ಪವಿತ್ರ ಬೈಬಲ್

ಬೈಬಲ್ ಸೊಸೈಟಿ ಆಫ್ ಇಂಡಿಯಾ (BSI)
ಯೋಬನು
1. ಇಗೋ, ನನ್ನ ಕಣ್ಣು ಎಲ್ಲಾ ನೋಡಿತು; ನನ್ನ ಕಿವಿ ಕೇಳಿ ಅದನ್ನು ಗ್ರಹಿಸಿಕೊಂಡಿತು.
2. ನೀವು ತಿಳಿದುಕೊಳ್ಳುವ ಪ್ರಕಾರ ನಾನೂ ತಿಳಿದು ಕೊಂಡಿದ್ದೇನೆ; ನಾನು ನಿಮಗಿಂತ ಕಡಿಮೆಯಾದವನಲ್ಲ.
3. ನಾನು ಸರ್ವಶಕ್ತನ ಸಂಗಡ ಖಂಡಿತವಾಗಿ ಮಾತ ನಾಡುವೆನು, ದೇವರ ಸಂಗಡ ವಾದಿಸಲು ನನಗೆ ಮನಸ್ಸುಂಟು.
4. ಆದರೆ ನೀವು ಸುಳ್ಳನ್ನು ಕಲ್ಪಿಸುವವರು; ನೀವೆಲ್ಲರೂ ವ್ಯರ್ಥ ವೈದ್ಯರೇ.
5. ನೀವು ಮೌನವಾಗಿಯೇ ಇದ್ದರೆ ಎಷ್ಟೋ ಒಳ್ಳೇದು! ಅದು ನಿಮಗೆ ಜ್ಞಾನವಾಗಿರತಕ್ಕದ್ದು.
6. ನನ್ನ ವಾದವನ್ನು ಕೇಳಿಸಿಕೊಳ್ಳಿರಿ; ನನ್ನ ತುಟಿಗಳ ತರ್ಕಗಳನ್ನು ಆಲೈಸಿರಿ.
7. ದೇವರಿಗೋಸ್ಕರ ನೀವು ದುಷ್ಟತನದಿಂದ ಮಾತನಾಡುವಿರೋ? ಆತನಿಗೋ ಸ್ಕರ ಮೋಸದ ನುಡಿಗಳನ್ನಾಡುವಿರೋ?
8. ಆತನ ಮುಖ ದಾಕ್ಷಿಣ್ಯವನ್ನು ನೀವು ಅಂಗೀಕರಿಸುವಿರೋ? ದೇವರಿಗೋಸ್ಕರ ತರ್ಕ ಮಾಡುವಿರೋ?
9. ಆತನು ನಿಮ್ಮನ್ನು ಶೋಧಿಸುವದು ಒಳ್ಳೇದೋ? ಅಥವಾ ಒಬ್ಬ ಮನುಷ್ಯನು ಇನ್ನೊಬ್ಬನನ್ನು ಗೇಲಿಮಾಡುವ ಪ್ರಕಾರ ನೀವೂ ಆತನನ್ನು ಗೇಲಿಮಾಡುವಿರೋ?
10. ನೀವು ಅಂತರಂಗದಲ್ಲಿ ಮುಖ ದಾಕ್ಷಿಣ್ಯಗಳನ್ನು ಅಂಗೀಕರಿ ಸಿದರೆ ಆತನು ನಿಮ್ಮನ್ನು ಖಂಡಿತವಾಗಿಯೂ ದೂಷಿ ಸುವನು.
11. ಆತನ ಘನತೆಯು ನಿಮ್ಮನ್ನು ಹೆದರಿಸು ವದಿಲ್ಲವೋ? ಆತನ ಭೀತಿಯು ನಿಮ್ಮ ಮೇಲೆ ಬೀಳುವ ದಿಲ್ಲವೋ?
12. ನಿಮ್ಮ ಜ್ಞಾಪಕಗಳು ಬೂದಿಯಂತಿವೆ; ನಿಮ್ಮ ಶರೀರಗಳು ಮಣ್ಣಿನ ಶರೀರಗಳಾಗಿವೆ.
13. ಮೌನ ವಾಗಿರ್ರಿ; ನಾನು ಮಾತನಾಡುವದಕ್ಕೆ ನನ್ನನ್ನು ಬಿಡಿರಿ, ನನ್ನ ಮೇಲೆ ಏನಾದರೂ ಬರಲಿ.
14. ನಾನು ನನ್ನ ಮಾಂಸವನ್ನು ನನ್ನ ಹಲ್ಲುಗಳಿಂದ ಯಾಕೆ ಹಿಡಿಯ ಬೇಕು? ನನ್ನ ಪ್ರಾಣವನ್ನು ನನ್ನ ಕೈಯಲ್ಲಿ ಯಾಕೆ ಹಾಕಬೇಕು?
15. ಆತನು ನನ್ನನ್ನು ಕೊಂದರೂ ನಾನು ಆತನಲ್ಲಿ ಭರವಸೆ ಇಡುವೆನು, ಆದರೆ ನನ್ನ ಮಾರ್ಗ ಗಳನ್ನು ಉಳಿಸಿಕೊಳ್ಳುವೆನು.
16. ಆತನು ನನಗೆ ರಕ್ಷಣೆ ಯಾಗುವನು; ಆತನ ಮುಂದೆ ಭ್ರಷ್ಟನು ಬರುವದಿಲ್ಲ.
17. ನನ್ನ ನುಡಿಗಳನ್ನು ಲಕ್ಷ್ಯವಿಟ್ಟು ಕೇಳಿರಿ; ನನ್ನ ದೃಢ ವಚನವು ನಿಮ್ಮ ಕಿವಿಗೆ ಬೀಳಲಿ.
18. ಇಗೋ, ನ್ಯಾಯ ವನ್ನು ಕ್ರಮಪಡಿಸಿದೆನು; ನಾನು ನೀತಿವಂತನೆಂದು ನಿರ್ಣಯಿಸಲ್ಪಡುವದಾಗಿ ನನಗೆ ತಿಳಿದದೆ.
19. ನನ್ನ ಸಂಗಡ ವಾದಿಸುವವನು ಯಾರು? ಈಗ ನಾನು ನನ್ನ ನಾಲಿಗೆಯನ್ನು ತಡೆದದ್ದೆಯಾದರೆ ನಾನು ಸಾಯುವೆನು.
20. ಎರಡು ಸಂಗತಿಗಳನ್ನು ಮಾತ್ರ ನನಗೆ ಮಾಡಬೇಡ; ಆಗ ನಿನ್ನಿಂದ ನಾನು ಅಡಗಿಕೊಳ್ಳು ವದಿಲ್ಲ.
21. ನಿನ್ನ ಕೈಯನ್ನು ನನ್ನಿಂದ ದೂರಮಾಡು; ನಿನ್ನ ಭೀತಿಯು ನನ್ನನ್ನು ಹೆದರಿಸದಿರಲಿ.
22. ಆಗ ನೀನು ಕರೆಯುವಿ, ನಾನು ಉತ್ತರಿಸುವೆನು; ಅಥವಾ ನಾನು ಮಾತನಾಡುತ್ತೇನೆ, ನೀನು ನನಗೆ ಉತ್ತರ ಕೊಡು.
23. ನನ್ನ ಅಕ್ರಮಗಳೂ ಪಾಪಗಳೂ ಎಷ್ಟಿವೆ? ನನ್ನ ಅಪರಾಧವನ್ನೂ ಪಾಪವನ್ನೂ ನನಗೆ ತಿಳಿಯಪಡಿಸು.
24. ಯಾಕೆ ನಿನ್ನ ಮುಖವನ್ನು ಮರೆಮಾಡುತ್ತೀ; ನನ್ನನ್ನು ನಿನ್ನ ಶತ್ರು ಎಂದು ಯಾಕೆ ಎಣಿಸುತ್ತೀ?
25. ಬಡಿಯಲ್ಪಟ್ಟ ಎಲೆಯನ್ನು ನಲಿಗಿಸುವಿಯೋ? ಒಣಗಿದ ಕೊಳೆಯನ್ನು ಬೆನ್ನಟ್ಟುವಿಯೋ?
26. ನನಗೆ ವಿರೋಧವಾಗಿ ಕಹಿಯಾದ ವುಗಳನ್ನು ಬರೆದುಕೊಂಡಿದ್ದೀ; ನನ್ನ ಯೌವನದ ಅಕ್ರಮಗಳನ್ನು ನನಗೆ ಬಾಧ್ಯವಾಗಿ ಕೊಡುತ್ತೀ.
27. ನನ್ನ ಪಾದಗಳನ್ನು ಕೊಳದಲ್ಲಿಟ್ಟು ನನ್ನ ಹಾದಿಗಳನ್ನೆಲ್ಲಾ ಲಕ್ಷ್ಯವಿಟ್ಟು ನೋಡಿಕೊಳ್ಳುತ್ತೀ; ನನ್ನ ಪಾದಗಳ ಹಿಮ್ಮಡಿಗಳ ಮೇಲೆ ಗುರುತು ಹಾಕುತ್ತೀ.
28. ಅವನು ಕೊಳೆತ ವಸ್ತುವಿನ ಹಾಗೆ, ಹುಳು ತಿಂದ ಬಟ್ಟೆಯ ಹಾಗೆ ಇಲ್ಲದಾಗುವನು.
ಒಟ್ಟು 42 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 13 / 42
1 ಇಗೋ, ನನ್ನ ಕಣ್ಣು ಎಲ್ಲಾ ನೋಡಿತು; ನನ್ನ ಕಿವಿ ಕೇಳಿ ಅದನ್ನು ಗ್ರಹಿಸಿಕೊಂಡಿತು. 2 ನೀವು ತಿಳಿದುಕೊಳ್ಳುವ ಪ್ರಕಾರ ನಾನೂ ತಿಳಿದು ಕೊಂಡಿದ್ದೇನೆ; ನಾನು ನಿಮಗಿಂತ ಕಡಿಮೆಯಾದವನಲ್ಲ. 3 ನಾನು ಸರ್ವಶಕ್ತನ ಸಂಗಡ ಖಂಡಿತವಾಗಿ ಮಾತ ನಾಡುವೆನು, ದೇವರ ಸಂಗಡ ವಾದಿಸಲು ನನಗೆ ಮನಸ್ಸುಂಟು. 4 ಆದರೆ ನೀವು ಸುಳ್ಳನ್ನು ಕಲ್ಪಿಸುವವರು; ನೀವೆಲ್ಲರೂ ವ್ಯರ್ಥ ವೈದ್ಯರೇ. 5 ನೀವು ಮೌನವಾಗಿಯೇ ಇದ್ದರೆ ಎಷ್ಟೋ ಒಳ್ಳೇದು! ಅದು ನಿಮಗೆ ಜ್ಞಾನವಾಗಿರತಕ್ಕದ್ದು. 6 ನನ್ನ ವಾದವನ್ನು ಕೇಳಿಸಿಕೊಳ್ಳಿರಿ; ನನ್ನ ತುಟಿಗಳ ತರ್ಕಗಳನ್ನು ಆಲೈಸಿರಿ. 7 ದೇವರಿಗೋಸ್ಕರ ನೀವು ದುಷ್ಟತನದಿಂದ ಮಾತನಾಡುವಿರೋ? ಆತನಿಗೋ ಸ್ಕರ ಮೋಸದ ನುಡಿಗಳನ್ನಾಡುವಿರೋ? 8 ಆತನ ಮುಖ ದಾಕ್ಷಿಣ್ಯವನ್ನು ನೀವು ಅಂಗೀಕರಿಸುವಿರೋ? ದೇವರಿಗೋಸ್ಕರ ತರ್ಕ ಮಾಡುವಿರೋ? 9 ಆತನು ನಿಮ್ಮನ್ನು ಶೋಧಿಸುವದು ಒಳ್ಳೇದೋ? ಅಥವಾ ಒಬ್ಬ ಮನುಷ್ಯನು ಇನ್ನೊಬ್ಬನನ್ನು ಗೇಲಿಮಾಡುವ ಪ್ರಕಾರ ನೀವೂ ಆತನನ್ನು ಗೇಲಿಮಾಡುವಿರೋ? 10 ನೀವು ಅಂತರಂಗದಲ್ಲಿ ಮುಖ ದಾಕ್ಷಿಣ್ಯಗಳನ್ನು ಅಂಗೀಕರಿ ಸಿದರೆ ಆತನು ನಿಮ್ಮನ್ನು ಖಂಡಿತವಾಗಿಯೂ ದೂಷಿ ಸುವನು. 11 ಆತನ ಘನತೆಯು ನಿಮ್ಮನ್ನು ಹೆದರಿಸು ವದಿಲ್ಲವೋ? ಆತನ ಭೀತಿಯು ನಿಮ್ಮ ಮೇಲೆ ಬೀಳುವ ದಿಲ್ಲವೋ?
12 ನಿಮ್ಮ ಜ್ಞಾಪಕಗಳು ಬೂದಿಯಂತಿವೆ; ನಿಮ್ಮ ಶರೀರಗಳು ಮಣ್ಣಿನ ಶರೀರಗಳಾಗಿವೆ.
13 ಮೌನ ವಾಗಿರ್ರಿ; ನಾನು ಮಾತನಾಡುವದಕ್ಕೆ ನನ್ನನ್ನು ಬಿಡಿರಿ, ನನ್ನ ಮೇಲೆ ಏನಾದರೂ ಬರಲಿ. 14 ನಾನು ನನ್ನ ಮಾಂಸವನ್ನು ನನ್ನ ಹಲ್ಲುಗಳಿಂದ ಯಾಕೆ ಹಿಡಿಯ ಬೇಕು? ನನ್ನ ಪ್ರಾಣವನ್ನು ನನ್ನ ಕೈಯಲ್ಲಿ ಯಾಕೆ ಹಾಕಬೇಕು? 15 ಆತನು ನನ್ನನ್ನು ಕೊಂದರೂ ನಾನು ಆತನಲ್ಲಿ ಭರವಸೆ ಇಡುವೆನು, ಆದರೆ ನನ್ನ ಮಾರ್ಗ ಗಳನ್ನು ಉಳಿಸಿಕೊಳ್ಳುವೆನು. 16 ಆತನು ನನಗೆ ರಕ್ಷಣೆ ಯಾಗುವನು; ಆತನ ಮುಂದೆ ಭ್ರಷ್ಟನು ಬರುವದಿಲ್ಲ. 17 ನನ್ನ ನುಡಿಗಳನ್ನು ಲಕ್ಷ್ಯವಿಟ್ಟು ಕೇಳಿರಿ; ನನ್ನ ದೃಢ ವಚನವು ನಿಮ್ಮ ಕಿವಿಗೆ ಬೀಳಲಿ. 18 ಇಗೋ, ನ್ಯಾಯ ವನ್ನು ಕ್ರಮಪಡಿಸಿದೆನು; ನಾನು ನೀತಿವಂತನೆಂದು ನಿರ್ಣಯಿಸಲ್ಪಡುವದಾಗಿ ನನಗೆ ತಿಳಿದದೆ. 19 ನನ್ನ ಸಂಗಡ ವಾದಿಸುವವನು ಯಾರು? ಈಗ ನಾನು ನನ್ನ ನಾಲಿಗೆಯನ್ನು ತಡೆದದ್ದೆಯಾದರೆ ನಾನು ಸಾಯುವೆನು. 20 ಎರಡು ಸಂಗತಿಗಳನ್ನು ಮಾತ್ರ ನನಗೆ ಮಾಡಬೇಡ; ಆಗ ನಿನ್ನಿಂದ ನಾನು ಅಡಗಿಕೊಳ್ಳು ವದಿಲ್ಲ. 21 ನಿನ್ನ ಕೈಯನ್ನು ನನ್ನಿಂದ ದೂರಮಾಡು; ನಿನ್ನ ಭೀತಿಯು ನನ್ನನ್ನು ಹೆದರಿಸದಿರಲಿ. 22 ಆಗ ನೀನು ಕರೆಯುವಿ, ನಾನು ಉತ್ತರಿಸುವೆನು; ಅಥವಾ ನಾನು ಮಾತನಾಡುತ್ತೇನೆ, ನೀನು ನನಗೆ ಉತ್ತರ ಕೊಡು. 23 ನನ್ನ ಅಕ್ರಮಗಳೂ ಪಾಪಗಳೂ ಎಷ್ಟಿವೆ? ನನ್ನ ಅಪರಾಧವನ್ನೂ ಪಾಪವನ್ನೂ ನನಗೆ ತಿಳಿಯಪಡಿಸು. 24 ಯಾಕೆ ನಿನ್ನ ಮುಖವನ್ನು ಮರೆಮಾಡುತ್ತೀ; ನನ್ನನ್ನು ನಿನ್ನ ಶತ್ರು ಎಂದು ಯಾಕೆ ಎಣಿಸುತ್ತೀ? 25 ಬಡಿಯಲ್ಪಟ್ಟ ಎಲೆಯನ್ನು ನಲಿಗಿಸುವಿಯೋ? ಒಣಗಿದ ಕೊಳೆಯನ್ನು ಬೆನ್ನಟ್ಟುವಿಯೋ? 26 ನನಗೆ ವಿರೋಧವಾಗಿ ಕಹಿಯಾದ ವುಗಳನ್ನು ಬರೆದುಕೊಂಡಿದ್ದೀ; ನನ್ನ ಯೌವನದ ಅಕ್ರಮಗಳನ್ನು ನನಗೆ ಬಾಧ್ಯವಾಗಿ ಕೊಡುತ್ತೀ. 27 ನನ್ನ ಪಾದಗಳನ್ನು ಕೊಳದಲ್ಲಿಟ್ಟು ನನ್ನ ಹಾದಿಗಳನ್ನೆಲ್ಲಾ ಲಕ್ಷ್ಯವಿಟ್ಟು ನೋಡಿಕೊಳ್ಳುತ್ತೀ; ನನ್ನ ಪಾದಗಳ ಹಿಮ್ಮಡಿಗಳ ಮೇಲೆ ಗುರುತು ಹಾಕುತ್ತೀ. 28 ಅವನು ಕೊಳೆತ ವಸ್ತುವಿನ ಹಾಗೆ, ಹುಳು ತಿಂದ ಬಟ್ಟೆಯ ಹಾಗೆ ಇಲ್ಲದಾಗುವನು.
ಒಟ್ಟು 42 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 13 / 42
×

Alert

×

Kannada Letters Keypad References