1. [PS]ನಮ್ಮ ರಕ್ಷಕನಾದ ದೇವರ [* ಕೊಲೊ 1:27 ]ನಮ್ಮ ನಿರೀಕ್ಷೆಗೆ ಆಧಾರನಾಗಿರುವ ಕ್ರಿಸ್ತ ಯೇಸುವಿನ ಆಜ್ಞೆಯ ಮೇರೆಗೆ ನೇಮಿಸಲ್ಪಟ್ಟ ಕ್ರಿಸ್ತ ಯೇಸುವಿನ [† 2 ಕೊರಿ 1:1 ]ಅಪೊಸ್ತಲನಾದ ಪೌಲನು
2. [‡ ತೀತ 1:4 ]ನಂಬಿಕೆಯ ವಿಷಯದಲ್ಲಿ ನಿಜಕುಮಾರನಾಗಿರುವ ತಿಮೊಥೆಯನಿಗೆ ಬರೆಯುವುದೇನೆಂದರೆ, [§ 2 ತಿಮೊ 1:2; 2 ಯೊಹಾ 3; ಯೂದ 2 ]ತಂದೆಯಾದ ದೇವರಿಂದಲೂ ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಿಂದಲೂ ನಿನಗೆ ಕೃಪೆಯೂ ಕರುಣೆಯೂ ಶಾಂತಿಯೂ ಉಂಟಾಗಲಿ. [PE]
3. {#1ಸುಳ್ಳುಬೋಧನೆಯ ಬಗ್ಗೆ ಎಚ್ಚರಿಕೆ } [PS]ನಾನು ಮಕೆದೋನ್ಯಕ್ಕೆ ಹೋಗುತ್ತಿದ್ದಾಗ ನೀನು ಎಫೆಸದಲ್ಲೇ ಇದ್ದುಕೊಂಡು ಅಲ್ಲಿರುವ ಕೆಲವರಿಗೆ, [* 1 ತಿಮೊ 6:3 ಗಲಾ 1:6,7 ]ನೀವು ಬೇರೆ ಉಪದೇಶವನ್ನು ಮಾಡಬಾರದೆಂತಲೂ,
4. [† 1 ತಿಮೊ 4:7; 2 ತಿಮೊ 4:4; ತೀತ 1:14; 2 ಪೇತ್ರ 1:16 ]ಕಲ್ಪಿತಕಥೆಗಳಿಗೂ, ಕೊನೆಮೊದಲಿಲ್ಲದ ವಂಶಾವಳಿಗಳಿಗೂ ಲಕ್ಷ್ಯ ಕೊಡಬಾರದೆಂತಲೂ, ಆಜ್ಞಾಪಿಸಬೇಕೆಂಬುದಾಗಿ ನಿನಗೆ ಖಂಡಿತವಾಗಿ ಹೇಳಿದ ಪ್ರಕಾರ ಈಗಲೂ ಹೇಳುತ್ತಿದೇನೆ. ಅಂತಹ ಕಥೆಗಳೂ, [‡ ತೀತ 3:9 ]ವಂಶಾವಳಿಗಳೂ [§ 1 ತಿಮೊ. 6:4 ]ವಿವಾದಕ್ಕೆ ಎಡೆಮಾಡಿಕೊಡುತ್ತದೆಯೇ ಹೊರತು ದೇವರ ಯೋಜನೆಗಳಿಗೆ ಅನುಕೂಲವಾಗಿರುವುದಿಲ್ಲ. ನಂಬಿಕೆಯಿಂದ ಮಾತ್ರ ಅದು ಸಾಧ್ಯವಾಗುತ್ತದೆ.
5. [* 2 ತಿಮೊ. 2:22 ]ಶುದ್ಧಹೃದಯ, [† 1 ಪೇತ್ರ. 3:16, 21 ]ಒಳ್ಳೆಯ ಮನಸ್ಸಾಕ್ಷಿ, [‡ 2 ತಿಮೊ 1:5 ]ಪ್ರಾಮಾಣಿಕವಾದ ನಂಬಿಕೆ ಎಂಬಿವುಗಳಿಂದ ಹುಟ್ಟಿದ ಪ್ರೀತಿಯೇ ದೇವಾಜ್ಞೆಯ ಗುರಿಯಾಗಿದೆ.
6. ಕೆಲವರು ಈ ಗುರಿಯನ್ನು ಬಿಟ್ಟು [§ ತೀತ 1:10 ]ವ್ಯರ್ಥವಾದ ವಿಚಾರಗಳ ಕಡೆಗೆ ತಿರುಗಿಕೊಂಡಿದ್ದಾರೆ.
7. ಅವರು ಧರ್ಮೋಪದೇಶಕರಾಗಬೇಕೆಂದು ಬಯಸುತ್ತಿದ್ದರೂ ತಾವು ಹೇಳುವುದಾಗಲಿ, [* 1 ತಿಮೊ 6:4; ಕೊಲೊ 2:18 ]ತಾವು ದೃಢವಾಗಿ ಮಾತನಾಡುವ ವಿಷಯವಾಗಲಿ ಇಂಥದೆಂದು ತಿಳಿಯದವರಾಗಿದ್ದಾರೆ.
8. [† ರೋಮ 7:16 ]ಧರ್ಮಶಾಸ್ತ್ರವು ಒಳ್ಳೆಯದೆಂದು ಬಲ್ಲೆವು. ಆದರೆ ಅದನ್ನು ಅದರ ಉದ್ದೇಶಕ್ಕೆ ತಕ್ಕ ಹಾಗೆ ಉಪಯೋಗಿಸಬೇಕು.
9. ಧರ್ಮಶಾಸ್ತ್ರವು [‡ ಗಲಾ 5:23 ]ನೀತಿವಂತರಿಗೋಸ್ಕರ ಅಲ್ಲ, ಆದರೆ ಅಕ್ರಮಗಾರರು, ಅವಿಧೇಯರು, ಭಕ್ತಿಹೀನರು, ಪಾಪಿಷ್ಠರು, ಅಪವಿತ್ರರು, ಪ್ರಾಪಂಚಿಕರು, ತಂದೆತಾಯಿಗಳನ್ನು ಕೊಲ್ಲುವವರು, ನರಹತ್ಯಮಾಡುವವರು,
10. ಜಾರರು, ಸಲಿಂಗಕಾಮಿಗಳು, ನರಚೋರರು, ಸುಳ್ಳುಗಾರರು, ಅಸತ್ಯವಾದಿಗಳು, [§ 2 ತಿಮೊ 4:3; ತೀತ 1:9; 2:1; 1 ತಿಮೊ 6:3; 2 ತಿಮೊ 1:13; ತೀತ 1:13, 2:2 ]ಸ್ವಸ್ಥಬೋಧನೆಗೆ ವಿರುದ್ಧವಾಗಿರುವಂಥವುಗಳನ್ನು ಮಾಡುವವರು, ಈ ಮೊದಲಾದ ಅನೀತಿವಂತರಿಗಾಗಿ ನೇಮಕವಾಗಿದೆ ಎಂದು ನಮಗೆ ತಿಳಿದಿದೆ.
11. ಈ ಬೋಧನೆಯು [* 1 ತಿಮೊ 6:15 ]ಭಾಗ್ಯವಂತನಾದ [† 2 ಕೊರಿ 4:4 ]ದೇವರ ಮಹಿಮೆಯನ್ನು ಪ್ರದರ್ಶಿಸುವ ಸುವಾರ್ತೆಗೆ ಅನುಸಾರವಾಗಿದೆ. [‡ ತೀತ 1:3,4; ಗಲಾ 2:7 ]ಈ ಸುವಾರ್ತೆಯ ಸೇವೆಯು ನನಗೆ ಕೊಡಲ್ಪಟ್ಟಿತು. [PE]
12. [PS](12-13) [§ ಆ. ಕೃ 9:22; ಫಿಲಿ 4:13; 2 ತಿಮೊ 4:17 ]ನನಗೆ ಬಲವನ್ನು ದಯಪಾಲಿಸಿದವನು ನಮ್ಮ ಕರ್ತನಾದ ಯೇಸು ಕ್ರಿಸ್ತನೇ. ಅದಕ್ಕಾಗಿ ನಾನು ಕೃತಜ್ಞತೆಯುಳ್ಳವನಾಗಿದ್ದೇನೆ. ಮೊದಲು ದೂಷಕನೂ, [* ಆ. ಕೃ 8:3 ]ಹಿಂಸಕನೂ, ಕೇಡುಮಾಡುವವನೂ ಆಗಿದ್ದ ನನ್ನನ್ನು ಆತನು ನಂಬಿಗಸ್ತನೆಂದು ಎಣಿಸಿ, [† 2 ಕೊರಿ 3:6 ]ತನ್ನ ಸೇವೆಗೆ ನೇಮಿಸಿಕೊಂಡದ್ದಕ್ಕಾಗಿ ನಾನು ಆತನಿಗೆ ಸ್ತೋತ್ರಮಾಡುತ್ತೇನೆ. ನಾನು ಅಜ್ಞಾನಿಯಾಗಿ [‡ ಆ. ಕೃ. 3:17 ]ತಿಳಿಯದೆ ಅಪನಂಬಿಕೆಯಲ್ಲಿ ಆ ರೀತಿ ನಡೆದುಕೊಂಡದ್ದರಿಂದ [§ 1 ಕೊರಿ 7:25; 2 ಕೊರಿ 4:1 ]ನನ್ನ ಮೇಲೆ ಆತನಿಗೆ ಕರುಣೆ ಉಂಟಾಯಿತು;
13.
14. ಆದರೆ [* ರೋಮ 5:20 ]ನಮ್ಮ ಕರ್ತನ ಕೃಪೆಯು ಅತ್ಯಧಿಕವಾಗಿದ್ದು ಕ್ರಿಸ್ತಯೇಸುವಿನಲ್ಲಿರುವ [† ಲೂಕ 7:47, 50; 1 ಥೆಸ. 1:3 ]ನಂಬಿಕೆಯನ್ನೂ ಪ್ರೀತಿಯನ್ನೂ ನನ್ನಲ್ಲಿ ಉಕ್ಕಿಸಿತ್ತು.
15. [‡ ಮತ್ತಾ 9:13; ಯೋಹಾ 3:17; ರೋಮ 4:25 ]ಕ್ರಿಸ್ತಯೇಸು ಪಾಪಿಗಳನ್ನು ರಕ್ಷಿಸುವುದಕ್ಕೋಸ್ಕರ ಈ ಲೋಕಕ್ಕೆ ಬಂದನು ಎಂಬ ವಾಕ್ಯವು [§ 1 ತಿಮೊ 3:1; 4:9; 2 ತಿಮೊ. 2:11; ತೀತ 3:8 ]ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಇದೆ, ಯಾಕೆಂದರೆ [* 1 ಕೊರಿ 15:9 ]ಆ ಎಲ್ಲಾ ಪಾಪಿಗಳಲ್ಲಿ ನಾನೇ ಪ್ರಮುಖನು.
16. ಆದರೆ ಇನ್ನು ಮುಂದೆ ನಿತ್ಯಜೀವಕ್ಕಾಗಿ ತನ್ನ ಮೇಲೆ ನಂಬಿಕೆಯಿಡುವವರಿಗೆ, ತನ್ನ ದೀರ್ಘಶಾಂತಿಯ ದೃಷ್ಟಾಂತವಿರಬೇಕೆಂದು ಕ್ರಿಸ್ತ ಯೇಸುವು ಪಾಪಿಗಳಲ್ಲಿ ಪ್ರಮುಖನಾಗಿದ್ದ ನನ್ನನ್ನು ಕರುಣಿಸಿ, ನನ್ನಲ್ಲಿ ತನ್ನ ಪೂರ್ಣ ದೀರ್ಘಶಾಂತಿಯನ್ನು ತೋರ್ಪಡಿಸಿದನು.
17. [† ಪ್ರಕ 15:3; 4:9,10 ]ಸರ್ವಯುಗಗಳ ಅರಸನೂ, [‡ 1 ತಿಮೊ 6:15,16; ರೋಮ 1:23 ]ಅಮರನೂ, [§ ಯೋಹಾ 1:18; ಕೊಲೊ 1:15; ಇಬ್ರಿ 11:27; 1 ಯೋಹಾ 4:12 ]ಅದೃಶ್ಯನೂ ಆಗಿರುವ [* ಯೂದ 25 ]ಏಕ ದೇವರಿಗೆ ಘನವೂ ಮಹಿಮೆಯೂ ಯುಗಯುಗಾಂತರಗಳಲ್ಲಿಯೂ ಇರಲಿ. ಆಮೆನ್. [PE]
18. [PS]ಮಗನಾದ ತಿಮೊಥೆಯನೇ, [† 1 ತಿಮೊ 4:14 ]ನಿನ್ನ ವಿಷಯದಲ್ಲಿ ಮೊದಲು ಉಂಟಾಗಿದ್ದ ಪ್ರವಾದನೆಗಳನ್ನು ನೆನಪಿಸಿಕೊಂಡು, [‡ 1 ಕೊರಿ 9:7; 2 ಕೊರಿ 10:4; 2 ತಿಮೊ 2:3,4 ]ನೀನು ಅವುಗಳಿಂದ ಧೈರ್ಯಹೊಂದಿ ಒಳ್ಳೆಯ ಯುದ್ಧವನ್ನು ನಡೆಸಬೇಕೆಂದು ನಿನಗೆ ಆಜ್ಞಾಪಿಸುತ್ತಿದ್ದೇನೆ.
19. [§ 1 ತಿಮೊ 3:9 ]ನಂಬಿಕೆಯನ್ನೂ ಒಳ್ಳೆಯ ಮನಸ್ಸಾಕ್ಷಿಯನ್ನೂ ಗಟ್ಟಿಯಾಗಿ ಹಿಡಿದುಕೊಂಡಿರು. ಕೆಲವರು ಒಳ್ಳೆಯ ಮನಸ್ಸಾಕ್ಷಿಯನ್ನು ತಳ್ಳಿಬಿಟ್ಟು ನಂಬಿಕೆಯ ವಿಷಯದಲ್ಲಿ ಹಡಗು ಒಡೆದು, ನಷ್ಟಪಟ್ಟವರಂತೆ ಇದ್ದಾರೆ.
20. [* 2 ತಿಮೊ 2:7; ]ಹುಮೆನಾಯನೂ [† 1 ತಿಮೊ 4:14 ]ಅಲೆಕ್ಸಾಂದರನೂ ಇಂಥವರೇ. ಇವರು ದೇವದೂಷಣೆ ಮಾಡಬಾರದೆಂಬುದನ್ನು ಕಲಿತುಕೊಳ್ಳುವಂತೆ [‡ ಕೊರಿ 5:5 ]ಇವರನ್ನು ಸೈತಾನನಿಗೆ ಒಪ್ಪಿಸಿಕೊಟ್ಟೆನು. [PE]