1. {#1ತಂದೆತಾಯಿಗಳೂ ಮಕ್ಕಳೂ } [PS] [* ಜ್ಞಾ. 1:8; 6:20; 23:22; ಕೊಲೊ 3:20: ]ಮಕ್ಕಳೇ, ನೀವು ಕರ್ತನಲ್ಲಿರುವವರಿಗೆ ತಕ್ಕ ಹಾಗೆ ನಿಮ್ಮ ತಂದೆತಾಯಿಗಳ ವಿಧೇಯರಾಗಿರಿ. ಇದು ನ್ಯಾಯವಾದದ್ದು.
2. ವಾಗ್ದಾನಸಹಿತವಾದ ಮೊದಲನೆಯ ಆಜ್ಞೆಯನ್ನು ಕೇಳಿರಿ, [† ವಿಮೋ 20:12; ಧರ್ಮೋ 5:16: ]“ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು,
3. ಗೌರವಿಸಿದರೆ ನಿನಗೆ ಶುಭವಾಗುವುದು, ನೀನು ಭೂಮಿಯ ಮೇಲೆ ಬಹುಕಾಲ ಬದುಕುವಿ.” [PE]
4.
18. [PS] [‡ ಆದಿ 18:19; ಧರ್ಮೋ 4:9; 6:7; 11:19; ಜ್ಞಾ. 19:18; 22:6; 29:17 ಇತ್ಯಾದಿ. ]ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ, ಕರ್ತನಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ಅವರನ್ನು ಶಿಸ್ತಿನಲ್ಲಿಯೂ ಉಪದೇಶದಲ್ಲಿಯೂ ಸಾಕಿ ಸಲಹಿರಿ. [PE]{#1ಯಜಮಾನರೂ ದಾಸರೂ } [PS] [§ ಅಥವಾ. ಗುಲಾಮರೇ, ದಾಸರೇ. ಕೊಲೊ 3:22; ತಿಮೊ. 6:1; 1 ಪೇತ್ರ. 2:18: ]ದಾಸರೇ, ಈ ಲೋಕದಲ್ಲಿ ನಿಮಗೆ ಯಜಮಾನರಾಗಿರುವವರಿಗೆ [* ಎಫೆ 5:22: ]ಕ್ರಿಸ್ತನಿಗೆ ವಿಧೇಯರಾಗುವ ಹಾಗೆಯೇ ಮನೋಭೀತಿಯಿಂದ ನಡುಗುವವರಾಗಿಯೂ ಸರಳಹೃದಯರಾಗಿಯೂ ವಿಧೇಯರಾಗಿರಿ.
6. [† ಗಲಾ. 1:10. ]ಮನುಷ್ಯರನ್ನು ಮೆಚ್ಚಿಸುವವರಂತೆ ತೋರಿಕೆಗೆ ಯಜಮಾನರು ನೋಡುತ್ತಿರುವಾಗ ಮಾತ್ರ ಸೇವೆಮಾಡದೇ, ಕ್ರಿಸ್ತನ ದಾಸರಿಗೆ ತಕ್ಕ ಹಾಗೆ ದೇವರ ಚಿತ್ತವನ್ನು ಮನಃಪೂರ್ವಕವಾಗಿ ನಡಿಸಿರಿ.
7. ಮನುಷ್ಯರಿಗೋಸ್ಕರವಲ್ಲ, ಕರ್ತನಿಗೋಸ್ಕರ ಸೇವೆಮಾಡುತ್ತೇವೆಂದು ಮನಃಪೂರ್ವಕವಾಗಿ ಸೇವೆಮಾಡಿರಿ.
8. ಯಾಕೆಂದರೆ [‡ ಗಲಾ. 3:28. ಕೊಲೊ 3:11. ]ಒಬ್ಬನು ದಾಸನಾಗಲಿ ಸ್ವತಂತ್ರನಾಗಲಿ [§ ಕೀರ್ತ 62:12. ]ತಾನು ಯಾವ ಸತ್ಕಾರ್ಯವನ್ನು ಮಾಡುತ್ತಾನೋ ಅದರ ಪ್ರತಿಫಲವನ್ನು ಕರ್ತನಿಂದ ಹೊಂದುವನೆಂಬುದನ್ನು ನೀವು ತಿಳಿದವರಾಗಿದ್ದೀರಿ. [PE]
9.
13. [PS]ಯಜಮಾನರೇ, ನಿಮ್ಮ ದಾಸರ ವಿಷಯದಲ್ಲಿ ಅದೇ ರೀತಿಯಾಗಿ ನಡೆದುಕೊಳ್ಳಿರಿ. [* ಯೋಹಾ 13:13. ಯೋಬ. 31:13-15. ]ಪರಲೋಕದಲ್ಲಿ ನಿಮಗೂ ಅವರಿಗೂ ಯಜಮಾನನಾಗಿರುವಾತನು ಇದ್ದಾನೆಂತಲೂ [† ರೋಮಾ. 2:11; ಗಲಾ. 2:6: ]ಆತನಲ್ಲಿ ಪಕ್ಷಪಾತವಿಲ್ಲವೆಂತಲೂ ತಿಳಿದು ನಿಮ್ಮ ದಾಸರನ್ನು ಬೆದರಿಸುವ ಪದ್ಧತಿಯನ್ನು ಬಿಟ್ಟುಬಿಡಿರಿ. [PE]{#1ದೇವರ ಸರ್ವಾಯುಧಗಳು } [PS]ಕಡೆಯದಾಗಿ, ನೀವು [‡ 2 ತಿಮೊ. 2:1; 1 ಯೊಹಾ. 2:14; ಎಫೆ 3:16: ]ಕರ್ತನಲ್ಲಿಯೂ [§ ಎಫೆ 1:19: ]ಆತನ ಅತ್ಯಧಿಕವಾದ ಶಕ್ತಿಯಲ್ಲಿಯೂ ಬಲಗೊಳ್ಳಿರಿ.
11. ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ ನಿಲ್ಲುವುದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ [* ಎಫೆ 6:13; 2 ಕೊರಿ 10:4: ]ಸರ್ವಾಯುಧಗಳನ್ನು [† ವ. 14. ರೋಮಾ. 13:12: ]ಧರಿಸಿಕೊಳ್ಳಿರಿ.
12. ನಮಗೆ ಹೋರಾಟವಿರುವುದು ಮನುಷ್ಯಮಾತ್ರದವರ ಸಂಗಡವಲ್ಲ. [‡ ಎಫೆ 1:21: ]ರಾಜತ್ವಗಳ ಮೇಲೆಯೂ, ಅಧಿಕಾರಿಗಳ ಮೇಲೆಯೂ, [§ ಲೂಕ 22:53; ಕೊಲೊ 1:13: ]ಈ ಅಂಧಕಾರದ [* ಎಫೆ 2:2: ]ಲೋಕಾಧಿಪತಿಗಳ ಮೇಲೆಯೂ, [† ಎಫೆ 3:10: ]ಆಕಾಶ ಮಂಡಲಗಳಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ.
13. ಆದ್ದರಿಂದ ಆ ದುಷ್ಟ ದಿನದಲ್ಲಿ ವೈರಿಗಳನ್ನು ಎದುರಿಸುವುದಕ್ಕೂ ಮಾಡಬೇಕಾದದ್ದೆಲ್ಲವನ್ನು ಮಾಡಿ ದೃಢವಾಗಿ ನಿಲ್ಲುವುದಕ್ಕೂ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ.
14. [‡ 1 ಪೇತ್ರ. 1:13; ಯೆಶಾ 11:5 ]ಸತ್ಯವೆಂಬ ನಡುಕಟ್ಟನ್ನು ಸೊಂಟಕ್ಕೆ ಕಟ್ಟಿಕೊಂಡು, [§ ಯೆಶಾ 59:17; 1 ಥೆಸ. 5:8; ಯೆಶಾ 61:10; 2 ಕೊರಿ 6:7: ]ನೀತಿಯೆಂಬ ಎದೆಕವಚವನ್ನು ಧರಿಸಿಕೊಂಡು,
15. [* ಯೆಶಾ 52:7; ರೋಮಾ. 10:15: ]ಸಮಾಧಾನದ ಸುವಾರ್ತೆಯನ್ನು ಪ್ರಚುರಪಡಿಸುವುದಕ್ಕೆ ಸಿದ್ಧ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡು ನಿಲ್ಲಿರಿ.
16. ಎಲ್ಲಾದಕ್ಕಿಂತ ಹೆಚ್ಚಾಗಿ [† 1 ಯೊಹಾ. 5:4: ]ನಂಬಿಕೆಯೆಂಬ ಗುರಾಣಿಯನ್ನು ಹಿಡಿದುಕೊಳ್ಳಿರಿ. ಅದರಿಂದ ನೀವು [‡ ಮತ್ತಾ 13:19; 1 ಯೊಹಾ. 2:14: ]ಕೆಡುಕನ ಅಗ್ನಿಬಾಣಗಳನ್ನೆಲ್ಲಾ ನಂದಿಸುವುದಕ್ಕೆ ಶಕ್ತರಾಗುವಿರಿ.
17. ಇದಲ್ಲದೆ [§ ಯೆಶಾ 59:17; 1 ಥೆಸ. 5:8: ]ರಕ್ಷಣೆಯೆಂಬ ಶಿರಸ್ತ್ರಾಣವನ್ನು ಇಟ್ಟುಕೊಂಡು [* ಇಬ್ರಿ. 4:12; ಯೆಶಾ 11:4; 49:2: ]ಪವಿತ್ರಾತ್ಮನು ಕೊಡುವ ದೇವರ ವಾಕ್ಯವೆಂಬ ಕತ್ತಿಯನ್ನು ಹಿಡಿದುಕೊಳ್ಳಿರಿ.
18. ನೀವು [† ಯೂದ. 20: ]ಪವಿತ್ರಾತ್ಮಪ್ರೇರಿತರಾಗಿ [‡ ಲೂಕ 18:1: ]ಎಲ್ಲಾ ಸಮಯಗಳಲ್ಲಿ [§ ಕೊಲೊ 4:2-4: ]ಸಕಲವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಗಳಿಂದಲೂ ದೇವರನ್ನು ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣ ಸ್ಥಿರಚಿತ್ತರಾಗಿದ್ದು ದೇವಜನರೆಲ್ಲರ ವಿಷಯದಲ್ಲಿ [* 1 ತಿಮೊ. 2:1: ]ವಿಜ್ಞಾಪನೆಮಾಡುತ್ತಾ [† ಮಾರ್ಕ 13:33: ]ಎಚ್ಚರವಾಗಿರಿ. ನನಗಾಗಿಯೂ ಪ್ರಾರ್ಥನೆ ಮಾಡಿರಿ.
19. ನಾನು ಮಾತನಾಡಲು ಬಾಯಿ ತೆರೆಯುವಾಗ ಪೂರ್ವಕಾಲದಲ್ಲಿ ಗುಪ್ತವಾಗಿದ್ದ [‡ ಎಫೆ 4:3. ]ಸುವಾರ್ತಾಸತ್ಯಗಳನ್ನು ಭಯವಿಲ್ಲದೆ ತಿಳಿಸುವುದಕ್ಕೆ ಬೇಕಾದ ಮಾತುಗಳನ್ನು ದೇವರು [§ ಕೊಲೊ 4:3; 1 ಥೆಸ. 5:25; 2 ಥೆಸ. 3:1. ]ನನಗೆ ಅನುಗ್ರಹಿಸಬೇಕೆಂದು ಪ್ರಾರ್ಥಿಸಿರಿ.
20. ಆ ಸುವಾರ್ತೆಯ ನಿಮಿತ್ತವಾಗಿ [* 2 ಕೊರಿ 5:20. ]ರಾಯಭಾರಿಯಾದ ನಾನು ಸೆರೆಮನೆಯಲ್ಲಿ ಬಿದ್ದಿದ್ದೇನಲ್ಲಾ. ಅದರ ವಿಷಯದಲ್ಲಿ ನಾನು ಮಾತನಾಡಬೇಕಾದ [† ಅ. ಕೃ. 28:20. ]ಹಾಗೆಯೇ ಧೈರ್ಯವಾಗಿ ನಾನು ಮಾತನಾಡುವಂತೆ ನನಗಾಗಿ ಬೇಡಿಕೊಳ್ಳಿರಿ. [PE]
21. {#1ಕಡೆ ಮಾತುಗಳು } [PS] [‡ ಕೊಲೊ 4:7-9: ]ನನ್ನ ವಿಷಯಗಳು ನನ್ನ ಕೆಲಸಕಾರ್ಯಗಳು ನಿಮಗೆ ಗೊತ್ತಾಗುವ ಹಾಗೆ ಪ್ರಿಯ ಸಹೋದರನೂ ಕರ್ತನಲ್ಲಿ ನಂಬಿಗಸ್ತ ಸೇವಕನಾಗಿರುವ [§ ಅ. ಕೃ. 20:4. 2 ತಿಮೊ. 4:12; ತೀತ. 3:12: ]ತುಖಿಕನು ನಿಮಗೆ ಎಲ್ಲವನ್ನೂ ತಿಳಿಸಿಕೊಡುವನು.
22. ನೀವು ನಮ್ಮ ಸಂಗತಿಗಳನ್ನು ತಿಳಿದುಕೊಳ್ಳುವಂತೆಯೂ, ಅವನು ನಿಮ್ಮ ಹೃದಯಗಳನ್ನು ಸಂತೈಸುವಂತೆಯೂ ಅವನನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ. [PE]
23. [PS]ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ [* ಗಲಾ. 6:16; ಥೆಸ. 3:16: ]ಶಾಂತಿಯೂ, ನಂಬಿಕೆಯಿಂದ ಕೂಡಿದ ಪ್ರೀತಿಯೂ ಸಹೋದರರೆಲ್ಲರಿಗೆ ಉಂಟಾಗಲಿ.
24. ನಮ್ಮ ಕರ್ತನಾದ ಯೇಸು ಕ್ರಿಸ್ತನನ್ನು ನಿರಂತರವಾಗಿ [† 1 ಕೊರಿ 16:22 ]ಪ್ರೀತಿಸುವವರೆಲ್ಲರ ಮೇಲೆ ದೇವರ ಕೃಪೆಯು ಇರಲಿ.[PE]