1. {#1ಇಸ್ರಾಯೇಲಿನ ವಿವಿಧ ಪಾಪಕ್ಕೆ ಆದ ಘೋರ ದುರ್ಗತಿ }
2. [PS]ಇಸ್ರಾಯೇಲರೇ ಯೆಹೋವನು ನಿಮಗೆ ವಿರುದ್ಧವಾಗಿ, ತಾನು ಐಗುಪ್ತ ದೇಶದೊಳಗಿಂದ ಪಾರು ಮಾಡಿದ ಪೂರ್ಣಕುಲಕ್ಕೆ ವಿರುದ್ಧವಾಗಿ ನುಡಿದಿರುವ ಈ ಮಾತನ್ನು ಕೇಳಿರಿ, [PE][QS]ಭೂಮಿಯ ಸಕಲ ಕುಲಗಳೊಳಗೆ [QE][QS]ನಿಮ್ಮನ್ನು ಮಾತ್ರ ನನ್ನವರೆಂದು ಆರಿಸಿಕೊಂಡಿದ್ದೇನೆ. [QE][QS]ಆದಕಾರಣ ನಿಮ್ಮ ಎಲ್ಲಾ ಪಾಪಗಳ ಫಲವನ್ನು [QE][QS]ನೀವು ಅನುಭವಿಸುವಂತೆ ಮಾಡುವೆನು. [QE]
3. {#1ಪ್ರವಾದಿಯು ನಿಷ್ಕಾರಣವಾಗಿ ಖಂಡಿಸನು } [PS]ಗೊತ್ತುಮಾಡಿಕೊಳ್ಳದೆ ಯಾರಾದರಿಬ್ಬರು [PE][QS]ಜೊತೆಯಾಗಿ ನಡೆಯುವುದುಂಟೆ? [QE]
4. [QS]ಬೇಟೆಯ ಬಲಿ ಕಾಣದೇ ಸಿಂಹವು [QE][QS]ಅರಣ್ಯದಲ್ಲಿ ಗರ್ಜಿಸುವುದೋ? [QE][QS]ಏನನ್ನೂ ಬೇಟೆಯಾಡದೆ [QE][QS]ಪ್ರಾಯದ ಸಿಂಹವು ಗವಿಯಲ್ಲಿ ಕುಳಿತು ಗುರುಗುಟ್ಟುವುದೋ? [QE]
5. [QS]ಕಾಳಿಲ್ಲದೆ ಪಕ್ಷಿಯು [QE][QS]ನೆಲದಲ್ಲಿನ ಬಲೆಯೊಳಗೆ ಬೀಳುವುದೋ? [QE][QS]ಏನೂ ಬಲೆಗೆ ಸಿಕ್ಕಿಕೊಳ್ಳದೇ ಬೋನು ಉರುಲಾಗುವುದೋ? [QE]
6. [QS]ಪಟ್ಟಣದಲ್ಲಿ ಕೊಂಬನ್ನು ಊದಿದರೆ [QE][QS]ಜನರು ಹೆದರುವುದಿಲ್ಲವೋ? [QE][QS]ಯೆಹೋವನಿಂದಲ್ಲದೆ [QE][QS]ಪಟ್ಟಣಕ್ಕೆ ವಿಪತ್ತು ಸಂಭವಿಸುವುದೋ? [QE]
7. [QS]ನಿಶ್ಚಯವಾಗಿ ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ಯೋಜನೆಯನ್ನು ತಿಳಿಸದೆ [QE][QS]ಯೆಹೋವನಾದ ದೇವರು ಏನನ್ನೂ ಮಾಡುವುದಿಲ್ಲ. [QE]
8. [QS]ಸಿಂಹವು ಗರ್ಜಿಸಿದರೆ, [QE][QS]ಭಯಪಡದೆ ಇರುವವರು ಯಾರು? [QE][QS]ಕರ್ತನಾದ ಯೆಹೋವನು ನುಡಿದಿದ್ದಾನೆ, [QE][QS]ಆ ನುಡಿಯನ್ನು ಕೇಳಿ ಪ್ರವಾದಿಸದವರು ಯಾರು? [QE]
9. {#1ಸಮಾರ್ಯ ಪಟ್ಟಣದ ಧ್ವಂಸ } [PS]ಅಷ್ದೋದಿನ ಅರಮನೆಗಳಲ್ಲಿಯೂ, [PE][QS]ಐಗುಪ್ತ ದೇಶದ ಅರಮನೆಗಳಲ್ಲಿಯೂ ಹೀಗೆ ಪ್ರಕಟಿಸಿರಿ, [QE][QS]“ಸಮಾರ್ಯದ ಬೆಟ್ಟಗಳಲ್ಲಿ ಕೂಡಿಬನ್ನಿರಿ. [QE][QS]ಪಟ್ಟಣದೊಳಗೆ ಇರುವ ಗದ್ದಲವನ್ನು, [QE][QS]ಅದರೊಳಗಿರುವ ಹಿಂಸೆಯನ್ನೂ ನೋಡಿರಿ. [QE]
10. [QS]ನ್ಯಾಯನೀತಿಗಳನ್ನು ಮಾಡುವುದಕ್ಕೆ ಅವರಿಗೆ ತಿಳಿದಿಲ್ಲ” [QE][QS]ಇದು ಯೆಹೋವನ ನುಡಿ. [QE][QS]ತಮ್ಮ ಉಪ್ಪರಿಗೆಗಳಲ್ಲಿ ಬಾಧೆಯನ್ನೂ, [QE][QS]ನಾಶನವನ್ನೂ ಕೂಡಿಸಿಟ್ಟುಕೊಂಡಿದ್ದಾರೆ. [QE]
11. [QS]ಹೀಗಿರಲು, ಕರ್ತನಾದ ಯೆಹೋವನು ಇಂತೆನ್ನುತ್ತಾನೆ: [QE][QS]“ಶತ್ರುವು ನಿನ್ನ ದೇಶವನ್ನು ಮುತ್ತಿಕೊಳ್ಳುವನು. [QE][QS]ನಿನ್ನ ಶಕ್ತಿಯನ್ನು ಕುಂದಿಸಿಬಿಡುವನು [QE][QS]ಮತ್ತು ನಿನ್ನ ಅರಮನೆಗಳು ಸೂರೆಯಾಗುವವು.” [QE]
12. [QS]ಯೆಹೋವನು ಇಂತೆನ್ನುತ್ತಾನೆ: [QE][QS]“[* ಕಾಡುಮೃಗಗಳು ಪ್ರಾಣಿಗಳನ್ನು ಕೊಂದಾಗ ಅದು ಹೇಗೆ ಕೊಲ್ಲಲ್ಪಟ್ಟಿತ್ತು ಎಂದು ಮಾಲೀಕರಿಗೆ ತೋರಿಸುವುದಕ್ಕಾಗಿ ಪ್ರಾಣಿಗಳ ಕೆಲವು ಅವಶೇಷಗಳನ್ನು ತರುವುದು ಕುರುಬನ ಕರ್ತವ್ಯವಾಗಿತ್ತು. ]ಸಿಂಹದ ಬಾಯೊಳಗಿಂದ ಕುರುಬನು ತನ್ನ ಕುರಿಗಳ ಎರಡು ಕಾಲನ್ನೂ, [QE][QS]ಅಥವಾ ಕಿವಿಯ ಒಂದು ತುಂಡನ್ನೂ, [QE][QS]ಹೇಗೆ ರಕ್ಷಿಸುವನೋ, ಹಾಗೆಯೇ ಸಮಾರ್ಯದೊಳಗೆ ಹಾಸಿಗೆಯ ಮೂಲೆಯಲ್ಲಿಯೂ, [QE][QS]ಮಂಚದ ಪಟ್ಟೇದಿಂಬುಗಳಲ್ಲಿಯೂ, [QE][QS]ಒರಗಿಕೊಳ್ಳುವ ಇಸ್ರಾಯೇಲರ ಸ್ವಲ್ಪ ಭಾಗ ಮಾತ್ರ ರಕ್ಷಿಸಲ್ಪಡುವುದು.” [QE]
13. [QS]ಸೇನಾಧೀಶ್ವರ ದೇವನಾದ ಯೆಹೋವನು ಇಂತೆನ್ನುತ್ತಾನೆ; [QE][QS]ಕೇಳಿರಿ, ಯಾಕೋಬ ವಂಶದವರಿಗೆ ವಿರುದ್ಧವಾಗಿ ಸಾಕ್ಷಿಕೊಡಿರಿ. [QE]
14. [QS]“ನಾನು ಇಸ್ರಾಯೇಲಿನ ದ್ರೋಹಗಳಿಗಾಗಿ ಅವರನ್ನು ಶಿಕ್ಷಿಸುವ ದಿನಗಳಲ್ಲಿ, [QE][QS]ಬೇತೇಲಿನ ಯಜ್ಞವೇದಿಗಳನ್ನು ಧ್ವಂಸಮಾಡುವೆನು. [QE][QS]ಯಜ್ಞವೇದಿಯ ಕೊಂಬುಗಳು ಕಡಿಯಲ್ಪಟ್ಟು [QE][QS]ನೆಲದ ಮೇಲೆ ಉರುಳುವವು. [QE]
15. [QS]ನಾನು ಚಳಿಗಾಲದ ಅರಮನೆಯನ್ನೂ, [QE][QS]ಬೇಸಿಗೆಯ ಅರಮನೆಯನ್ನೂ ಹೊಡೆದುಹಾಕುವೆನು. [QE][QS]ದಂತಮಂದಿರಗಳು ಹಾಳಾಗುವವು [QE][QS]ಮತ್ತು ದೊಡ್ಡಮನೆಗಳು ಕೊನೆಗಾಣುವವು” [QE][QS]ಇದು ಯೆಹೋವನ ನುಡಿ. [QE]