1. {ಯೆರೂಸಲೇಮಿನಲ್ಲಿದ್ದ ಬಡ ಕ್ರೈಸ್ತರಿಗೋಸ್ಕರ ಧರ್ಮದ ಹಣ ಕೂಡಿಸುವುದನ್ನು ಕುರಿತದ್ದು} PS ಈಗ * ಅ. ಕೃ. 24:17 ದೇವಜನರಿಗೋಸ್ಕರ ಹಣ ಸಂಗ್ರಹಣೆ ವಿಚಾರದ ಕುರಿತು, ನಾನು ಗಲಾತ್ಯ ಪ್ರಾಂತ್ಯದ ಸಭೆಗಳಿಗೆ ಹೇಳಿಕೊಟ್ಟಿರುವ ಕ್ರಮದಂತೆ ನೀವೂ ಮಾಡಿರಿ.
|
2. ನಿಮ್ಮಲ್ಲಿ ಪ್ರತಿಯೊಬ್ಬನು † 2 ಕೊರಿ 8:3-11 ತನಗೆ ಬಂದಂಥ ಸಂಪಾದನೆಯಲ್ಲಿ ಸಾಧ್ಯವಾದಷ್ಟನ್ನು ವಾರದ ಮೊದಲನೆಯ ದಿನದಲ್ಲಿ ಸಂಗ್ರಹಿಸಿ ತನ್ನ ಮನೆಯಲ್ಲಿಟ್ಟುಕೊಂಡಿರಬೇಕು. ಇದರಿಂದ ‡ 2 ಕೊರಿ 9:3 ನಾನು ಬಂದಾಗ ಹಣ ಸಂಗ್ರಹಣೆ ಮಾಡುವ ಅಗತ್ಯವಿರುವುದಿಲ್ಲ.
|
3. ಮತ್ತು ನಾನು ಬಂದ ಮೇಲೆ ನೀವು ಯಾರನ್ನು ಪ್ರಾಮಾಣಿಕರೆಂದು ಸೂಚಿಸುವಿರೋ, ಅವರೊಂದಿಗೆ ನಿಮ್ಮ ಕೊಡುಗೆಯನ್ನು ಯೆರೂಸಲೇಮಿಗೆ ತೆಗೆದುಕೊಂಡು ಹೋಗುವುದಕ್ಕೆ ಪತ್ರಗಳನ್ನು ಕೊಟ್ಟು ಕಳುಹಿಸುವೆನು.
|
5. § ಅ. ಕೃ. 19:9 ನಾನು ಹಾದುಹೋಗಬೇಕೆಂದಿರುವ ಮಕೆದೋನ್ಯ ಸೀಮೆಯನ್ನು ದಾಟುವಾಗ * 1 ಕೊರಿ 4:19 ನಿಮ್ಮ ಬಳಿಗೆ ಬಂದು ಬಹುಶಃ ನಿಮ್ಮ ಬಳಿಯಲ್ಲೇ ಉಳಿದುಕೊಳ್ಳುವೆನು.
|
6. ಅಥವಾ ನಿಮ್ಮಲ್ಲಿ ಹಿಮಕಾಲವನ್ನಾದರೂ ಕಳೆಯುವೆನು; ಹಾಗೆಯೇ ನಾನು ಹೋಗಬೇಕಾದ ಸ್ಥಳಕ್ಕೆ ನೀವು ನನ್ನನ್ನು ಸಾಗಕಳುಹಿಸಲು ಸಹಾಯಮಾಡಬಹುದು.
|
7. † 2 ಕೊರಿ 1:15-16 ನಾನು ಹಾದುಹೋಗುವ ಈ ಸ್ವಲ್ಪ ಸಮಯದಲ್ಲಿ ನಿಮ್ಮನ್ನು ನೋಡಲು ಬಯಸುವುದಿಲ್ಲ. ‡ 1 ಕೊರಿ 4:19; ಯಾಕೋಬ 4:15 ಕರ್ತನ ಅಪ್ಪಣೆಯಾದರೆ ನಿಮ್ಮ ಬಳಿಯಲ್ಲಿ ಕೆಲವು ಕಾಲ ತಂಗಲು ಬಯಸುತ್ತೇನೆ.
|
9. ಯಾಕೆಂದರೆ ಸೇವೆಗೆ ಅನುಕೂಲವೂ, ಸಫಲವೂ ಆಗಿರುವ ಹೆಬ್ಬಾಗಿಲೊಂದು ನನಗಾಗಿ ತೆರೆಯಲ್ಪಟ್ಟಿದೆ. ಹಾಗೆಯೇ § ಅ. ಕೃ. 19:9 ವಿರೋಧಿಗಳೂ ಅನೇಕರಿದ್ದಾರೆ. PEPS
|
10. * 1 ಕೊರಿ 4:17; 2 ಕೊರಿ 9:3 ತಿಮೊಥೆಯನು ಬಂದರೆ ಅವನು ನಿಮ್ಮಲ್ಲಿ ನಿರ್ಭಯನಾಗಿರುವಂತೆ ನೋಡಿಕೊಳ್ಳಿರಿ; ಅವನು ಸಹ † ರೋಮಾ. 16:21; 1 ಥೆಸ. 3:2; ಫಿಲಿ. 2:20-22 ನನ್ನ ಹಾಗೆಯೇ ಕರ್ತನ ಸೇವೆಯನ್ನು ಮಾಡುತ್ತಿದ್ದಾನಲ್ಲಾ.
|
11. ‡ 1 ತಿಮೊ. 4:12; ತೀತ 2:15 ಆದ್ದರಿಂದ ಯಾರೂ ಅವನನ್ನು ತಿರಸ್ಕರಿಸಬಾರದು. ಅವನು ನನ್ನ ಬಳಿಗೆ ಬರುವಂತೆ ಅವನನ್ನು ಸಮಾಧಾನದಿಂದ ಕಳುಹಿಸಿರಿ; ಅವನು ಸಹೋದರರೊಂದಿಗೆ ಬರುವುದನ್ನು ಎದುರುನೋಡುತ್ತಾ ಇದ್ದೇನೆ.
|
12. § ಅ. ಕೃ. 18:24 ಸಹೋದರ ಅಪೊಲ್ಲೋಸನ ಕುರಿತು; ಅವನು ಸಹೋದರರೊಂದಿಗೆ ನಿಮ್ಮನ್ನು ಭೇಟಿಮಾಡಬೇಕೆಂದು ನಾನು ಬಹಳವಾಗಿ ಅವನನ್ನು ಪ್ರೋತ್ಸಾಹಿಸಿದೆನು. ಆದರೆ ಅವನು ಈಗ ಬರುವುದಿಲ್ಲ ಎಂದು ನಿರ್ಧರಿಸಿದನು. ಆದರೆ ಒಳ್ಳೆ ಅವಕಾಶ ಸಿಕ್ಕಿದಾಗ ಬರುವನು. PS
|
13. {ಕೊನೆಯ ಮಾತುಗಳು} PS ಎಚ್ಚರವಾಗಿರಿ, ಕ್ರಿಸ್ತ ನಂಬಿಕೆಯಲ್ಲಿ * ಫಿಲಿ. 1:27; 4:1 ದೃಢವಾಗಿ ನಿಲ್ಲಿರಿ. † 1 ಸಮು 4:9 ಧೈರ್ಯವಂತರಾಗಿರಿ, ಬಲಗೊಳ್ಳಿರಿ.
|
15. § 1 ಕೊರಿ 1:16 ಸ್ತೆಫನನ ಮನೆಯವರು ಅಖಾಯದಲ್ಲಿನ ಪ್ರಥಮಫಲವೆಂದು ಹಾಗೂ ಅವರು ದೇವಜನರ ಸೇವೆಗೋಸ್ಕರ ತಮ್ಮನ್ನು ಅರ್ಪಿಸಿದ್ದಾರೆಂದು ನೀವು ಬಲ್ಲವರಾಗಿದ್ದೀರಿ.
|
16. ನಾನು ನಿಮ್ಮಲ್ಲಿ ಬೇಡುವುದೇನಂದರೆ, ಸೇವೆಯಲ್ಲಿ ನಮಗೆ ಸಹಾಯಮಾಡುವ ಹಾಗೂ ಪ್ರಯಾಸಪಡುವವರೆಲ್ಲರಿಗೂ ನೀವು ಅಧೀನರಾಗಿರಬೇಕು.
|
17. ಸ್ತೆಫನನೂ, ಪೊರ್ತುನಾತೊಸನೂ, ಅಖಾಯಿಕನೂ ಬಂದದ್ದು ನನಗೆ ಸಂತೋಷವನ್ನುಂಟುಮಾಡಿದೆ. ನಿಮ್ಮಿಂದ ಆಗಿರುವ ಕೊರತೆಯನ್ನು ಅವರು ನೀಗಿಸಿರುವರು.
|
18. ಅವರು ನನ್ನ ಆತ್ಮವನ್ನೂ ಮತ್ತು ನಿಮ್ಮ ಆತ್ಮಗಳನ್ನೂ * 2 ಕೊರಿ 7:13 ಚೈತನ್ಯಗೊಳಿಸಿದರಲ್ಲ. ಹೀಗಿರುವುದರಿಂದ ಇಂಥವರನ್ನು ಸನ್ಮಾನಿಸಿರಿ.
|
19. ಆಸ್ಯಸೀಮೆಯ ಸಭೆಗಳವರು ನಿಮ್ಮನ್ನು ವಂದಿಸುತ್ತಾರೆ. † ಅ. ಕೃ. 18:2 ಅಕ್ವಿಲನೂ ಮತ್ತು ಪ್ರಿಸ್ಕಿಲ್ಲಳೂ ‡ ರೋಮಾ. 16:5 ತಮ್ಮ ಮನೆಯಲ್ಲಿ ಕೂಡಿ ಬರುವ ಸಭೆಯವರೊಂದಿಗೆ ಕರ್ತನ ಹೆಸರಿನಲ್ಲಿ ಬಹಳವಾಗಿ ನಿಮ್ಮನ್ನು ವಂದಿಸುತ್ತಿದ್ದಾರೆ.
|
20. ಸಹೋದರರೆಲ್ಲರೂ ನಿಮಗೆ ವಂದನೆ ಹೇಳುತ್ತಿದ್ದಾರೆ. § ರೋಮಾ. 16:16 ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ.
|
21. * ಕೊಲೊ 4:18; 2 ಥೆಸ. 3:17; ರೋಮಾ. 16:22; ಗಲಾ. 6:11; ಫಿಲೆ. 19 ಪೌಲನೆಂಬ ನಾನು ಸ್ವಂತ ಕೈಯಿಂದ ವಂದನೆಯನ್ನು ಬರೆದಿದ್ದೇನೆ.
|