1. {ಶೆಬಾ ದೇಶದ ರಾಣಿಯು ಸೊಲೊಮೋನನ ದರ್ಶನಕ್ಕೆ ಬಂದದ್ದು} PS ಯೆಹೋವನ ನಾಮಮಹತ್ತಿನಿಂದ ಸೊಲೊಮೋನನಿಗುಂಟಾದ ಕೀರ್ತಿಯನ್ನು ಕುರಿತು ಶೆಬೆದ ರಾಣಿಯು ಕೇಳಿ, ಅವನನ್ನು ಒಗಟುಗಳಿಂದ ಪರೀಕ್ಷಿಸುವುದಕ್ಕಾಗಿ ಬಂದಳು.
|
2. ಆಕೆಯು ಸುಗಂಧದ್ರವ್ಯ, ಅಪರಿಮಿತವಾದ ಬಂಗಾರ, ರತ್ನ ಇವುಗಳನ್ನು ಒಂಟೆಗಳ ಮೇಲೆ ಹೇರಿಸಿಕೊಂಡು, ಮಹಾಪರಿವಾರದೊಡನೆ ಯೆರೂಸಲೇಮಿಗೆ ಬಂದು ತನ್ನ ಮನಸ್ಸಿನಲ್ಲಿ ಗೊತ್ತುಮಾಡಿಕೊಂಡಿದ್ದ ಎಲ್ಲಾ ವಿಷಯಗಳನ್ನು ಕುರಿತು ಸೊಲೊಮೋನನೊಡನೆ ಸಂಭಾಷಿಸಿದಳು.
|
3. ಸೊಲೊಮೋನನು ಆಕೆಯ ಎಲ್ಲಾ ಪ್ರಶ್ನೆಗಳಿಗೂ ಉತ್ತರಕೊಟ್ಟನು. ಅವುಗಳಲ್ಲಿ ಸೊಲೊಮೋನನಿಗೆ ತಿಳಿಯದಂಥದ್ದು ಅವುಗಳಲ್ಲಿ ಒಂದೂ ಇರಲಿಲ್ಲವಾದುದರಿಂದ ಅವನು ಅವೆಲ್ಲವುಗಳಿಗೆ ಉತ್ತರಕೊಟ್ಟನು.
|
5. ಅವನ ಭೋಜನಪೀಠದ ಆಹಾರ, ಆ ಪೀಠದ ಸುತ್ತಲಿರುವ ಉದ್ಯೋಗಸ್ಥರ ಆಸನಗಳು, ಅವನ ಪರಿಚಾರಕರ ಸೇವಾಕ್ರಮ, ಅವರ ಉಡುಪುಗಳು, ಅವನ ಪಾನಕಗಳು ಇವುಗಳನ್ನೂ ಮತ್ತು ಅವನು ಯೆಹೋವನ ಆಲಯದಲ್ಲಿ ಸಮರ್ಪಿಸುತ್ತಿದ್ದ ಸರ್ವಾಂಗಹೋಮಗಳನ್ನೂ ನೋಡಿದಾಗ ವಿಸ್ಮಿತಳಾಗಿ ಹೋದಳು.
|
7. ನಾನಾಗಿ ಇಲ್ಲಿಗೆ ಬಂದು ಕಣ್ಣಾರೆ ನೋಡುವುದಕ್ಕಿಂತ ಮೊದಲು ಜನರು ಹೇಳಿದ ಸುದ್ದಿಯನ್ನು ನಂಬಿರಲಿಲ್ಲ. ಈಗ ಇಲ್ಲಿ ಬಂದು ನೋಡಿದರೆ ನಿನ್ನ ಜ್ಞಾನವೈಭವಗಳು ನಾನು ಕೇಳಿದ್ದಕ್ಕಿಂತ ಹೆಚ್ಚಾಗಿವೆ. ಜನರು ಇದರಲ್ಲಿ ಅರ್ಧವನ್ನಾದರೂ ಹೇಳಲಿಲ್ಲ.
|
9. ನಿನ್ನನ್ನು ಮೆಚ್ಚಿ ಇಸ್ರಾಯೇಲ್ ಸಿಂಹಾಸನದ ಮೇಲೆ ಕುಳ್ಳಿರಿಸಿದ ನಿನ್ನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ಆತನು ಇಸ್ರಾಯೇಲರನ್ನು ಸದಾ ಪ್ರೀತಿಸುವವನಾದುದರಿಂದ ಅವರ ನೀತಿನ್ಯಾಯಗಳನ್ನು ಸ್ಥಾಪಿಸುವುದಕ್ಕೋಸ್ಕರ ನಿನ್ನನ್ನೇ ಅರಸನನ್ನಾಗಿ ನೇಮಿಸಿದ್ದಾನೆ” ಎಂದು ಹೇಳಿದಳು.
|
10. ಆಕೆಯು ಅರಸನಿಗೆ * 4,000 ಕ್ಕಿಂತಲೂ ಆಧಿಕ. ನೂರಿಪ್ಪತ್ತು ತಲಾಂತು ಬಂಗಾರವನ್ನೂ, ಅಪರಿಮಿತ ಸುಗಂಧದ್ರವ್ಯವನ್ನೂ ಮತ್ತು ರತ್ನಗಳನ್ನೂ ಕೊಟ್ಟಳು. ಶೆಬೆದ ರಾಣಿಯು ಅರಸನಾದ ಸೊಲೊಮೋನನಿಗೆ ಕೊಟ್ಟಷ್ಟು ಸುಗಂಧದ್ರವ್ಯವನ್ನು ಅವನಿಗೆ ಪುನಃ ಯಾರು ಕೊಡಲಿಲ್ಲ. ಬರಲೇ ಇಲ್ಲ. PEPS
|
11. ಹೀರಾಮನ ಹಡಗುಗಳು ಓಫೀರ್ ದೇಶದಿಂದ ಬಂಗಾರದ ಹೊರತಾಗಿ ಸುಗಂಧದ ಮರವನ್ನೂ ಮತ್ತು ರತ್ನಗಳನ್ನೂ ರಾಶಿ ರಾಶಿಯಾಗಿ ತಂದವು.
|
12. ಅರಸನು ಸುಗಂಧದ ಮರದಿಂದ ಯೆಹೋವನ ಆಲಯ ಮತ್ತು ಅರಮನೆ ಇವುಗಳಿಗೆ ಸ್ತಂಭಗಳನ್ನು, ಗಾಯಕರಿಗೋಸ್ಕರ ಕಿನ್ನರಿಗಳನ್ನೂ, ಸ್ವರಮಂಡಲಗಳನ್ನೂ ಮಾಡಿಸಿದನು. ಆಗ ಬಂದಷ್ಟು ಸುಗಂಧದ ಮರವು ಇಂದಿನ ವರೆಗೂ ಆ ದೇಶಕ್ಕೆ ಬರಲಿಲ್ಲ ಮತ್ತು ಕಾಣಲಿಲ್ಲ.
|
13. ಅರಸನಾದ ಸೊಲೊಮೋನನು ಶೆಬೆದ ರಾಣಿಗೆ ತಾನಾಗಿ ರಾಜಮರ್ಯಾದೆಯಿಂದ ಕೊಟ್ಟ ವಸ್ತುಗಳಲ್ಲದೆ ಆಕೆಯು ಕೇಳಿದವುಗಳೆಲ್ಲವನ್ನು ಕೊಟ್ಟುಬಿಟ್ಟನು. ಅನಂತರ ಆಕೆಯು ತನ್ನ ಪರಿವಾರದೊಡನೆ ಸ್ವದೇಶಕ್ಕೆ ಹೊರಟುಹೋದಳು. PS
|
14. {ಸೊಲೊಮೋನನ ವೈಭವ} PS ಸೊಲೊಮೋನನಿಗೆ ಒಂದು ವರ್ಷದಲ್ಲಿ † ಸುಮಾರು 23,000 ಕಿಲೋಗ್ರಾಂ. ಆರುನೂರ ಅರುವತ್ತಾರು ತಲಾಂತು ಬಂಗಾರ ದೊರಕುತ್ತಿತ್ತು.
|
15. ಅದರ ಜೊತೆಗೆ ದೇಶಾಂತರ ವ್ಯಾಪಾರಿಗಳೂ, ವರ್ತಕರೂ, ಅರಬಿಯ ಅರಸರೂ, ಪ್ರದೇಶಾಧಿಪತಿಗಳೂ ಸಹ ಸೊಲೊಮೋನನಿಗೆ ಬೆಳ್ಳಿ ಬಂಗಾರವನ್ನು ಕೊಡುತ್ತಿದ್ದರು.
|
16. ಅರಸನಾದ ಸೊಲೊಮೋನನು ಬಂಗಾರದ ತಗಡಿನಿಂದ ಇನ್ನೂರು ಗುರಾಣಿಗಳನ್ನು ಮಾಡಿಸಿದನು. ಪ್ರತಿಯೊಂದು ಗುರಾಣಿಗೆ ಆರುನೂರು ತೊಲಾ ಬಂಗಾರ ಹಿಡಿಯಿತು.
|
17. ಇದಲ್ಲದೆ ಅವನು ಬಂಗಾರದ ತಗಡಿನಿಂದ ಮುನ್ನೂರು ಖೇಡ್ಯಗಳನ್ನು ಮಾಡಿಸಿದನು. ಪ್ರತಿಯೊಂದು ಖೇಡ್ಯಕ್ಕೆ ‡ ಸುಮಾರು 2 ಕಿಲೋಗ್ರಾಂ. ನೂರೈವತ್ತು ತೊಲಾ ಬಂಗಾರ ಹಿಡಿಯಿತು. ಅವನು ಇವುಗಳನ್ನು ಲೆಬನೋನಿನ ತೋಪು ಎನ್ನಿಸಿಕೊಳ್ಳುವ ಮಂದಿರದಲ್ಲಿ ಇರಿಸಿದನು. PEPS
|
19. ಅದಕ್ಕೆ ಆರು ಮೆಟ್ಟಲುಗಳಿದ್ದವು. ಅದರ ಹಿಂಭಾಗದ ತುದಿಯು ಚಕ್ರಾಕಾರವಾಗಿತ್ತು. ಆಸನಕ್ಕೆ ಎರಡು ಕೈಗಳು, ಅವುಗಳ ಹತ್ತಿರ ಎರಡು ಸಿಂಹಗಳು ಇದ್ದವು.
|
20. ಆರು ಮೆಟ್ಟಲುಗಳ ಎರಡು ಕಡೆಗಳಲ್ಲೂ ಒಟ್ಟು ಹನ್ನೆರಡು ಸಿಂಹಗಳು ನಿಂತಿದ್ದವು. ಇಂಥ ಸಿಂಹಾಸನವು ಬೇರೆ ಯಾವ ರಾಜ್ಯದಲ್ಲಿಯೂ ಇರಲಿಲ್ಲ.
|
21. ಅರಸನಾದ ಸೊಲೊಮೋನನ ಪಾನಪಾತ್ರೆಗಳು, ಲೆಬನೋನಿನ ತೋಪು ಎನಿಸಿಕೊಳ್ಳುವ ಮಂದಿರದಲ್ಲಿದ್ದ ಎಲ್ಲಾ ಪಾನಪಾತ್ರೆಗಳು ಬಂಗಾರದವುಗಳು. ಸೊಲೊಮೋನನ ಕಾಲದಲ್ಲಿ ಬೆಳ್ಳಿಗೆ ಬೆಲೆ ಇರಲಿಲ್ಲವಾದುದರಿಂದ ಅವನಲ್ಲಿ ಬೆಳ್ಳಿಯ ಸಾಮಾನು ಒಂದಾದರೂ ಕಾಣಿಸಲಿಲ್ಲ.
|
22. ಹೀರಾಮನ ನಾವೆಗಳ ಜೊತೆಯಲ್ಲಿ ಸೊಲೊಮೋನನ ತಾರ್ಷೀಷ್ ಹಡಗುಗಳು ಹೋಗಿ ಮೂರು ವರ್ಷಕ್ಕೊಮ್ಮೆ ಬಂಗಾರ, ಬೆಳ್ಳಿ, ದಂತ, ವಾನರಗಳನ್ನು ಮತ್ತು ನವಿಲುಗಳನ್ನೂ ತರುತ್ತಿದ್ದವು.
|
25. ಅವರೆಲ್ಲರೂ ಅವನಿಗೆ ವರ್ಷ ವರ್ಷ ಬೆಳ್ಳಿಬಂಗಾರದ ಸಾಮಾನು, ಉಡುಪು, ಯುದ್ಧಕ್ಕೆ ಬೇಕಾದ ಆಯುಧಗಳು, ಸುಗಂಧದ್ರವ್ಯ, ಕುದುರೆ ಮತ್ತು ಹೇಸರಗತ್ತೆ ಇವುಗಳನ್ನು ಕಾಣಿಕೆಯಾಗಿ ಕೊಡುತ್ತಿದ್ದರು. PEPS
|
26. ಸೊಲೊಮೋನನು ರಥಗಳನ್ನೂ ಮತ್ತು ರಾಹುತರನ್ನೂ ಸಂಗ್ರಹಿಸಿದನು. ಅವನ ರಥಗಳು ಸಾವಿರದ ನಾನೂರು. ರಾಹುತರು ಹನ್ನೆರಡು ಸಾವಿರ. ಇವುಗಳಲ್ಲಿ ಕೆಲವನ್ನು ಯೆರೂಸಲೇಮಿನಲ್ಲಿ ತನ್ನ ಬಳಿಯಲ್ಲಿಯೂ, ಉಳಿದವುಗಳನ್ನು ರಥಗಳಿಗೋಸ್ಕರ ನೇಮಿಸಿದ ಪಟ್ಟಣಗಳಲ್ಲಿಯೂ ಇರಿಸಿದನು.
|
27. ಅವನ ಮುಖಾಂತರವಾಗಿ ಯೆರೂಸಲೇಮಿನಲ್ಲಿ ಬೆಳ್ಳಿಯು ಸಾಮಾನ್ಯ ಕಲ್ಲಿನ ಹಾಗೂ ದೇವದಾರುಮರಗಳು ಇಳಕಲಿನ ಪ್ರದೇಶದಲ್ಲಿ ಬೆಳೆಯುವ ಅತ್ತಿಮರಗಳ ಹಾಗೂ ಹೇರಳವಾಗಿ ದೊರೆಯುತ್ತಿತ್ತು.
|
28. ಅರಸನಾದ ಸೊಲೊಮೋನನ ಕುದುರೆಗಳು ಐಗುಪ್ತ ದೇಶದವುಗಳು. ಅವನ ವರ್ತಕರು ಅವುಗಳನ್ನು ಹಿಂಡುಗಟ್ಟಲೆ ಕೊಂಡುಕೊಂಡು ಬರುತ್ತಿದ್ದರು.
|
29. ಐಗುಪ್ತದೇಶದಿಂದ ರಥಗಳನ್ನೂ ಮತ್ತು ಕುದುರೆಗಳನ್ನೂ ತರಿಸಬೇಕಾದರೆ ಪ್ರತಿಯೊಂದು ರಥಕ್ಕೆ ಆರುನೂರು ರೂಪಾಯಿಗಳನ್ನೂ, ಕುದುರೆಗೆ ನೂರೈವತ್ತು ರೂಪಾಯಿಗಳನ್ನೂ ಕೊಡಬೇಕಾಗಿತ್ತು. ಅವು ಹಿತ್ತಿಯರ ಮತ್ತು ಅರಾಮ್ಯರ ಎಲ್ಲಾ ಅರಸರಿಗೆ ಇವರ ಮುಖಾಂತರವಾಗಿಯೇ ಮಾರಾಟವಾಗುತ್ತಿದ್ದವು. PE
|