1. [QS]ಸತ್ತ ನೊಣಗಳಿಂದ ಗಂಧದತೈಲವು ಕೊಳೆತು ನಾರುವುದು. [QE][QS2]ಹಾಗೆಯೇ ಸ್ವಲ್ಪ ಹುಚ್ಚುತನವು ಜ್ಞಾನ ಮತ್ತು ಘನತೆಗಳನ್ನು ಕೆಡಿಸುತ್ತದೆ. [QE]
2. [QS]ಜ್ಞಾನಿಯ ಬುದ್ಧಿಯು ಅವನ ಬಲಗಡೆಯಿರುವುದು. [QE][QS2]ಅಜ್ಞಾನಿಯ ಬುದ್ಧಿಯು ಅವನ ಎಡಗಡೆಯಿರುವುದು. [QE]
3. [QS]ಇದಲ್ಲದೆ ಹುಚ್ಚನು ಬುದ್ಧಿತಪ್ಪಿ ತಿರುಗುವ [QE][QS2]ದಾರಿಯಲ್ಲಿ ತನ್ನ ಹುಚ್ಚುತನವನ್ನು [QE][QS3]ಎಲ್ಲರಿಗೆ ಪ್ರಕಟಮಾಡುವನು. [QE]
4. [QS]ದೊರೆಯು ನಿನ್ನ ಮೇಲೆ ಸಿಟ್ಟುಗೊಂಡರೆ ಉದ್ಯೋಗವನ್ನು ಬಿಡಬೇಡ. [QE][QS2]ತಾಳ್ಮೆಯು ದೊಡ್ಡ ಸಿಟ್ಟನ್ನು ಅಡಗಿಸುತ್ತದೆ.[* ತಾಳ್ಮೆಯು ದೊಡ್ಡ ಸಿಟ್ಟನ್ನು ಅಡಗಿಸುತ್ತದೆ ಅಥವಾ ನೀನು ಶಾಂತನಾಗಿರುವಾಗ ದೊಡ್ಡ ದೋಷಗಳು ಕ್ಷಮಿಸಲ್ಪಡುತ್ತವೆ ಅಥವಾ ನಿನ್ನ ದೋಷಗಳನ್ನು ಅವನಿಗೆ ಒಪ್ಪಿಸಿಕೊಡು. ] [QE]
5. [QS]ಲೋಕದಲ್ಲಿ ಒಂದು ಸಂಕಟವನ್ನು ಕಂಡಿದ್ದೇನೆ. [QE][QS2]ಅದು ಆಳುವವನ ಸಮ್ಮುಖದಿಂದ ಹೊರಟುಬರುವ ಹಾಗೆಯೇ ತೋರುತ್ತದೆ. [QE]
6. [QS]ಮೂಢರಿಗೆ ಮಹಾ ಪದವಿ ದೊರೆಯುವುದು. [QE][QS2]ಘನವಂತರೂ ಹೀನಸ್ಥಿತಿಯಲ್ಲಿರುವರು. [QE]
7. [QS]ಆಳುಗಳು ಕುದುರೆ ಸವಾರಿ ಮಾಡುವುದನ್ನೂ, [QE][QS2]ಪ್ರಭುಗಳು ಆಳುಗಳಂತೆ ನೆಲದ ಮೇಲೆ ನಡೆಯುವುದನ್ನೂ ನೋಡಿದ್ದೇನೆ. [QE]
8. [QS]ಗುಂಡಿಯನ್ನು ತೋಡುವವನು [QE][QS2]ತಾನೇ ಅದರಲ್ಲಿ ಬೀಳುವನು, ಗೋಡೆಯನ್ನು ಒಡೆಯುವವನಿಗೆ, [QE][QS2]ಹಾವು ಕಚ್ಚುವುದು. [QE]
9. [QS]ಯಾವನು ಕಲ್ಲುಗಳನ್ನು ಕೀಳುವನೋ [QE][QS2]ಅವನಿಗೆ ಹಾನಿ ಆಗುವುದು. [QE][QS]ಮರವನ್ನು ಕಡೆಯುವವನಿಗೆ [QE][QS2]ಅಪಾಯವಿದೆ. [QE]
10. [QS]ಮೊಂಡು ಕೊಡಲಿಯ ಬಾಯಿಯನ್ನು ಮಸೆಯದಿದ್ದರೆ ಅವನು ಹೆಚ್ಚು ಬಲವನ್ನು ಪ್ರಯೋಗಿಸಬೇಕು. ಕಾರ್ಯಸಿದ್ಧಿಗೆ ಜ್ಞಾನವೇ ಸಾಧನ. [QE]
11. [QS]ಹಾವಾಡಿಸುವುದರೊಳಗೆ ಹಾವು ಕಚ್ಚಿದರೆ, [QE][QS2]ಹಾವಾಡಿಗನಿಗೆ ಯಾವ ಪ್ರಯೋಜನವೂ ಇಲ್ಲ. [QE]
12. [QS]ಜ್ಞಾನಿಯ ಮಾತು ಹಿತ. [QE][QS2]ಅಜ್ಞಾನಿಯ ಬಾಯಿ ತನ್ನನ್ನೇ ನುಂಗಿಬಿಡುವುದು. [QE]
13. [QS]ಅಜ್ಞಾನಿಯ ಮಾತುಗಳು ಆರಂಭದಲ್ಲಿ ಬುದ್ಧಿಹೀನತೆ, [QE][QS2]ಅಂತ್ಯದಲ್ಲಿ ಅಪಾಯದ ಮರಳುತನ. [QE]
14. [QS]ಮನುಷ್ಯನು ಮುಂದೆ ಆಗುವುದನ್ನು ತಿಳಿಯನು. [QE][QS2]ತಾನು ಕಾಲವಾದ ಮೇಲೆ ಹೀಗೆಯೇ ಆಗುವುದೆಂದು ಅವನು ಯಾರಿಂದ ತಿಳಿದುಕೊಂಡಾನು? [QE][QS2]ಅಜ್ಞಾನಿಯ ಮಾತುಗಳೋ ಬಹಳ. [QE]
15. [QS]ಪಟ್ಟಣದ ದಾರಿ ತಿಳಿಯದವನಿಗೆ ಮೂಢರು ತಿಳಿಸಲು, [QE][QS2]ಪಡುವ ಪ್ರಯಾಸದಿಂದ ಆಯಾಸವೇ. [QE]
16. [QS]ದೇಶದ ಅರಸನು ಯುವಕನಾಗಿದ್ದರೆ,[† ಯುವಕನಾಗಿದ್ದರೆ, ಅಥವಾ ಸೇವಕನಾಗಿದ್ದರೆ. ] [QE][QS2]ಪ್ರಭುಗಳು ಹೊತ್ತಾರೆ ಔತಣಕ್ಕೆ ಕುಳಿತುಕೊಂಡರೆ ನಿನಗೆ ದೌರ್ಭಾಗ್ಯವೇ! [QE]
17. [QS]ದೇಶದ ಅರಸನು ಕುಲೀನನಾಗಿದ್ದರೆ, [QE][QS2]ಪ್ರಭುಗಳು ಅಮಲಿಗಾಗಿ ಅಲ್ಲ, [QE][QS2]ಆದರೆ ಶಕ್ತಿಗಾಗಿ ಸಕಾಲದಲ್ಲಿ ಊಟಕ್ಕೆ ಕುಳಿತರೆ [QE][QS2]ನಿನಗೆ ಭಾಗ್ಯವೇ! [QE]
18. [QS]ಸೋಮಾರಿತನದಿಂದ ತೊಲೆಗಳು ಬೊಗ್ಗುವವು. [QE][QS2]ಜೋಲುಗೈಯಿಂದ ಮನೆ ಸೋರುವುದು. [QE]
19. [QS]ನಗುವಿಗಾಗಿ ಔತಣವು, [QE][QS2]ದ್ರಾಕ್ಷಾರಸದಿಂದ ಜೀವನಕ್ಕೆ ಆನಂದವು, [QE][QS3]ಧನವು ಎಲ್ಲವನ್ನೂ ಒದಗಿಸಿಕೊಡುವುದು. [QE]
20. [QS]ಮನಸ್ಸಿನಲ್ಲಿಯೂ ಅರಸನನ್ನು ದೂಷಿಸದಿರು. [QE][QS2]ಮಲಗುವ ಕೋಣೆಯಲ್ಲಿಯೂ ಧನಿಕನನ್ನು ಬಯ್ಯದಿರು. [QE][QS]ಆಕಾಶದ ಹಕ್ಕಿಯು ಆ ಶಬ್ದವನ್ನು ಮುಟ್ಟಿಸುವವು; [QE][QS2]ಪಕ್ಷಿಯು ಆ ವಿಷಯವನ್ನು ತಿಳಿಸುವುದು. [QE]