1. {ದಾವೀದನು ಸೌಲನಿಗೆ ಕೇಡುಮಾಡದೆ ಬಿಟ್ಟಿದ್ದು} PS ಸೌಲನು ಫಿಲಿಷ್ಟಿಯರನ್ನು ಓಡಿಸಿ ಹಿಂದಿರುಗಿದಾಗ ದಾವೀದನು ಏಂಗೆದಿಯ ಅರಣ್ಯದಲ್ಲಿ ಇದ್ದಾನೆಂದು ಅವನಿಗೆ ತಿಳಿದುಬಂದಿತು.
|
2. ಆಗ ಅವನು ಎಲ್ಲಾ ಇಸ್ರಾಯೇಲರಲ್ಲಿ ಶ್ರೇಷ್ಠರಾದ ಮೂರು ಸಾವಿರ ಮಂದಿ ಸೈನಿಕರನ್ನು ಆರಿಸಿಕೊಂಡು ಕಾಡುಗುರಿಬಂಡೆಗಳಲ್ಲಿದ್ದ ದಾವೀದನನ್ನೂ, ಅವನ ಜನರನ್ನೂ ಹುಡುಕುವುದಕ್ಕೋಸ್ಕರ ಹೊರಟನು.
|
3. ಅವನು ಮಾರ್ಗದಲ್ಲಿ ಕುರಿಹಟ್ಟಿಗಳ ಬಳಿಯಲ್ಲಿ ಒಂದು ಗವಿಯನ್ನು ಕಂಡು ಶೌಚಕ್ಕೋಸ್ಕರ ಅದರೊಳಗೆ ಪ್ರವೇಶಿಸಿದನು. * ಕೀರ್ತ 57; 142. ದಾವೀದನೂ ಅವನ ಜನರೂ ಅದೇ ಗವಿಯ ಹಿಂಭಾಗದಲ್ಲಿ ಅಡಗಿಕೊಂಡಿದ್ದರು.
|
4. ಜನರು ದಾವೀದನಿಗೆ “ನಿನ್ನ ಶತ್ರುವನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು, ಆಗ ನೀನು ಅವನನ್ನು ಮನಸ್ಸಿಗೆ ಬಂದಂತೆ ನಡೆಸಬಹುದು ಎಂದು ಯೆಹೋವನು ನಿನಗೆ ಹೇಳಿದ ಮಾತು ನೆರವೇರುವ ದಿನ ಇದೇ” ಅಂದಾಗ ಅವನೆದ್ದು ಮೆಲ್ಲನೆ ಹೋಗಿ ಸೌಲನ ನಿಲುವಂಗಿಯ ತುದಿಯನ್ನು ಕತ್ತರಿಸಿಕೊಂಡನು.
|
6. ಅವನು ತನ್ನ ಜನರಿಗೆ, “ಅವನು ಯೆಹೋವನಿಂದ ಅಭಿಷೇಕಿಸಲ್ಪಟ್ಟವನೂ, ನನ್ನ ಒಡೆಯನೂ ಆಗಿದ್ದಾನೆ. ನಾನು ನಿಮ್ಮ ಮಾತು ಕೇಳಿ ಯೆಹೋವನ ಅಭಿಷಿಕ್ತನಿಗೆ ವಿರೋಧವಾಗಿ ಕೈಯೆತ್ತದಂತೆ ಯೆಹೋವನೇ ನನಗೆ ಅಡ್ಡಿ ಮಾಡಲಿ” ಎಂದು ಹೇಳಿದನು
|
7. ಈ ಮಾತುಗಳಿಂದ ಅವನು ಸೌಲನಿಗೆ ವಿರೋಧವಾಗಿ ಏಳದಂತೆ ತನ್ನ ಜನರನ್ನು ತಡೆದನು. ಸೌಲನು ಗವಿಯಿಂದ ಹೊರಗೆ ಬಂದು ಸ್ವಲ್ಪ ಮುಂದೆ ಹೋದ ಮೇಲೆ
|
8. ದಾವೀದನೂ ಹೊರಗೆ ಬಂದು, “ಅರಸನೇ ನನ್ನ ಒಡೆಯನೇ” ಎಂದು ಅವನನ್ನು ಕೂಗಿದನು. ಸೌಲನು ಹಿಂದಿರುಗಿ ನೋಡಲು ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ,
|
10. ಈ ಹೊತ್ತು ಯೆಹೋವನು ಗವಿಯಲ್ಲಿ ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಟ್ಟಿದ್ದಾನೆಂಬುದು ಈಗ ನಿನಗೆ ಗೊತ್ತಾಯಿತಲ್ಲವೋ? ನಿನ್ನನ್ನು ಕೊಂದುಬಿಡಬೇಕೆಂದು ಕೆಲವರು ನನಗೆ ಹೇಳಿದರು. ಆದರೆ ನಾನು ಅವರಿಗೆ, ‘ಯೆಹೋವನ ಅಭಿಷಿಕ್ತನಾದ ನನ್ನ ಒಡೆಯನ ಮೇಲೆ ಕೈಹಾಕುವುದಿಲ್ಲ’ ಎಂದು ಹೇಳಿ ನಿನ್ನನ್ನು ಉಳಿಸಿದೆನು.
|
11. ನನ್ನ ತಂದೆಯೇ, ಇಗೋ ನೋಡು, ನನ್ನ ಕೈಯಲ್ಲಿ ನಿನ್ನ ನಿಲುವಂಗಿಯ ತುಂಡು ಇದೆ. ನಾನು ನಿನ್ನನ್ನು ಕೊಲ್ಲದೆ, ನಿನ್ನ ನಿಲುವಂಗಿಯ ತುದಿಯನ್ನು ಕತ್ತರಿಸಿಕೊಂಡೆನಷ್ಟೇ † ಕೀರ್ತ 7:4. ಇದರಿಂದ ನನ್ನಲ್ಲಿ ಯಾವ ದೋಷವೂ ಅಪರಾಧವೂ ಇರುವುದಿಲ್ಲ. ನಾನು ನಿನಗೆ ವಿರೋಧವಾಗಿ ದ್ರೋಹಮಾಡಲಿಲ್ಲ ಎಂದು ತಿಳಿದುಕೋ. ಆದರೂ ನೀನು ನನ್ನ ಪ್ರಾಣಕ್ಕೆ ಹೊಂಚು ಹಾಕುತ್ತಿರುವಿಯಲ್ಲಾ.
|
12. ‡ ಆದಿ 16:5; ರೋಮ. 12:19; ಯೆಹೋವನೇ ನಮ್ಮಿಬ್ಬರ ಮಧ್ಯೆ ವ್ಯಾಜ್ಯವನ್ನು ತೀರಿಸಲಿ. ಆತನೇ ನನಗೋಸ್ಕರ ನಿನಗೆ ಮುಯ್ಯಿ ತೀರಿಸಲಿ. ನಾನಂತೂ ನಿನಗೆ ವಿರೋಧವಾಗಿ ಕೈಯೆತ್ತುವುದಿಲ್ಲ.
|
14. ಇಸ್ರಾಯೇಲರ ಅರಸನೇ ಯಾರನ್ನು ಹಿಂಬಾಲಿಸಿ ಹೊರಟಿರುವೇ? ಯಾರನ್ನು ಹಿಡಿಯಬೇಕೆಂದಿರುತ್ತೀ? ಸತ್ತ ನಾಯಿಯನ್ನೋ? ಒಂದು ಬಡ ನೊಣವನ್ನೋ?.
|
15. ಯೆಹೋವನು ನ್ಯಾಯಾಧಿಪತಿಯಾಗಿ ನಮ್ಮಿಬ್ಬರ ವ್ಯಾಜ್ಯವನ್ನು ತೀರಿಸಲಿ. ಆತನೇ ನೋಡಿ § ಕೀರ್ತ 35:1; 43:1; ಜ್ಞಾನ. 22:23. ನನಗೋಸ್ಕರ ವಾದಿಸಿ ನನ್ನನ್ನು ನಿನ್ನ ಕೈಯಿಂದ ತಪ್ಪಿಸಲಿ” ಎಂದು ಹೇಳಿದನು.
|
17. ಇದಲ್ಲದೆ ಅವನು ದಾವೀದನಿಗೆ, “ನೀನು ನನಗಿಂತ ನೀತಿವಂತನೂ. ನಾನು ನಿನಗೆ ಕೇಡುಮಾಡಿದರೂ ನೀನು ನನಗೆ ಒಳ್ಳೆಯದನ್ನೇ ಮಾಡಿದಿ.
|
18. ಯೆಹೋವನು ನನ್ನನ್ನು ನಿನ್ನ ಕೈಗೆ ಒಪ್ಪಿಸಿಕೊಟ್ಟರೂ ನೀನು ನನ್ನನ್ನು ಕೊಲ್ಲಲಿಲ್ಲ. ಇದರಿಂದ ನೀನು ನನಗೆ ಹಿತವನ್ನೇ ಮಾಡುವಂಥವನೆಂಬುದು ಈ ಹೊತ್ತು ಪ್ರಕಟವಾಯಿತು.
|
19. ಯಾವನಾದರೂ ತನ್ನ ಕೈಗೆ ಸಿಕ್ಕಿದ ವೈರಿಯನ್ನು ಸುಕ್ಷೇಮದಿಂದ ಕಳುಹಿಸಿಬಿಡುವನೋ? ನೀನು ಈ ಹೊತ್ತು ನನಗೆ ಉಪಕಾರಮಾಡಿದ್ದಕ್ಕಾಗಿ ಯೆಹೋವನು ನಿನಗೆ ಉಪಕಾರ ಮಾಡಲಿ.
|
21. ಹೀಗಿರುವುದರಿಂದ ನೀನು ನನ್ನ ಸಂತಾನವನ್ನು ನಿರ್ಮೂಲಮಾಡುವುದಿಲ್ಲವೆಂದೂ, ನಮ್ಮ ಕುಲದಿಂದ ನನ್ನ ಹೆಸರನ್ನು ತೆಗೆದುಹಾಕುವುದಿಲ್ಲವೆಂದೂ ಯೆಹೋವನ ಹೆಸರಿನಲ್ಲಿ ಪ್ರಮಾಣ ಮಾಡು” ಎಂದು ಬೇಡಿಕೊಂಡ ಹಾಗೆ ದಾವೀದನು ಪ್ರಮಾಣಮಾಡಿದನು.
|