1. {ಪೌಲನು ರೋಮಾಪುರಕ್ಕೆ ಪ್ರಯಾಣ ಮಾಡಿದ್ದು} PS ನಾವು ಸಮುದ್ರಮಾರ್ಗವಾಗಿ ಇತಾಲ್ಯದೇಶಕ್ಕೆ ಹೋಗಬೇಕೆಂದು ತೀರ್ಮಾನವಾದ ಮೇಲೆ, ಪೌಲನನ್ನೂ, ಬೇರೆ ಕೆಲವು ಸೆರೆಯವರನ್ನೂ ಔಗುಸ್ತ ಸೇನೆಗೆ * ಸೈನಿಕರ ತಂಡ ಸೇರಿದ ಯೂಲ್ಯನೆಂಬ ಒಬ್ಬ ಶತಾಧಿಪತಿಗೆ ಒಪ್ಪಿಸಿದರು.
|
2. ಆಗ ಅದ್ರಮಿತ್ತಿಯದಿಂದ ಬಂದು ಆಸ್ಯಸೀಮೆಯ ಕರಾವಳಿಯ ಸ್ಥಳಗಳಿಗೆ ಹೋಗುವುದಕ್ಕಿದ್ದ ಒಂದು ಹಡಗನ್ನು ಹತ್ತಿ ಸಮುದ್ರಪ್ರಯಾಣವನ್ನು ಪ್ರಾರಂಭಿಸಿದೆವು. ಮಕೆದೋನ್ಯಕ್ಕೆ ಸೇರಿದ ಥೆಸಲೋನಿಕದ ಅರಿಸ್ತಾರ್ಕನು ನಮ್ಮ ಜೊತೆಯಲ್ಲಿದ್ದನು. PEPS
|
3. ಮರುದಿನ ಸೀದೋನಿಗೆ ತಲುಪಿದೆವು. ಯೂಲ್ಯನು ಪೌಲನಿಗೆ ದಯೆಯನ್ನು ತೋರಿಸುವವನಾಗಿ, ಅವನನ್ನು ಸ್ನೇಹಿತರ ಬಳಿಗೆ ಹೋಗಿ ಸತ್ಕಾರ ಹೊಂದುವುದಕ್ಕೆ ಅನುಮತಿಕೊಟ್ಟನು.
|
6. ಅಲ್ಲಿ ಅಲೆಕ್ಸಾಂದ್ರಿಯದಿಂದ ಬಂದು ಇತಾಲ್ಯದೇಶಕ್ಕೆ ಹೋಗುತ್ತಿದ್ದ ಒಂದು ಹಡಗನ್ನು ಶತಾಧಿಪತಿಯು ಕಂಡು ನಮ್ಮನ್ನು ಅದರೊಳಗೆ ಹತ್ತಿಸಿದನು.
|
7. ಅನೇಕ ದಿನಗಳ ಕಾಲ ನಿಧಾನವಾಗಿ ಸಾಗುತ್ತಾ ಎಷ್ಟೋ ಪ್ರಯಾಸದಿಂದ ಕ್ನೀದಕ್ಕೆ ಸಮೀಪವಾಗಿ ಬಂದಾಗ ಗಾಳಿಯು ನಮ್ಮನ್ನು ಅಲ್ಲಿಗೆ ಮುಟ್ಟಗೊಡಿಸದೆ ಇದ್ದುದರಿಂದ ಕ್ರೇತ ದ್ವೀಪದ ಮರೆಯಲ್ಲಿ ಸಾಗಿ ಸಲ್ಮೋನೆಗೆ ಸಮೀಪವಾಗಿ ಬಂದು,
|
8. ಪ್ರಯಾಸದಿಂದ ಆ ದ್ವೀಪದ ಕರಾವಳಿಯ ಮೂಲಕವಾಗಿ ಚಂದರೇವುಗಳೆಂಬ ಸ್ಥಳಕ್ಕೆ ಸೇರಿದೆವು. ಅದರ ಹತ್ತಿರದಲ್ಲಿ ಲಸಾಯವೆಂಬ ಪಟ್ಟಣವು ಇತ್ತು. PEPS
|
9. ಹೀಗೆ ಬಹುಕಾಲ ಕಳೆದುಹೋಯಿತು; ಉಪವಾಸದ ದಿನವು ಮುಗಿದುಹೋಗಿತ್ತು. ಈ ಸಂದರ್ಭದಲ್ಲಿ ಸಮುದ್ರಪ್ರಯಾಣ ಮಾಡುವುದು ಅಪಾಯಕರವಾಗಿದ್ದುದರಿಂದ ಪೌಲನು;
|
10. “ಜನರೇ, ಈ ಪ್ರಯಾಣದಿಂದ ಸರಕಿಗೂ, ಹಡಗಿಗೆ ಮಾತ್ರವಲ್ಲದೆ, ನಮ್ಮ ಪ್ರಾಣಗಳಿಗೂ ಕಷ್ಟವೂ, ಬಹು ನಷ್ಟವೂ ಸಂಭವಿಸುವುದೆಂದು ನನಗೆ ತೋರುತ್ತಿದೆ” ಎಂದು ಅವರನ್ನು ಎಚ್ಚರಿಸಿದನು.
|
11. ಆದರೆ ಪೌಲನು ಹೇಳಿದ ಮಾತುಗಳಿಗಿಂತ, ನಾವಿಕನೂ ಹಡಗಿನ ಯಜಮಾನನೂ ಹೇಳಿದ ಮಾತಿಗೆ ಶತಾಧಿಪತಿಯು ಹೆಚ್ಚಾಗಿ ಲಕ್ಷ್ಯಕೊಟ್ಟನು. PEPS
|
12. ಆ ಬಂದರು ಪ್ರದೇಶ; ಚಳಿಗಾಲವನ್ನು ಕಳೆಯುವುದಕ್ಕೆ ಅನುಕೂಲವಲ್ಲವಾದುದರಿಂದ, ಅಲ್ಲಿಂದ ಹೊರಟು ಸಾಧ್ಯವಾದರೆ ಹೇಗೂ ಫೊಯಿನಿಕ್ಸ ಊರನ್ನು ಸೇರಿ, ಅಲ್ಲೇ ಆ ಚಳಿಗಾಲವನ್ನು ಕಳೆಯಬೇಕೆಂದು ಹೆಚ್ಚು ಜನರು ತಮ್ಮ ಅಭಿಪ್ರಾಯಗಳನ್ನು ಹೇಳಿದರು. ಫೊಯಿನಿಕ್ಸವು ಕ್ರೇತ ದ್ವೀಪದ ಒಂದು ಬಂದರು ಪ್ರದೇಶ, ಈಶಾನ್ಯ ದಿಕ್ಕಿಗೂ, ಆಗ್ನೇಯ ದಿಕ್ಕಿಗೂ ಅಭಿಮುಖವಾಗಿದೆ. PS
|
13. {ಚಂಡಮಾರುತಕ್ಕೆ ಸಿಕ್ಕಿಕೊಂಡ ಹಡಗು} PS ತೆಂಕಣ ಗಾಳಿ ಮೆಲ್ಲಗೆ ಬೀಸಲಾಗಿ ತಮ್ಮ ಉದ್ದೇಶವು ಸಾರ್ಥಕವಾಯಿತೆಂದು ಭಾವಿಸಿ ಲಂಗರುಗಳನ್ನು ತೆಗೆದು ಕ್ರೇತ ದ್ವೀಪವನ್ನು ಅನುಸರಿಸಿ ತೀರದ ಮಗ್ಗುಲಲ್ಲೇ ಹೋಗುತ್ತಿದ್ದರು.
|
15. ಆ ಹೊಡೆತಕ್ಕೆ ಹಡಗು ಸಿಕ್ಕಿಕೊಂಡು ಗಾಳಿಗೆದುರಾಗಿ ನಿಲ್ಲುವುದಕ್ಕೆ ಆಗದೆಹೋದುದರಿಂದ ಗಾಳಿ ಬಂದ ಕಡೆಗೆ ಹಡಗನ್ನು ನೂಕಿಸಿಕೊಂಡು ಹೋದೆವು.
|
16. ಕ್ಲೌಡ ಎಂಬ ಒಂದು ಪುಟ್ಟ ದ್ವೀಪದ ಸಮೀಪಕ್ಕೆ ಹಾದುಹೋಗುವಾಗ ಹಡಗಿನಲ್ಲಿ ಇದ್ದ ಚಿಕ್ಕ ದೋಣಿಯನ್ನು ಸುಭದ್ರಪಡಿಸಿಕೊಳ್ಳುವುದು ಸಾಧ್ಯವಾಯಿತು.
|
17. ಅದನ್ನು ಮೇಲಕ್ಕೆ ಎತ್ತಿದ ನಂತರ ಹಗ್ಗಗಳನ್ನು ತೆಗೆದುಕೊಂಡು ಹಡಗಿನ ಕೆಳಭಾಗವನ್ನು ಬಿಗಿದರು. ಆ ಮೇಲೆ ಸುರ್ತಿಸ್ ಎಂಬ ಮರಳುದಿಬ್ಬಕ್ಕೆ ಎಲ್ಲಿ ಸಿಕ್ಕಿಕೊಳ್ಳುವುದೋ ಎಂಬ ಭಯ ಆವರಿಸಿತು. ಆದುದರಿಂದ ಅವರು ಹಾಯಿಯನ್ನು ಇಳಿಸಿ, ಗಾಳಿ ಬೀಸುತ್ತಿದ್ದ ಕಡೆಯೇ ಹಡಗು ತೇಲಲೆಂದು ಬಿಟ್ಟರು.
|
18. ಬಿರುಗಾಳಿಯ ಮಳೆಯೂ ನಮ್ಮನ್ನು ಅತ್ಯಂತವಾಗಿ ಹೊಯಿದಾಡಿಸಿದ್ದರಿಂದ ಅವರು ಮರುದಿನ ಹಡಗಿನಲ್ಲಿದ್ದ ಸರಕು ಸಾಮಗ್ರಿಗಳನ್ನು ಸಮುದ್ರಕ್ಕೆ ಎಸೆಯಲು ಆರಂಭಿಸಿದರು.
|
20. ಅನೇಕ ದಿನಗಳ ತನಕ ಸೂರ್ಯನಾಗಲಿ, ನಕ್ಷತ್ರಗಳಾಗಲಿ ನಮಗೆ ಕಾಣಿಸದೆ, ದೊಡ್ಡ ಬಿರುಗಾಳಿ ಮಳೆ ನಮ್ಮ ಮೇಲೆ ಹೊಡೆದುದರಿಂದ ತಪ್ಪಿಸಿಕೊಂಡೇವೆಂಬ ಎಲ್ಲಾ ನಿರೀಕ್ಷೆಯು ವಿಫಲವಾಯಿತು. PEPS
|
21. ಅವರು ಬಹುಕಾಲ ಊಟವಿಲ್ಲದೆ ಇದ್ದ ಮೇಲೆ, ಪೌಲನು ಅವರ ಮಧ್ಯದಲ್ಲಿ ನಿಂತುಕೊಂಡು; “ಎಲೈ ಜನರೇ, ನೀವು ಕ್ರೇತದಿಂದ ಹೊರಟು ಈ ಕಷ್ಟನಷ್ಟಗಳಿಗೆ ಗುರಿಯಾಗದಂತೆ ನನ್ನ ಮಾತನ್ನು ಕೇಳಬೇಕಾಗಿತ್ತು.
|
22. ಈಗಲಾದರೂ ನೀವು ಧೈರ್ಯದಿಂದಿರಬೇಕೆಂದು ನಿಮಗೆ ಬುದ್ಧಿಹೇಳುತ್ತೇನೆ; ಹಡಗು ನಷ್ಟವಾಗುವುದೇ ಹೊರತು, ನಿಮ್ಮಲ್ಲಿ ಒಬ್ಬರಿಗೂ ಪ್ರಾಣನಷ್ಟವಾಗುವುದಿಲ್ಲ.
|
23. ಏಕೆಂದರೆ, ನಾನು ಯಾರವನಾಗಿದ್ದೇನೋ, ಯಾರನ್ನು ಸ್ತುತಿಸುತ್ತೇನೋ ಆ ದೇವರಿಂದ ಬಂದ ಒಬ್ಬ ದೂತನು ಕಳೆದ ರಾತ್ರಿಯಲ್ಲಿ ನನ್ನ ಹತ್ತಿರ ನಿಂತು;
|
24. ‘ಪೌಲನೇ, ಭಯಪಡಬೇಡ, ನೀನು ಕೈಸರನ ಮುಂದೆ ನಿಲ್ಲಬೇಕು; ಇದಲ್ಲದೆ ನಿನ್ನ ಸಂಗಡ ಈ ಹಡಗಿನಲ್ಲಿ ಪ್ರಯಾಣಮಾಡುವವರೆಲ್ಲರ ಪ್ರಾಣವನ್ನು, ದೇವರು ನಿನ್ನ ಮೇಲಣ ದಯೆಯಿಂದ ಉಳಿಸಿಕೊಟ್ಟಿದ್ದಾನೆಂದು’ ನನ್ನ ಸಂಗಡ ಹೇಳಿದನು.
|
27. {ಹಡಗು ಒಡೆದುಹೊದದ್ದು} PS ಹದಿನಾಲ್ಕನೆಯ ರಾತ್ರಿಯಲ್ಲಿ ನಾವು ಆದ್ರಿಯ ಸಮುದ್ರದಲ್ಲಿ ಅತ್ತ ಇತ್ತ ಬಡಿಸಿಕೊಂಡು ಹೋಗುತ್ತಿರುವಾಗ ಸುಮಾರು ಮಧ್ಯರಾತ್ರಿಯಲ್ಲಿ ನಾವಿಕರು ಒಂದು ದೇಶದ ಹತ್ತಿರ ಬಂದೆವೆಂದು ನೆನಸಿ,
|
28. ಅಳತೆ ಮಾಪನವನ್ನು ಇಳಿಸಿ ಇಪ್ಪತ್ತು ಮಾರುದ್ದವೆಂದು ಕಂಡರು. ಸ್ವಲ್ಪ ಹೊತ್ತಿನ ಮೇಲೆ ಅವರು ತಿರುಗಿ ಮಾಪನದ ಗುಂಡನ್ನು ಇಳಿಸಿ ನೋಡಲಾಗಿ ಹದಿನೈದು ಮಾರುದ್ದವೆಂದು ಕಂಡರು.
|
29. ಬಂಡೆಗಳಿಗೆ ಡಿಕ್ಕಿಹೊಡೆದೆವೋ ಎಂದು ಭಯಪಟ್ಟು ಹಡಗಿನ ಹಿಂಭಾಗದಿಂದ ನಾಲ್ಕು ಲಂಗರುಗಳನ್ನು ಬಿಟ್ಟು ಬೇಗ ಬೆಳಗಾಗಲಿ ಎಂದು ಪ್ರಾರ್ಥಿಸಿದೆವು.
|
30. ಆದರೆ, ನಾವಿಕರು ಮುಂಭಾಗದಲ್ಲಿ ಲಂಗರುಗಳನ್ನು ಹಾಕಬೇಕೆಂಬ ಸುಳ್ಳುಕಾರಣ ಕೊಟ್ಟು ದೋಣಿಯನ್ನು ಸಮುದ್ರದಲ್ಲಿ ಇಳಿಸಿ ಹಡಗನ್ನು ಬಿಟ್ಟು ತಪ್ಪಿಸಿಕೊಂಡು ಹೋಗುವುದಕ್ಕೆ ಪ್ರಯತ್ನಿಸುತ್ತಿರುವಾಗ,
|
31. ಪೌಲನು ಶತಾಧಿಪತಿಗೂ, ಸಿಪಾಯಿಗಳಿಗೂ; “ಇವರು ಹಡಗಿನಲ್ಲಿ ಉಳಿಯದಿದ್ದರೆ ನಿಮ್ಮ ಪ್ರಾಣ ಉಳಿಯುವುದಿಲ್ಲವೆಂದು” ಹೇಳಿದನು.
|
33. ಬೆಳಗಾಗುತ್ತಿರುವಷ್ಟರಲ್ಲಿ ಪೌಲನು ಏನಾದರೂ ಆಹಾರವನ್ನು ತೆಗೆದುಕೊಳ್ಳಬೇಕೆಂದು ಎಲ್ಲರನ್ನು ಬೇಡಿಕೊಳ್ಳುತ್ತಾ; “ಇಂದಿಗೆ ನೀವು ಹದಿನಾಲ್ಕು ದಿನದಿಂದ ಕಾದುಕೊಂಡು ಆಹಾರವನ್ನು ತೆಗೆದುಕೊಳ್ಳದೆ, ಹಸಿದುಕೊಂಡು ಇದ್ದೀರಿ.
|
34. ಅದುದರಿಂದ, ಆಹಾರ ತೆಗೆದುಕೊಳ್ಳಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಇದು ನಿಮ್ಮ ಪ್ರಾಣರಕ್ಷಣೆಗೆ ಅಗತ್ಯವಾಗಿದೆ. ನಿಮ್ಮಲ್ಲಿ ಯಾರ ತಲೆಯಿಂದಲಾದರೂ ಒಂದು ಕೂದಲೂ ಉದುರಿಹೋಗುವುದಿಲ್ಲವೆಂದು” ಹೇಳಿ,
|
35. ರೊಟ್ಟಿಯನ್ನು ತೆಗೆದುಕೊಂಡು, ಎಲ್ಲರ ಮುಂದೆ ದೇವರ ಸ್ತೋತ್ರಮಾಡಿ ಅದನ್ನು ಮುರಿದು ತಿನ್ನುವುದಕ್ಕೆ ಪ್ರಾರಂಭಿಸಿದನು.
|
39. ಬೆಳಗಾದ ಮೇಲೆ ಆ ದೇಶದ ಗುರುತನ್ನು ತಿಳಿಯದೆ ಉಸುಬಿನ ದಡವುಳ್ಳ ಒಂದು ಕೊಲ್ಲಿಯನ್ನು ನೋಡಿ ಆ ದಡದ ಮೇಲೆ ಹಡಗನ್ನು ನೂಕುವುದಕ್ಕೆ ಸಾಧ್ಯವಾದೀತೆಂದು ಯೋಚಿಸಿದರು.
|
40. ಅವರು ಲಂಗರುಗಳನ್ನು ಸರಿಸಿ ಸಮುದ್ರದಲ್ಲೇ ಬಿಟ್ಟು, ಚುಕ್ಕಾಣಿಗಳ ಕಟ್ಟುಗಳನ್ನು ಬಿಚ್ಚಿ, ದೊಡ್ಡ ಹಾಯಿಯನ್ನು ಗಾಳಿಗೆ ಎತ್ತಿಕಟ್ಟಿ ಹಡಗನ್ನು ಆ ದಡಕ್ಕೆ ನಡಿಸುತ್ತಿದ್ದರು.
|
41. ಆದರೆ ಮಧ್ಯದಲ್ಲಿ ಅವರಿಗೆ ಮರಳದಿಬ್ಬ ಸಿಕ್ಕಿದಾಗ ಅದಕ್ಕೆ ನಾವೆಯನ್ನು ಹತ್ತಿಸಿದರು. ಮುಂಭಾಗವು ದಿಣ್ಣೆಗೆ ತಗಲಿಕೊಂಡು ಅಲ್ಲಾಡದೆ ನಿಂತಿತು. ಹಿಂಭಾಗವು ಹುಚ್ಚು ಅಲೆಗಳ ಹೊಡೆತದಿಂದ ಒಡೆದು ತುಂಡಾಯಿತು.
|
43. ಆದರೆ ಶತಾಧಿಪತಿಯು, ಪೌಲನನ್ನು ಉಳಿಸಬೇಕೆಂದು ಅಪೇಕ್ಷಿಸಿ ಅವರ ಆಲೋಚನೆಯನ್ನು ಬೇಡವೆಂದು ಹೇಳಿ, ಈಜಬಲ್ಲವರು ಹಡಗಿನಿಂದ ಧುಮುಕಿ ಮೊದಲು ತೀರಕ್ಕೆ ಹೋಗಬೇಕೆಂತಲೂ,
|
44. ಉಳಿದವರಲ್ಲಿ ಕೆಲವರು ಹಲಿಗೆಗಳ ಮೇಲೆ, ಕೆಲವರು ಹಡಗಿನ ತುಂಡುಗಳ ಮೇಲೆ ಹೋಗಬೇಕೆಂತಲೂ ಅಪ್ಪಣೆಕೊಟ್ಟನು. ಈ ರೀತಿಯಿಂದ ಎಲ್ಲರೂ ಸುರಕ್ಷಿತವಾಗಿ ತೀರವನ್ನು ತಲುಪಿದರು. PE
|