1. {#1ದುರ್ಬೋಧಕರು } [PS]ಆದರೂ [* 2 ಥೆಸ. 2:3-9; 2 ತಿಮೊ. 3:1; ಕೊರಿ 11:19 ]ಮುಂಬರುವ ದಿನಗಳಲ್ಲಿ ಕೆಲವರು [† 1 ಯೊಹಾ. 4:6 ]ವಂಚಿಸುವ ಆತ್ಮಗಳ ನುಡಿಗಳಿಗೂ, ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತ ನಂಬಿಕೆಯಿಂದ ಭ್ರಷ್ಟರಾಗುವರೆಂದು ದೇವರಾತ್ಮನು ಸ್ಪಷ್ಟವಾಗಿ ಹೇಳುತ್ತಿದ್ದಾನೆ.
2. [‡ 1 ಥೆಸ. 2:3; 2 ಥೆಸ. 2:11 ]ಕಪಟದಿಂದ ಸುಳ್ಳಾಡುವವರು, ಸ್ವಂತ ಮನಸ್ಸಾಕ್ಷಿಯ ಮೇಲೆ ಬರೆಹಾಕಲ್ಪಟ್ಟವರಾಗಿದ್ದು,
3. ಅವರು ವಿಶ್ವಾಸಿಗಳಿಗೆ [§ ಇಬ್ರಿ. 13:4 ]ಮದುವೆಯಾಗಬಾರದೆಂದತಲೂ, ಯಾರು ನಂಬುವವರಾಗಿದ್ದು ಸತ್ಯವನ್ನು ಗ್ರಹಿಸಿದ್ದಾರೋ, [* ರೋಮಾ. 14:6 14, 20 ]ಅವರು ಕೃತಜ್ಞತಾಸ್ತುತಿಮಾಡಿ, ತಿನ್ನುವುದಕ್ಕೋಸ್ಕರ [† ಆದಿ 1:29; 9:3 ]ದೇವರು ಉಂಟುಮಾಡಿದ [‡ ಕೊಲೊ 2:16 ]ಆಹಾರವನ್ನು ತಿನ್ನಬಾರದೆಂತಲೂ ಹೇಳುವರು.
4. [§ ಆದಿ 1:31 ]ದೇವರು ಉಂಟುಮಾಡಿದ್ದೆಲ್ಲವೂ ಒಳ್ಳೆಯದೇ, ನಾವು ಕೃತಜ್ಞತಾಸ್ತುತಿಮಾಡಿ ತೆಗೆದುಕೊಳ್ಳುವ ಯಾವ ಆಹಾರವನ್ನು [* ಅ. ಕೃ. 10:15 ]ತಿರಸ್ಕರಿಸಬೇಕಾಗಿಲ್ಲ.
5. ದೇವರ ವಾಕ್ಯದಿಂದಲೂ ಪ್ರಾರ್ಥನೆಯಿಂದಲೂ ಆ ಆಹಾರವು ಪವಿತ್ರವಾಗುತ್ತದಲ್ಲಾ. [PE]
6. [PS] [† 2 ತಿಮೊ. 3:14, 15 ]ಈ ಸಂಗತಿಗಳನ್ನು ಸಹೋದರರಿಗೆ ತಿಳಿಸಿದರೆ, ನೀನು ಅನುಸರಿಸುತ್ತಿರುವ ಕ್ರಿಸ್ತ ನಂಬಿಕೆಯ ಮತ್ತು ಸುಬೋಧನೆಯ ವಾಕ್ಯಗಳಲ್ಲಿ ಅಭ್ಯಾಸಹೊಂದಿದವನಾಗಿ, ಕ್ರಿಸ್ತ ಯೇಸುವಿನ ಒಳ್ಳೆಯ ಸೇವಕನಾಗಿರುವಿ.
7. ಅಜ್ಜಿ ಕಥೆಗಳನ್ನೂ [‡ 1 ತಿಮೊ. 1:4 ]ಪ್ರಾಪಂಚಿಕವಾದ ಆ ಕಥೆಗಳನ್ನೂ ತಳ್ಳಿಬಿಟ್ಟು, ನೀನು ದೇವಭಕ್ತಿಯ ವಿಷಯದಲ್ಲಿ [§ ಇಬ್ರಿ. 5:14 ]ಸಾಧನೆಮಾಡಿಕೋ.
8. [* ದೇಹದಂಡನೆ; ಕೊಲೊ 2:23 ]ದೇಹಸಾಧನೆಯು ಸ್ವಲ್ಪಮಟ್ಟಿಗೆ ಪ್ರಯೋಜನವಾಗಿದೆ, [† 1 ತಿಮೊ. 6:6 ]ಭಕ್ತಿಯಾದರೋ ಎಲ್ಲಾ ವಿಧದಲ್ಲಿ ಪ್ರಯೋಜನವಾದದ್ದು. [‡ ಕೀರ್ತ 37:4,9,11; 84:11; 145:19; ಜ್ಞಾ. 19:23; ಮತ್ತಾ 6:33; ಮಾರ್ಕ 10:30 ]ಅದಕ್ಕೆ ಇಹಪರಗಳಲ್ಲಿನ ಜೀವನಕ್ಕೆ ವಾಗ್ದಾನ ಉಂಟು.
9. [§ 1 ತಿಮೊ. 1:15 ]ಈ ವಾಕ್ಯವು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಇದೆ.
10. ಇದಕ್ಕಾಗಿ ನಾವು ಕಷ್ಟಪಡುತ್ತಿದ್ದೇವೆ, ಪ್ರಯಾಸಪಡುತ್ತಿದ್ದೇವೆ, ಯಾಕೆಂದರೆ [* 1 ತಿಮೊ. 2:4; ಯೋಹಾ 4:42 ]ಎಲ್ಲಾ ಮನುಷ್ಯರಿಗೂ, ವಿಶೇಷವಾಗಿ ನಂಬುವವರಿಗೆ, ರಕ್ಷಕನಾಗಿರುವ ಜೀವವುಳ್ಳ ದೇವರ ಮೇಲೆ ನಾವು ನಿರೀಕ್ಷೆಯನ್ನಿಟ್ಟುಕೊಂಡವರಾಗಿದ್ದೇವೆ. [PE]
11. [PS] [† 1 ತಿಮೊ. 5:7; 6:2 ]ಈ ಸಂಗತಿಗಳನ್ನು ನೀನು ಆಜ್ಞಾಪಿಸಬೇಕು ಮತ್ತು ಬೋಧಿಸಬೇಕು.
12. [‡ 1 ಕೊರಿ 16:11; ತೀತ 2:15 ]ನಿನ್ನ ಯೌವನವನ್ನು ಅಸಡ್ಡೆಮಾಡುವುದಕ್ಕೆ ಯಾರಿಗೂ ಆಸ್ಪದಮಾಡಿಕೊಡದೆ, ನಂಬುವವರಿಗೆ ನಡೆ, ನುಡಿ, ಪ್ರೀತಿ, ನಂಬಿಕೆ, ಶುದ್ಧತ್ವ ಇವುಗಳ ವಿಷಯದಲ್ಲಿ [§ ತೀತ 2:7; 1 ಪೇತ್ರ 5:3 ]ನೀನೇ ಮಾದರಿಯಾಗಿರು.
13. ನಾನು ಬರುವ ತನಕ ವೇದವಾಕ್ಯವನ್ನು ಓದಿ ಹೇಳುವುದರಲ್ಲಿಯೂ, ಪ್ರಬೋಧಿಸುವುದರಲ್ಲಿಯೂ, ಉಪದೇಶಿಸುವುದರಲ್ಲಿಯೂ ಆಸಕ್ತನಾಗಿರು.
14. [* 2 ತಿಮೊ. 1:6; 1 ಥೆಸ. 5:19 ]ನಿನ್ನಲ್ಲಿರುವ ಕೃಪಾವರವನ್ನು ಅಲಕ್ಷ್ಯಮಾಡಬೇಡ, ಆ ವರವು [† ಅ. ಕೃ. 20:17 ]ಸಭೆಯ ಹಿರಿಯರು [‡ 1 ತಿಮೊ. 1:18 ]ಪ್ರವಾದನೆಯ ಸಹಿತವಾಗಿ ನಿನ್ನ ಮೇಲೆ [§ ಅ. ಕೃ. 6:6 ]ಹಸ್ತಗಳನ್ನಿಟ್ಟಾಗ, ಅದು ನಿನಗೆ ಕೊಡಲ್ಪಟ್ಟಿತಲ್ಲಾ.
15. ಈ ಕಾರ್ಯಗಳನ್ನು ಸಾಧಿಸುತ್ತಾ, ಅವುಗಳಲ್ಲಿ ಮಗ್ನನಾಗಿರು. ಇದರಿಂದ ನಿನ್ನ ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವುದು[* ಕಾಣಿಸುವುದು ].
16. [† ಅ. ಕೃ. 20:28 ]ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಈ ಕಾರ್ಯಗಳಲ್ಲಿ ನಿರತನಾಗಿರು, ಆಗ ನೀನು [‡ ಯೆಹೆ. 33:9 ]ನಿನ್ನನ್ನೂ ಮತ್ತು ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ. [PE]