2. ನನ್ನ ಉಪದೇಶವು ಹಸಿಹುಲ್ಲಿನ ಮೇಲೆ ಮೆಲ್ಲಗೆ ಸುರಿಯುವ ಮಳೆಯ ತುಂತುರುಗಳಂತೆ ತಣ್ಣಗಿರುವುದು;
ನನ್ನ ಬೋಧನೆಯು ಮಂಜಿನಂತೆಯೂ ಮತ್ತು ಕಾಯಿಪಲ್ಯಗಳ ಮೇಲೆ ಬೀಳುವ ಹದಮಳೆಯಂತೆಯೂ ಹಿತವಾಗಿರುವುದು. |
4. ನಮಗೆ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡೆಸುವುದೆಲ್ಲಾ ನ್ಯಾಯ;
ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಮತ್ತು ಯಥಾರ್ಥನೂ ಆಗಿದ್ದಾನೆ. |
6. ದುರಾಚಾರಿಗಳಿರಾ, ಅವಿವೇಕಿಗಳಿರಾ, ಯೆಹೋವನ ವಿಷಯದಲ್ಲಿ ಈ ರೀತಿಯಾಗಿ ವರ್ತಿಸಬಹುದೇ?
ಆತನು ನಿಮ್ಮನ್ನು ಸೃಷ್ಟಿಸಿದ ತಂದೆಯಲ್ಲವೇ; ನಿಮ್ಮನ್ನು ಜನಾಂಗವನ್ನಾಗಿ ಮಾಡಿ ಸ್ಥಾಪಿಸಿದನಲ್ಲವೇ. |
7. ಪೂರ್ವಕಾಲವನ್ನು ನೆನಪಿಗೆ ತಂದುಕೊಳ್ಳಿರಿ; ನಿಮ್ಮ ಪೂರ್ವಜರ ಚರಿತ್ರೆಯನ್ನು ಆಲೋಚಿಸಿರಿ.
ನಿಮ್ಮ ನಿಮ್ಮ ತಂದೆಗಳನ್ನು ವಿಚಾರಿಸಿದರೆ ಅವರು ತಿಳಿಸುವರು; ಹಿರಿಯರನ್ನು ಕೇಳಿದರೆ ಅವರು ವಿವರಿಸುವರು. |
8. ಹೇಗೆಂದರೆ, “ಪರಾತ್ಪರನಾದ ದೇವರು ಜನಾಂಗಗಳನ್ನು ಬೇರೆ ಬೇರೆ ಮಾಡಿ ಅವರವರಿಗೆ ಸ್ವದೇಶಗಳನ್ನು ನೇಮಿಸಿಕೊಟ್ಟಾಗ
ಇಸ್ರಾಯೇಲರ ಸಂಖ್ಯೆಗೆ ತಕ್ಕಂತೆ ಆಯಾ ಜನಾಂಗಕ್ಕೆ ಒಂದೊಂದು ಪ್ರದೇಶವನ್ನು ಗೊತ್ತು ಮಾಡಿದನು. |
10. ಆತನು ಶೂನ್ಯವೂ ಮತ್ತು ಭಯಂಕರವೂ ಆಗಿರುವ
ಮರಳುಗಾಡಿನಲ್ಲಿ ಅವರನ್ನು ಕಂಡು ಗುರಾಣಿಯಂತೆ ಆವರಿಸಿಕೊಂಡನು. ಪ್ರೀತಿಯಿಂದ ಪರಾಂಬರಿಸಿದ ಹಾಗೂ ಕಣ್ಣುಗುಡ್ಡೆಯಂತೆ ಕಾಪಾಡಿದನು. |
11. ಹದ್ದು ತನ್ನ ಮರಿಗಳನ್ನು ಗೂಡಿನೊಳಗಿಂದ ಹೊರಡಿಸಿ,
ಅವುಗಳ ಬಳಿಯಲ್ಲಿ ಹಾರಾಡುವಂತೆ ಯೆಹೋವನು ತನ್ನ ರೆಕ್ಕೆಗಳನ್ನು ಚಾಚಿ ಇಸ್ರಾಯೇಲರನ್ನು ಹೊತ್ತುಕೊಂಡು ಅವರನ್ನು ಸಂರಕ್ಷಿಸಿದನು. |
13. ಆತನು ಅವರನ್ನು ಭೂಮಿಯ ಎತ್ತರವಾದ ಪ್ರದೇಶಗಳ ಮೇಲೆ ಹತ್ತಿಸಿ
ಅವರಿಗೆ ವ್ಯವಸಾಯ ವೃದ್ಧಿಯನ್ನು ಉಂಟುಮಾಡಿ, ಬಂಡೆಯಿಂದ ಜೇನೂ ಮತ್ತು ಗಿರಿಯಿಂದ ಎಣ್ಣೆಯೂ ದೊರೆಯುವಂತೆ ಮಾಡಿದನು. |
14. ಆಹಾರಕ್ಕಾಗಿ ಆಕಳಿನ ಮೊಸರು, ಆಡು ಕುರಿಗಳ ಹಾಲು, ಕೊಬ್ಬಿದ ಕುರಿ ಟಗರುಗಳ ಮಾಂಸವು,
ಬಾಷಾನ್ ಸೀಮೆಯ ಉತ್ತಮಪಶುಗಳು, ಹೋತಗಳು, ಶ್ರೇಷ್ಠವಾದ ಗೋದಿ ಇವುಗಳನ್ನೂ ಮತ್ತು ಪಾನಕ್ಕಾಗಿ ದ್ರಾಕ್ಷಿಯರಸವನ್ನೂ ಕೊಟ್ಟದ್ದೂ; ಇದನ್ನೆಲ್ಲಾ ನೆನಪಿಗೆ ತಂದುಕೊಳ್ಳಿರಿ.” |
15. ಆದರೆ * ಯಥಾರ್ಥತೆಯುಳ್ಳವನು. ಯೆಶುರೂನು ಚೆನ್ನಾಗಿ ತಿಂದು, ಕೊಬ್ಬಿ,
ತನ್ನನ್ನು ಸೃಷ್ಟಿಸಿದ ದೇವರನ್ನು ಬಿಟ್ಟು ತನ್ನ ಆಶ್ರಯದುರ್ಗವನ್ನು ತಿರಸ್ಕರಿಸಿದನು. |
17. ದೇವರೇ ಅಲ್ಲದ ಕ್ಷುದ್ರದೇವತೆಗಳಿಗೂ, ಪೂರ್ವಿಕರು ಭಜಿಸದೆ ಇದ್ದ
ಮತ್ತು ತಮಗೆ ಮೊದಲಿನಿಂದಲೂ ಗೊತ್ತಿಲ್ಲದೆ ಇರುವ ನೂತನದೇವತೆಗಳಿಗೂ ಬಲಿಯನ್ನರ್ಪಿಸಿದರು. |
18. ಇಸ್ರಾಯೇಲರೇ, ನಿಮ್ಮನ್ನು ಹುಟ್ಟಿಸಿದ ತಂದೆಯಂತಿರುವ ಶರಣನನ್ನು ನೀವು ಸ್ಮರಿಸಲಿಲ್ಲ;
ಹೆತ್ತ ತಾಯಿಯಂತಿರುವ ದೇವರನ್ನು ಮರೆತುಬಿಟ್ಟಿರಿ. |
20. ಆತನು ಅವರ ವಿಷಯದಲ್ಲಿ ಹೀಗೆ ಅಂದುಕೊಂಡನು,
“ನಾನು ಅವರಿಗೆ ವಿಮುಖನಾಗಿ ಅವರಿಗೆ ಪ್ರಾಪ್ತವಾಗುವ ಗತಿಯನ್ನು ನೋಡುವೆನು. ಅವರು ಸತ್ಯವನ್ನು ತಿಳಿದೂ ಅದನ್ನು ಅನುಸರಿಸದೆ, ದ್ರೋಹಿಗಳಾದ ಮಕ್ಕಳಾಗಿದ್ದಾರೆ. |
21. ಅವರು ದೇವರಲ್ಲದವುಗಳ ಮೂಲಕ ನನ್ನನ್ನು ರೇಗಿಸಿದ್ದರಿಂದ ನಾನು ಜನಾಂಗವಲ್ಲದವರ ಮೂಲಕ ಅವರಲ್ಲಿ ಕೋಪಹುಟ್ಟಿಸುವೆನು.
ಅವರು ನಿಷ್ಪ್ರಯೋಜಕವಾದ ವಿಗ್ರಹಗಳ ಮೂಲಕ ನನ್ನನ್ನು ಸಿಟ್ಟಿಗೆಬ್ಬಿಸಿದ್ದರಿಂದ ನಾನು ಸದಾಚಾರವಿಲ್ಲದ ಜನರ ಮೂಲಕ ಅವರನ್ನು ಸಿಟ್ಟಿಗೆಬ್ಬಿಸುವೆನು. |
22. ನನ್ನ ಕೋಪಾಗ್ನಿ ಪ್ರಜ್ವಲಿಸುತ್ತದೆ; ಅದು ಪಾತಾಳದ ವರೆಗೂ ವ್ಯಾಪಿಸಿ
ಬೆಳೆಯ ಸಹಿತವಾಗಿ ಭೂಮಿಯನ್ನೂ ಬುಡಸಹಿತವಾಗಿ ಬೆಟ್ಟಗಳನ್ನೂ ದಹಿಸಿಬಿಡುವುದು. |
23. ಅವರಿಗೆ ಒಂದರ ಮೇಲೊಂದಾಗಿ ವಿಪತ್ತುಗಳನ್ನು ಬರಮಾಡುವೆನು;
ನನ್ನ ಎಲ್ಲಾ ಬಾಣಗಳನ್ನೂ ಅವರಿಗೆ ವಿರುದ್ಧವಾಗಿ ಪ್ರಯೋಗಿಸುವೆನು. |
24. ಅವರು ಬರದಿಂದ ಕ್ಷೀಣವಾಗುವರು, ತಾಪದಿಂದಲೂ ಅಂಟುರೋಗದಿಂದಲೂ ಸಾಯುವರು;
ಅದಲ್ಲದೆ ನಾನು ದುಷ್ಟ ಮೃಗಗಳನ್ನೂ ಮತ್ತು ವಿಷಸರ್ಪಗಳನ್ನೂ ಅವರ ಮೇಲೆ ಬರಮಾಡುವೆನು. |
25. ಮನೆಯ ಹೊರಗೆ ಕತ್ತಿಯೂ, ಒಳಗೆ ಭಯವೂ ಇರುವುದು.
ಯೌವನಸ್ಥರು, ಕನ್ಯೆಯರು, ಮೊಲೆಕೂಸುಗಳು, ನರೇತಲೆಯವರು ಇವರೆಲ್ಲರೂ ಕತ್ತಿಯಿಂದ ಕೊಲ್ಲಲ್ಪಡುವರು. |
27. ಆದರೆ ಅವರ ವಿರೋಧಿಗಳ ಹಮ್ಮಿನಿಂದ ತಪ್ಪಾದ ಭಾವನೆ ಮಾಡಿಕೊಂಡು,
‘ಇದು ನಮ್ಮ ಭುಜಬಲದಿಂದಲೇ ಹೊರತು ಯೆಹೋವನಿಂದ ಆಗಲಿಲ್ಲ ಅಂದುಕೊಳ್ಳುವರು’ ಎಂದು ನಾನು ಹಿಂದೆಗೆದೆನು” ಎಂಬುದೇ. |
29. ಅವರಿಗೆ ಜ್ಞಾನವಿದ್ದರೆ ಈ ಸಂಗತಿಗಳನ್ನೆಲ್ಲಾ ಗ್ರಹಿಸುತ್ತಿದ್ದರು; ತಮಗೆ ಅಂತ್ಯದಲ್ಲಿ ದುರವಸ್ಥೆ ಪ್ರಾಪ್ತವಾಗುವುದೆಂದು ತಿಳಿದುಕೊಳ್ಳುತ್ತಿದ್ದರು!
|
30. ಅವರ ಆಶ್ರಯದುರ್ಗವಾದ ಯೆಹೋವನು ಅವರನ್ನು ಶತ್ರಗಳಿಗೆ ಒಪ್ಪಿಸಿಕೊಡದಿದ್ದರೆ
ಒಬ್ಬನಿಂದ ಸಾವಿರ ಜನರು ಹೇಗೆ ಸೋತುಹೋಗುತ್ತಿದ್ದರು? ಯೆಹೋವನು ಅವರನ್ನು ಕೈಬಿಡದಿದ್ದರೆ ಇಬ್ಬರಿಗೆ ಹೆದರಿ ಹತ್ತು ಸಾವಿರ ಜನರು ಹೇಗೆ ಓಡಿಹೋಗುತ್ತಿದ್ದರು? |
31. ನಮ್ಮ ಆಶ್ರಯದುರ್ಗ ಅವರ ಆಶ್ರಯದುರ್ಗದಂತಲ್ಲಾ, ನಮ್ಮ ಅಶ್ರಯದಾತನಿಗೆ ಯಾರು ಸಮಾನರಲ್ಲವೆಂದು ನಮ್ಮ ಶತ್ರುಗಳೇ ಒಪ್ಪಿಕೊಳ್ಳುತ್ತಾರೆ.
|
32. ಅವರು ಸೊದೋಮ್ಯರೆಂಬ ದ್ರಾಕ್ಷಾಲತೆಯ ಒಂದು ಬಳ್ಳಿಯಂತಿದ್ದಾರೆ;
ಮತ್ತು ಅದು ಗೊಮೋರ ಪಟ್ಟಣದ ತೋಟಗಳಲ್ಲಿ ಬೆಳೆಯುವ ಜಾತಿ. ಅದರ ದ್ರಾಕ್ಷಿಹಣ್ಣು ವಿಷದ ದ್ರಾಕ್ಷಿಹಣ್ಣು; ಅದರ ಗೊಂಚಲು ಕಹಿ. |
35. ಪ್ರತಿಕಾರಮಾಡಿ ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ;
ಅವರು ಜಾರಿ ಬೀಳುವ ಸಮಯ ಬರುವುದು. ಅವರಿಗೆ ಆಪತ್ಕಾಲವು ಸಮೀಪಿಸಿತು; ಅವರಿಗೋಸ್ಕರ ಸಿದ್ಧವಾಗಿರುವ ದುರ್ಗತಿ ಬೇಗ ಬರುವುದು. |
36. ಆಗ ಯೆಹೋವನು ತನ್ನ ಜನರಿಗಾಗಿ ನ್ಯಾಯತೀರಿಸುವನು.
ಪರತಂತ್ರರಾಗಲಿ ಅಥವಾ ಸ್ವತಂತ್ರರಾಗಲಿ ಅವರೆಲ್ಲರೂ ನಿರಾಶ್ರಿತರಾಗಿ ನಿಶ್ಶೇಷರಾದುದ್ದನ್ನು ಆತನು ತಿಳಿದು ತನ್ನ ಸೇವಕರ ವಿಷಯದಲ್ಲಿ ಕನಿಕರಪಡುವನು. |
37. ಯೆಹೋವನು ಅವರ ವಿಷಯದಲ್ಲಿ ಹೇಳುವುದು ಏನೆಂದರೆ,
“ಅವರು ಪೂಜಿಸುತ್ತಿದ್ದ ದೇವರುಗಳು ಎಲ್ಲಿ ಹೋದರು? ಅವರು ಆಶ್ರಯಿಸಿಕೊಂಡಿದ್ದ ಆಶ್ರಯದುರ್ಗನು ಎಲ್ಲಿದ್ದಾನೆ? |
38. ಅವರ ನೈವೇದ್ಯಗಳ ಕೊಬ್ಬನ್ನು ತಿಂದು ಮತ್ತು ಅವರು
ಸಮರ್ಪಿಸಿದ ಪಾನದ್ರವ್ಯಗಳನ್ನು ಕುಡಿದ ದೇವತೆಗಳು ಎಲ್ಲಿ? ಅವರೇ ನಿಮ್ಮ ಸಹಾಯಕ್ಕೆ ಬರಲಿ; ಅವರೇ ನಿಮ್ಮನ್ನು ಕಾಯಲಿ. |
39. ನಾನೇ, ನಾನೊಬ್ಬನೇ ದೇವರಾಗಿರಲಾಗಿ
ನನ್ನ ಹೊರತು ಯಾವ ದೇವರೂ ಇಲ್ಲವೆಂದು ಈಗಲಾದರೂ ತಿಳಿದುಕೊಳ್ಳಿರಿ. ಬದುಕಿಸುವವನೂ ಹಾಗೂ ಕೊಲ್ಲುವವನೂ ನಾನೇ; ಗಾಯಪಡಿಸುವವನೂ ಮತ್ತು ವಾಸಿಮಾಡುವವನೂ ನಾನೇ; ನನ್ನ ಕೈಯಿಂದ ತಪ್ಪಿಸಲು ಶಕ್ತನು ಯಾವನೂ ಇಲ್ಲ. |
40. ನಾನು ಆಕಾಶದ ಕಡೆಗೆ ಕೈಯೆತ್ತಿ ನಾನು ಸದಾಕಾಲ
ಜೀವಿಸುವವನೆಂಬುದು ಎಷ್ಟು ನಿಶ್ಚಯ ಎಂದು ಖಂಡಿತವಾಗಿ ಪ್ರಮಾಣಮಾಡುವೆನು, |
41. ‘ಥಳಥಳಿಸುವ ನನ್ನ ಕತ್ತಿಯನ್ನು ನಾನು ಹದಮಾಡಿ,
ನಾನು ಕೈ ಚಾಚಿ ನ್ಯಾಯವನ್ನು ಸ್ಥಾಪಿಸುವುದಕ್ಕೆ ಮುನ್ನುಗ್ಗಿ ನನ್ನ ಶತ್ರುಗಳಿಗೆ ಮುಯ್ಯಿತೀರಿಸುವೆನು, ನನ್ನನ್ನು ದ್ವೇಷಿಸಿದವರಿಗೆ ಪ್ರತಿದಂಡನೆ ಮಾಡುವೆನು; |
42. ನನ್ನ ಬಾಣಗಳು ರಕ್ತವನ್ನು ಕುಡಿದು ಮತ್ತವಾಗುವವು;
ನನ್ನ ಕತ್ತಿಯು ಕೊಲ್ಲಲ್ಪಟ್ಟವರ ಮತ್ತು ಸೆರೆಹಿಡಿದವರ ರಕ್ತಮಾಂಸಗಳನ್ನು ಭಕ್ಷಿಸಿ ಶತ್ರುಗಳಲ್ಲಿರುವ ವೀರರ ತಲೆಗಳನ್ನು ಚೆಂಡಾಡುವುದು’ ಎಂಬುದೇ. |
43. ಜನಾಂಗಳಿರಾ, ದೇವರ ಜನರನ್ನು ಹೊಗಳಿರಿ.
ತನ್ನ ಸೇವಕರ ರಕ್ತವನ್ನು ಚೆಲ್ಲಿದ ಶತ್ರುಗಳಿಗೆ ಯೆಹೋವನು ಪ್ರತಿದಂಡನೆ ಮಾಡುತ್ತಾನೆ; ಅವರಿಗೆ ಮುಯ್ಯಿತೀರಿಸುತ್ತಾನೆ; ತನ್ನ ಜನರಿಗೋಸ್ಕರವೂ ಮತ್ತು ದೇಶಕ್ಕೋಸ್ಕರವೂ ದೋಷ ಪರಿಹಾರಮಾಡುತ್ತಾನೆ. |
46. ಅವರಿಗೆ, “ನಾನು ಈಗ ನಿಮಗೆ ಹೇಳಿದ ಎಚ್ಚರಿಕೆಯ ಮಾತುಗಳನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಳ್ಳಿರಿ, ಮತ್ತು ನಿಮ್ಮ ಸಂತತಿಯವರಿಗೆ ಈ ಧರ್ಮಶಾಸ್ತ್ರದ ನಿಯಮಗಳನ್ನು ಅನುಸಿರಿಸಬೇಕೆಂದು ಆಜ್ಞಾಪಿಸಿರಿ.
|
47. ಇದು ನಿರರ್ಥಕವೆಂದು ಭಾವಿಸಬಾರದು; ಇದರಿಂದ ನೀವು ಬಾಳುವಿರಿ; ನೀವು ಯೊರ್ದನ್ ನದಿಯನ್ನು ದಾಟಿ ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ಇದನ್ನು ಅನುಸರಿಸುವುದರಿಂದಲೇ ಬಹುಕಾಲ ಇರುವಿರಿ” ಎಂದು ಹೇಳಿದನು. PS
|
49. “ನೀನು ಈ ಅಬಾರೀಮ್ ಬೆಟ್ಟಗಳನ್ನು ಅಂದರೆ ಮೋವಾಬ್ಯರ ದೇಶದಲ್ಲಿ ಯೆರಿಕೋ ಪಟ್ಟಣಕ್ಕೆ ಎದುರಾಗಿರುವ ನೆಬೋ ಬೆಟ್ಟವನ್ನು ಹತ್ತಿ, ನಾನು ಇಸ್ರಾಯೇಲರಿಗೆ ಸ್ವದೇಶವಾಗುವುದಕ್ಕೆ ಕೊಡುವ ಕಾನಾನ್ ದೇಶವನ್ನು ನೋಡು.
|
50. ಅನಂತರ ನಿನ್ನ ಅಣ್ಣನಾದ ಆರೋನನು ಹೇಗೆ ಹೋರೇಬ್ ಎಂಬ ಬೆಟ್ಟದಲ್ಲಿ ದೇಹವನ್ನು ಬಿಟ್ಟು ತನ್ನ ಪೂರ್ವಿಕರಲ್ಲಿ ಸೇರಿದನೋ ಹಾಗೆಯೇ ನೀನೂ ಈ ಬೆಟ್ಟದಲ್ಲಿ ದೇಹವನ್ನು ಬಿಟ್ಟು ಪೂರ್ವಿಕರಲ್ಲಿ ಸೇರಬೇಕು.
|
51. ನೀವಿಬ್ಬರೂ ಚಿನ್ ಅರಣ್ಯದ ಕಾದೇಶಿನ ಮೆರೀಬಾದಲ್ಲಿ ನೀರು ಹೊರಟ ಸ್ಥಳದ ಬಳಿಯಲ್ಲಿದ್ದಾಗ, ಇಸ್ರಾಯೇಲರ ಮಧ್ಯದಲ್ಲಿ ನೀನು ನನಗೆ ವಿರುದ್ಧವಾಗಿ ದ್ರೋಹಮಾಡಿ ಅವರ ಮುಂದೆ ನನ್ನ ಗೌರವವನ್ನು ಕಾಪಾಡದೆಹೋದುದರಿಂದ ಹೀಗೆ ಆಗಬೇಕು.
|
52. ನಾನು ಇಸ್ರಾಯೇಲರಿಗೆ ಕೊಡುವ ದೇಶವನ್ನು ನೀನು ದೂರದಿಂದ ನೋಡಬಹುದೇ ಹೊರತು ಅದರಲ್ಲಿ ಪ್ರವೇಶಿಸಕೂಡದು” ಎಂದು ಆಜ್ಞಾಪಿಸಿದನು. PE
|