ಪವಿತ್ರ ಬೈಬಲ್

ಬೈಬಲ್ ಸೊಸೈಟಿ ಆಫ್ ಇಂಡಿಯಾ (BSI)
ಕೀರ್ತನೆಗಳು
1. ಕರ್ತನನ್ನು ಕೊಂಡಾಡಿರಿ; ಆತನು ಒಳ್ಳೆಯವನು; ಆತನ ಕರುಣೆಯು ಯುಗಯುಗಕ್ಕೂ ಇರುವದು.
2. ಕರ್ತನು ವಿಮೋಚಿಸಿ ದವರು ಹಾಗೆಯೇ ಹೇಳಲಿ; ಆತನು ವೈರಿಯ ಕೈಯಿಂದ ಬಿಡುಗಡೆ ಮಾಡಿ,
3. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ದೇಶಗಳಿಂದ ಕೂಡಿಸಿದವರು ಹಾಗೆ ಹೇಳಲಿ.
4. ಅರಣ್ಯದಲ್ಲಿಯೂ ಹಾದಿ ಇಲ್ಲದ ಕಾಡಿನಲ್ಲಿಯೂ ಅಲೆದು ವಾಸಿಸುವದಕ್ಕೆ ಪಟ್ಟಣವನ್ನು ಕಂಡುಕೊಳ್ಳದೆ,
5. ಹಸಿದು, ದಾಹಗೊಂಡು ಅವರ ಪ್ರಾಣವು ಅವರಲ್ಲಿ ಕುಗ್ಗಿಹೋಯಿತು.
6. ಆಗ ಅವರು ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಿದರು; ಆತನು ಅವರ ಸಂಕಟಗಳೊಳಗಿಂದ ಅವರನ್ನು ಬಿಡಿಸಿ,
7. ವಾಸಿಸುವ ಪಟ್ಟಣಕ್ಕೆ ಹೋಗುವ ಹಾಗೆ ಅವರನ್ನು ಸರಿಯಾದ ಹಾದಿಯಲ್ಲಿ ನಡಿಸಿದನು.
8. ಅವರು ಕರ್ತನನ್ನು ಆತನ ಒಳ್ಳೇತನಕ್ಕೋಸ್ಕರವೂ ಮನುಷ್ಯನ ಮಕ್ಕಳಿಗೆ ಆತನು ಮಾಡುವ ಅದ್ಭುತ ಗಳಿಗೋಸ್ಕರವೂ ಕೊಂಡಾಡಲಿ.
9. ದಾಹಪಟ್ಟ ಪ್ರಾಣ ವನ್ನು ತೃಪ್ತಿಪಡಿಸಿ ಹಸಿದ ಪ್ರಾಣವನ್ನು ಒಳ್ಳೇದರಿಂದ ತುಂಬಿಸಿದ್ದಾನೆ.
10. ಕತ್ತಲಲ್ಲಿ ಮತ್ತು ಮರಣದ ನೆರಳಿ ನಲ್ಲಿ ಕೂತವರೂ ದೀನತೆಯಲ್ಲಿಯೂ ಕಬ್ಬಿಣದ ಬೇಡಿ ಯಲ್ಲಿ ಬಂಧಿತರೂ ಸೆರೆಬಿದ್ದವರೂ ಆದ ಇವರು
11. ದೇವರ ಮಾತುಗಳನ್ನು ಎದುರಿಸಿ, ಮಹೋನ್ನತನ ಆಲೋಚನೆಯನ್ನು ಅಸಹ್ಯಿಸಿದ್ದರಿಂದ
12. ಆತನು ಅವರ ಹೃದಯವನ್ನು ಕಷ್ಟದಿಂದ ತಗ್ಗಿಸಿದಾಗ ಸಹಾಯಕ ನಿಲ್ಲದೆ ಕೆಳಗೆ ಬಿದ್ದರು.
13. ಆಗ ಅವರು ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಿದರು; ಆತನು ಅವರ ಸಂಕಟಗಳೊಳ ಗಿಂದ ಅವರನ್ನು ರಕ್ಷಿಸಿ
14. ಕತ್ತಲೆಯೊಳಗಿಂದಲೂ ಮರಣದ ನೆರಳಿನಿಂದಲೂ ಅವರನ್ನು ಹೊರಗೆ ತಂದು ಅವರ ಬಂಧನಗಳನ್ನು ಮುರಿದುಬಿಟ್ಟನು.
15. ಅವರು ಕರ್ತನನ್ನು ಆತನ ಒಳ್ಳೇತನಕ್ಕೋಸ್ಕರವೂ ಆತನು ಮನುಷ್ಯನ ಮಕ್ಕಳಿಗೆ ಮಾಡುವ ಅದ್ಭುತಗಳಿಗೋ ಸ್ಕರವೂ ಕೊಂಡಾಡಲಿ.
16. ಆತನು ಹಿತ್ತಾಳೆಯ ಕದ ಗಳನ್ನು ಮುರಿದು ಕಬ್ಬಿಣದ ಅಗುಳಿಗಳನ್ನು ಕಡಿದು ಬಿಟ್ಟಿದ್ದಾನೆ.
17. ಮೂಢರು ತಮ್ಮ ದ್ರೋಹದಿಂದಲೂ ಅಕ್ರಮಗಳಿಂದಲೂ ಶ್ರಮೆಪಡುತ್ತಾರೆ.
18. ಅವರ ಪ್ರಾಣವು ಎಲ್ಲಾ ಆಹಾರವನ್ನು ಅಸಹ್ಯಿಸುತ್ತದೆ; ಅವರು ಮರಣದ ಬಾಗಲುಗಳಿಗೆ ಸವಿಾಪಿಸುತ್ತಾರೆ.
19. ಆಗ ಅವರು ತಮ್ಮ ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಲು ಆತನು ಅವರನ್ನು ಅವರ ಸಂಕಟಗಳೊಳಗಿಂದ ರಕ್ಷಿಸುತ್ತಾನೆ.
20. ಆತನು ತನ್ನ ವಾಕ್ಯವನ್ನು ಕಳುಹಿಸಿ ಅವರನ್ನು ಸ್ವಸ್ಥಮಾಡಿ ಅವರ ನಾಶನಗಳಿಂದ ಅವರನ್ನು ತಪ್ಪಿಸಿ ದನು.
21. ಅವರು ಕರ್ತನನ್ನು ಆತನ ಒಳ್ಳೆಯತನ ಕ್ಕೋಸ್ಕರವೂ ಆತನು ಮನುಷ್ಯನ ಮಕ್ಕಳಿಗೆ ಮಾಡುವ ಅದ್ಭುತಗಳಿಗೋಸ್ಕರವೂ ಕೊಂಡಾಡಲಿ.
22. ಸ್ತೋತ್ರದ ಬಲಿಗಳನ್ನು ಅರ್ಪಿಸಿ ಆತನ ಕೆಲಸಗಳನ್ನು ಉತ್ಸಾಹ ದಿಂದ ಸಾರಲಿ.
23. ಹಡಗುಗಳಲ್ಲಿ ಸಮುದ್ರಕ್ಕೆ ಇಳಿದು ಹೋಗಿ ಬಹಳ ನೀರುಗಳಲ್ಲಿ ವ್ಯಾಪಾರಮಾಡುವವರು
24. ಕರ್ತನ ಕೆಲಸಗಳನ್ನೂ ಅಗಾಧಗಳಲ್ಲಿ ಆತನ ಅದ್ಭುತಗಳನ್ನೂ ನೋಡುತ್ತಾರೆ.
25. ಆತನು ಆಜ್ಞಾಪಿಸಿ ಬಿರುಗಾಳಿಯನ್ನು ಏಳಮಾಡುತ್ತಾನೆ; ಅದು ಅದರ ತೆರೆಗಳನ್ನು ಎಬ್ಬಿಸುತ್ತದೆ.
26. ಅವರು ಆಕಾಶಕ್ಕೆ ಏರು ತ್ತಾರೆ; ತಿರುಗಿ ಅಗಾಧಗಳಿಗೆ ಇಳಿಯುತ್ತಾರೆ; ಅವರ ಪ್ರಾಣವು ಕಳವಳದಿಂದ ಕರಗಿಹೋಗುತ್ತದೆ.
27. ಅವರು ಅತ್ತಿತ್ತ ತೂಗಾಡಿ ಮತ್ತನ ಹಾಗೆ ಓಲಾ ಡುತ್ತಾರೆ. ಅವರ ಜ್ಞಾನವೆಲ್ಲಾ ನುಂಗಿ ಹೋಯಿತು.
28. ಆಗ ಅವರು ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಿದರು; ಆತನು ಅವರ ಸಂಕಟಗಳೊಳಗಿಂದ ಅವರನ್ನು ಹೊರಗೆ ಬರಮಾಡಿ
29. ಬಿರುಗಾಳಿಯನ್ನು ಶಾಂತಮಾಡುತ್ತಾನೆ; ಹೀಗೆ ಅದರ ತೆರೆಗಳು ನಿಂತು ಹೋಗುವವು.
30. ಅವು ಶಾಂತವಾದಾಗ ಅವರು ಸಂತೋಷಪಡುತ್ತಾರೆ; ಹೀಗೆ ಅವರು ಅಪೇಕ್ಷಿಸಿದ ರೇವಿಗೆ ಅವರನ್ನು ನಡೆಸುತ್ತಾನೆ.
31. ಅವರು ಕರ್ತನನ್ನು ಆತನ ಒಳ್ಳೇತನಕ್ಕೋಸ್ಕರವೂ ಆತನು ಮನುಷ್ಯನ ಮಕ್ಕಳಿಗೆ ಮಾಡುವ ಅದ್ಭುತಗಳಿ ಗೋಸ್ಕರವೂ ಕೊಂಡಾಡಲಿ.
32. ಜನರು ಸಭೆಯಲ್ಲಿ ಆತನನ್ನು ಘನಪಡಿಸಿ ಹಿರಿಯರ ಸಭೆಯಲ್ಲಿ ಆತನನ್ನು ಸ್ತುತಿಸಲಿ.
33. ಆತನು ನದಿಗಳನ್ನು ಅರಣ್ಯವಾಗಿಯೂ ನೀರಿನ ಬುಗ್ಗೆಗಳನ್ನು ಒಣ ಭೂಮಿಯಾಗಿಯೂ
34. ಫಲ ವುಳ್ಳ ಭೂಮಿಯನ್ನು ಬಂಜರಾಗಿಯೂ ಅದರ ನಿವಾಸಿ ಗಳ ಕೆಟ್ಟತನಕ್ಕೋಸ್ಕರ ಮಾರ್ಪಡಿಸುತ್ತಾನೆ.
35. ಆತನು ಅರಣ್ಯವನ್ನು ನೀರಿನ ಕೆರೆಯಾಗಿಯೂ ಒಣ ಭೂಮಿ ಯನ್ನು ನೀರಿನ ಬುಗ್ಗೆಗಳಾಗಿಯೂ ಮಾರ್ಪಡಿಸುತ್ತಾನೆ.
36. ಅಲ್ಲಿ ಹಸಿದವರನ್ನು ವಾಸಿಸಮಾಡುತ್ತಾನೆ; ಆಗ ಅವರು ವಾಸಿಸುವ ಪಟ್ಟಣವನ್ನು ಸ್ಥಾಪಿಸಿ,
37. ಹೊಲ ಗಳನ್ನು ಬಿತ್ತಿ, ದ್ರಾಕ್ಷಾಲತೆಗಳನ್ನು ನೆಡುವರು; ಅವು ಹುಟ್ಟುವಳಿಯ ಫಲವನ್ನು ಕೊಡುವವು.
38. ಆತನು ಅವರನ್ನು ಆಶೀರ್ವದಿಸಿದ್ದರಿಂದ ಅವರು ಬಹಳವಾಗಿ ಹೆಚ್ಚುತ್ತಾರೆ; ಅವರ ದನಗಳನ್ನು ಸಹ ಆತನು ಕಡಿಮೆ ಮಾಡುವದಿಲ್ಲ.
39. ತಿರಿಗಿ ಅವರು ಕಡಿಮೆಯಾಗಿ ಕೇಡು ಚಿಂತೆಗಳ ಸಂಕಟದಿಂದ ಕುಗ್ಗುತ್ತಾರೆ.
40. ಆತನು ಅಧಿಪತಿಗಳ ಮೇಲೆ ತಿರಸ್ಕಾರವನ್ನು ಹೊಯಿದು ಅವ ರನ್ನು ದಾರಿ ಇಲ್ಲದ ಕಾಡಿನಲ್ಲಿ ಅಲೆಯ ಮಾಡುತ್ತಾನೆ.
41. ಆದಾಗ್ಯೂ ಆತನು ಬಡವನನ್ನು ಸಂಕಟದಿಂದ ಉನ್ನತಕ್ಕೇರಿಸಿ ಅವನ ಕುಟುಂಬಗಳನ್ನು ಮಂದೆಯ ಹಾಗೆ ಇರಿಸುತ್ತಾನೆ.
42. ನೀತಿವಂತರು ನೋಡಿ ಸಂತೋ ಷಪಡುವರು; ಆದರೆ ಎಲ್ಲಾ ಅಕ್ರಮಗಾರರು ಬಾಯಿ ಮುಚ್ಚಿಕೊಳ್ಳುವರು.
43. ಜ್ಞಾನಿಯು ಯಾವನೋ, ಅವನು ಇವುಗಳನ್ನು ಗಮನಿಸುವನು; ಅವರು ಕರ್ತನ ಪ್ರೀತಿ ಕರುಣೆಯನ್ನು ಗ್ರಹಿಸಿಕೊಳ್ಳುವರು.
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 107 / 150
1 ಕರ್ತನನ್ನು ಕೊಂಡಾಡಿರಿ; ಆತನು ಒಳ್ಳೆಯವನು; ಆತನ ಕರುಣೆಯು ಯುಗಯುಗಕ್ಕೂ ಇರುವದು. 2 ಕರ್ತನು ವಿಮೋಚಿಸಿ ದವರು ಹಾಗೆಯೇ ಹೇಳಲಿ; ಆತನು ವೈರಿಯ ಕೈಯಿಂದ ಬಿಡುಗಡೆ ಮಾಡಿ, 3 ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ದೇಶಗಳಿಂದ ಕೂಡಿಸಿದವರು ಹಾಗೆ ಹೇಳಲಿ. 4 ಅರಣ್ಯದಲ್ಲಿಯೂ ಹಾದಿ ಇಲ್ಲದ ಕಾಡಿನಲ್ಲಿಯೂ ಅಲೆದು ವಾಸಿಸುವದಕ್ಕೆ ಪಟ್ಟಣವನ್ನು ಕಂಡುಕೊಳ್ಳದೆ, 5 ಹಸಿದು, ದಾಹಗೊಂಡು ಅವರ ಪ್ರಾಣವು ಅವರಲ್ಲಿ ಕುಗ್ಗಿಹೋಯಿತು. 6 ಆಗ ಅವರು ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಿದರು; ಆತನು ಅವರ ಸಂಕಟಗಳೊಳಗಿಂದ ಅವರನ್ನು ಬಿಡಿಸಿ, 7 ವಾಸಿಸುವ ಪಟ್ಟಣಕ್ಕೆ ಹೋಗುವ ಹಾಗೆ ಅವರನ್ನು ಸರಿಯಾದ ಹಾದಿಯಲ್ಲಿ ನಡಿಸಿದನು. 8 ಅವರು ಕರ್ತನನ್ನು ಆತನ ಒಳ್ಳೇತನಕ್ಕೋಸ್ಕರವೂ ಮನುಷ್ಯನ ಮಕ್ಕಳಿಗೆ ಆತನು ಮಾಡುವ ಅದ್ಭುತ ಗಳಿಗೋಸ್ಕರವೂ ಕೊಂಡಾಡಲಿ. 9 ದಾಹಪಟ್ಟ ಪ್ರಾಣ ವನ್ನು ತೃಪ್ತಿಪಡಿಸಿ ಹಸಿದ ಪ್ರಾಣವನ್ನು ಒಳ್ಳೇದರಿಂದ ತುಂಬಿಸಿದ್ದಾನೆ. 10 ಕತ್ತಲಲ್ಲಿ ಮತ್ತು ಮರಣದ ನೆರಳಿ ನಲ್ಲಿ ಕೂತವರೂ ದೀನತೆಯಲ್ಲಿಯೂ ಕಬ್ಬಿಣದ ಬೇಡಿ ಯಲ್ಲಿ ಬಂಧಿತರೂ ಸೆರೆಬಿದ್ದವರೂ ಆದ ಇವರು 11 ದೇವರ ಮಾತುಗಳನ್ನು ಎದುರಿಸಿ, ಮಹೋನ್ನತನ ಆಲೋಚನೆಯನ್ನು ಅಸಹ್ಯಿಸಿದ್ದರಿಂದ 12 ಆತನು ಅವರ ಹೃದಯವನ್ನು ಕಷ್ಟದಿಂದ ತಗ್ಗಿಸಿದಾಗ ಸಹಾಯಕ ನಿಲ್ಲದೆ ಕೆಳಗೆ ಬಿದ್ದರು. 13 ಆಗ ಅವರು ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಿದರು; ಆತನು ಅವರ ಸಂಕಟಗಳೊಳ ಗಿಂದ ಅವರನ್ನು ರಕ್ಷಿಸಿ 14 ಕತ್ತಲೆಯೊಳಗಿಂದಲೂ ಮರಣದ ನೆರಳಿನಿಂದಲೂ ಅವರನ್ನು ಹೊರಗೆ ತಂದು ಅವರ ಬಂಧನಗಳನ್ನು ಮುರಿದುಬಿಟ್ಟನು. 15 ಅವರು ಕರ್ತನನ್ನು ಆತನ ಒಳ್ಳೇತನಕ್ಕೋಸ್ಕರವೂ ಆತನು ಮನುಷ್ಯನ ಮಕ್ಕಳಿಗೆ ಮಾಡುವ ಅದ್ಭುತಗಳಿಗೋ ಸ್ಕರವೂ ಕೊಂಡಾಡಲಿ. 16 ಆತನು ಹಿತ್ತಾಳೆಯ ಕದ ಗಳನ್ನು ಮುರಿದು ಕಬ್ಬಿಣದ ಅಗುಳಿಗಳನ್ನು ಕಡಿದು ಬಿಟ್ಟಿದ್ದಾನೆ. 17 ಮೂಢರು ತಮ್ಮ ದ್ರೋಹದಿಂದಲೂ ಅಕ್ರಮಗಳಿಂದಲೂ ಶ್ರಮೆಪಡುತ್ತಾರೆ. 18 ಅವರ ಪ್ರಾಣವು ಎಲ್ಲಾ ಆಹಾರವನ್ನು ಅಸಹ್ಯಿಸುತ್ತದೆ; ಅವರು ಮರಣದ ಬಾಗಲುಗಳಿಗೆ ಸವಿಾಪಿಸುತ್ತಾರೆ. 19 ಆಗ ಅವರು ತಮ್ಮ ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಲು ಆತನು ಅವರನ್ನು ಅವರ ಸಂಕಟಗಳೊಳಗಿಂದ ರಕ್ಷಿಸುತ್ತಾನೆ. 20 ಆತನು ತನ್ನ ವಾಕ್ಯವನ್ನು ಕಳುಹಿಸಿ ಅವರನ್ನು ಸ್ವಸ್ಥಮಾಡಿ ಅವರ ನಾಶನಗಳಿಂದ ಅವರನ್ನು ತಪ್ಪಿಸಿ ದನು. 21 ಅವರು ಕರ್ತನನ್ನು ಆತನ ಒಳ್ಳೆಯತನ ಕ್ಕೋಸ್ಕರವೂ ಆತನು ಮನುಷ್ಯನ ಮಕ್ಕಳಿಗೆ ಮಾಡುವ ಅದ್ಭುತಗಳಿಗೋಸ್ಕರವೂ ಕೊಂಡಾಡಲಿ. 22 ಸ್ತೋತ್ರದ ಬಲಿಗಳನ್ನು ಅರ್ಪಿಸಿ ಆತನ ಕೆಲಸಗಳನ್ನು ಉತ್ಸಾಹ ದಿಂದ ಸಾರಲಿ. 23 ಹಡಗುಗಳಲ್ಲಿ ಸಮುದ್ರಕ್ಕೆ ಇಳಿದು ಹೋಗಿ ಬಹಳ ನೀರುಗಳಲ್ಲಿ ವ್ಯಾಪಾರಮಾಡುವವರು 24 ಕರ್ತನ ಕೆಲಸಗಳನ್ನೂ ಅಗಾಧಗಳಲ್ಲಿ ಆತನ ಅದ್ಭುತಗಳನ್ನೂ ನೋಡುತ್ತಾರೆ. 25 ಆತನು ಆಜ್ಞಾಪಿಸಿ ಬಿರುಗಾಳಿಯನ್ನು ಏಳಮಾಡುತ್ತಾನೆ; ಅದು ಅದರ ತೆರೆಗಳನ್ನು ಎಬ್ಬಿಸುತ್ತದೆ. 26 ಅವರು ಆಕಾಶಕ್ಕೆ ಏರು ತ್ತಾರೆ; ತಿರುಗಿ ಅಗಾಧಗಳಿಗೆ ಇಳಿಯುತ್ತಾರೆ; ಅವರ ಪ್ರಾಣವು ಕಳವಳದಿಂದ ಕರಗಿಹೋಗುತ್ತದೆ. 27 ಅವರು ಅತ್ತಿತ್ತ ತೂಗಾಡಿ ಮತ್ತನ ಹಾಗೆ ಓಲಾ ಡುತ್ತಾರೆ. ಅವರ ಜ್ಞಾನವೆಲ್ಲಾ ನುಂಗಿ ಹೋಯಿತು. 28 ಆಗ ಅವರು ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಿದರು; ಆತನು ಅವರ ಸಂಕಟಗಳೊಳಗಿಂದ ಅವರನ್ನು ಹೊರಗೆ ಬರಮಾಡಿ 29 ಬಿರುಗಾಳಿಯನ್ನು ಶಾಂತಮಾಡುತ್ತಾನೆ; ಹೀಗೆ ಅದರ ತೆರೆಗಳು ನಿಂತು ಹೋಗುವವು. 30 ಅವು ಶಾಂತವಾದಾಗ ಅವರು ಸಂತೋಷಪಡುತ್ತಾರೆ; ಹೀಗೆ ಅವರು ಅಪೇಕ್ಷಿಸಿದ ರೇವಿಗೆ ಅವರನ್ನು ನಡೆಸುತ್ತಾನೆ. 31 ಅವರು ಕರ್ತನನ್ನು ಆತನ ಒಳ್ಳೇತನಕ್ಕೋಸ್ಕರವೂ ಆತನು ಮನುಷ್ಯನ ಮಕ್ಕಳಿಗೆ ಮಾಡುವ ಅದ್ಭುತಗಳಿ ಗೋಸ್ಕರವೂ ಕೊಂಡಾಡಲಿ. 32 ಜನರು ಸಭೆಯಲ್ಲಿ ಆತನನ್ನು ಘನಪಡಿಸಿ ಹಿರಿಯರ ಸಭೆಯಲ್ಲಿ ಆತನನ್ನು ಸ್ತುತಿಸಲಿ. 33 ಆತನು ನದಿಗಳನ್ನು ಅರಣ್ಯವಾಗಿಯೂ ನೀರಿನ ಬುಗ್ಗೆಗಳನ್ನು ಒಣ ಭೂಮಿಯಾಗಿಯೂ 34 ಫಲ ವುಳ್ಳ ಭೂಮಿಯನ್ನು ಬಂಜರಾಗಿಯೂ ಅದರ ನಿವಾಸಿ ಗಳ ಕೆಟ್ಟತನಕ್ಕೋಸ್ಕರ ಮಾರ್ಪಡಿಸುತ್ತಾನೆ. 35 ಆತನು ಅರಣ್ಯವನ್ನು ನೀರಿನ ಕೆರೆಯಾಗಿಯೂ ಒಣ ಭೂಮಿ ಯನ್ನು ನೀರಿನ ಬುಗ್ಗೆಗಳಾಗಿಯೂ ಮಾರ್ಪಡಿಸುತ್ತಾನೆ. 36 ಅಲ್ಲಿ ಹಸಿದವರನ್ನು ವಾಸಿಸಮಾಡುತ್ತಾನೆ; ಆಗ ಅವರು ವಾಸಿಸುವ ಪಟ್ಟಣವನ್ನು ಸ್ಥಾಪಿಸಿ, 37 ಹೊಲ ಗಳನ್ನು ಬಿತ್ತಿ, ದ್ರಾಕ್ಷಾಲತೆಗಳನ್ನು ನೆಡುವರು; ಅವು ಹುಟ್ಟುವಳಿಯ ಫಲವನ್ನು ಕೊಡುವವು.
38 ಆತನು ಅವರನ್ನು ಆಶೀರ್ವದಿಸಿದ್ದರಿಂದ ಅವರು ಬಹಳವಾಗಿ ಹೆಚ್ಚುತ್ತಾರೆ; ಅವರ ದನಗಳನ್ನು ಸಹ ಆತನು ಕಡಿಮೆ ಮಾಡುವದಿಲ್ಲ.
39 ತಿರಿಗಿ ಅವರು ಕಡಿಮೆಯಾಗಿ ಕೇಡು ಚಿಂತೆಗಳ ಸಂಕಟದಿಂದ ಕುಗ್ಗುತ್ತಾರೆ. 40 ಆತನು ಅಧಿಪತಿಗಳ ಮೇಲೆ ತಿರಸ್ಕಾರವನ್ನು ಹೊಯಿದು ಅವ ರನ್ನು ದಾರಿ ಇಲ್ಲದ ಕಾಡಿನಲ್ಲಿ ಅಲೆಯ ಮಾಡುತ್ತಾನೆ. 41 ಆದಾಗ್ಯೂ ಆತನು ಬಡವನನ್ನು ಸಂಕಟದಿಂದ ಉನ್ನತಕ್ಕೇರಿಸಿ ಅವನ ಕುಟುಂಬಗಳನ್ನು ಮಂದೆಯ ಹಾಗೆ ಇರಿಸುತ್ತಾನೆ. 42 ನೀತಿವಂತರು ನೋಡಿ ಸಂತೋ ಷಪಡುವರು; ಆದರೆ ಎಲ್ಲಾ ಅಕ್ರಮಗಾರರು ಬಾಯಿ ಮುಚ್ಚಿಕೊಳ್ಳುವರು. 43 ಜ್ಞಾನಿಯು ಯಾವನೋ, ಅವನು ಇವುಗಳನ್ನು ಗಮನಿಸುವನು; ಅವರು ಕರ್ತನ ಪ್ರೀತಿ ಕರುಣೆಯನ್ನು ಗ್ರಹಿಸಿಕೊಳ್ಳುವರು.
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 107 / 150
×

Alert

×

Kannada Letters Keypad References