ಪವಿತ್ರ ಬೈಬಲ್

ಬೈಬಲ್ ಸೊಸೈಟಿ ಆಫ್ ಇಂಡಿಯಾ (BSI)
ಕೀರ್ತನೆಗಳು
1. ಭೂಮಿಯೂ ಅದರ ಸಮಸ್ತವೂ ಭೂಲೋಕವೂ ಅದರಲ್ಲಿ ವಾಸಿಸುವವುಗಳೂ ಕರ್ತನವುಗಳು.
2. ಆತನು ಅದನ್ನು ಸಮುದ್ರಗಳ ಮೇಲೆ ಸ್ಥಾಪಿಸಿ ಪ್ರವಾಹಗಳ ಮೇಲೆ ಅದನ್ನು ಸ್ಥಿರ ಪಡಿಸಿದ್ದಾನೆ.
3. ಕರ್ತನ ಪರ್ವತವನ್ನು ಹತ್ತುವವನು ಯಾರು? ಇಲ್ಲವೆ ಆತನ ಪರಿಶುದ್ಧ ಸ್ಥಳದಲ್ಲಿ ನಿಲ್ಲುವವನು ಯಾರು?
4. ಶುದ್ಧ ಹಸ್ತಗಳೂ ನಿರ್ಮಲವಾದ ಹೃದ ಯವೂ ಉಳ್ಳವನಾಗಿದ್ದು ತನ್ನ ಪ್ರಾಣವನ್ನು ವ್ಯರ್ಥ ತ್ವಕ್ಕೆ ಎತ್ತದೆಯೂ ಇಲ್ಲವೆ ಮೋಸದಿಂದ ಆಣೆ ಇಡ ದೆಯೂ ಇರುವವನೇ.
5. ಅವನೇ ಕರ್ತನ ಕಡೆಯಿಂದ ಆಶೀರ್ವಾದವನ್ನೂ ತನ್ನ ರಕ್ಷಕನಾದ ದೇವರಿಂದ ನೀತಿ ಯನ್ನೂ ಹೊಂದುವನು.
6. ಆತನನ್ನು ಹುಡುಕುವ ಸಂತತಿಯು ಇದೇ; ಓ ಯಾಕೋಬ್ಯರ ದೇವರೇ, ನಿನ್ನ ಸನ್ನಿಧಿಯನ್ನು ಹುಡುಕುವವರು ಇಂಥವರೇ. ಸೆಲಾ.
7. ಬಾಗಲುಗಳೇ, ನಿಮ್ಮ ತಲೆಗಳನ್ನು ಎತ್ತಿರಿ; ನಿತ್ಯ ದ್ವಾರಗಳೇ, ಎತ್ತಲ್ಪಡಿರಿ; ಮಹಿಮೆಯುಳ್ಳ ಅರಸನು ಒಳಗೆ ಬರುತ್ತಾನೆ.
8. ಈ ಮಹಿಮೆಯ ಅರಸನು ಯಾರು? ಬಲವೂ ಪರಾಕ್ರಮವೂ ಉಳ್ಳ ಕರ್ತನು; ಯುದ್ಧದಲ್ಲಿ ಪರಾಕ್ರಮವುಳ್ಳ ಕರ್ತನು.
9. ಬಾಗಲುಗಳೇ, ನಿಮ್ಮ ತಲೆಗಳನ್ನೆತ್ತಿರಿ; ನಿತ್ಯದ್ವಾರ ಗಳೇ, ಅವುಗಳನ್ನು ಎತ್ತಿರಿ; ಮಹಿಮೆಯ ಅರಸನು ಒಳಗೆ ಬರುತ್ತಾನೆ.
10. ಮಹಿಮೆಯ ಅರಸನಾದ ಈತನು ಯಾರು? ಸೈನ್ಯಗಳ ಕರ್ತನು, ಈತನೇ ಮಹಿಮೆಯ ಅರಸನು--ಸೆಲಾ.
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 24 / 150
1 ಭೂಮಿಯೂ ಅದರ ಸಮಸ್ತವೂ ಭೂಲೋಕವೂ ಅದರಲ್ಲಿ ವಾಸಿಸುವವುಗಳೂ ಕರ್ತನವುಗಳು.
2 ಆತನು ಅದನ್ನು ಸಮುದ್ರಗಳ ಮೇಲೆ ಸ್ಥಾಪಿಸಿ ಪ್ರವಾಹಗಳ ಮೇಲೆ ಅದನ್ನು ಸ್ಥಿರ ಪಡಿಸಿದ್ದಾನೆ. 3 ಕರ್ತನ ಪರ್ವತವನ್ನು ಹತ್ತುವವನು ಯಾರು? ಇಲ್ಲವೆ ಆತನ ಪರಿಶುದ್ಧ ಸ್ಥಳದಲ್ಲಿ ನಿಲ್ಲುವವನು ಯಾರು? 4 ಶುದ್ಧ ಹಸ್ತಗಳೂ ನಿರ್ಮಲವಾದ ಹೃದ ಯವೂ ಉಳ್ಳವನಾಗಿದ್ದು ತನ್ನ ಪ್ರಾಣವನ್ನು ವ್ಯರ್ಥ ತ್ವಕ್ಕೆ ಎತ್ತದೆಯೂ ಇಲ್ಲವೆ ಮೋಸದಿಂದ ಆಣೆ ಇಡ ದೆಯೂ ಇರುವವನೇ. 5 ಅವನೇ ಕರ್ತನ ಕಡೆಯಿಂದ ಆಶೀರ್ವಾದವನ್ನೂ ತನ್ನ ರಕ್ಷಕನಾದ ದೇವರಿಂದ ನೀತಿ ಯನ್ನೂ ಹೊಂದುವನು. 6 ಆತನನ್ನು ಹುಡುಕುವ ಸಂತತಿಯು ಇದೇ; ಓ ಯಾಕೋಬ್ಯರ ದೇವರೇ, ನಿನ್ನ ಸನ್ನಿಧಿಯನ್ನು ಹುಡುಕುವವರು ಇಂಥವರೇ. ಸೆಲಾ. 7 ಬಾಗಲುಗಳೇ, ನಿಮ್ಮ ತಲೆಗಳನ್ನು ಎತ್ತಿರಿ; ನಿತ್ಯ ದ್ವಾರಗಳೇ, ಎತ್ತಲ್ಪಡಿರಿ; ಮಹಿಮೆಯುಳ್ಳ ಅರಸನು ಒಳಗೆ ಬರುತ್ತಾನೆ. 8 ಈ ಮಹಿಮೆಯ ಅರಸನು ಯಾರು? ಬಲವೂ ಪರಾಕ್ರಮವೂ ಉಳ್ಳ ಕರ್ತನು; ಯುದ್ಧದಲ್ಲಿ ಪರಾಕ್ರಮವುಳ್ಳ ಕರ್ತನು. 9 ಬಾಗಲುಗಳೇ, ನಿಮ್ಮ ತಲೆಗಳನ್ನೆತ್ತಿರಿ; ನಿತ್ಯದ್ವಾರ ಗಳೇ, ಅವುಗಳನ್ನು ಎತ್ತಿರಿ; ಮಹಿಮೆಯ ಅರಸನು ಒಳಗೆ ಬರುತ್ತಾನೆ. 10 ಮಹಿಮೆಯ ಅರಸನಾದ ಈತನು ಯಾರು? ಸೈನ್ಯಗಳ ಕರ್ತನು, ಈತನೇ ಮಹಿಮೆಯ ಅರಸನು--ಸೆಲಾ.
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 24 / 150
×

Alert

×

Kannada Letters Keypad References