1. {#1ಕ್ರಿಸ್ತನ ದೇಹದಲ್ಲಿನ ಐಕ್ಯತೆ } [PS]ನೀವು ದೇವರಿಂದ [* ರೋಮಾ. 8:28: ]ಕರೆಯಲ್ಪಟ್ಟವರಾದ ಕಾರಣ ಆ ಕರೆಗೆ [† ಕೊಲೊ 2:6; 1 ಥೆಸ. 2:12; ಫಿಲಿ. 1:27: ]ಯೋಗ್ಯರಾಗಿ ಜೀವಿಸಬೇಕೆಂದು, ಕರ್ತನ ಸೇವೆಯಲ್ಲಿ [‡ ಎಫೆ 3:1: ]ಸೆರೆಯವನಾದ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
2. ನೀವು ಪೂರ್ಣ [§ ಫಿಲಿ. 2:3; ಕೊಲೊ 3:12; 1 ಪೇತ್ರ. 3:5. ]ವಿನಯ, ಸಾತ್ವಿಕತ್ವಗಳಿಂದಲೂ [* ಕೊಲೊ 1:11: ]ದೀರ್ಘಶಾಂತಿಯಿಂದಲೂ ಕೂಡಿದವರಾಗಿ, [† ಕೊಲೊ 3:13: ]ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ.
3. [‡ ಕೊಲೊ 3:14,15: ]ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆಸಕ್ತರಾಗಿರಿ.
4. ನೀವು ಕರೆಯಲ್ಪಟ್ಟಾಗ [§ ಎಫೆ 1:18: ]ಒಂದೇ ನಿರೀಕ್ಷೆಗಾಗಿ ಕರೆಯಲ್ಪಟ್ಟವರಂತೆಯೇ, [* ಎಫೆ 2:16: ]ನೀವೆಲ್ಲರೂ ಒಂದೇ ದೇಹಕ್ಕೆ ಸೇರಿದವರು, [† ಎಫೆ 2:18: ]ಒಬ್ಬನೇ ಆತ್ಮನನ್ನು ಹೊಂದಿದವರು,
5. ನಿಮ್ಮೆಲ್ಲರಿಗೂ [‡ ಜೆಕ. 14:9; 1 ಕೊರಿ 8:6: ]ಕರ್ತನು ಒಬ್ಬನೇ, [§ ಎಫೆ 4:13; ಯೂದ. 3: ]ನಂಬಿಕೆಯು ಒಂದೇ, [* ಗಲಾ. 3:27,28: ]ದೀಕ್ಷಾಸ್ನಾನ ಒಂದೇ,
6. [† 1 ಕೊರಿ 12:5,6: ]ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ. [‡ ರೋಮಾ. 9:5: ]ಆತನು ಎಲ್ಲರ ಮೇಲಿರುವವನೂ, ಎಲ್ಲರ ಮುಖಾಂತರ ಕಾರ್ಯ ನಡಿಸುವವನೂ, ಎಲ್ಲರಲ್ಲಿ ವಾಸಿಸುವವನೂ ಆಗಿದ್ದಾನೆ. [PE]
7. [PS]ಆದರೆ [§ ರೋಮಾ. 12:3; ಎಫೆ 4:16; 1 ಕೊರಿ 12:7; ಮತ್ತಾ 25 15: ]ಕ್ರಿಸ್ತನ ವರದ ಅಳತೆಯ ಪ್ರಕಾರವೇ ಪ್ರತಿಯೊಬ್ಬರಿಗೆ ಕೃಪಾವರವು ಕೊಡಲ್ಪಟ್ಟಿದೆ.
8. ಆದ್ದರಿಂದ ದೇವರವಾಕ್ಯದಲ್ಲಿ ಹೀಗೆ ಹೇಳಿದೆ, [PE][QS][* ಕೀರ್ತ 68:18: ]“ಆತನು ಉನ್ನತ ಸ್ಥಾನಕ್ಕೆ ಏರಿಹೋದಾಗ [QE][QS] [† ನ್ಯಾಯ 5:12; ಕೊಲೊ 2:15: ]ತಾನು ಸೆರೆಯಾಳುಗಳನ್ನು ಸೆರೆಹಿಡಿದುಕೊಂಡು ಹೋಗಿ [QE][QS]ಮನುಷ್ಯರಿಗೆ ವರಗಳನ್ನು ಕೊಟ್ಟನು.” [QE]
9. [PS] [‡ ಯೋಹಾ 3:13: ]“ಏರಿಹೋದನೆಂದು” ಹೇಳಿದ್ದರ ಅರ್ಥವೇನು? ಭೂಮಿಯ ಅಧೋಭಾಗಕ್ಕೆ ಇಳಿದಿದ್ದನೆಂತಲೂ ಹೇಳಿದ ಹಾಗಾಯಿತಲ್ಲಾ?
10. ಇಳಿದು ಬಂದಾತನು, [§ ಎಫೆ 1:23: ]ಸಮಸ್ತವನ್ನು ತುಂಬುವುದಕ್ಕಾಗಿ ಮೇಲಣ [* ಇಬ್ರಿ. 4:14; 7:26; 9:24: ]ಎಲ್ಲಾ ಲೋಕಗಳಿಗಿಂತಲೂ ಉನ್ನತಕ್ಕೆ ಏರಿಹೋದವನು ಆಗಿದ್ದಾನೆ.
11. ಆತನು[† 1 ಕೊರಿ 12:28: ] ಕೆಲವರನ್ನು ಅಪೊಸ್ತಲರನ್ನಾಗಿಯೂ, ಕೆಲವರನ್ನು ಪ್ರವಾದಿಗಳನ್ನಾಗಿಯೂ, [‡ ಅ. ಕೃ. 21:8; 2 ತಿಮೊ. 4:5: ]ಕೆಲವರನ್ನು ಸುವಾರ್ತಿಕರನ್ನಾಗಿಯೂ, ಕೆಲವರನ್ನು [§ ಯೆರೆ 3:15; ಅ. ಕೃ 20:28: ]ಸಭಾಪಾಲಕರನ್ನಾಗಿಯೂ, ಬೋಧಕರನ್ನಾಗಿಯೂ ನೇಮಿಸಿದನು.
12. ನಾವೆಲ್ಲರೂ ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಉಂಟಾಗುವ ಐಕ್ಯತೆಯನ್ನು ಹೊಂದಿ, ಪರಿಪಕ್ವತೆಯನ್ನು ಪಡೆದು,[* ಎಫೆ 1:23: ] ಕ್ರಿಸ್ತನ ಪರಿಪೂರ್ಣತೆಯ ಮಟ್ಟವನ್ನು ತಲುಪುವ ತನಕ,
13. ದೇವಜನರನ್ನು ದೇವರ ಸೇವೆಗೆ ಸಿದ್ಧಗೊಳಿಸುವುದಕ್ಕೂ, [† 1 ಕೊರಿ 12:27; ಎಫೆ 4:16,29: ]ಕ್ರಿಸ್ತನ ದೇಹವೆಂಬ ಸಭೆಯು ಅಭಿವೃದ್ಧಿಯಾಗುವುದಕ್ಕೋಸ್ಕರವೂ ಆತನು ಇವರನ್ನು ನೇಮಿಸಿದನು.
14. ಆದ್ದರಿಂದ ನಾವು ಇನ್ನು ಮೇಲೆ ಕೂಸುಗಳಾಗಿರದೇ, ದುರ್ಜನರ ವಂಚನೆಗಳಿಗೂ, ಕುಯುಕ್ತಿಗೂ ಒಳಬಿದ್ದು, ನಾನಾ ಉಪದೇಶಗಳಿಂದ ಕಂಗೆಟ್ಟು [‡ ಮತ್ತಾ 11:7; ಇಬ್ರಿ 13:9; ಯಾಕೋಬ. 1:6; ಯೂದ. 12. ]ಗಾಳಿಯಿಂದ ಅತ್ತಿತ್ತ ಓಲಾಡುವವರ ಹಾಗಿರದೇ,
15. [§ 1 ಯೋಹಾ 3:18. ]ಪ್ರೀತಿಯಲ್ಲಿ ಸತ್ಯವನ್ನು ಮಾತನಾಡುತ್ತಾ [* ಎಫೆ 2:21 ]ಎಲ್ಲಾ ವಿಷಯಗಳಲ್ಲಿಯೂ [† ಎಫೆ 1:22: ]ತಲೆಯಾಗಿರುವ ಕ್ರಿಸ್ತನಲ್ಲಿ ಬೆಳೆಯುವವರಾಗಿರೋಣ.
16. [‡ ಕೊಲೊ 2:19: ]ದೇಹವೆಲ್ಲಾ ಆತನ ಮುಖಾಂತರ ಪ್ರತಿ ಕೀಲಿನಿಂದ ಬಿಗಿಯಾಗಿ ಜೋಡಿಸಲ್ಪಟ್ಟು ಐಕ್ಯವಾಗಿದ್ದು, [§ ವ. 7 ನೋಡಿರಿ ]ಪ್ರತಿಯೊಂದು ಅಂಗವು ತನ್ನ ಕೆಲಸವನ್ನು ಮಾಡುವುದರಿಂದ ದೇಹವು ಪ್ರೀತಿಯಲ್ಲಿ ಬೆಳೆದು ಕ್ಷೇಮಾಭಿವೃದ್ಧಿಯನ್ನು ಹೊಂದುತ್ತದೆ. [PE]
17. {#1ಕ್ರಿಸ್ತನಲ್ಲಿ ಹೊಸ ಜೀವನ [BR]ಕೊಲೊ 3:5-17 } [PS]ಆದ್ದರಿಂದ ನಾನು ಕರ್ತನಲ್ಲಿ ಹೇಳುವುದೇನಂದರೆ [* ಎಫೆ 4:22; 2:1-3 ಕೊಲೊ 3:7; 1 ಪೇತ್ರ. 4:3: ]ಅನ್ಯಜನರು ನಡೆದುಕೊಳ್ಳುವ ಹಾಗೆ ನೀವು ಇನ್ನು ಮುಂದೆ ನಡೆದುಕೊಳ್ಳಬಾರದು. [† ರೋಮಾ. 1:21; ಕೊಲೊ 2:18: ]ಅವರು ನಿಷ್ಪ್ರಯೋಜನವಾದ ಬುದ್ಧಿಯುಳ್ಳವರಾಗಿ ನಡೆದುಕೊಳ್ಳುತ್ತಾರೆ.
18. [‡ ರೋಮಾ. 11:10: ]ಅವರ ಮನಸ್ಸಿಗೆ ಕತ್ತಲು ಕವಿದಿದೆ, ಅವರು [§ ಮಾರ್ಕ 3:5: ]ತಮ್ಮ ಕಠಿಣವಾದ ಹೃದಯದ ನಿಮಿತ್ತದಿಂದಲೂ ಮತ್ತು ತಮ್ಮಲ್ಲಿರುವ ಅಜ್ಞಾನದ ನಿಮಿತ್ತದಿಂದಲೂ ದೇವರಿಂದಾಗುವ ಜೀವಕ್ಕೆ [* ಎಫೆ 2:12: ]ದೂರವಾಗಿದ್ದಾರೆ.
19. ಅವರು ಲಜ್ಜೆಗೆಟ್ಟವರಾಗಿ [† ರೋಮಾ. 1:24,26,28: ]ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧ ಕೃತ್ಯಗಳನ್ನು ಅತ್ಯಾಶೆಯಿಂದ ನಡೆಸುವವರಾಗಿದ್ದಾರೆ.
20. ನೀವಾದರೋ [‡ ಮೂಲ, ಕ್ರಿಸ್ತನನ್ನು. ಮತ್ತಾ 11:29: ]ಕ್ರಿಸ್ತನ ಬೋಧನೆಯನ್ನು ಅಂಥದೆಂದು ಕಲಿತುಕೊಳ್ಳಲಿಲ್ಲ.
21. ಆತನಿಂದಲೇ ಕೇಳಿ [§ ಕೊಲೊ 2:7: ]ಆತನಲ್ಲಿಯೇ ಉಪದೇಶವನ್ನು ಹೊಂದಿದ್ದೀರಲ್ಲಾ.
22. ಯೇಸುವಿನಲ್ಲಿರುವ ಸತ್ಯೋಪದೇಶವು ಯಾವುದೆಂದರೆ [* ಕೊಲೊ 3:8; ಇಬ್ರಿ. 12:1; ಯಾಕೋಬ. 1:21; 1 ಪೇತ್ರ. 2:1: ]ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೇ [† ರೋಮಾ. 6:6; ಕೊಲೊ 3:9: ]ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು. ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟುಹೋಗುವಂಥದ್ದು.
23. [‡ ರೋಮಾ. 12:2: ]ನೀವು ನಿಮ್ಮ ಹೃನ್ಮನಗಳನ್ನು ನವೀಕರಿಸಿ, [§ ರೋಮಾ. 16:4: ]ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ.
24. ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ [* ಎಫೆ 2:10: ]ಸತ್ಯಕ್ಕನುಗುಣವಾಗಿ ನೀತಿಯುಳ್ಳದ್ದಾಗಿಯೂ, ಪರಿಶುದ್ಧತೆಯುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿದೆ. [PE]
25. [PS]ಆದಕಾರಣ ಸುಳ್ಳಾಡುವುದನ್ನು ಬಿಟ್ಟುಬಿಟ್ಟು [† ಜೆಕ. 8:16; ಕೊಲೊ 3:9: ]“ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ನುಡಿಯಲಿ.” ಏಕೆಂದರೆ [‡ ರೋಮಾ. 12:5: ]ನಾವು ಪ್ರತಿಯೊಬ್ಬರೂ ಒಂದೇ ದೇಹದ ಅಂಗಗಳಾಗಿದ್ದೇವಲ್ಲಾ.
26. [§ ಕೀರ್ತ 4:4. ]“ಕೋಪಗೊಳ್ಳಬೇಕಾಗಿ ಬಂದರೂ ಪಾಪಮಾಡಬೇಡಿರಿ,” ಸೂರ್ಯನು ಮುಳುಗುವುದಕ್ಕಿಂತ ಮೊದಲೇ ನಿಮ್ಮ ಸಿಟ್ಟು ತೀರಿಹೋಗಲಿ.
27. [* ಯಾಕೋಬ. 4:7: ]ಸೈತಾನನಿಗೆ ಅವಕಾಶಕೊಡಬೇಡಿರಿ.
28. ಕಳವು ಮಾಡುವವನು ಇನ್ನು ಮುಂದೆ ಕಳವು ಮಾಡದೇ ಸ್ವಂತ [† 1 ಥೆಸ. 4:11; 2 ಥೆಸ. 3:8, 11: ]ಕೈಯಿಂದ ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ. ಆಗ ಕೊರತೆಯಲ್ಲಿರುವವರಿಗೆ ಕೊಡುವುದಕ್ಕೆ ಅವನಿಂದಾಗುವದು.
29. [‡ ಎಫೆ 5:4; ಕೊಲೊ 3:8; ಮತ್ತಾ 12:34: ]ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತು ಹೊರಡಬಾರದು. ಭಕ್ತಿಯನ್ನು ವೃದ್ಧಿ ಮಾಡುವಂತಹ ಸಮಯೋಚಿತವಾದ ಮಾತನ್ನು ಆಡಿದರೆ [§ ಕೊಲೊ 4:6: ]ಕೇಳುವವರಿಗೆ ಹಿತವಾಗಿ ತೋರುವುದು.
30. [* ಯೆಶಾ 63:10; 1 ಥೆಸ. 5:19: ]ದೇವರ ಪವಿತ್ರಾತ್ಮನನ್ನು ದುಃಖಪಡಿಸಬೇಡಿರಿ. ಆತನಲ್ಲಿಯೇ ವಿಮೋಚನೆಯ ದಿನಕ್ಕಾಗಿ [† ಎಫೆ 1:13: ]ಮುದ್ರೆ ಹೊಂದಿದ್ದೀರಲ್ಲಾ.
31. [‡ ಕೊಲೊ 3:8: ]ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನಗಳನ್ನೂ ನಿಮ್ಮಿಂದ ದೂರ ಮಾಡಿರಿ.
32. [§ ಕೊಲೊ 3:12,3; 1 ಪೇತ್ರ. 3:8: ]ಒಬ್ಬರಿಗೊಬ್ಬರು ದಯೆಯುಳ್ಳವರಾಗಿಯೂ, ಕರುಣೆಯುಳ್ಳವರಾಗಿಯೂ ಇರಿ. ದೇವರು ನಿಮ್ಮನ್ನು ಕ್ರಿಸ್ತನಲ್ಲಿ ಕ್ಷಮಿಸಿದಂತೆ ನೀವು ಒಬ್ಬರನ್ನೊಬ್ಬರು [* 2 ಕೊರಿ 2:7,10; ಮತ್ತಾ 6:14: ]ಕ್ಷಮಿಸಿರಿ. [PE]