1. ನನ್ನ ಕೈಗಳಿಗೆ ಕಾಳಗವನ್ನು, ನನ್ನ ಬೆರಳುಗಳಿಗೆ ಯುದ್ಧವನ್ನು, ಕಲಿಸಿದ ನನ್ನ ಬಲವಾಗಿರುವ ಕರ್ತನಿಗೆ ಸ್ತೋತ್ರವಾಗಲಿ.
2. ಆತನು ನನ್ನ ಒಳ್ಳೇತನವೂ ನನ್ನ ಕೋಟೆಯೂ ನನ್ನ ಎತ್ತರವಾದ ದುರ್ಗವೂ ನನ್ನನ್ನು ತಪ್ಪಿಸುವವನೂ ನನ್ನ ಭರವಸವೂ ನನ್ನ ಗುರಾಣಿಯೂ ನನ್ನ ಜನರನ್ನು ನನಗೆ ವಶಮಾಡುವಾತನೂ ಆಗಿದ್ದಾನೆ.
3. ಕರ್ತನೇ, ನೀನು ಮನುಷ್ಯನನ್ನು ತಿಳುಕೊಳ್ಳುವ ಹಾಗೆ ಅವನು ಎಷ್ಟರವನು? ನೀನು ಅವನನ್ನು ಲಕ್ಷಿಸುವ ಹಾಗೆ ನರಪುತ್ರನು ಎಷ್ಟರವನು?
4. ಮನುಷ್ಯನು ವ್ಯರ್ಥತೆಗೆ ಸಮಾನನಾಗಿದ್ದಾನೆ; ಅವನ ದಿವಸಗಳು ಕಳೆದುಹೋಗುವ ನೆರಳಿನ ಹಾಗಿವೆ.
5. ಓ ಕರ್ತನೇ, ನಿನ್ನ ಆಕಾಶಗಳನ್ನು ತಗ್ಗಿಸಿ ಇಳಿದು ಬಾ; ಬೆಟ್ಟಗಳನ್ನು ಮುಟ್ಟು; ಆಗ ಅವು ಹೊಗೆ ಹಾಯುವವು.
6. ಮಿಂಚನ್ನು ಮಿಂಚಿಸಿ ಅವರನ್ನು ಚದರಿಸು; ನಿನ್ನ ಬಾಣಗಳನ್ನು ಎಸೆದು ಅವರನ್ನು ನಾಶಮಾಡು.
7. ನಿನ್ನ ಕೈಯನ್ನು ಉನ್ನತದಿಂದ ಚಾಚಿ, ಮಹಾಜಲಗಳಿಂದಲೂ ಅನ್ಯರ ಮಕ್ಕಳ ಕೈಯಿಂದಲೂ ನನ್ನನ್ನು ತಪ್ಪಿಸು, ನನ್ನನ್ನು ಬಿಡಿಸು.
8. ಅವರ ಬಾಯಿ ವ್ಯರ್ಥತ್ವವನ್ನು ನುಡಿಯುವದು, ಅವರ ಬಲಗೈ ಮೋಸದ ಬಲಗೈ ಆಗಿದೆ.
9. ಓ ದೇವರೇ, ನಾನು ಹೊಸ ಹಾಡನ್ನು ನಿನಗೆ ಹಾಡುವೆನು; ಹತ್ತು ತಂತಿಗಳ ವೀಣೆಯಿಂದ ನಿನ್ನನ್ನು ಕೀರ್ತಿಸುವೆನು.
10. ಅರಸುಗಳಿಗೆ ರಕ್ಷಣೆಯನ್ನು ಕೊಡು ವಾತನೇ, ನಿನ್ನ ಸೇವಕನಾದ ದಾವೀದನನ್ನು ಕೇಡಿನ ಕತ್ತಿಯಿಂದ ತಪ್ಪಿಸುವಾತನೇ,
11. ಅನ್ಯರ ಮಕ್ಕಳ ಕೈಯಿಂದ ನನ್ನನ್ನು ತಪ್ಪಿಸಿ, ನನ್ನನ್ನು ಬಿಡಿಸು; ಅವರ ಬಾಯಿ ವ್ಯರ್ಥತ್ವವನ್ನು ನುಡಿಯುವದು; ಅವರ ಬಲಗೈ ಮೋಸದ ಬಲಗೈ ಆಗಿದೆ.
12. ನಮ್ಮ ಗಂಡು ಮಕ್ಕಳು ಸಸಿಗಳ ಹಾಗೆ ತಮ್ಮ ಯೌವನದಲ್ಲಿ ಬೆಳೆದವರಾಗಿರಲಿ; ನಮ್ಮ ಹೆಣ್ಣು ಮಕ್ಕಳು ಅರಮನೆಯ ಕಟ್ಟುವಿಕೆಯ ಪ್ರಕಾರ ಕೆತ್ತಲ್ಪಟ್ಟ ಮೂಲೆಯ ಕಲ್ಲುಗಳ ಹಾಗಿರಲಿ.
13. ನಮ್ಮ ಉಗ್ರಾಣಗಳು ತುಂಬಿ ನಾನಾ ವಿಧವಾದ ಪದಾರ್ಥಗಳನ್ನು ಹಂಚಲಿ; ನಮ್ಮ ಕುರಿಮಂದೆಗಳು ಸಹಸ್ರ ಸಹಸ್ರವಾಗಿ ನಮ್ಮ ಬೀದಿಗಳಲ್ಲಿ ಹೆಚ್ಟಲಿ.
14. ನಮ್ಮ ಎತ್ತುಗಳು ಪ್ರಯಾಸಪಡುವದಕ್ಕೆ ಬಲವುಳ್ಳ ವುಗಳಾಗಲಿ; ಒಳಗೆ ನುಗ್ಗುವದಾಗಲಿ ಹೊರಗೆ ಹೋಗು ವದಾಗಲಿ ಆಗದಿರಲಿ; ನಮ್ಮ ಬೀದಿಗಳಲ್ಲಿ ದೂರು ವದು ಇಲ್ಲದಿರಲಿ.
15. ಹೀಗಿರುವ ಜನರು ಧನ್ಯರು; ಕರ್ತನು ತಮಗೆ ದೇವರಾಗಿರುವ ಜನರು ಧನ್ಯರು.