ಪವಿತ್ರ ಬೈಬಲ್

ಬೈಬಲ್ ಸೊಸೈಟಿ ಆಫ್ ಇಂಡಿಯಾ (BSI)
2 ಕೊರಿಂಥದವರಿಗೆ
1. ಆದದರಿಂದ ನಾವು ಆತನೊಂದಿಗೆ ಕೆಲಸ ನಡಿಸುವವರಾಗಿದ್ದೇವೆ; ನೀವು ಸಹ ಹೊಂದಿದ ದೇವರ ಕೃಪೆಯನ್ನು ವ್ಯರ್ಥಮಾಡಿ ಕೊಳ್ಳಬೇಡಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇವೆ.
2. (ಆತನು--ಅಂಗೀಕಾರದ ಸಮಯದಲ್ಲಿ ನಾನು ನಿನ್ನ ಮನವಿಯನ್ನು ಕೇಳಿದೆನು, ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯಮಾಡಿದೆನು ಎಂದು ಹೇಳುತ್ತಾನೆ; ಇಗೋ, ಈಗಲೇ ಆ ಅಂಗೀಕಾರದ ಸಮಯ; ಇಗೋ, ಈಗಲೇ ಆ ರಕ್ಷಣೆಯ ದಿನ).
3. ಸೇವೆಯು ದೂಷಿಸಲ್ಪಡದಂತೆ ಯಾವ ವಿಷಯ ದಲ್ಲಿಯೂ ನಿಂದೆಗೆ ಅವಕಾಶ ಕೊಡಬೇಡಿರಿ;
4. ಆದರೆ ಎಲ್ಲಾ ಸಂಗತಿಗಳಲ್ಲಿ ಹೆಚ್ಚು ತಾಳ್ಮೆಯಲ್ಲಿಯೂ ಸಂಕಟ ಗಳಲ್ಲಿಯೂ ಕೊರತೆಗಳಲ್ಲಿಯೂ ಇಕ್ಕಟ್ಟುಗಳಲ್ಲಿಯೂ
5. ಪೆಟ್ಟುಗಳಲ್ಲಿಯೂ ಸೆರೆಮನೆಗಳಲ್ಲಿಯೂ ಕಲಹಗಳ ಲ್ಲಿಯೂ ಪ್ರಯಾಸಗಳಲ್ಲಿಯೂ ನಿದ್ದೆಗೇಡುಗಳಲ್ಲಿಯೂ ಉಪವಾಸಗಳಲ್ಲಿಯೂ ದೇವರ ಸೇವಕರೆಂದು ನಮ್ಮನ್ನು ಸಮ್ಮತರಾಗ ಮಾಡಿಕೊಳ್ಳುತ್ತೇವೆ.
6. ಶುದ್ಧತೆಯಿಂದ, ಜ್ಞಾನದಿಂದ, ದೀರ್ಘಶಾಂತಿಯಿಂದ, ದಯೆಯಿಂದ, ಪವಿತ್ರಾತ್ಮನಿಂದ, ಕಪಟವಿಲ್ಲದ ಪ್ರೀತಿಯಿಂದ,
7. ಸತ್ಯವಾಕ್ಯದಿಂದ, ದೇವರ ಶಕ್ತಿಯಿಂದ, ಎಡಬಲಗೈ ಗಳಲ್ಲಿ ನೀತಿಯೆಂಬ ಆಯುಧಗಳಿಂದ,
8. ಮಾನ ಅವಮಾನಗಳಿಂದ, ಕೀರ್ತಿ ಅಪಕೀರ್ತಿಗಳಿಂದ, ಕೂಡಿದವರಾಗಿದ್ದು ಮೋಸಗಾರರೆನಿಸಿಕೊಂಡರೂ ಸತ್ಯವಂತರೂ
9. ಅಪರಿಚಿತರೆನಿಸಿಕೊಂಡರೂ ಪರಿಚಿತರೂ ಸಾಯುವವರಾಗಿ ತೋರಿದರೂ ಇಗೋ, ನಾವು ಬದುಕುವವರೂ ಆಗಿದ್ದೇವೆ; ಶಿಕ್ಷೆ ಹೊಂದುವ ವರಾಗಿದ್ದರೂ ಕೊಲ್ಲಲ್ಪಡದವರೂ
10. ದುಃಖಪಡುವ ವರಾಗಿದ್ದರೂ ಯಾವಾಗಲೂ ಸಂತೋಷಪಡು ವವರೂ ಬಡವರಾಗಿದ್ದರೂ ಅನೇಕರಿಗೆ ಐಶ್ವರ್ಯ ವನ್ನುಂಟು ಮಾಡುವವರೂ ಏನೂ ಇಲ್ಲದವ ರಾಗಿದ್ದರೂ ಎಲ್ಲಾ ಇದ್ದವರೂ ಆಗಿದ್ದೇವೆ.
11. ಓ ಕೊರಿಂಥದವರೇ, ನಮ್ಮ ಹೃದಯವು ವಿಶಾಲವಾಗಿರುವದರಿಂದ ನಾವು ನಿಮ್ಮೊಡನೆ ಧಾರಳವಾಗಿ ಮಾತನಾಡುತ್ತಾ ಇದ್ದೇವೆ;
12. ನಿಮ್ಮ ಮೇಲಿರುವ ನಮ್ಮ ಪ್ರೀತಿಯು ಸಂಕೋಚವಾದದ್ದಲ್ಲ, ನಮ್ಮ ವಿಷಯದಲ್ಲಿ ನಿಮ್ಮ ಪ್ರೀತಿಯೇ ಸಂಕೋಚ ವಾದದ್ದು.
13. ನಿಮ್ಮ ವಿಷಯದಲ್ಲಿ ನಮ್ಮ ಅಂತಃ ಕರುಣೆಯ ಫಲವಾಗಿ ನೀವು ನಿಮ್ಮ ಹೃದಯವನ್ನು ವಿಶಾಲಮಾಡಿಕೊಳ್ಳಿರಿ; (ನೀವು ನನ್ನ ಮಕ್ಕಳೆಂದು ನಾನು ಹೇಳುತ್ತೇನೆ).
14. ನೀವು ಅವಿಶ್ವಾಸಿಗಳೊಂದಿಗೆ ಸೇರಿ ಸಮವಲ್ಲದ ನೊಗವನ್ನು ಹೊರಬೇಡಿರಿ; ಯಾಕಂದರೆ ಅನೀತಿಯ ಕೂಡ ನೀತಿಗೆ ಅನ್ಯೋನ್ಯತೆ ಏನು? ಕತ್ತಲೆಯ ಕೂಡ ಬೆಳಕಿಗೆ ಐಕ್ಯವೇನು?
15. ಬೆಲಿಯಾಳನ ಕೂಡ ಕ್ರಿಸ್ತನಿಗೆ ಒಪ್ಪಂದವೇನು? ನಂಬದಿರುವವನ ಕೂಡ ನಂಬುವ ವನಿಗೆ ಪಾಲುಗಾರಿಕೆ ಏನು?
16. ವಿಗ್ರಹಗಳ ಕೂಡ ದೇವರ ಮಂದಿರಕ್ಕೆ ಒಪ್ಪಿಗೆ ಏನು? ಯಾಕಂದರೆ ನೀವು ಜೀವವುಳ್ಳ ದೇವರ ಮಂದಿರವಾಗಿದ್ದೀರಲ್ಲಾ, ಇದರ ಸಂಬಂಧವಾಗಿ ದೇವರು--ನಾನು ಅವರಲ್ಲಿ ವಾಸಿಸುತ್ತಾ ತಿರುಗಾಡುವೆನು, ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು ಎಂದು ಹೇಳಿದ್ದಾನೆ.
17. ಆದದರಿಂದ--ಅವರ ಮಧ್ಯದಲ್ಲಿಂದ ನೀವು ಹೊರಗೆ ಬಂದು ಪ್ರತ್ಯೇಕವಾಗಿರಿ. ಇದಲ್ಲದೆ ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು ಹೇಳುತ್ತಾನೆ.
18. ನಾನು ನಿಮ್ಮನ್ನು ಸೇರಿಸಿಕೊಂಡು ನಿಮಗೆ ತಂದೆಯಾಗಿರುವೆನು; ನೀವು ನನಗೆ ಕುಮಾರ ಕುಮಾರ್ತೆಯರಾಗಿರುವಿರಿ ಎಂದು ಸರ್ವಶಕ್ತನಾದ ಕರ್ತನು ಹೇಳುತ್ತಾನೆ.
ಒಟ್ಟು 13 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 6 / 13
1 2 3 4 5 6 7 8 9 10 11 12 13
1 ಆದದರಿಂದ ನಾವು ಆತನೊಂದಿಗೆ ಕೆಲಸ ನಡಿಸುವವರಾಗಿದ್ದೇವೆ; ನೀವು ಸಹ ಹೊಂದಿದ ದೇವರ ಕೃಪೆಯನ್ನು ವ್ಯರ್ಥಮಾಡಿ ಕೊಳ್ಳಬೇಡಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇವೆ. 2 (ಆತನು--ಅಂಗೀಕಾರದ ಸಮಯದಲ್ಲಿ ನಾನು ನಿನ್ನ ಮನವಿಯನ್ನು ಕೇಳಿದೆನು, ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯಮಾಡಿದೆನು ಎಂದು ಹೇಳುತ್ತಾನೆ; ಇಗೋ, ಈಗಲೇ ಆ ಅಂಗೀಕಾರದ ಸಮಯ; ಇಗೋ, ಈಗಲೇ ಆ ರಕ್ಷಣೆಯ ದಿನ).
3 ಸೇವೆಯು ದೂಷಿಸಲ್ಪಡದಂತೆ ಯಾವ ವಿಷಯ ದಲ್ಲಿಯೂ ನಿಂದೆಗೆ ಅವಕಾಶ ಕೊಡಬೇಡಿರಿ;
4 ಆದರೆ ಎಲ್ಲಾ ಸಂಗತಿಗಳಲ್ಲಿ ಹೆಚ್ಚು ತಾಳ್ಮೆಯಲ್ಲಿಯೂ ಸಂಕಟ ಗಳಲ್ಲಿಯೂ ಕೊರತೆಗಳಲ್ಲಿಯೂ ಇಕ್ಕಟ್ಟುಗಳಲ್ಲಿಯೂ 5 ಪೆಟ್ಟುಗಳಲ್ಲಿಯೂ ಸೆರೆಮನೆಗಳಲ್ಲಿಯೂ ಕಲಹಗಳ ಲ್ಲಿಯೂ ಪ್ರಯಾಸಗಳಲ್ಲಿಯೂ ನಿದ್ದೆಗೇಡುಗಳಲ್ಲಿಯೂ ಉಪವಾಸಗಳಲ್ಲಿಯೂ ದೇವರ ಸೇವಕರೆಂದು ನಮ್ಮನ್ನು ಸಮ್ಮತರಾಗ ಮಾಡಿಕೊಳ್ಳುತ್ತೇವೆ. 6 ಶುದ್ಧತೆಯಿಂದ, ಜ್ಞಾನದಿಂದ, ದೀರ್ಘಶಾಂತಿಯಿಂದ, ದಯೆಯಿಂದ, ಪವಿತ್ರಾತ್ಮನಿಂದ, ಕಪಟವಿಲ್ಲದ ಪ್ರೀತಿಯಿಂದ, 7 ಸತ್ಯವಾಕ್ಯದಿಂದ, ದೇವರ ಶಕ್ತಿಯಿಂದ, ಎಡಬಲಗೈ ಗಳಲ್ಲಿ ನೀತಿಯೆಂಬ ಆಯುಧಗಳಿಂದ, 8 ಮಾನ ಅವಮಾನಗಳಿಂದ, ಕೀರ್ತಿ ಅಪಕೀರ್ತಿಗಳಿಂದ, ಕೂಡಿದವರಾಗಿದ್ದು ಮೋಸಗಾರರೆನಿಸಿಕೊಂಡರೂ ಸತ್ಯವಂತರೂ 9 ಅಪರಿಚಿತರೆನಿಸಿಕೊಂಡರೂ ಪರಿಚಿತರೂ ಸಾಯುವವರಾಗಿ ತೋರಿದರೂ ಇಗೋ, ನಾವು ಬದುಕುವವರೂ ಆಗಿದ್ದೇವೆ; ಶಿಕ್ಷೆ ಹೊಂದುವ ವರಾಗಿದ್ದರೂ ಕೊಲ್ಲಲ್ಪಡದವರೂ 10 ದುಃಖಪಡುವ ವರಾಗಿದ್ದರೂ ಯಾವಾಗಲೂ ಸಂತೋಷಪಡು ವವರೂ ಬಡವರಾಗಿದ್ದರೂ ಅನೇಕರಿಗೆ ಐಶ್ವರ್ಯ ವನ್ನುಂಟು ಮಾಡುವವರೂ ಏನೂ ಇಲ್ಲದವ ರಾಗಿದ್ದರೂ ಎಲ್ಲಾ ಇದ್ದವರೂ ಆಗಿದ್ದೇವೆ. 11 ಓ ಕೊರಿಂಥದವರೇ, ನಮ್ಮ ಹೃದಯವು ವಿಶಾಲವಾಗಿರುವದರಿಂದ ನಾವು ನಿಮ್ಮೊಡನೆ ಧಾರಳವಾಗಿ ಮಾತನಾಡುತ್ತಾ ಇದ್ದೇವೆ; 12 ನಿಮ್ಮ ಮೇಲಿರುವ ನಮ್ಮ ಪ್ರೀತಿಯು ಸಂಕೋಚವಾದದ್ದಲ್ಲ, ನಮ್ಮ ವಿಷಯದಲ್ಲಿ ನಿಮ್ಮ ಪ್ರೀತಿಯೇ ಸಂಕೋಚ ವಾದದ್ದು. 13 ನಿಮ್ಮ ವಿಷಯದಲ್ಲಿ ನಮ್ಮ ಅಂತಃ ಕರುಣೆಯ ಫಲವಾಗಿ ನೀವು ನಿಮ್ಮ ಹೃದಯವನ್ನು ವಿಶಾಲಮಾಡಿಕೊಳ್ಳಿರಿ; (ನೀವು ನನ್ನ ಮಕ್ಕಳೆಂದು ನಾನು ಹೇಳುತ್ತೇನೆ). 14 ನೀವು ಅವಿಶ್ವಾಸಿಗಳೊಂದಿಗೆ ಸೇರಿ ಸಮವಲ್ಲದ ನೊಗವನ್ನು ಹೊರಬೇಡಿರಿ; ಯಾಕಂದರೆ ಅನೀತಿಯ ಕೂಡ ನೀತಿಗೆ ಅನ್ಯೋನ್ಯತೆ ಏನು? ಕತ್ತಲೆಯ ಕೂಡ ಬೆಳಕಿಗೆ ಐಕ್ಯವೇನು? 15 ಬೆಲಿಯಾಳನ ಕೂಡ ಕ್ರಿಸ್ತನಿಗೆ ಒಪ್ಪಂದವೇನು? ನಂಬದಿರುವವನ ಕೂಡ ನಂಬುವ ವನಿಗೆ ಪಾಲುಗಾರಿಕೆ ಏನು? 16 ವಿಗ್ರಹಗಳ ಕೂಡ ದೇವರ ಮಂದಿರಕ್ಕೆ ಒಪ್ಪಿಗೆ ಏನು? ಯಾಕಂದರೆ ನೀವು ಜೀವವುಳ್ಳ ದೇವರ ಮಂದಿರವಾಗಿದ್ದೀರಲ್ಲಾ, ಇದರ ಸಂಬಂಧವಾಗಿ ದೇವರು--ನಾನು ಅವರಲ್ಲಿ ವಾಸಿಸುತ್ತಾ ತಿರುಗಾಡುವೆನು, ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು ಎಂದು ಹೇಳಿದ್ದಾನೆ. 17 ಆದದರಿಂದ--ಅವರ ಮಧ್ಯದಲ್ಲಿಂದ ನೀವು ಹೊರಗೆ ಬಂದು ಪ್ರತ್ಯೇಕವಾಗಿರಿ. ಇದಲ್ಲದೆ ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು ಹೇಳುತ್ತಾನೆ. 18 ನಾನು ನಿಮ್ಮನ್ನು ಸೇರಿಸಿಕೊಂಡು ನಿಮಗೆ ತಂದೆಯಾಗಿರುವೆನು; ನೀವು ನನಗೆ ಕುಮಾರ ಕುಮಾರ್ತೆಯರಾಗಿರುವಿರಿ ಎಂದು ಸರ್ವಶಕ್ತನಾದ ಕರ್ತನು ಹೇಳುತ್ತಾನೆ.
ಒಟ್ಟು 13 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 6 / 13
1 2 3 4 5 6 7 8 9 10 11 12 13
×

Alert

×

Kannada Letters Keypad References