2. ತೋಲನ ಮಕ್ಕಳಾದ, ಉಜ್ಜೀ, ರೆಫಾಯ, ಯೆರೀಯೇಲ್, ಯಹ್ಮೈ, ಇಬ್ಸಾಮ್ ಮತ್ತು ಸಮುವೇಲ್. ಇವರು ತೋಲನ ವಂಶದ ಕುಟುಂಬಗಳಲ್ಲಿ ಪ್ರಧಾನ ಪುರುಷರೂ, ರಣವೀರರೂ ಆಗಿದ್ದರು. ತೋಲ ವಂಶದವರ ಸಂಖ್ಯೆಯು ದಾವೀದನ ಕಾಲದಲ್ಲಿ ಇಪ್ಪತ್ತೆರಡು ಸಾವಿರದ ಆರುನೂರು.
|
3. ಉಜ್ಜೀಯನ ಮಗ ಇಜ್ಯಹ್ಯಾಹ. ಇಜ್ಯಹ್ಯಾಹನ ಮಕ್ಕಳು ಮಿಕಾಯೇಲ್, ಓಬದ್ಯ, ಯೋವೇಲ್, ಇಷ್ಷೀಯ. ಇವರು ಈ ಕುಟುಂಬದ ಗೋತ್ರಪ್ರಧಾನರು.
|
4. ಇವರ ಹೆಂಡತಿ ಮಕ್ಕಳೂ, ಇವರ ಗೋತ್ರ ಕುಟುಂಬಗಳಿಗೆ ಸೇರುವ ಯುದ್ಧಭಟರು ಮತ್ತು ಹೆಂಡತಿ, ಮಕ್ಕಳು ಒಟ್ಟು ಮೂವತ್ತಾರು ಸಾವಿರ.
|
5. ಇವರ ಗೋತ್ರ ಸಂಬಂಧಿಗಳಾದ ಇಸ್ಸಾಕಾರ್ಯರೆಲ್ಲರೂ ರಣವೀರರು. ಈ ಕುಟುಂಬದ ಬಹುಪಾಲು ಪುರುಷರು ಸೈನ್ಯದಲ್ಲಿ ಸೇವೆಮಾಡಲು ಯೋಗ್ಯರಾಗಿದ್ದರೆಂದು ತಮ್ಮನ್ನು ಅರ್ಪಿಸಿಕೊಂಡರು, ಪಟ್ಟಿಯಲ್ಲಿ ಲೆಕ್ಕಿಸಲ್ಪಟ್ಟವರು ಒಟ್ಟು ಎಂಭತ್ತೇಳು ಸಾವಿರ ಮಂದಿ. PS
|
7. ಬೆಳನ ಮಕ್ಕಳು ಎಚ್ಬೋನ್, ಉಜ್ಜೀ, ಉಜ್ಜೀಯೇಲ್, ಯೆರೀಮೋತ್ ಮತ್ತು ಈರೀ ಎಂಬವರು. ಈ ಐದು ಜನರು ಗೋತ್ರ ಪ್ರಧಾನರು ರಣವೀರರೂ ಆಗಿದ್ದರು. ಅವರ ವಂಶಾವಳಿಯ ಪಟ್ಟಿಯಲ್ಲಿ ಇಪ್ಪತ್ತೆರಡು ಸಾವಿರದ ಮೂವತ್ತನಾಲ್ಕು ಜನರೆಂದು ಲೆಕ್ಕಿಸಲ್ಪಟ್ಟವರು.
|
8. ಬೆಕೆರನ ಮಕ್ಕಳು ಜೆಮೀರ್, ಯೋವಾಷ್, ಎಲೀಯೆಜೆರ್, ಎಲ್ಯೋವೇನೈ, ಒಮ್ರಿ, ಯೆರೀಮೋತ್, ಅಬೀಯ, ಅನಾತೋತ್ ಮತ್ತು ಆಲೆಮೆತ್ ಎಂಬವರು.
|
9. ರಣವೀರರಾದ ಈ ಗೋತ್ರಪ್ರಧಾನರ ವಂಶಾವಳಿಯ ಪಟ್ಟಿಯಲ್ಲಿ ಲೆಕ್ಕಿಸಲ್ಪಟ್ಟ ಇಪ್ಪತ್ತು ಸಾವಿರದ ಇನ್ನೂರು ಯುದ್ಧ ಪರಾಕ್ರಮಶಾಲಿಗಳು.
|
10. ಯೆದೀಯಯೇಲನ ಮಗ ಬಿಲ್ಹಾನ್. ಬಿಲ್ಹಾನನ ಮಕ್ಕಳು: ಯೆಯೂಷ್, ಬೆನ್ಯಾಮೀನ್, ಏಹೂದ್, ಕೆನಾನ, ಜೇತಾನ್, ತಾರ್ಷೀಷ್, ಅಹೀಷೆಹರ್ ಎಂಬವರು.
|
11. ಈ ಗೋತ್ರ ಪ್ರಧಾನರಿಗೆ ಸೇರಿದವರೆಲ್ಲರೂ ಯೆದೀಯಯೇಲನ ಸಂತಾನದವರು. ಇವರಲ್ಲಿ ಹದಿನೇಳು ಸಾವಿರದ ಇನ್ನೂರು ಯುದ್ಧದಲ್ಲಿ ಹೋರಾಡತಕ್ಕ ಪರಾಕ್ರಮ ಶಾಲಿಗಳು. PS
|
14. {ಮನಸ್ಸೆ ಕುಲ} PS ಮನಸ್ಸೆಯ ಸಂತಾನದವರು: ಅರಾಮ್ಯಳಾದ ಮನಸ್ಸೆಯ ಉಪಪತ್ನಿಯಿಂದ ಅಷ್ರೀಯೇಲ ಮತ್ತು ಮಾಕೀರನನ್ನು ಮನಸ್ಸೆ ಪಡೆದನು. ಮಾಕೀರನು ಗಿಲ್ಯಾದನ ತಂದೆ.
|
15. ಮಾಕೀರನು ಹುಪ್ಪೀಮ್ ಮತ್ತು ಶುಪ್ಪೀಮ್ಯರಿಂದ ಹೆಣ್ಣನ್ನು ತೆಗೆದುಕೊಂಡನು. ಅವನ ತಂಗಿಯ ಹೆಸರು ಮಾಕ. ಅವನ ತಮ್ಮನ ಹೆಸರು ಚೆಲೋಫಾದ್. ಚೆಲೋಫಾದನಿಗೆ ಹೆಣ್ಣು ಮಕ್ಕಳು ಮಾತ್ರ ಇದ್ದರು.
|
16. ಮಾಕೀರನ ಹೆಂಡತಿಯಾದ ಮಾಕಳು ಮಗನನ್ನು ಹೆತ್ತು, ಅವನಿಗೆ ಪೆರೇಷ್ ಎಂದು ಹೆಸರಿಟ್ಟಳು. ಇವನ ತಮ್ಮನ ಹೆಸರು ಶೆರೆಷ್. ಶೆರೆಷನ ಮಕ್ಕಳು ಊಲಾಮ್ ಮತ್ತು ರೆಕೆಮ್.
|
20. {ಎಫ್ರಾಯೀಮ್ ಕುಲ} PS ಎಫ್ರಾಯೀಮನ ಸಂತಾನದವರು: ಎಫ್ರಾಯೀಮನ ಮಗ ಶೂತೆಲಹ, ಇವನ ಮಗ ಬೆರೆದ್. ಬೆರೆದನ ಮಗ ತಹತ್; ಇವನ ಮಗ ಎಲ್ಲಾದ್. ಎಲ್ಲಾದನ ಮಗ ತಹತ್;
|
21. ತಹತನ ಮಗ ಜಾಬಾದ್, ಜಾಬಾದನ ಮಕ್ಕಳು ಶೂತೆಲಹ, ಏಜೆರ್ ಮತ್ತು ಎಲ್ಲಾದ್. ಇವರು ಗತ್ ಊರಿನವರ ದನಕುರಿಗಳನ್ನು ಸುಲಿಗೆ ಮಾಡುವುದಕ್ಕೋಸ್ಕರ ಗಟ್ಟಾ ಇಳಿದು ಅವರ ದೇಶಕ್ಕೆ ಹೋದುದರಿಂದ ಆ ದೇಶದ ಮೂಲ ನಿವಾಸಿಗಳು ಇವರನ್ನು ಕೊಂದುಹಾಕಿದರು.
|
22. ಆದುದರಿಂದ ಇವರ ತಂದೆಯಾದ ಎಫ್ರಾಯೀಮನು ಬಹುದಿನಗಳವರೆಗೂ ದುಃಖಪಡುತ್ತಿದ್ದನು. ಅವನ ಸಹೋದರರು ಅವನನ್ನು ಸಂತೈಸುವುದಕ್ಕೋಸ್ಕರ ಬಂದರು.
|
23. ಅವನು ತನ್ನ ಹೆಂಡತಿಯನ್ನು ಸಂಗಮಿಸಲು, ಆಕೆಯು ಗರ್ಭಿಣಿಯಾಗಿ ಮಗನನ್ನು ಹೆತ್ತಳು. ಇದು ಅವನ ಕುಟುಂಬಕ್ಕೆ ಒದಗಿದ ಆಪತ್ತಿನಲ್ಲಿ ಸಂಭವಿಸಿದ್ದರಿಂದ ಆ ಮಗನಿಗೆ ಬೆರೀಯ ಎಂದು ಹೆಸರಿಟ್ಟನು.
|
24. ಶೇರ ಎಂಬವಳು ಅವನ ಮಗಳು. ಈಕೆಯು ಮೇಲಣ ಮತ್ತು ಕೆಳಗಣ ಬೇತ್ ಹೊರೋನ್ ಎಂಬ ಪಟ್ಟಣಗಳನ್ನು ಮತ್ತು ಉಜ್ಜೀನ್ ಶೇರ ಎಂಬ ಪಟ್ಟಣಗಳನ್ನೂ ಕಟ್ಟಿಸಿದಳು.
|
28. ಅವರು ವಾಸಿಸುವ ಸ್ವತ್ತಿನ ಮೇರೆಗಳು ದಕ್ಷಿಣ ದಿಕ್ಕಿನಲ್ಲಿ ಬೇತೇಲ್ ಪಟ್ಟಣ, ಅದರ ಗ್ರಾಮಗಳೂ ಪೂರ್ವ ದಿಕ್ಕಿನಲ್ಲಿ ನಾರಾನ್, ಪಶ್ಚಿಮ ದಿಕ್ಕಿನಲ್ಲಿ ಗೆಜೆರ್ ಪಟ್ಟಣವೂ ಅದರ ಗ್ರಾಮಗಳೂ; ಉತ್ತರ ದಿಕ್ಕಿನಲ್ಲಿ ಶೆಕೆಮ್ ಮತ್ತು ಆಯಾ ಪಟ್ಟಣಗಳೂ ಅವುಗಳ ಗ್ರಾಮಗಳು.
|
29. ಬೇತ್ಷಾನ್, ತಾನಾಕ್, ಮೆಗಿದ್ದೋ, ದೋರ್ ಎಂಬ ಪಟ್ಟಣಗಳೂ, ಅವುಗಳ ಗ್ರಾಮಗಳೂ ಮನಸ್ಸೆ ಕುಲದವರ ವಶದಲ್ಲಿದ್ದವು. ಈ ಊರುಗಳಲ್ಲಿ ಇಸ್ರಾಯೇಲನ ಮಗನಾದ ಯೋಸೇಫನ ಸಂತಾನದವರು ವಾಸಿಸುತ್ತಿದ್ದರು. PS
|
40. ಇವರೆಲ್ಲರು ಆಶೇರ್ಯರಲ್ಲಿ ಗೋತ್ರಪ್ರಧಾನರೂ, ಯುದ್ಧಪ್ರವೀಣರಾದ ರಣವೀರರೂ ಮತ್ತು ಶ್ರೇಷ್ಠ ನಾಯಕರೂ ಆಗಿದ್ದರು. ಇವರ ವಂಶಾವಳಿಯ ಪಟ್ಟಿಯ ಪ್ರಕಾರ ಯುದ್ಧ ಪ್ರವೀಣರಾದ ಭಟರ ಸಂಖ್ಯೆ ಇಪ್ಪತ್ತಾರು ಸಾವಿರ. PE
|