2. ನಿನ್ನ ನೀತಿಯಲ್ಲಿ ನನ್ನನ್ನು ಬಿಡಿಸಿ ನನ್ನನ್ನು ತಪ್ಪಿಸು; ನಿನ್ನ ಕಿವಿಯನ್ನು ನನ್ನ ಕಡೆಗೆ ತಿರುಗಿಸಿ ನನ್ನನ್ನು ರಕ್ಷಿಸು.
|
3. ನೀನು ಯಾವಾಗಲೂ ನಾನು ಆಶ್ರಯಿಸಿಕೊಳ್ಳುವ ಬಲಸ್ಥಾನವಾಗಿರು. ನನ್ನನ್ನು ರಕ್ಷಿಸುವದಕ್ಕೆ ಆಜ್ಞಾಪಿಸಿದ್ದೀ, ನನ್ನ ಬಂಡೆಯೂ ಕೋಟೆಯೂ ನೀನೇ.
|
6. ಗರ್ಭದಿಂದಲೇ ನಿನ್ನ ಮೇಲೆ ಆತುಕೊಂಡಿದ್ದೇನೆ; ತಾಯಿಯ ಗರ್ಭದಿಂದ ನೀನು ನನ್ನನ್ನು ಹೊರಗೆ ತಂದಿದ್ದಿ. ಯಾವಾಗಲೂ ನಿನ್ನಲ್ಲಿ ನನ್ನ ಸ್ತೋತ್ರವು ಇರುವದು.
|
10. ನನ್ನ ಶತ್ರುಗಳು ನನಗೆ ವಿರೋಧವಾಗಿ ಮಾತನಾಡುತ್ತಾರೆ; ನನ್ನ ಪ್ರಾಣಕ್ಕೆ ಹೊಂಚು ಹಾಕುವ ವರು ಕೂಡಿಕೊಂಡು ಆಲೋಚನೆ ಮಾಡುತ್ತಾ--
|
11. ದೇವರು ಅವನನ್ನು ಕೈ ಬಿಟ್ಟಿದ್ದಾನೆ; ಅವನನ್ನು ಹಿಂಸಿಸಿ, ಹಿಡಿದುಕೊಳ್ಳಿರಿ; ಅವನನ್ನು ಬಿಡಿಸುವವನು ಯಾರೂ ಇಲ್ಲ ಎಂದು ಅವರು ಅನ್ನುತ್ತಾರೆ.
|
13. ನನ್ನ ಪ್ರಾಣವನ್ನು ಎದುರಿಸುವವರು ನಾಚಿಕೆಪಟ್ಟು ನಾಶವಾಗಲಿ; ನಿಂದೆಯೂ ಅವಮಾನವೂ ನನ್ನ ಕೇಡಿಗಾಗಿ ಹುಡುಕು ವವರನ್ನು ಸುತ್ತಿಕೊಳ್ಳಲಿ.
|
18. ಓ ದೇವರೇ, ನಾನು ಮುಪ್ಪಿನವನೂ ನರೆ ಕೂದಲಿನವನೂ ಆದಾಗ ಈ ಸಂತತಿಯವರಿಗೆ ನಿನ್ನ ಶಕ್ತಿಯನ್ನೂ ಮುಂದೆ ಬರುವ ಪ್ರತಿಯೊಬ್ಬನಿಗೆ ನಿನ್ನ ಅಧಿಕಾರವನ್ನೂ ತಿಳಿಸುವ ವರೆಗೂ ನನ್ನನ್ನು ಕೈಬಿಡಬೇಡ.
|
20. ಕಠಿಣವಾದ ಇಕ್ಕಟ್ಟುಗಳನ್ನು ನೋಡಮಾಡಿದ ನನ್ನನ್ನು ನೀನು ತಿರಿಗಿ ಬದುಕಿಸಿದಿ; ಭೂಮಿಯ ಆಗಾಧ ಗಳೊಳಗಿಂದ ನನ್ನನ್ನು ಮೇಲಕ್ಕೆ ತರುತ್ತೀ.
|
22. ಓ ನನ್ನ ದೇವರೇ, ನಾನು ಸಹ ನಿನ್ನನ್ನೂ ನಿನ್ನ ಸತ್ಯವನ್ನೂ ವೀಣೆಯಿಂದ ಕೊಂಡಾಡುವೆನು; ಓ ಇಸ್ರಾಯೇಲಿನ ಪರಿಶುದ್ದನೇ, ಕಿನ್ನರಿಯಿಂದ ನಿನ್ನನ್ನು ಕೀರ್ತಿಸುವೆನು.
|
23. ನಾನು ನಿನ್ನನ್ನು ಕೀರ್ತಿಸುವಾಗ ನನ್ನ ತುಟಿಗಳೂ ನೀನು ವಿಮೋಚಿಸಿದ ನನ್ನ ಪ್ರಾಣವೂ ಉತ್ಸಾಹ ಧ್ವನಿಗೈಯುವವು.ನನ್ನ ನಾಲಿಗೆಯು ಸಹ ದಿನವೆಲ್ಲಾ ನಿನ್ನ ನೀತಿಯನ್ನು ಮಾತನಾಡುವದು; ನನಗೆ ಕೇಡನ್ನು ಹುಡುಕುವವರು ನಾಚಿಕೊಂಡು ಲಜ್ಜೆಪಡುತ್ತಾರೆ.
|
24. ನನ್ನ ನಾಲಿಗೆಯು ಸಹ ದಿನವೆಲ್ಲಾ ನಿನ್ನ ನೀತಿಯನ್ನು ಮಾತನಾಡುವದು; ನನಗೆ ಕೇಡನ್ನು ಹುಡುಕುವವರು ನಾಚಿಕೊಂಡು ಲಜ್ಜೆಪಡುತ್ತಾರೆ.
|