1. {ದೇವರಿಗೆ ಮೆಚ್ಚಿಕೆಯಾದ ಜೀವನ} [PS] ಕಡೆಯದಾಗಿ, ಸಹೋದರರೇ, ನಾವು ಕರ್ತನಾದ ಯೇಸುವಿನ ಮುಖಾಂತರ [* 1 ಕೊರಿ 11:2:] ನಿಮಗೆ ಕೊಟ್ಟಿರುವ ಆಜ್ಞೆಗಳನ್ನು ತಿಳಿದಿದ್ದೀರಷ್ಟೆ.
2. ಅದುದರಿಂದ [† ಎಫೆ 4:1:] ನೀವು ಹೇಗೆ ನಡೆದು [‡ ಕೊಲೊ 1:10:] ದೇವರನ್ನು ಮೆಚ್ಚಿಸಬೇಕಾಗಿದೆಯೋ ಆ ಆಜ್ಞೆಗಳನ್ನು [§ ಫಿಲಿ. 4:9:] ನಮ್ಮಿಂದ ಕಲಿತುಕೊಂಡು ಅದರಂತೆ ನಡೆಯುತ್ತಲೇ ಇದ್ದಿರಿ. ನೀವು ಹಾಗೆಯೇ ಇನ್ನೂ ಹೆಚ್ಚಾಗಿ ನಡೆಯಬೇಕೆಂದು ನಿಮ್ಮನ್ನು ಯೇಸು ಕರ್ತನಲ್ಲಿ ಬೇಡಿಕೊಳ್ಳುತ್ತೇವೆ ಹಾಗೂ ಪ್ರಬೋಧಿಸುತ್ತೇವೆ.
3. [* ರೋಮಾ. 6:19, 22; 1 ಕೊರಿ 1:30; 2 ಥೆಸ. 2:13; 1 ತಿಮೊ. 2:15; ಇಬ್ರಿ. 12:14:] ದೇವರ ಚಿತ್ತವೇನಂದರೆ ನೀವು ಶುದ್ಧರಾಗಬೇಕೆಂಬುದೇ. [† 1 ಕೊರಿ 6:18:] ಆದ್ದರಿಂದ ಹಾದರಕ್ಕೆ ದೂರವಾಗಿರಬೇಕು.
4. (4-5) [‡ ಕೀರ್ತ 79:6; ಗಲಾ. 4:8:] ದೇವರನ್ನರಿಯದ [§ ಎಫೆ 4:17:] ಅನ್ಯಜನರಂತೆ [* ರೋಮಾ. 1:26:] ಕಾಮಾಭಿಲಾಷೆಗಳಿಗೆ ಒಳಗಾಗದೆ, ನಿಮ್ಮಲ್ಲಿ ಪ್ರತಿಯೊಬ್ಬನು ಪವಿತ್ರವಾದ ಮನಸ್ಸಿನಿಂದಲೂ ಘನತೆಯಿಂದಲೂ [† ಅಥವಾ, ಸ್ವಂತ ಘಟವನ್ನು ಸ್ವಾಧೀನದಲ್ಲಿ ಇಟ್ಟುಕೊಂಡಿರಲು. ] ಪತ್ನಿಯನ್ನು ಸಂಪಾದಿಸಿಕೊಳ್ಳಲು ತಿಳಿಯಬೇಕು.
5. ಈ ವಿಷಯದಲ್ಲಿ [‡ 1 ಕೊರಿ 6:8:] ಯಾರೂ ತನ್ನ ಸಹೋದರನನ್ನು ವಂಚಿಸಿ ಕೇಡು ಮಾಡಬಾರದು. ನಾವು ಮೊದಲೇ ತಿಳಿಸಿ, ನಿಮಗೆ ಖಂಡಿತವಾಗಿ ಹೇಳಿದ ಪ್ರಕಾರ ಇವೆಲ್ಲವುಗಳ ವಿಷಯದಲ್ಲಿ [§ ರೋಮಾ. 13:4; 12:19:] ಕರ್ತನು ಪ್ರತಿಕಾರ ಮಾಡುವವನಾಗಿದ್ದಾನೆ.
6. ದೇವರು ನಮ್ಮನ್ನು ಅಶುದ್ಧತೆಗೆ ಕರೆಯದೆ [* 1 ಥೆಸ. 4:3; 1 ಪೇತ್ರ. 1:15:] ಶುದ್ಧರಾಗಿರುವುದಕ್ಕೆ ಕರೆದನು.
7. ಹೀಗಿರಲು [† ಲೂಕ 10:16:] ಈ ಮಾತನ್ನು ತಿರಸ್ಕರಿಸುವವನು ಮನುಷ್ಯರನ್ನು ಮಾತ್ರವಲ್ಲದೆ, ನಿಮಗೆ [‡ 1 ಯೋಹಾ 3:24; 4:13:] ಪವಿತ್ರಾತ್ಮವರವನ್ನು ದಯಪಾಲಿಸುವ ದೇವರನ್ನೂ ತಿರಸ್ಕರಿಸುವವನಾಗಿದ್ದಾನೆ. [PE][PS]
8. [§ ಇಬ್ರಿ. 13:1 ] ಸಹೋದರ ಸ್ನೇಹದ ವಿಷಯದಲ್ಲಿ [* 1 ಥೆಸ. 5:1:] ನಿಮಗೆ ಬರೆಯುವ ಅವಶ್ಯಕತೆಯಿಲ್ಲ, [† ಯೋಹಾ 13:34:] ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಉಪದೇಶವನ್ನು ನೀವೇ ದೇವರಿಂದ ಹೊಂದಿದವರಾಗಿದ್ದೀರಿ.
9. [‡ 1 ಥೆಸ. 1:7:] ಮಕೆದೋನ್ಯದಲ್ಲಿ ವಾಸಿಸುವ ಎಲ್ಲ ಸಹೋದರರನ್ನೂ ಪ್ರೀತಿಸುತ್ತಿರುವುದೇನೋ ನಿಜವೇ. ಆದರೂ ಸಹೋದರರೇ, [§ 1 ಥೆಸ. 3:12:] ನೀವು ಪ್ರೀತಿಯಲ್ಲಿ ಇನ್ನೂ ಹೆಚ್ಚುತ್ತಾ ಬರಬೇಕೆಂದು ನಿಮ್ಮನ್ನು ಉತ್ತೇಜಿಸುತ್ತೇವೆ.
10. ಇದಲ್ಲದೆ ನಾವು ನಿಮಗೆ ಆಜ್ಞೆ ಕೊಟ್ಟಿರುವ ಪ್ರಕಾರ ನೀವು [* 2 ಥೆಸ. 3:11; 1 ಪೇತ್ರ. 4:15:] ಮತ್ತೊಬ್ಬರ ವಿಷಯದಲ್ಲಿ ತಲೆಹಾಕದೆ [† ಜ್ಞಾ. 17:14:] ಸುಮ್ಮಗಿದ್ದು, [‡ 2 ಥೆಸ. 3:12:] ಸ್ವಂತ ಕಾರ್ಯಗಳನ್ನೇ ನೋಡಿಕೊಳ್ಳುತ್ತಾ, [§ ಅ. ಕೃ. 18:3; ಎಫೆ 4:28:] ಕೈಯಾರೆ ಕೆಲಸಮಾಡಿ ದುಡಿಯಿರಿ.
11. ಹೀಗಿದ್ದರೆ ನೀವು [* ಮಾರ್ಕ 4:11; 1 ಕೊರಿ 5:12, 13; ಕೊಲೊ 4:5; 1 ತಿಮೊ. 3:7:] ಹೊರಗಿನವರ ದೃಷ್ಟಿಯಲ್ಲಿ ಸಜ್ಜನರಾಗಿರುವುದೇ ಅಲ್ಲದೆ ನಿಮಗೆ ಯಾವುದಕ್ಕೂ ಕೊರತೆಯಿರುವುದಿಲ್ಲ. [PS]
12. {ಯೇಸು ಕರ್ತನು ಪುನರಾಗಮನ} [PS] ಸಹೋದರರೇ, ನಿದ್ರೆಹೋಗುವವರ ಗತಿ ಏನೆಂದು ನೀವು ತಿಳಿಯದೆ ಇದ್ದು, [† ಎಫೆ 2:12:] ನಿರೀಕ್ಷೆಯಿಲ್ಲದವರಾಗಿರುವ ಇತರರಂತೆ [‡ ಯಾಜ 19:28; ಧರ್ಮೋ 14:1; 2 ಸಮು 12:20-23; ಮಾರ್ಕ 5:39:] ದುಃಖಿಸಬಾರದು ಎಂಬುದೇ ನಮ್ಮ ಬಯಕೆ.
13. [§ 1 ಕೊರಿ 15:13; 2 ಕೊರಿ 4:14; ಪ್ರಕ 1:18:] ಯೇಸು ಸತ್ತು ಜೀವಿತನಾಗಿ ಎದ್ದನೆಂದು ನಾವು ನಂಬುತ್ತೇವೆ ಹಾಗೆಯೇ [* ಅಥವಾ, ದೇವರು ನಿದ್ರೆ ಹೋದವರನ್ನು ಸಹ ಯೇಸುವಿನ ಮೂಲಕವಾಗಿ ಆತನೊಡನೆ. ] ಯೇಸುವಿನಲ್ಲಿದ್ದು ನಿದ್ರೆಹೋದವರನ್ನು ಸಹ ದೇವರು ಆತನೊಡನೆ ಎಬ್ಬಿಸಿ [† 1 ಕೊರಿ 15:18:] ಕರೆದುಕೊಂಡು ಬರುವನೆಂದು ನಂಬಬೇಕಲ್ಲವೇ.
14. ನಾವು ಕರ್ತನ ಮಾತಿನ ಆಧಾರದ ಮೇಲೆ ನಿಮಗೆ ಹೇಳುವುದೇನಂದರೆ, [‡ 1 ಥೆಸ. 2:19:] ಕರ್ತನು ಪುನರಾಗಮಿಸುವವರೆಗೆ [§ 1 ಕೊರಿ 15:51:] ಜೀವದಿಂದುಳಿದಿರುವ ನಾವು ಮರಣ ಹೊಂದಿದವರಿಗಿಂತ ಮುಂದಾಗುವುದಿಲ್ಲ.
15. ಯಾಕೆಂದರೆ ಕರ್ತನು ತಾನೇ ಆಜ್ಞಾಘೋಷದೊಡನೆಯೂ, [* ಯೂದ. 9:] ಪ್ರಧಾನದೂತನ ಶಬ್ದದೊಡನೆಯೂ, [† ಮತ್ತಾ 24:31; 1 ಕೊರಿ 15:52:] ದೇವರ ತುತ್ತೂರಿ ಧ್ವನಿಯೊಡನೆಯೂ [‡ ಮತ್ತಾ 16:27; 2 ಥೆಸ. 1:7:] ಆಕಾಶದಿಂದ ಇಳಿದುಬರುವನು. [§ 1 ಕೊರಿ 15:23; 2 ಥೆಸ. 2:1; ಪ್ರಕ 14:13:] ಆಗ ಕ್ರಿಸ್ತನಲ್ಲಿ ಸತ್ತವರು ಮೊದಲು ಎದ್ದು ಬರುವರು.
16. ಆ ಮೇಲೆ ಜೀವದಿಂದುಳಿದಿರುವ ನಾವು ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳುವುದಕ್ಕಾಗಿ ಅವರೊಂದಿಗೆ [* ದಾನಿ. 7:13; ಅ. ಕೃ. 1:9:] ಮೇಘಗಳಲ್ಲಿ ಫಕ್ಕನೆ ಒಯ್ಯಲ್ಪಡುವೆವು. ಹೀಗಾಗಿ ನಾವು ಸದಾಕಾಲವೂ [† ಯೋಹಾ 12:26:] ಕರ್ತನ ಜೊತೆಯಲ್ಲಿರುವೆವು.
17. ಆದಕಾರಣ ಈ ಮಾತುಗಳಿಂದ [‡ 1 ಥೆಸ. 5:11:] ಒಬ್ಬರನ್ನೊಬ್ಬರು ಸಂತೈಸಿಕೊಳ್ಳಿರಿ. [PE]
18.