
25. {ಧೂಪವೇದಿಯನ್ನು ಮಾಡಿದ್ದು} (ವಿಮೋ 30:1-5) PS ಅವನು ಜಾಲೀಮರದಿಂದ ಧೂಪವೇದಿಯನ್ನು ಮಾಡಿಸಿದನು. ಅದು ಒಂದು ಮೊಳ ಉದ್ದವಾಗಿಯೂ, ಒಂದು ಮೊಳ ಅಗಲವಾಗಿಯು ಇದ್ದು ಚಚ್ಚೌಕವಾಗಿತ್ತು; ಅದರ ಎತ್ತರವು ಎರಡು ಮೊಳವಾಗಿತ್ತು. ಅದರ ಕೊಂಬುಗಳು ಅದರೊಂದಿಗೆ ಏಕವಾಗಿದ್ದವು.
|
26. ಅದರ ಮೇಲ್ಭಾಗಕ್ಕೂ ಹಲಗೆಗಳಿಗೂ ನಾಲ್ಕು ಪಕ್ಕಗಳಲ್ಲಿದ್ದ ಹಲಗೆಗಳಿಗೂ ಮತ್ತು ಕೊಂಬುಗಳಿಗೂ ಚೊಕ್ಕ ಬಂಗಾರದ ತಗಡುಗಳನ್ನು ಹೊದಿಸಿದನು. ಸುತ್ತಲೂ ಚಿನ್ನದ ತೋರಣ ಕಟ್ಟಿಸಿದನು.
|
27. ಅದನ್ನು ಎತ್ತುವ ಕೋಲುಗಳನ್ನು ಸೇರಿಸುವುದಕ್ಕಾಗಿ ತೋರಣದ ಕೆಳಗೆ ವೇದಿಕೆಯ ಎರಡು ಪಾರ್ಶ್ವಗಳ ಮೂಲೆಗಳಲ್ಲಿ ಎರಡೆರಡು ಚಿನ್ನದ ಬಳೆಗಳನ್ನು ಜೋಡಿಸಿದನು.
|
29. {ಅಭಿಷೇಕ ತೈಲವನ್ನು ಧೂಪದ್ರವ್ಯವನ್ನು ಮಾಡಿದ್ದು} (ವಿಮೋ 30:22-38) PS ಅದಲ್ಲದೆ ಅವನು ದೇವರ ಪವಿತ್ರ ಸೇವೆಗೆ ನೇಮಕವಾದ ಪಟ್ಟಾಭಿಷೇಕತೈಲವನ್ನೂ ಪರಿಮಳದ್ರವ್ಯಗಳಿಂದ ಮಾಡಿದ ಸ್ವಚ್ಛವಾದ ಧೂಪದ್ರವ್ಯವನ್ನೂ ಸುಗಂಧದ್ರವ್ಯಮಾಡುವವರ ವಿಧಾನದ ಪ್ರಕಾರವೇ ತಯಾರಿಸಿದನು. PE
|