ಪವಿತ್ರ ಬೈಬಲ್

ಬೈಬಲ್ ಸೊಸೈಟಿ ಆಫ್ ಇಂಡಿಯಾ (BSI)
ಹಗ್ಗಾಯ
1. ಏಳನೆಯ ತಿಂಗಳಿನಲ್ಲಿ, ತಿಂಗಳಿನ ಇಪ್ಪ ತ್ತೊಂದನೆಯ ದಿನದಲ್ಲಿ ಕರ್ತನ ವಾಕ್ಯವು ಪ್ರವಾದಿಯಾದ ಹಗ್ಗಾಯನ ಮೂಲಕ ಉಂಟಾಯಿತು; ಏನಂದರೆ--
2. ಯೆಹೂದದ ಅಧಿಪತಿಯಾದ ಶೆಯಲ್ತೀ ಯೇಲನ ಮಗನಾದ ಜೆರುಬ್ಬಾಬೆಲನಿಗೂ ಪ್ರಧಾನ ಯಾಜಕನಾದ ಯೆಹೋಚಾದಾಕನ ಮಗನಾದ ಯೆಹೋಶುವನಿಗೂ ಜನರಲ್ಲಿ ಉಳಿದವರಿಗೂ ನೀನು ಹೇಳತಕ್ಕದ್ದೇನಂದರೆ--
3. ಈ ಆಲಯವನ್ನು ಅದರ ಪೂರ್ವದ ಮಹಿಮೆಯಲ್ಲಿ ನೋಡಿದವರೊಳಗೆ ಉಳಿದ ವರು ನಿಮ್ಮಲ್ಲಿ ಯಾರು? ಈಗ ಅದನ್ನು ಹೇಗೆ ನೋಡು ತ್ತೀರಿ? ಇದು ನಿಮ್ಮ ಕಣ್ಣುಗಳಿಗೆ ಅದರ ಹೋಲಿಕೆಯು ಏನೂ ಇಲ್ಲದ ಹಾಗೆ ತೋರು ತ್ತದಲ್ಲವೋ?
4. ಆದಾಗ್ಯೂ ಈಗ ಕರ್ತನು ಹೇಳುತ್ತಾನೆ --ಜೆರುಬ್ಬಾಬೆಲನೇ, ಬಲವಾಗಿರು; ಪ್ರಧಾನ ಯಾಜಕ ನಾದ ಯೆಹೋಚಾದಾಕನ ಮಗನಾದ ಯೆಹೋ ಶುವನೇ, ಬಲವಾಗಿರು; ದೇಶದ ಜನರೆಲ್ಲರೇ, ಬಲ ವಾಗಿರ್ರಿ ಎಂದು ಕರ್ತನು ಹೇಳುತ್ತಾನೆ; ಕೆಲಸ ಮಾಡಿರಿ; ನಾನು ನಿಮ್ಮ ಸಂಗಡ ಇದ್ದೇನೆಂದು ಸೈನ್ಯ ಗಳ ಕರ್ತನು ಹೇಳುತ್ತಾನೆ.
5. ನೀವು ಐಗುಪ್ತದೊಳ ಗಿಂದ ಹೊರಗೆ ಬಂದಾಗ ನಾನು ನಿಮ್ಮ ಸಂಗಡ ಒಡಂಬಡಿಕೆ ಮಾಡಿದ ವಾಕ್ಯದ ಪ್ರಕಾರ ನನ್ನ ಆತ್ಮವು ನಿಮ್ಮ ಮಧ್ಯದಲ್ಲಿ ನಿಲ್ಲುತ್ತದೆ; ನೀವು ಭಯಪಡ ಬೇಡಿರಿ.
6. ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ, ಇನ್ನು ಒಂದು ಸಾರಿ ಕೊಂಚ ಕಾಲವಾದ ಮೇಲೆ ನಾನು ಆಕಾಶಗಳನ್ನೂ ಭೂಮಿಯನ್ನೂ ಸಮುದ್ರ ವನ್ನೂ ಒಣಗಿದ ನೆಲವನ್ನೂ ಕದಲಿಸುತ್ತೇನೆ.
7. ಎಲ್ಲಾ ಜನಾಂಗಗಳನ್ನು ಅದುರಿಸುತ್ತೇನೆ; ಎಲ್ಲಾ ಜನಾಂಗಗಳ ಇಷ್ಟವಸ್ತುಗಳು ಬಂದು ಒದಗಲು ಈ ಆಲಯವನ್ನು ಮಹಿಮೆಯಿಂದ ತುಂಬಿಸುತ್ತೇನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
8. ಬೆಳ್ಳಿಯು ನನ್ನದು, ಚಿನ್ನವು ನನ್ನದು ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ.
9. ಈ ಆಲಯದ ಮುಂದಿನ ಮಹಿಮೆಯು ಹಿಂದಿನ ಮಹಿಮೆಗಿಂತ ವಿಶೇಷವಾಗಿರುವದು ಎಂದು ಸೈನ್ಯಗಳ ಕರ್ತನು ಹೇಳು ತ್ತಾನೆ; ಈ ಸ್ಥಳದಲ್ಲಿ ಸಮಾಧಾನ ಕೊಡುವೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
10. ದಾರ್ಯಾವೆಷನ ಎರಡನೇ ವರುಷದಲ್ಲಿ ಒಂಭ ತ್ತನೇ ತಿಂಗಳಿನ, ಇಪ್ಪತ್ತನಾಲ್ಕನೆ ದಿನದಲ್ಲಿ ಕರ್ತನ ವಾಕ್ಯವು ಪ್ರವಾದಿಯಾದ ಹಗ್ಗಾಯನಿಂದ ಉಂಟಾಗಿ ಹೇಳಿದ್ದೇನಂದರೆ,
11. ಸೈನ್ಯಗಳ ಕರ್ತನು ಹೇಳುವದೇ ನಂದರೆ--ನ್ಯಾಯಪ್ರಮಾಣದ ವಿಷಯವಾಗಿ ಯಾಜಕ ರಿಗೆ--
12. ಒಬ್ಬನು ತನ್ನ ವಸ್ತ್ರದ ಸೆರಗಿನಲ್ಲಿ ಪರಿಶುದ್ಧ ಮಾಂಸವನ್ನು ಹೊತ್ತು, ತನ್ನ ಸೆರಗಿನಿಂದ ರೊಟ್ಟಿಯ ನ್ನಾದರೂ ಬೇಯಿಸಿದ್ದನ್ನಾದರೂ ದ್ರಾಕ್ಷಾರಸವನ್ನಾ ದರೂ ಎಣ್ಣೆಯನ್ನಾದರೂ ಯಾವ ವಿಧದ ಆಹಾರವ ನ್ನಾದರೂ ಮುಟ್ಟಿದರೆ ಅದು ಪರಿಶುದ್ಧವಾಗುವದೋ ಕೇಳು ಅಂದನು. ಯಾಜಕರು--ಇಲ್ಲವೆಂದು ಉತ್ತರ ಕೊಟ್ಟರು.
13. ಆಗ ಹಗ್ಗಾಯನು--ಆದರೆ ಹೆಣದಿಂದ ಅಶುದ್ಧನಾದವನು, ಇವುಗಳಲ್ಲಿ ಯಾವದನ್ನಾದರೂ ಮುಟ್ಟಿದರೆ, ಅಶುದ್ಧವಾಗುವದೋ ಅಂದನು. ಯಾಜ ಕರು ಉತ್ತರ ಕೊಟ್ಟು--ಅಶುದ್ದವಾಗುವದು ಅಂದರು.
14. ಆಗ ಹಗ್ಗಾಯನು ಉತ್ತರಕೊಟ್ಟು ಹೇಳಿದ್ದೇನಂದರೆ --ಈ ಜನರೂ ಈ ಜನಾಂಗವೂ ನನ್ನ ಮುಂದೆ ಹೀಗೆಯೇ ಇದ್ದಾರೆ ಎಂದು ಕರ್ತನು ಅನ್ನುತ್ತಾನೆ; ಅವರ ಕೈಕೆಲಸಗಳೆಲ್ಲಾ ಹೀಗೆಯೇ; ಅವರು ಅರ್ಪಿಸು ವಂಥದ್ದು ಅಶುದ್ಧವೇ.
15. ಈಗ ಚೆನ್ನಾಗಿ ಯೋಚಿಸಿ ಕೊಳ್ಳಿರಿ; ಇಂದಿನಿಂದ ಇದಕ್ಕೆ ಮುಂಚೆ ಕರ್ತನ ಆಲಯದಲ್ಲಿ ಕಲ್ಲಿನ ಮೇಲೆ ಕಲ್ಲು ಇಡಲ್ಪಡುವದಕ್ಕಿಂತ ಕ್ಷಿುುಂಚೆ
16. ಆ ದಿವಸಗಳು ಇದ್ದದ್ದು ಮೊದಲುಗೊಂಡು ಒಬ್ಬನು ಇಪ್ಪತ್ತು ಸೇರಿನ ರಾಶಿಗೆ ಬಂದಾಗ ಹತ್ತು ಸೇರು ಮಾತ್ರವಾಗಿತ್ತು; ಒಬ್ಬನು ಐವತ್ತು ಪಾತ್ರೆಗಳನ್ನು ತುಂಬಿ ಸುವದಕ್ಕೆ ತೊಟ್ಟಿಗೆ ಬಂದಾಗ ಇಪ್ಪತ್ತು ಮಾತ್ರ ದೊರೆ ಯುತ್ತಿತ್ತಷ್ಟೆ.
17. ನಾನು ನಿಮ್ಮನ್ನು ಸಸ್ಯ ನಾಶದಿಂದಲೂ ಬಿರುಗಾಳಿಯಿಂದಲೂ ಕಲ್ಮಳೆಯಿಂದಲೂ ನಿಮ್ಮ ಕೈ ದುಡಿತಗಳನ್ನೆಲ್ಲಾ ಹೊಡೆದೆನು; ಅದರೂ ನೀವು ನನ್ನ ಕಡೆಗೆ ತಿರುಗಲಿಲ್ಲವೆಂದು ಕರ್ತನು ಅನ್ನುತ್ತಾನೆ.
18. ಚೆನ್ನಾಗಿ ಯೋಚಿಸಿಕೊಳ್ಳಿರಿ; ಇಂದಿನಿಂದ ಇದಕ್ಕೆ ಮುಂಚೆ ಒಂಭತ್ತನೇ ತಿಂಗಳಿನ ಇಪ್ಪತ್ತ ನಾಲ್ಕನೆಯ ದಿನದಲ್ಲಿ ಕರ್ತನ ಮಂದಿರದ ಅಸ್ತಿವಾರವು ಹಾಕಲ್ಪ ಟ್ಟಂದಿನಿಂದ ಯೋಚಿಸಿ ಕೊಳ್ಳಿರಿ.
19. ಬೀಜವು ಇನ್ನು ಕಣಜದಲ್ಲಿ ಉಂಟೋ? ಮತ್ತು ದ್ರಾಕ್ಷೆ, ಅಂಜೂರ, ದಾಳಿಂಬರ, ಎಣ್ಣೆ ಮರಗಳು ಇನ್ನು ಫಲಿಸಲಿಲ್ಲ ವಲ್ಲಾ. ಈ ದಿನವು ಮೊದಲುಗೊಂಡು ನಿಮ್ಮನ್ನು ಆಶೀರ್ವದಿಸುವೆನು.
20. ಎರಡನೇ ಸಾರಿ ಕರ್ತನ ವಾಕ್ಯವು ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಹಗ್ಗಾಯನಿಗೆ ಉಂಟಾ ಯಿತು.
21. ಹೇಗಂದರೆ, ಯೆಹೂದದ ಅಧಿಪತಿಯಾದ ಜೆರುಬ್ಬಾಬೆಲನಿಗೆ ನೀನು ಹೇಳತಕ್ಕದ್ದೇನಂದರೆ--ನಾನು ಆಕಾಶಗಳನ್ನೂ ಭೂಮಿಯನ್ನೂ ಕದಲಿಸುವೆನು.
22. ರಾಜ್ಯಗಳ ಸಿಂಹಾಸನವನ್ನು ಕೆಡವಿಹಾಕುವೆನು; ಅನ್ಯ ಜನಾಂಗಗಳ ರಾಜ್ಯಗಳ ಬಲವನ್ನು ನಾಶಮಾಡುವೆನು, ರಥಗಳನ್ನೂ ಅವುಗಳಲ್ಲಿ ಸವಾರಿ ಮಾಡುವವರನ್ನೂ ಕೆಡವಿಹಾಕುವೆನು; ಕುದುರೆಗಳೂ ಅದರ ಸವಾರರೂ ಪ್ರತಿಯೊಬ್ಬನೂ ತನ್ನ ಸಹೋದರನ ಕತ್ತಿಯಿಂದ ಬೀಳು ವನು.
23. ಸೈನ್ಯಗಳ ಕರ್ತನು ಅನ್ನುತ್ತಾನೆ--ಆ ದಿನದಲ್ಲಿ ಶೆಯಲ್ತೀಯೇಲನ ಮಗನಾದ ನನ್ನ ಸೇವಕನಾದ ಜೆರು ಬ್ಬಾಬೆಲನೇ, ಆ ದಿನದಲ್ಲಿ ನಾನು ನಿನ್ನನ್ನು ತೆಗೆದು ಕೊಂಡು ಮುದ್ರೆಯ ಹಾಗೆ ಇಡುವೆನು; ನಿನ್ನನ್ನು ನಾನೇ ಆದುಕೊಂಡಿದ್ದೇನೆಂದು ಸೈನ್ಯಗಳ ಕರ್ತನು ಅನ್ನುತ್ತಾನೆ.

ಟಿಪ್ಪಣಿಗಳು

No Verse Added

ಒಟ್ಟು 2 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 2 / 2
1 2
ಹಗ್ಗಾಯ 2:1
1 ಏಳನೆಯ ತಿಂಗಳಿನಲ್ಲಿ, ತಿಂಗಳಿನ ಇಪ್ಪ ತ್ತೊಂದನೆಯ ದಿನದಲ್ಲಿ ಕರ್ತನ ವಾಕ್ಯವು ಪ್ರವಾದಿಯಾದ ಹಗ್ಗಾಯನ ಮೂಲಕ ಉಂಟಾಯಿತು; ಏನಂದರೆ-- 2 ಯೆಹೂದದ ಅಧಿಪತಿಯಾದ ಶೆಯಲ್ತೀ ಯೇಲನ ಮಗನಾದ ಜೆರುಬ್ಬಾಬೆಲನಿಗೂ ಪ್ರಧಾನ ಯಾಜಕನಾದ ಯೆಹೋಚಾದಾಕನ ಮಗನಾದ ಯೆಹೋಶುವನಿಗೂ ಜನರಲ್ಲಿ ಉಳಿದವರಿಗೂ ನೀನು ಹೇಳತಕ್ಕದ್ದೇನಂದರೆ-- 3 ಈ ಆಲಯವನ್ನು ಅದರ ಪೂರ್ವದ ಮಹಿಮೆಯಲ್ಲಿ ನೋಡಿದವರೊಳಗೆ ಉಳಿದ ವರು ನಿಮ್ಮಲ್ಲಿ ಯಾರು? ಈಗ ಅದನ್ನು ಹೇಗೆ ನೋಡು ತ್ತೀರಿ? ಇದು ನಿಮ್ಮ ಕಣ್ಣುಗಳಿಗೆ ಅದರ ಹೋಲಿಕೆಯು ಏನೂ ಇಲ್ಲದ ಹಾಗೆ ತೋರು ತ್ತದಲ್ಲವೋ? 4 ಆದಾಗ್ಯೂ ಈಗ ಕರ್ತನು ಹೇಳುತ್ತಾನೆ --ಜೆರುಬ್ಬಾಬೆಲನೇ, ಬಲವಾಗಿರು; ಪ್ರಧಾನ ಯಾಜಕ ನಾದ ಯೆಹೋಚಾದಾಕನ ಮಗನಾದ ಯೆಹೋ ಶುವನೇ, ಬಲವಾಗಿರು; ದೇಶದ ಜನರೆಲ್ಲರೇ, ಬಲ ವಾಗಿರ್ರಿ ಎಂದು ಕರ್ತನು ಹೇಳುತ್ತಾನೆ; ಕೆಲಸ ಮಾಡಿರಿ; ನಾನು ನಿಮ್ಮ ಸಂಗಡ ಇದ್ದೇನೆಂದು ಸೈನ್ಯ ಗಳ ಕರ್ತನು ಹೇಳುತ್ತಾನೆ. 5 ನೀವು ಐಗುಪ್ತದೊಳ ಗಿಂದ ಹೊರಗೆ ಬಂದಾಗ ನಾನು ನಿಮ್ಮ ಸಂಗಡ ಒಡಂಬಡಿಕೆ ಮಾಡಿದ ವಾಕ್ಯದ ಪ್ರಕಾರ ನನ್ನ ಆತ್ಮವು ನಿಮ್ಮ ಮಧ್ಯದಲ್ಲಿ ನಿಲ್ಲುತ್ತದೆ; ನೀವು ಭಯಪಡ ಬೇಡಿರಿ. 6 ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ, ಇನ್ನು ಒಂದು ಸಾರಿ ಕೊಂಚ ಕಾಲವಾದ ಮೇಲೆ ನಾನು ಆಕಾಶಗಳನ್ನೂ ಭೂಮಿಯನ್ನೂ ಸಮುದ್ರ ವನ್ನೂ ಒಣಗಿದ ನೆಲವನ್ನೂ ಕದಲಿಸುತ್ತೇನೆ. 7 ಎಲ್ಲಾ ಜನಾಂಗಗಳನ್ನು ಅದುರಿಸುತ್ತೇನೆ; ಎಲ್ಲಾ ಜನಾಂಗಗಳ ಇಷ್ಟವಸ್ತುಗಳು ಬಂದು ಒದಗಲು ಈ ಆಲಯವನ್ನು ಮಹಿಮೆಯಿಂದ ತುಂಬಿಸುತ್ತೇನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ. 8 ಬೆಳ್ಳಿಯು ನನ್ನದು, ಚಿನ್ನವು ನನ್ನದು ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ. 9 ಈ ಆಲಯದ ಮುಂದಿನ ಮಹಿಮೆಯು ಹಿಂದಿನ ಮಹಿಮೆಗಿಂತ ವಿಶೇಷವಾಗಿರುವದು ಎಂದು ಸೈನ್ಯಗಳ ಕರ್ತನು ಹೇಳು ತ್ತಾನೆ; ಈ ಸ್ಥಳದಲ್ಲಿ ಸಮಾಧಾನ ಕೊಡುವೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ. 10 ದಾರ್ಯಾವೆಷನ ಎರಡನೇ ವರುಷದಲ್ಲಿ ಒಂಭ ತ್ತನೇ ತಿಂಗಳಿನ, ಇಪ್ಪತ್ತನಾಲ್ಕನೆ ದಿನದಲ್ಲಿ ಕರ್ತನ ವಾಕ್ಯವು ಪ್ರವಾದಿಯಾದ ಹಗ್ಗಾಯನಿಂದ ಉಂಟಾಗಿ ಹೇಳಿದ್ದೇನಂದರೆ, 11 ಸೈನ್ಯಗಳ ಕರ್ತನು ಹೇಳುವದೇ ನಂದರೆ--ನ್ಯಾಯಪ್ರಮಾಣದ ವಿಷಯವಾಗಿ ಯಾಜಕ ರಿಗೆ-- 12 ಒಬ್ಬನು ತನ್ನ ವಸ್ತ್ರದ ಸೆರಗಿನಲ್ಲಿ ಪರಿಶುದ್ಧ ಮಾಂಸವನ್ನು ಹೊತ್ತು, ತನ್ನ ಸೆರಗಿನಿಂದ ರೊಟ್ಟಿಯ ನ್ನಾದರೂ ಬೇಯಿಸಿದ್ದನ್ನಾದರೂ ದ್ರಾಕ್ಷಾರಸವನ್ನಾ ದರೂ ಎಣ್ಣೆಯನ್ನಾದರೂ ಯಾವ ವಿಧದ ಆಹಾರವ ನ್ನಾದರೂ ಮುಟ್ಟಿದರೆ ಅದು ಪರಿಶುದ್ಧವಾಗುವದೋ ಕೇಳು ಅಂದನು. ಯಾಜಕರು--ಇಲ್ಲವೆಂದು ಉತ್ತರ ಕೊಟ್ಟರು. 13 ಆಗ ಹಗ್ಗಾಯನು--ಆದರೆ ಹೆಣದಿಂದ ಅಶುದ್ಧನಾದವನು, ಇವುಗಳಲ್ಲಿ ಯಾವದನ್ನಾದರೂ ಮುಟ್ಟಿದರೆ, ಅಶುದ್ಧವಾಗುವದೋ ಅಂದನು. ಯಾಜ ಕರು ಉತ್ತರ ಕೊಟ್ಟು--ಅಶುದ್ದವಾಗುವದು ಅಂದರು. 14 ಆಗ ಹಗ್ಗಾಯನು ಉತ್ತರಕೊಟ್ಟು ಹೇಳಿದ್ದೇನಂದರೆ --ಈ ಜನರೂ ಈ ಜನಾಂಗವೂ ನನ್ನ ಮುಂದೆ ಹೀಗೆಯೇ ಇದ್ದಾರೆ ಎಂದು ಕರ್ತನು ಅನ್ನುತ್ತಾನೆ; ಅವರ ಕೈಕೆಲಸಗಳೆಲ್ಲಾ ಹೀಗೆಯೇ; ಅವರು ಅರ್ಪಿಸು ವಂಥದ್ದು ಅಶುದ್ಧವೇ. 15 ಈಗ ಚೆನ್ನಾಗಿ ಯೋಚಿಸಿ ಕೊಳ್ಳಿರಿ; ಇಂದಿನಿಂದ ಇದಕ್ಕೆ ಮುಂಚೆ ಕರ್ತನ ಆಲಯದಲ್ಲಿ ಕಲ್ಲಿನ ಮೇಲೆ ಕಲ್ಲು ಇಡಲ್ಪಡುವದಕ್ಕಿಂತ ಕ್ಷಿುುಂಚೆ 16 ಆ ದಿವಸಗಳು ಇದ್ದದ್ದು ಮೊದಲುಗೊಂಡು ಒಬ್ಬನು ಇಪ್ಪತ್ತು ಸೇರಿನ ರಾಶಿಗೆ ಬಂದಾಗ ಹತ್ತು ಸೇರು ಮಾತ್ರವಾಗಿತ್ತು; ಒಬ್ಬನು ಐವತ್ತು ಪಾತ್ರೆಗಳನ್ನು ತುಂಬಿ ಸುವದಕ್ಕೆ ತೊಟ್ಟಿಗೆ ಬಂದಾಗ ಇಪ್ಪತ್ತು ಮಾತ್ರ ದೊರೆ ಯುತ್ತಿತ್ತಷ್ಟೆ. 17 ನಾನು ನಿಮ್ಮನ್ನು ಸಸ್ಯ ನಾಶದಿಂದಲೂ ಬಿರುಗಾಳಿಯಿಂದಲೂ ಕಲ್ಮಳೆಯಿಂದಲೂ ನಿಮ್ಮ ಕೈ ದುಡಿತಗಳನ್ನೆಲ್ಲಾ ಹೊಡೆದೆನು; ಅದರೂ ನೀವು ನನ್ನ ಕಡೆಗೆ ತಿರುಗಲಿಲ್ಲವೆಂದು ಕರ್ತನು ಅನ್ನುತ್ತಾನೆ. 18 ಚೆನ್ನಾಗಿ ಯೋಚಿಸಿಕೊಳ್ಳಿರಿ; ಇಂದಿನಿಂದ ಇದಕ್ಕೆ ಮುಂಚೆ ಒಂಭತ್ತನೇ ತಿಂಗಳಿನ ಇಪ್ಪತ್ತ ನಾಲ್ಕನೆಯ ದಿನದಲ್ಲಿ ಕರ್ತನ ಮಂದಿರದ ಅಸ್ತಿವಾರವು ಹಾಕಲ್ಪ ಟ್ಟಂದಿನಿಂದ ಯೋಚಿಸಿ ಕೊಳ್ಳಿರಿ. 19 ಬೀಜವು ಇನ್ನು ಕಣಜದಲ್ಲಿ ಉಂಟೋ? ಮತ್ತು ದ್ರಾಕ್ಷೆ, ಅಂಜೂರ, ದಾಳಿಂಬರ, ಎಣ್ಣೆ ಮರಗಳು ಇನ್ನು ಫಲಿಸಲಿಲ್ಲ ವಲ್ಲಾ. ಈ ದಿನವು ಮೊದಲುಗೊಂಡು ನಿಮ್ಮನ್ನು ಆಶೀರ್ವದಿಸುವೆನು. 20 ಎರಡನೇ ಸಾರಿ ಕರ್ತನ ವಾಕ್ಯವು ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಹಗ್ಗಾಯನಿಗೆ ಉಂಟಾ ಯಿತು. 21 ಹೇಗಂದರೆ, ಯೆಹೂದದ ಅಧಿಪತಿಯಾದ ಜೆರುಬ್ಬಾಬೆಲನಿಗೆ ನೀನು ಹೇಳತಕ್ಕದ್ದೇನಂದರೆ--ನಾನು ಆಕಾಶಗಳನ್ನೂ ಭೂಮಿಯನ್ನೂ ಕದಲಿಸುವೆನು. 22 ರಾಜ್ಯಗಳ ಸಿಂಹಾಸನವನ್ನು ಕೆಡವಿಹಾಕುವೆನು; ಅನ್ಯ ಜನಾಂಗಗಳ ರಾಜ್ಯಗಳ ಬಲವನ್ನು ನಾಶಮಾಡುವೆನು, ರಥಗಳನ್ನೂ ಅವುಗಳಲ್ಲಿ ಸವಾರಿ ಮಾಡುವವರನ್ನೂ ಕೆಡವಿಹಾಕುವೆನು; ಕುದುರೆಗಳೂ ಅದರ ಸವಾರರೂ ಪ್ರತಿಯೊಬ್ಬನೂ ತನ್ನ ಸಹೋದರನ ಕತ್ತಿಯಿಂದ ಬೀಳು ವನು. 23 ಸೈನ್ಯಗಳ ಕರ್ತನು ಅನ್ನುತ್ತಾನೆ--ಆ ದಿನದಲ್ಲಿ ಶೆಯಲ್ತೀಯೇಲನ ಮಗನಾದ ನನ್ನ ಸೇವಕನಾದ ಜೆರು ಬ್ಬಾಬೆಲನೇ, ಆ ದಿನದಲ್ಲಿ ನಾನು ನಿನ್ನನ್ನು ತೆಗೆದು ಕೊಂಡು ಮುದ್ರೆಯ ಹಾಗೆ ಇಡುವೆನು; ನಿನ್ನನ್ನು ನಾನೇ ಆದುಕೊಂಡಿದ್ದೇನೆಂದು ಸೈನ್ಯಗಳ ಕರ್ತನು ಅನ್ನುತ್ತಾನೆ.
ಒಟ್ಟು 2 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 2 / 2
1 2
Common Bible Languages
West Indian Languages
×

Alert

×

kannada Letters Keypad References