1. ಆ ಮೇಲೆ ಪುನಃ ದೃಷ್ಟಿಸಿ ಸೂರ್ಯನ ಕೆಳಗೆ ನಡೆಯುತ್ತಿರುವ ಹಿಂಸೆಗಳನ್ನೆಲ್ಲಾ ನೋಡಿದೆನು. [QBR] ಆಹಾ! ಹಿಂಸೆಗೊಂಡವರ ಕಣ್ಣೀರನ್ನು ನೋಡು. [QBR2] ಅವರನ್ನು ಸಂತೈಸುವವರು ಯಾರೂ ಇಲ್ಲ. ಅವರನ್ನು ಹಿಂಸಿಸುವವರಿಗೆ ಬಹಳ ಬಲ ಇದೆ. [QBR] ಹಿಂಸೆಗೊಂಡವರನ್ನು ಸಂತೈಸುವವರು ಒಬ್ಬರೂ ಇಲ್ಲ. [QBR]
2. ಇದನ್ನು ನೋಡಿ ಇನ್ನೂ ಜೀವದಿಂದಿದ್ದು ಬದುಕುವವರಿಗಿಂತ ಸತ್ತವರೇ ಮೇಲೆಂದು ಹೊಗಳಿದೆನು. [QBR]
3. ಹೌದು, ಈ ಇಬ್ಬರಿಗಿಂತಲೂ ಇನ್ನೂ ಹುಟ್ಟದೇ, [QBR2] ಲೋಕದಲ್ಲಿ ನಡೆಯುತ್ತಿರುವ ಅಧರ್ಮವನ್ನು ನೋಡದೆ ಇರುವುದೇ ಒಳ್ಳೆಯದೆಂದು ತಿಳಿದುಕೊಂಡೆನು. [PE][PS]
4. ಆಗ ಸಮಸ್ತ ಪ್ರಯಾಸವನ್ನು, ಕೈಗೂಡುವ ಸಕಲ ಕಾರ್ಯವನ್ನು ನೋಡಿ ಇವು ಪರಸ್ಪರ ಮತ್ಸರಕ್ಕೆ ಆಸ್ಪದವೆಂದು ಗ್ರಹಿಸಿಕೊಂಡೆನು. ಇದು ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥವೇ. [QBR]
5. ಮೂಢನು ತನ್ನ ಕೈಗಳನ್ನು ಮುಚ್ಚಿಕೊಂಡು ಯಾವ ಕೆಲಸವನ್ನು ಮಾಡದೆ, [QBR2] ತನ್ನನ್ನು ತಾನು ನಾಶಪಡಿಸಿಕೊಳ್ಳುವನು. [* ತನ್ನನ್ನು ತಾನು ನಾಶಪಡಿಸಿಕೊಳ್ಳುವನು. ಅಥವಾ ತನ್ನ ಮಾಂಸವನ್ನು ತಾನೇ ತಿನ್ನುವನು.] [QBR]
6. ಗಾಳಿಯನ್ನು ಹಿಂದಟ್ಟುವ ಹಾಗೆಯೇ ಪ್ರಯಾಸದಿಂದ ತುಂಬಿದ ಎರಡು ಕೈಗಳಿಂದ ಮಾಡಿದ ಕೆಲಸಕ್ಕಿಂತ [QBR2] ನೆಮ್ಮದಿಯಾಗಿ ಒಂದು ಕೈಯಿಂದ ಮಾಡಿದ ಕೆಲಸವೇ ಲೇಸು. [PE][PS]
7. ಆಗ ನಾನು ಲೋಕದಲ್ಲಿ ಮತ್ತೊಂದು ವ್ಯರ್ಥ ವಿಷಯವನ್ನು ಕಂಡೆನು. [QBR]
8. ಒಬ್ಬಂಟಿಗನಾದ ಒಬ್ಬ ಮನುಷ್ಯನಿದ್ದಾನೆ. [QBR2] ಅವನಿಗೆ ಅಣ್ಣತಮ್ಮಂದಿರು ಇಲ್ಲ, ಮಕ್ಕಳೂ ಇಲ್ಲ. [QBR] ಆದರೂ ಅವನ ಪ್ರಯಾಸಕ್ಕೆ ಅಂತ್ಯವಿಲ್ಲ, [QBR2] ಐಶ್ವರ್ಯದಿಂದ ಅವನ ಕಣ್ಣಿಗೆ ತೃಪ್ತಿಯಿಲ್ಲ. [QBR] ಅವನು, “ನಾನು ಸುಖವನ್ನು ತೊರೆದು [QBR2] ಯಾರಿಗೋಸ್ಕರ ಪ್ರಯಾಸಪಡುತ್ತಾ ಇದ್ದೇನೆ?” ಅಂದುಕೊಳ್ಳುವನು. [QBR] ಇದೂ ಸಹ ವ್ಯರ್ಥವೇ. ಕೇವಲ ಪ್ರಯಾಸದ ಕೆಲಸವೇ ಸರಿ. [QBR]
9. ಒಬ್ಬನಿಗಿಂತ ಇಬ್ಬರು ಕೆಲಸ ಮಾಡುವುದು ಒಳ್ಳೆಯದು. [QBR2] ಅವರ ಪ್ರಯಾಸಕ್ಕೆ ಒಳ್ಳೆಯ ಲಾಭವನ್ನು ಸಂಪಾದಿಸಬಹುದು. [QBR]
10. ಒಬ್ಬನು ಬಿದ್ದರೆ, ಇನ್ನೊಬ್ಬನು ತನ್ನ ಸ್ನೇಹಿತನನ್ನು ಮೇಲಕ್ಕೆ ಎಬ್ಬಿಸುವನು. [QBR2] ಒಬ್ಬನು ಒಬ್ಬಂಟ್ಟಿಗನಾಗಿ ಬಿದ್ದರೆ, ಅವನನ್ನು ಮೇಲಕ್ಕೆ ಎಬ್ಬಿಸುವವನು ಯಾರೂ ಇಲ್ಲ, [QBR2] ಅವನ ಗತಿ ದುರ್ಗತಿಯೇ. [QBR]
11. ಮತ್ತು ಇಬ್ಬರು ಜೊತೆಯಲ್ಲಿ ಮಲಗಿಕೊಂಡರೆ ಅವರಿಗೆ ಬೆಚ್ಚಗಾಗುತ್ತದೆ, [QBR2] ಆದರೆ ಒಬ್ಬನು ಹೇಗೆ ಬೆಚ್ಚಗಿರುತ್ತಾನೆ? [QBR]
12. ಒಬ್ಬನನ್ನು ಮತ್ತೊಬ್ಬನು ಜಯಿಸಬಹುದು, ಆದರೆ [QBR2] ಗೆದ್ದವನನ್ನು ಇಬ್ಬರು ಎದುರಿಸಿ ನಿಲ್ಲಿಸಬಹುದು. [QBR2] ಮೂರು ಹುರಿಯ ಹಗ್ಗ ಬೇಗನೆ ಕಿತ್ತುಹೋಗುವುದಿಲ್ಲ. [PS]
13. {ರಾಜಕೀಯ ಶಕ್ತಿಯು ವ್ಯರ್ಥ} [PS] ಎಚ್ಚರಿಕೆಯ ಮಾತಿಗೆ ಕಿವಿಗೊಡದ ಮುದಕನೂ, ಮೂಢನೂ ಆದ ಅರಸನಿಗಿಂತ ಜ್ಞಾನಿಯಾದ ಬಡ ಯುವಕನೇ ಮೇಲು.
14. ಇಂಥ ಯುವಕನೊಬ್ಬನು ರಾಜನಾಗಲು ಸೆರೆಮನೆಯಿಂದ ಬಂದಿರಬಹುದು ಅಥವಾ ತನ್ನ ರಾಜ್ಯದಲ್ಲಿ ಬಡ ಪ್ರಜೆಯಾಗಿ ಹುಟ್ಟಿರಬಹುದು. [PE][PS]
15. ಸೂರ್ಯನ ಕೆಳಗೆ ಜೀವಿಸಿ ಮತ್ತು ನಡೆದಾಡಿದವರೆಲ್ಲರೂ ಅರಸನ ಉತ್ತರಾಧಿಕಾರಿಯಾದ ಯುವಕನ ಪಕ್ಷವಹಿಸುವುದನ್ನು ನಾನು ನೋಡಿದೆನು.
16. ಇವನ ಅಧಿಪತ್ಯಕ್ಕೆ ಒಳಪಟ್ಟ ಎಲ್ಲಾ ಜನರ ಸಂಖ್ಯೆಯು ಅಪಾರ. ಅವನ ಆಳ್ವಿಕೆಯ ನಂತರ ಇವನಲ್ಲಿ ಆನಂದಿಸುವುದಿಲ್ಲ. ಇದೂ ಸಹ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥವಾಗಿದೆ. [PE]