ಪವಿತ್ರ ಬೈಬಲ್

ಇಂಡಿಯನ್ ರಿವೈಸ್ಡ್ ವೆರ್ಸನ್ (ISV)
1 ಪೂರ್ವಕಾಲವೃತ್ತಾ
1. {ಯಾಜಕರ ಕರ್ತವ್ಯಗಳು} [PS] ಆರೋನನ ಸಂತಾನದವರೂ ವರ್ಗಗಳಾಗಿ ವಿಭಾಗಿಸಲ್ಪಟ್ಟರು. ಆರೋನನ ಮಕ್ಕಳು ನಾದಾಬ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್ ಎಂಬುವರು.
2. ನಾದಾಬ್ ಮತ್ತು ಅಬೀಹೂ ಎಂಬುವರು ಮಕ್ಕಳಿಲ್ಲದೆ ತಮ್ಮ ತಂದೆಗಿಂತ ಮೊದಲೇ ಸತ್ತು ಹೋದುದರಿಂದ ಎಲ್ಲಾಜಾರನೂ, ಈತಾಮಾರನೂ ಯಾಜಕ ಉದ್ಯೋಗವನ್ನು ನಡೆಸುತ್ತಿದ್ದರು.
3. ದಾವೀದನು ಎಲ್ಲಾಜಾರನ ಸಂತಾನದವನಾದ ಚಾದೋಕನೂ, ಈತಾಮಾರನ ಸಂತಾನದವನಾದ ಅಹೀಮೆಲೆಕನು ಯಾಜಕರನ್ನು ಸರದಿಯ ಮೇಲೆ ಸೇವೆಮಾಡತಕ್ಕ ವರ್ಗಗಳನ್ನಾಗಿ ವಿಭಾಗಿಸಿದರು.
4. ಎಲ್ಲಾಜಾರನ ಸಂತಾನದ ಕುಟುಂಬ ಪ್ರಧಾನರು ಈತಾಮಾರ್ಯರಿಗಿಂತ ಹೆಚ್ಚೆಂದು ಕಂಡು ಬಂದುದರಿಂದ ಎಲ್ಲಾಜಾರರ ಕುಟುಂಬಗಳನ್ನು ಪ್ರಧಾನರ ಲೆಕ್ಕದ ಪ್ರಕಾರ ಹದಿನಾರು ವರ್ಗಗಳನ್ನಾಗಿಯೂ, ಈತಾಮಾರ್ಯರ ಕುಟುಂಬಗಳನ್ನು ಎಂಟು ವರ್ಗಗಳನ್ನಾಗಿಯೂ ಮಾಡಿ,
5. ಈ ವರ್ಗಗಳ ವಿಷಯವಾಗಿ ಚೀಟು ಹಾಕಿದರು. ಎಲ್ಲಾಜಾರನ ಸಂತಾನದವರಲ್ಲಿ ಹೇಗೋ ಹಾಗೆಯೇ ಈತಾಮಾರನ ಸಂತಾನದವರಲ್ಲಿಯೂ ಪವಿತ್ರಾಲಯದ ಅಧಿಪತಿಗಳು, ದೈವಿಕ ಕಾರ್ಯಗಳ ಅಧ್ಯಕ್ಷರೂ ಇರುವುದರಿಂದ ಉಭಯ ಸಂತಾನದವರು ಸಮಾನ ಸ್ಥಾನದವರಾಗಿದ್ದರು.
6. ನೆತನೇಲನ ಮಗನಾದ ಶೆಮಾಯನೆಂಬ ಲೇವಿಯ ಲೇಖಕನು ಅರಸನ ಮುಂದೆಯೂ, ಅಧಿಪತಿಗಳು, ಯಾಜಕನಾದ ಚಾದೋಕ್, ಎಬ್ಯಾತಾರನ ಮಗನಾದ ಅಹೀಮೆಲೆಕ್, ಯಾಜಕರ ಮತ್ತು ಲೇವಿಯರ ಕುಟುಂಬ ಪ್ರಧಾನರು ಇವರ ಮುಂದೆಯೂ ಆ ವರ್ಗಗಳ ಪಟ್ಟಿಯನ್ನು ಬರೆದನು. ಎಲ್ಲಾಜಾರನ ಒಂದು ವರ್ಗದವರಾದ ನಂತರ ಈತಾಮಾರ್ಯರ ಒಂದು ವರ್ಗದವರು ಸೇವಿಸಬೇಕೆಂದು ನೇಮಿಸಿ ಎಲ್ಲಾ ವರ್ಗಗಳ ಸರದಿಯನ್ನು ಚೀಟಿನಿಂದಲೇ ಗೊತ್ತುಮಾಡಿದರು. [PE][PS]
7. ಮೊದಲನೆಯ ಚೀಟು ಯೆಹೋಯಾರೀಬನಿಗೆ, ಎರಡನೆಯದು ಯೆದಾಯನಿಗೆ,
8. ಮೂರನೆಯದು ಹಾರೀಮನಿಗೆ, ನಾಲ್ಕನೆಯದು ಸೆಯೋರೀಮನಿಗೆ,
9. ಐದನೆಯದು ಮಲ್ಕೀಯನಿಗೆ, ಆರನೆಯದು ಮಿಯ್ಯಾಮೀನನಿಗೆ,
10. ಏಳನೆಯದು ಹಕ್ಕೋಚನಿಗೆ, ಎಂಟನೆಯದು ಅಬೀಯನಿಗೆ,
11. ಒಂಬತ್ತನೆಯದು ಯೆಷೂವನಿಗೆ, ಹತ್ತನೆಯದು ಶೆಕನ್ಯನಿಗೆ,
12. ಹನ್ನೊಂದನೆಯದು ಎಲ್ಯಾಷೀಬನಿಗೆ, ಹನ್ನೆರಡನೆಯದು ಯಾಕೀಮನಿಗೆ,
13. ಹದಿಮೂರನೆಯದು ಹುಪ್ಪನಿಗೆ, ಹದಿನಾಲ್ಕನೆಯದು ಎಷೆಬಾಬನಿಗೆ,
14. ಹದಿನೈದನೆಯದು ಬಿಲ್ಗನಿಗೆ, ಹದಿನಾರನೆಯದು ಇಮ್ಮೇರನಿಗೆ,
15. ಹದಿನೇಳನೆಯದು ಹೇಜೀರನಿಗೆ, ಹದಿನೆಂಟನೆಯದು ಹಪ್ಪಿಚ್ಚೇಚನಿಗೆ,
16. ಹತ್ತೊಂಬತ್ತನೆಯದು ಪೆತಹ್ಯನಿಗೆ, ಇಪ್ಪತ್ತನೆಯದು ಯೆಹೆಜ್ಕೇಲನಿಗೆ,
17. ಇಪ್ಪತ್ತೊಂದನೆಯದು ಯಾಕೀನನಿಗೆ, ಇಪ್ಪತ್ತೆರಡನೆಯದು ಗಾಮೂಲನಿಗೆ,
18. ಇಪ್ಪತ್ತ ಮೂರನೆಯದು ದೆಲಾಯನಿಗೆ, ಇಪ್ಪತ್ತ ನಾಲ್ಕನೆಯದು ಮಾಜ್ಯನಿಗೆ ಬಿದ್ದಿತು.
19. ಆರೋನ್ಯರು ಈ ವರ್ಗ ಕ್ರಮದಿಂದ ಯೆಹೋವನ ಆಲಯಕ್ಕೆ ಬಂದು ಇಸ್ರಾಯೇಲಿನ ದೇವರಾದ ಯೆಹೋವನಿಗೆ ಲೇವಿಯರ ಮೂಲಪುರುಷನಾದ ಆರೋನನ ಮುಖಾಂತರವಾಗಿ ನೇಮಿಸಿದ ಸೇವೆಯನ್ನು ನಡೆಸತಕ್ಕದ್ದು. [PS]
20. {ಉಳಿದ ಲೇವಿಯರು} [PS] ಉಳಿದ ಲೇವಿಯರ ಪಟ್ಟಿ. ಅಮ್ರಾಮನ ಸಂತಾನದವರಾದ ಶೂಬಾಯೇಲನ ಕುಟುಂಬದವರಲ್ಲಿ ಯೆಹ್ದೆಯಾಹನು.
21. ರೆಹಬ್ಯನ ಸಂತಾನದವರಲ್ಲಿ ಇಷ್ಷೀಯನೂ,
22. ಇಚ್ಹಾರನ ಸಂತಾನದ ಶೆಲೋಮೋತನ ಕುಟುಂಬದವರಲ್ಲಿ ಯಹತನೂ ಪ್ರಧಾನರು.
23. ಹೆಬ್ರೋನನ ಸಂತಾನದವರಲ್ಲಿ ಯೆರೀಯನು ಪ್ರಧಾನನು, ಅಮರ್ಯನು ಎರಡನೆಯವನು, ಯಹಜೀಯೇಲನು, ಮೂರನೆಯವನು ಮತ್ತು ಯೆಕಮ್ಮಾಮನು ನಾಲ್ಕನೆಯವನು,
24. ಉಜ್ಜೀಯೇಲನ ಮಗನಾದ ಮೀಕನ ಸಂತಾನದವರಲ್ಲಿ ಶಾಮೀರನೂ,
25. ಮೀಕನ ತಮ್ಮನಾದ ಇಷ್ಷೀಯನ ಸಂತಾನದವರಲ್ಲಿ ಜೆಕರ್ಯನು ಪ್ರಧಾನರು.
26. ಮೆರಾರೀಯ ಮಕ್ಕಳು ಮಹ್ಲೀ ಮತ್ತು ಮೂಷೀ ಎಂಬುವವರು. ಅವನ ಮತ್ತೊಬ್ಬ ಮಗನಾದ ಯಾಜ್ಯನ ವಂಶದವನು ಬೆನೋ.
27. ಮೆರಾರೀಯ ಸಂತಾನದವರಲ್ಲಿ ಯಾಜ್ಯ, ಬೆನೋ, ಶೋಹಮ್, ಜಕ್ಕೂರ್ ಮತ್ತು ಇಬ್ರೀ ಇವರೇ.
28. ಮಹ್ಲೀಯನ ಮಗನಾದ ಎಲ್ಲಾಜಾರನೂ ಮಕ್ಕಳಿಲ್ಲದೆ ಸತ್ತನು.
29. ಕೀಷನಿಂದ ಯೆರಹ್ಮೇಲನು ಹುಟ್ಟಿದನು.
30. ಮೂಷೀಯನ ಮಕ್ಕಳು ಮಹ್ಲೀ, ಏದೆರ್ ಮತ್ತು ಯೆರೀಮೋತ್ ಎಂಬುವವರು. [PE][PS]
31. ಇವರೆಲ್ಲಾ ಲೇವಿ ಸಂತಾನದವರು. ಇವರ ಕುಟುಂಬಗಳಲ್ಲಿ ಎಲ್ಲಾ ಹಿರಿಯರೂ, ಕಿರಿಯರೂ ತಮ್ಮ ಕುಲ ಬಂಧುಗಳಾದ ಆರೋನ್ಯರಂತೆ ಅರಸನಾದ ದಾವೀದ ಚಾದೋಕ್ ಅಹೀಮೆಲೆಕ್ ಇವರ ಮುಂದೆಯೂ, ಯಾಜಕರ ಮತ್ತು ಲೇವಿಯರ ಕುಟುಂಬ ಪ್ರಧಾನರ ಮುಂದೆಯೂ, ಚೀಟಿನಿಂದ ತಮ್ಮಲ್ಲಿ ಸರದಿಗಳನ್ನು ನೇಮಿಸಿಕೊಂಡರು. [PE]

ಟಿಪ್ಪಣಿಗಳು

No Verse Added

ಒಟ್ಟು 29 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 24 / 29
1 ಪೂರ್ವಕಾಲವೃತ್ತಾ 24:30
ಯಾಜಕರ ಕರ್ತವ್ಯಗಳು 1 ಆರೋನನ ಸಂತಾನದವರೂ ವರ್ಗಗಳಾಗಿ ವಿಭಾಗಿಸಲ್ಪಟ್ಟರು. ಆರೋನನ ಮಕ್ಕಳು ನಾದಾಬ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್ ಎಂಬುವರು. 2 ನಾದಾಬ್ ಮತ್ತು ಅಬೀಹೂ ಎಂಬುವರು ಮಕ್ಕಳಿಲ್ಲದೆ ತಮ್ಮ ತಂದೆಗಿಂತ ಮೊದಲೇ ಸತ್ತು ಹೋದುದರಿಂದ ಎಲ್ಲಾಜಾರನೂ, ಈತಾಮಾರನೂ ಯಾಜಕ ಉದ್ಯೋಗವನ್ನು ನಡೆಸುತ್ತಿದ್ದರು. 3 ದಾವೀದನು ಎಲ್ಲಾಜಾರನ ಸಂತಾನದವನಾದ ಚಾದೋಕನೂ, ಈತಾಮಾರನ ಸಂತಾನದವನಾದ ಅಹೀಮೆಲೆಕನು ಯಾಜಕರನ್ನು ಸರದಿಯ ಮೇಲೆ ಸೇವೆಮಾಡತಕ್ಕ ವರ್ಗಗಳನ್ನಾಗಿ ವಿಭಾಗಿಸಿದರು. 4 ಎಲ್ಲಾಜಾರನ ಸಂತಾನದ ಕುಟುಂಬ ಪ್ರಧಾನರು ಈತಾಮಾರ್ಯರಿಗಿಂತ ಹೆಚ್ಚೆಂದು ಕಂಡು ಬಂದುದರಿಂದ ಎಲ್ಲಾಜಾರರ ಕುಟುಂಬಗಳನ್ನು ಪ್ರಧಾನರ ಲೆಕ್ಕದ ಪ್ರಕಾರ ಹದಿನಾರು ವರ್ಗಗಳನ್ನಾಗಿಯೂ, ಈತಾಮಾರ್ಯರ ಕುಟುಂಬಗಳನ್ನು ಎಂಟು ವರ್ಗಗಳನ್ನಾಗಿಯೂ ಮಾಡಿ, 5 ಈ ವರ್ಗಗಳ ವಿಷಯವಾಗಿ ಚೀಟು ಹಾಕಿದರು. ಎಲ್ಲಾಜಾರನ ಸಂತಾನದವರಲ್ಲಿ ಹೇಗೋ ಹಾಗೆಯೇ ಈತಾಮಾರನ ಸಂತಾನದವರಲ್ಲಿಯೂ ಪವಿತ್ರಾಲಯದ ಅಧಿಪತಿಗಳು, ದೈವಿಕ ಕಾರ್ಯಗಳ ಅಧ್ಯಕ್ಷರೂ ಇರುವುದರಿಂದ ಉಭಯ ಸಂತಾನದವರು ಸಮಾನ ಸ್ಥಾನದವರಾಗಿದ್ದರು. 6 ನೆತನೇಲನ ಮಗನಾದ ಶೆಮಾಯನೆಂಬ ಲೇವಿಯ ಲೇಖಕನು ಅರಸನ ಮುಂದೆಯೂ, ಅಧಿಪತಿಗಳು, ಯಾಜಕನಾದ ಚಾದೋಕ್, ಎಬ್ಯಾತಾರನ ಮಗನಾದ ಅಹೀಮೆಲೆಕ್, ಯಾಜಕರ ಮತ್ತು ಲೇವಿಯರ ಕುಟುಂಬ ಪ್ರಧಾನರು ಇವರ ಮುಂದೆಯೂ ಆ ವರ್ಗಗಳ ಪಟ್ಟಿಯನ್ನು ಬರೆದನು. ಎಲ್ಲಾಜಾರನ ಒಂದು ವರ್ಗದವರಾದ ನಂತರ ಈತಾಮಾರ್ಯರ ಒಂದು ವರ್ಗದವರು ಸೇವಿಸಬೇಕೆಂದು ನೇಮಿಸಿ ಎಲ್ಲಾ ವರ್ಗಗಳ ಸರದಿಯನ್ನು ಚೀಟಿನಿಂದಲೇ ಗೊತ್ತುಮಾಡಿದರು. 7 ಮೊದಲನೆಯ ಚೀಟು ಯೆಹೋಯಾರೀಬನಿಗೆ, ಎರಡನೆಯದು ಯೆದಾಯನಿಗೆ, 8 ಮೂರನೆಯದು ಹಾರೀಮನಿಗೆ, ನಾಲ್ಕನೆಯದು ಸೆಯೋರೀಮನಿಗೆ, 9 ಐದನೆಯದು ಮಲ್ಕೀಯನಿಗೆ, ಆರನೆಯದು ಮಿಯ್ಯಾಮೀನನಿಗೆ, 10 ಏಳನೆಯದು ಹಕ್ಕೋಚನಿಗೆ, ಎಂಟನೆಯದು ಅಬೀಯನಿಗೆ, 11 ಒಂಬತ್ತನೆಯದು ಯೆಷೂವನಿಗೆ, ಹತ್ತನೆಯದು ಶೆಕನ್ಯನಿಗೆ, 12 ಹನ್ನೊಂದನೆಯದು ಎಲ್ಯಾಷೀಬನಿಗೆ, ಹನ್ನೆರಡನೆಯದು ಯಾಕೀಮನಿಗೆ, 13 ಹದಿಮೂರನೆಯದು ಹುಪ್ಪನಿಗೆ, ಹದಿನಾಲ್ಕನೆಯದು ಎಷೆಬಾಬನಿಗೆ, 14 ಹದಿನೈದನೆಯದು ಬಿಲ್ಗನಿಗೆ, ಹದಿನಾರನೆಯದು ಇಮ್ಮೇರನಿಗೆ, 15 ಹದಿನೇಳನೆಯದು ಹೇಜೀರನಿಗೆ, ಹದಿನೆಂಟನೆಯದು ಹಪ್ಪಿಚ್ಚೇಚನಿಗೆ, 16 ಹತ್ತೊಂಬತ್ತನೆಯದು ಪೆತಹ್ಯನಿಗೆ, ಇಪ್ಪತ್ತನೆಯದು ಯೆಹೆಜ್ಕೇಲನಿಗೆ, 17 ಇಪ್ಪತ್ತೊಂದನೆಯದು ಯಾಕೀನನಿಗೆ, ಇಪ್ಪತ್ತೆರಡನೆಯದು ಗಾಮೂಲನಿಗೆ, 18 ಇಪ್ಪತ್ತ ಮೂರನೆಯದು ದೆಲಾಯನಿಗೆ, ಇಪ್ಪತ್ತ ನಾಲ್ಕನೆಯದು ಮಾಜ್ಯನಿಗೆ ಬಿದ್ದಿತು. 19 ಆರೋನ್ಯರು ಈ ವರ್ಗ ಕ್ರಮದಿಂದ ಯೆಹೋವನ ಆಲಯಕ್ಕೆ ಬಂದು ಇಸ್ರಾಯೇಲಿನ ದೇವರಾದ ಯೆಹೋವನಿಗೆ ಲೇವಿಯರ ಮೂಲಪುರುಷನಾದ ಆರೋನನ ಮುಖಾಂತರವಾಗಿ ನೇಮಿಸಿದ ಸೇವೆಯನ್ನು ನಡೆಸತಕ್ಕದ್ದು. ಉಳಿದ ಲೇವಿಯರು 20 ಉಳಿದ ಲೇವಿಯರ ಪಟ್ಟಿ. ಅಮ್ರಾಮನ ಸಂತಾನದವರಾದ ಶೂಬಾಯೇಲನ ಕುಟುಂಬದವರಲ್ಲಿ ಯೆಹ್ದೆಯಾಹನು. 21 ರೆಹಬ್ಯನ ಸಂತಾನದವರಲ್ಲಿ ಇಷ್ಷೀಯನೂ, 22 ಇಚ್ಹಾರನ ಸಂತಾನದ ಶೆಲೋಮೋತನ ಕುಟುಂಬದವರಲ್ಲಿ ಯಹತನೂ ಪ್ರಧಾನರು. 23 ಹೆಬ್ರೋನನ ಸಂತಾನದವರಲ್ಲಿ ಯೆರೀಯನು ಪ್ರಧಾನನು, ಅಮರ್ಯನು ಎರಡನೆಯವನು, ಯಹಜೀಯೇಲನು, ಮೂರನೆಯವನು ಮತ್ತು ಯೆಕಮ್ಮಾಮನು ನಾಲ್ಕನೆಯವನು, 24 ಉಜ್ಜೀಯೇಲನ ಮಗನಾದ ಮೀಕನ ಸಂತಾನದವರಲ್ಲಿ ಶಾಮೀರನೂ, 25 ಮೀಕನ ತಮ್ಮನಾದ ಇಷ್ಷೀಯನ ಸಂತಾನದವರಲ್ಲಿ ಜೆಕರ್ಯನು ಪ್ರಧಾನರು. 26 ಮೆರಾರೀಯ ಮಕ್ಕಳು ಮಹ್ಲೀ ಮತ್ತು ಮೂಷೀ ಎಂಬುವವರು. ಅವನ ಮತ್ತೊಬ್ಬ ಮಗನಾದ ಯಾಜ್ಯನ ವಂಶದವನು ಬೆನೋ. 27 ಮೆರಾರೀಯ ಸಂತಾನದವರಲ್ಲಿ ಯಾಜ್ಯ, ಬೆನೋ, ಶೋಹಮ್, ಜಕ್ಕೂರ್ ಮತ್ತು ಇಬ್ರೀ ಇವರೇ. 28 ಮಹ್ಲೀಯನ ಮಗನಾದ ಎಲ್ಲಾಜಾರನೂ ಮಕ್ಕಳಿಲ್ಲದೆ ಸತ್ತನು. 29 ಕೀಷನಿಂದ ಯೆರಹ್ಮೇಲನು ಹುಟ್ಟಿದನು. 30 ಮೂಷೀಯನ ಮಕ್ಕಳು ಮಹ್ಲೀ, ಏದೆರ್ ಮತ್ತು ಯೆರೀಮೋತ್ ಎಂಬುವವರು. 31 ಇವರೆಲ್ಲಾ ಲೇವಿ ಸಂತಾನದವರು. ಇವರ ಕುಟುಂಬಗಳಲ್ಲಿ ಎಲ್ಲಾ ಹಿರಿಯರೂ, ಕಿರಿಯರೂ ತಮ್ಮ ಕುಲ ಬಂಧುಗಳಾದ ಆರೋನ್ಯರಂತೆ ಅರಸನಾದ ದಾವೀದ ಚಾದೋಕ್ ಅಹೀಮೆಲೆಕ್ ಇವರ ಮುಂದೆಯೂ, ಯಾಜಕರ ಮತ್ತು ಲೇವಿಯರ ಕುಟುಂಬ ಪ್ರಧಾನರ ಮುಂದೆಯೂ, ಚೀಟಿನಿಂದ ತಮ್ಮಲ್ಲಿ ಸರದಿಗಳನ್ನು ನೇಮಿಸಿಕೊಂಡರು.
ಒಟ್ಟು 29 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 24 / 29
Common Bible Languages
West Indian Languages
×

Alert

×

kannada Letters Keypad References