1. {#1ಇಸ್ರಾಯೇಲಿನ ನಾಶನ } [PS]ಕರ್ತನು ಯಜ್ಞವೇದಿಯ ಪಕ್ಕದಲ್ಲಿ ನಿಂತಿರುವುದನ್ನು ಕಂಡೆನು. ಆತನು ಹೀಗೆ ಅಪ್ಪಣೆ ಕೊಟ್ಟನು, “ಹೊಸ್ತಿಲುಗಳು ಕದಲುವಂತೆ ಕಂಬಗಳ ಬೋದಿಗೆಗಳನ್ನು ಬಲವಾಗಿ ಹೊಡೆ. [PE][QS]ಅವುಗಳನ್ನು ಒಡೆದುಬಿಟ್ಟು ಎಲ್ಲರ ತಲೆಯ ಮೇಲೆ ಬೀಳುವ ಹಾಗೆ ಮಾಡಿ, [QE][QS]ಉಳಿದವರನ್ನು ಖಡ್ಗದಿಂದ ಸಂಹರಿಸುವೆನು. [QE][QS]ಅವರಲ್ಲಿ ಯಾರೂ ಓಡಿಹೋಗರು, ಯಾರೂ ತಪ್ಪಿಸಿಕೊಳ್ಳರು. [QE]
2. [QS]ಪಾತಾಳದವರೆಗೆ ತೋಡಿಕೊಂಡು ಹೋದರೂ, [QE][QS]ನನ್ನ ಕೈ ಅವರನ್ನು ಅಲ್ಲಿಂದ ಹಿಡಿದೆಳೆಯುವುದು, [QE][QS]ಸ್ವರ್ಗದ ತನಕ ಹತ್ತಿದರೂ [QE][QS]ಅಲ್ಲಿಂದಲೂ ಅವರನ್ನು ಇಳಿಸುವೆನು. [QE]
3. [QS]ಕರ್ಮೆಲ್ ಬೆಟ್ಟದ ತುದಿಯಲ್ಲಿ ಅಡಗಿಕೊಂಡರೂ, [QE][QS]ನಾನು ಅವರನ್ನು ಹುಡುಕಿ ಅಲ್ಲಿಂದಲೂ ಹಿಡಿದು ತರುವೆನು. [QE][QS]ನನ್ನ ಕಣ್ಣಿಗೆ ಮರೆಯಾಗಿ ಸಮುದ್ರದತಳದಲ್ಲಿ ಅಡಗಿಕೊಂಡರೂ, [QE][QS]ಅಲ್ಲಿಯೂ ನನ್ನ ಅಪ್ಪಣೆಯ ಪ್ರಕಾರ ಘಟಸರ್ಪವು ಅವರನ್ನು ಕಚ್ಚುವುದು. [QE]
4. [QS]ಅವರು ತಮ್ಮ ಶತ್ರುಗಳ ವಶವಾಗಿ ಸೆರೆಗೆ ಹೋದರೂ, [QE][QS]ಖಡ್ಗವು ನನ್ನ ಆಜ್ಞಾನುಸಾರ ಅಲ್ಲಿಯೂ ಅವರನ್ನು ಹತಿಸುವುದು. [QE][QS]ಮೇಲಿಗಲ್ಲ, ಕೇಡಿಗಾಗಿಯೇ ಅವರ ಮೇಲೆ ದೃಷ್ಟಿಯಿಡುವೆನು.” [QE]
5. [QS]ಸೇನಾಧೀಶ್ವರನಾದ ಯೆಹೋವನು ಭೂಮಿಯನ್ನು ಮುಟ್ಟಿದ ಮಾತ್ರಕ್ಕೆ ಅದು ಕರಗಿ ಹೋಗುತ್ತದೆ; [QE][QS]ಸಕಲ ನಿವಾಸಿಗಳು ಗೋಳಾಡುತ್ತಾರೆ; [QE][QS]ನೆಲವೆಲ್ಲಾ ನೈಲ್ ನದಿಯಂತೆ ಉಬ್ಬಿ, [QE][QS]ಐಗುಪ್ತದ ನದಿಯ ಹಾಗೆಯೇ ಇಳಿದು ಹೋಗುತ್ತದೆ. [QE]
6. [QS]ಉನ್ನತಲೋಕದಲ್ಲಿ ಉಪ್ಪರಿಗೆಯನ್ನು ಅನೇಕ ಅಂತಸ್ತನ್ನಾಗಿ ಕಟ್ಟಿಕೊಂಡು, [QE][QS]ಭೂಲೋಕದ ಮೇಲೆ ಗುಮ್ಮಟವನ್ನು ಸ್ಥಾಪಿಸಿಕೊಂಡಿದ್ದಾನೆ. [QE][QS]ಸಮುದ್ರದ ನೀರನ್ನು ಸೇದಿ, [QE][QS]ಭೂಮಂಡಲದ ಮೇಲೆ ಹೊಯ್ಯುತ್ತಾನೆ, [QE][QS]ಯೆಹೋವನೆಂಬುವುದೇ ಆತನ ನಾಮಧೇಯ. [QE]
7. {#1ಇಸ್ರಾಯೇಲರು ಉಳಿದ ಜನಾಂಗಗಳಿಗಿಂತ ಹೆಚ್ಚೇನೂ ಅಲ್ಲ } [PS]ಯೆಹೋವನು ಇಂತೆನ್ನುತ್ತಾನೆ, [PE][QS]“ಇಸ್ರಾಯೇಲರೇ, ನೀವು ನನ್ನ ಗಣನೆಯಲ್ಲಿ ಕೂಷ್ಯರ ಹಾಗಿದ್ದೀರಲ್ಲವೇ? [QE][QS]ನಾನು ಇಸ್ರಾಯೇಲರನ್ನು ಐಗುಪ್ತ ದೇಶದಿಂದ ಫಿಲಿಷ್ಟಿಯರನ್ನು [QE][QS]ಕಫ್ತೋರಿನಿಂದ ಅರಾಮ್ಯರನ್ನು ಕೀರಿನಿಂದ ಏಕರೀತಿಯಾಗಿ ಬರಮಾಡಲಿಲ್ಲವೇ? [QE]
8. [QS]ಇಗೋ, ಕರ್ತನಾದ ಯೆಹೋವನು ಪಾಪವುಳ್ಳ ರಾಜ್ಯದ ಮೇಲೆ ದೃಷ್ಟಿಯಿಟ್ಟಿದ್ದಾನೆ, [QE][QS]ಮತ್ತು ಅದನ್ನು ಭೂಮಂಡಲದೊಳಗಿಂದ ನಾಶಮಾಡುವನು, [QE][QS]ಆದರೆ ಯಾಕೋಬಿನ ಮನೆತನವನ್ನು ಸಂಪೂರ್ಣವಾಗಿ ನಾಶಮಾಡನು” [QE][QS]ಇದು ಯೆಹೋವನ ನುಡಿ. [QE]
9. [QS]“ಇಗೋ, ಧಾನ್ಯವನ್ನು ಜರಡಿಯಲ್ಲಿ ಜಾಲಿಸುವ ಪ್ರಕಾರ, [QE][QS]ಇಸ್ರಾಯೇಲರನ್ನು ಸಕಲ ಜನಾಂಗಗಳಲ್ಲಿ ಹಾಕಿ ಜಾಲಿಸಬೇಕು” [QE][QS]ಆದರೂ ಒಂದು ಕಾಳಾದರೂ ನೆಲಕ್ಕೆ ಬೀಳುವುದಿಲ್ಲ, [QE][QS]ಎಂದು ಅಪ್ಪಣೆ ಕೊಡುವೆನು. [QE]
10. [QS]ನಮ್ಮನ್ನು ಆಪತ್ತು ಹಿಂದಟದು; ನಮ್ಮನ್ನು ತಡೆಯುವುದಿಲ್ಲ, [QE][QS]ಎನ್ನುವ ನನ್ನ ಜನರಲ್ಲಿರುವ ಸಮಸ್ತ ಪಾಪಿಗಳೆಲ್ಲರು ಖಡ್ಗದಿಂದ ಹತರಾಗುವರು. [QE]
11. {#1ಇಸ್ರಾಯೇಲಿನ ಮುಂದಿನ ಸೌಭಾಗ್ಯ } [PS]“ಆ ದಿನದಲ್ಲಿ ನಾನು ದಾವೀದನ ಬಿದ್ದುಹೋಗಿರುವ ಗುಡಾರವನ್ನು ಎತ್ತಿ, [PE][QS]ಅದರ ಬಿರುಕುಗಳನ್ನು ಮುಚ್ಚುವೆನು, [QE][QS]ಹಾಳಾದದ್ದನ್ನು ಎಬ್ಬಿಸಿ, [QE][QS]ಹಿಂದಿನ ದಿನಗಳಲ್ಲಿ ಮಾಡಿದ ಹಾಗೆ ಕಟ್ಟುವೆನು. [QE]
12. [QS]ನನ್ನ ಜನರು ಎದೋಮಿನ ಉಳಿದ ಭಾಗವನ್ನು, [QE][QS]ಯೆಹೋವನ ಪ್ರಜೆ ಎನ್ನಿಸಿಕೊಂಡಿದ್ದ ಸಕಲ ಜನಾಂಗಗಳನ್ನೂ [QE][QS]ಸ್ವಾಧೀನಮಾಡಿಕೊಳ್ಳುವ ಹಾಗೆ ಹಾಳಾದದ್ದನ್ನು ನಿಲ್ಲಿಸಿ ಮೊದಲಿದ್ದಂತೆ ಅದನ್ನು ತಿರುಗಿ ಕಟ್ಟಿಸುವೆನು” [QE][QS]ಎಂಬುದಾಗಿ ಯೆಹೋವನು ನುಡಿದಿದ್ದಾನೆ. [QE]
13. [QS]ಯೆಹೋವನು ಇಂತೆನ್ನುತ್ತಾನೆ, “ಇಗೋ, ದಿನಗಳು ಬರುವವು, [QE][QS]ಆ ಕಾಲದಲ್ಲಿ ಉಳುವವನು ಕೊಯ್ಯುವವನನ್ನೂ, [QE][QS]ದ್ರಾಕ್ಷಿಯನ್ನು ತುಳಿಯುವವನು ಬಿತ್ತುವವನನ್ನೂ ಹಿಂದಟ್ಟುವರು. [QE][QS]ಆಗ ಬೆಟ್ಟಗಳು ಹೊಸ ಸಿಹಿ ದ್ರಾಕ್ಷಾರಸವನ್ನು ಸುರಿಸುವವು, [QE][QS]ಎಲ್ಲಾ ಗುಡ್ಡಗಳು ಕರಗುವವು. [QE]
14. [QS]ನಾನು ನನ್ನ ಜನರಾದ ಇಸ್ರಾಯೇಲರ ದುರಾವಸ್ಥೆಯನ್ನು ತಪ್ಪಿಸುವೆನು. [QE][QS]ಅವರು ಹಾಳು ಬಿದ್ದ ಪಟ್ಟಣಗಳನ್ನು ಪುನಃ ಕಟ್ಟಿ ಅವುಗಳಲ್ಲಿ ವಾಸಿಸುವರು [QE][QS]ಮತ್ತು ದ್ರಾಕ್ಷಿಯ ತೋಟಗಳನ್ನು ಮಾಡಿಕೊಂಡು ಅವುಗಳ ದ್ರಾಕ್ಷಾರಸವನ್ನು ಕುಡಿಯುವರು, [QE][QS]ತೋಟಗಳನ್ನು ಮಾಡಿಕೊಂಡು ಅವುಗಳ ಫಲಗಳನ್ನು ತಿನ್ನುವರು. [QE]
15. [QS]ನಾನು ಅವರನ್ನು ಸ್ವದೇಶದಲ್ಲಿ ನೆಲೆಗೊಳಿಸುವೆನು, [QE][QS]ಅವರಿಗೆ ನಾನು ದಯಪಾಲಿಸಿದ ಸೀಮೆಯೊಳಗಿಂದ [QE][QS]ಇನ್ನು ಮುಂದೆ ಯಾರೂ ಅವರನ್ನು ಕಿತ್ತುಹಾಕುವುದಿಲ್ಲ” [QE][QS]ಇದು ನಿನ್ನ ದೇವರಾದ ಯೆಹೋವನ ನುಡಿ.[QE]