ಪವಿತ್ರ ಬೈಬಲ್

ಬೈಬಲ್ ಸೊಸೈಟಿ ಆಫ್ ಇಂಡಿಯಾ (BSI)
ಆದಿಕಾಂಡ
1. ಇಸ್ರಾಯೇಲನು ತನಗಿದ್ದದ್ದನ್ನೆಲ್ಲಾ ತಕ್ಕೊಂಡು ಬೇರ್ಷೆಬಕ್ಕೆ ಬಂದು ತನ್ನ ತಂದೆಯಾದ ಇಸಾಕನ ದೇವರಿಗೆ ಬಲಿಗಳನ್ನು ಅರ್ಪಿಸಿ ದನು.
2. ದೇವರು ಇಸ್ರಾಯೇಲನಿಗೆ ರಾತ್ರಿ ದರ್ಶನ ದಲ್ಲಿ ಮಾತನಾಡಿ--ಯಾಕೋಬನೇ, ಯಾಕೋಬನೇ ಅಂದನು. ಅದಕ್ಕವನು--ಇಗೋ, ಇದ್ದೇನೆ ಅಂದನು.
3. ಆತನು ಅವನಿಗೆ--ನಿನ್ನ ತಂದೆಯ ದೇವರಾಗಿರುವ ದೇವರು ನಾನೇ. ನೀನು ಐಗುಪ್ತಕ್ಕೆ ಇಳಿದು ಹೋಗು ವದಕ್ಕೆ ಭಯಪಡಬೇಡ; ಯಾಕಂದರೆ ಅಲ್ಲಿ ನಾನು ನಿನ್ನನ್ನು ದೊಡ್ಡಜನಾಂಗವಾಗ ಮಾಡುವೆನು.
4. ನಾನು ನಿನ್ನ ಸಂಗಡ ಐಗುಪ್ತಕ್ಕೆ ಹೋಗುವೆನು. ನಾನೇ ನಿಶ್ಚಯವಾಗಿ ನಿನ್ನನ್ನು ಮೇಲಕ್ಕೆ (ಕಾನಾನಿಗೆ) ತಿರಿಗಿ ಬರಮಾಡುವೆನು. ಯೋಸೇಫನು ನಿನ್ನ ಕಣ್ಣುಗಳ ಮೇಲೆ ತನ್ನ ಕೈ ಇಡುವನು ಅಂದನು.
5. ಆಗ ಯಾಕೋಬನು ಎದ್ದು ಬೇರ್ಷೆಬದಿಂದ ಹೊರಟನು. ಇಸ್ರಾಯೇಲನ ಮಕ್ಕಳು ತಮ್ಮ ತಂದೆಯಾದ ಯಾಕೋಬನನ್ನೂ ತಮ್ಮ ಚಿಕ್ಕವರನ್ನೂ ತಮ್ಮ ಹೆಂಡತಿಯರನ್ನೂ ಫರೋಹನು ಕಳುಹಿಸಿದ ಬಂಡಿಗಳ ಮೇಲೆ ಏರಿಸಿಕೊಂಡು ಹೋದರು.
6. ಅವರು ತಮ್ಮ ದನಗಳನ್ನೂ ಕಾನಾನ್ ದೇಶದಲ್ಲಿ ತಾವು ಸಂಪಾದಿಸಿದ ತಮ್ಮ ಸಂಪತ್ತನ್ನೂ ತಕ್ಕೊಂಡು ಐಗುಪ್ತಕ್ಕೆ ಬಂದರು. ಯಾಕೋಬನು ತನ್ನ ಎಲ್ಲಾ ಸಂತತಿಯೊಂದಿಗೆ ಬಂದನು.
7. ತನ್ನ ಕುಮಾರ ರನ್ನೂ ಕುಮಾರರ ಕುಮಾರರನ್ನೂ ಕುಮಾರ್ತೆಯರನ್ನೂ ಕುಮಾರರ ಕುಮಾರ್ತೆಯರನ್ನೂ ಅಂತೂ ತನ್ನ ಸಂತತಿ ಯನ್ನೆಲ್ಲಾ ತನ್ನೊಂದಿಗೆ ಐಗುಪ್ತಕ್ಕೆ ಕರಕೊಂಡು ಬಂದನು.
8. ಐಗುಪ್ತಕ್ಕೆ ಬಂದ ಇಸ್ರಾಯೇಲನ ಮಕ್ಕಳ ಹೆಸರು ಗಳು ಯಾವವಂದರೆ, ಯಾಕೋಬನು ಮತ್ತು ಅವನ ಮಕ್ಕಳು: ಯಾಕೋಬನ ಚೊಚ್ಚಲ ಮಗನಾದ ರೂಬೇ ನನು.
9. ರೂಬೇನನ ಕುಮಾರರು: ಹನೋಕ್ ಫಲ್ಲೂ ಹೆಚ್ರೋನ್ ಕರ್ಮಿ ಎಂಬವರು.
10. ಸಿಮೆಯೋನನ ಮಕ್ಕಳು: ಯೆಮೂವೇಲ್ ಯಾವಿಾನ್ ಓಹದ್ ಯಾಕೀನ್ ಚೋಹರ್ ಕಾನಾನ್ಯಳ ಮಗನಾದ ಸೌಲ ಎಂಬವರು.
11. ಲೇವಿಯ ಮಕ್ಕಳು: ಗೆರ್ಷೋನ್ ಕೆಹಾತ್ ಮೆರಾರೀ ಎಂಬವರು.
12. ಯೆಹೂದನ ಮಕ್ಕಳು: ಏರ್ ಓನಾನ್ ಶೇಲಾಹ ಪೆರೆಚ್ ಜೆರಹ. ಆದರೆ ಏರನೂ ಓನಾನನೂ ಕಾನಾನ್ ದೇಶದಲ್ಲಿ ಸತ್ತರು. ಪೆರೆಚನ ಮಕ್ಕಳು: ಹೆಚ್ರೋನ್ ಹಾಮೂಲ್ ಎಂಬವರು.
13. ಇಸ್ಸಾಕಾರನ ಮಕ್ಕಳು: ತೋಲಾ ಪುವ್ವಾ ಯೋಬ್ ಶಿಮ್ರೋನ್ ಎಂಬವರು.
14. ಜೆಬು ಲೂನನ ಮಕ್ಕಳು: ಸೆರೆದ್ ಏಲೋನ್ ಯಹ್ಲೇಲ್ ಎಂಬವರು.
15. ಇವರು ಲೇಯಳ ಮಕ್ಕಳು. ಆಕೆಯು ಇವರನ್ನೂ ತನ್ನ ಮಗಳಾದ ದೀನಳನ್ನೂ ಪದ್ದನ್ ಅರಾಮಿನಲ್ಲಿ ಯಾಕೋಬನಿಗೆ ಹೆತ್ತಳು. ಅವನ ಕುಮಾರರೂ ಕುಮಾರ್ತೆಯರೂ ಎಲ್ಲಾ ಮೂವತ್ತು ಮೂರು ಮಂದಿ.
16. ಗಾದನ ಮಕ್ಕಳು: ಚಿಪ್ಯೋನ್ ಹಗ್ಗೀ ಶೂನೀ ಎಚ್ಬೋನ್ ಏರೀ ಅರೋದೀ ಅರೇಲೀ ಎಂಬವರು.
17. ಆಶೇರನ ಮಕ್ಕಳು: ಇಮ್ನಾ ಇಷ್ವಾ ಇಷ್ವೀ ಬೆರೀಗಾ ಅವರ ಸಹೋದರಿಯಾದ ಸೆರಹ; ಬೆರೀಗಾ ಕುಮಾರರು: ಹೆಬೆರ್ ಮಲ್ಕಿಯೇಲ್ ಎಂಬ ವರು.
18. ಲಾಬಾನನು ತನ್ನ ಮಗಳಾದ ಲೇಯಳಿಗೆ ಕೊಟ್ಟ ಜಿಲ್ಪಳ ಮಕ್ಕಳು ಇವರೇ. ಹದಿನಾರು ಮಂದಿಯಾಗಿದ್ದ ಇವರನ್ನು ಆಕೆಯು ಯಾಕೋಬನಿಗೆ ಹೆತ್ತಳು.
19. ಯಾಕೋಬನ ಹೆಂಡತಿಯಾದ ರಾಹೇಲಳ ಕುಮಾರರು: ಯೋಸೇಫ್ ಬೆನ್ಯಾವಿಾನ್ ಎಂಬವರು.
20. ಯೋಸೇಫನಿಗೆ ಐಗುಪ್ತ ದೇಶದಲ್ಲಿ ಮಕ್ಕಳು ಹುಟ್ಟಿದರು: ಓನಿನ ಯಾಜಕನಾಗಿರುವ ಪೋಟೀಫೆರನ ಮಗಳಾದ ಆಸನತಳು ಮನಸ್ಸೆಯನ್ನೂ ಎಫ್ರಾಯಾಮ ನನ್ನೂ ಅವನಿಗೆ ಹೆತ್ತಳು.
21. ಬೆನ್ಯಾವಿಾನನ ಕುಮಾ ರರು: ಬಿಳಾ ಬೆಕೆರ್ ಅಶ್ಬೇಲ್ ಗೇರಾ ನಾಮಾನ್ ಏಹೀರೋಷ್ ಮುಪ್ಪೀಮ್ ಹುಪ್ಪೀಮ್ ಆರ್ದ ಎಂಬವರು.
22. ಇವರು ಯಾಕೋಬನಿಗೆ ಹುಟ್ಟಿದ ರಾಹೇಲಳ ಕುಮಾರರು. ಎಲ್ಲಾ ಕೂಡಿ ಹದಿನಾಲ್ಕು ಮಂದಿ.
23. ದಾನನ ಮಗನು ಹುಶೀಮನು.
24. ನಫ್ತಾ ಲಿಯ ಕುಮಾರರು: ಯಹೇಲ್ ಗೂನೀ ಯೇಚೆರ್ ಶಿಲ್ಲೇಮ್ ಎಂಬವರು.
25. ಲಾಬಾನನು ತನ್ನ ಮಗಳಾದ ರಾಹೇಲಳಿಗೆ ಕೊಟ್ಟಿದ್ದ ಬಿಲ್ಹಳ ಕುಮಾರರು ಇವರಾ ಗಿದ್ದರು. ಇವರನ್ನು ಆಕೆಯು ಯಾಕೋಬನಿಗೆ ಹೆತ್ತಳು. ಇವರು ಎಲ್ಲಾ ಕೂಡಿ ಏಳು ಮಂದಿ.
26. ಯಾಕೋಬನ ಕುಮಾರರ ಹೆಂಡತಿಯರ ಹೊರ ತಾಗಿ ಯಾಕೋಬನ ಸಂಗಡ ಐಗುಪ್ತಕ್ಕೆ ಬಂದವರೆಲ್ಲಾ ಅವನಿಂದ ಹುಟ್ಟಿದವರು. ಎಲ್ಲಾ ಕೂಡಿ ಅರವತ್ತಾರು ಜನರು.
27. ಇದಲ್ಲದೆ ಐಗುಪ್ತದಲ್ಲಿ ಯೋಸೇಫನಿಗೆ ಇಬ್ಬರು ಕುಮಾರರು ಹುಟ್ಟಿದರು. ಯಾಕೋಬನ ಮನೆಯವರಾಗಿ ಐಗುಪ್ತಕ್ಕೆ ಬಂದ ಜನರೆಲ್ಲಾ ಸೇರಿ ಒಟ್ಟು ಎಪ್ಪತ್ತು ಮಂದಿ.
28. ಇದಲ್ಲದೆ ಗೋಷೆನಿಗೆ ಮಾರ್ಗವನ್ನು ತೋರಿ ಸುವ ಹಾಗೆ ಅವನು ಯೆಹೂದನನ್ನು ತನ್ನ ಮುಂದಾಗಿ ಯೋಸೇಫನ ಬಳಿಗೆ ಕಳುಹಿಸಿದನು. ಅವರು ಗೋಷೆನ್ ದೇಶಕ್ಕೆ ಬಂದರು.
29. ಆಗ ಯೋಸೇಫನು ತನ್ನ ರಥವನ್ನು ಸಿದ್ಧಮಾಡಿಕೊಂಡು ತನ್ನ ತಂದೆಯಾದ ಇಸ್ರಾಯೇಲನಿಗೆ ಎದುರಾಗಿ ಗೋಷೆನಿಗೆ ಹೋಗಿ ಅವನನ್ನು ಸಂಧಿಸಿ ಅವನ ಕೊರಳನ್ನು ಅಪ್ಪಿಕೊಂಡು ಬಹಳ ಹೊತ್ತಿನ ವರೆಗೆ ಅತ್ತನು.
30. ಆಗ ಇಸ್ರಾಯೇ ಲನು ಯೋಸೇಫನಿಗೆ--ನಾನು ನಿನ್ನ ಮುಖವನ್ನು ಕಂಡು ನೀನು ಇನ್ನೂ ಜೀವದಿಂದಿರುವದನ್ನು ತಿಳು ಕೊಂಡದ್ದರಿಂದ ಸಂತೃಪ್ತನಾಗಿ ಸಾಯುವೆನು ಎಂದು ಹೇಳಿದನು.
31. ಯೋಸೇಫನು ತನ್ನ ಸಹೋದರರಿಗೂ ತನ್ನ ತಂದೆಯ ಮನೆಯವರಿಗೂ--ನಾನು ಹೋಗಿ ಫರೋಹನಿಗೆ--ಕಾನಾನ್ದೇಶದಲ್ಲಿದ್ದ ನನ್ನ ಸಹೋ ದರರೂ ನನ್ನ ತಂದೆಯ ಮನೆಯವರೂ ನನ್ನ ಬಳಿಗೆ ಬಂದಿದ್ದಾರೆ.
32. ಆದರೆ ಆ ಮನುಷ್ಯರು ಕುರಿಕಾಯುವವರು, ಅವರಿಗೆ ಮಂದೆಗಳು ಇವೆ; ತಮ್ಮ ಕುರಿ ದನಗಳನ್ನೂ ತಮಗಿದ್ದದ್ದೆಲ್ಲವನ್ನೂ ತಕ್ಕೊಂಡು ಬಂದಿದ್ದಾರೆ ಎಂದು ಹೇಳುವೆನು.
33. ಫರೋ ಹನು ನಿಮ್ಮನ್ನು ಕರೆಯಿಸಿ--ನಿಮ್ಮ ಕೆಲಸವೇನು ಎಂದು ಕೇಳುವನು.
34. ಗೋಷೆನ್ ದೇಶದಲ್ಲಿ ವಾಸವಾಗಿರು ವಂತೆ ನೀವು ಅವನಿಗೆ--ಚಿಕ್ಕಂದಿನಿಂದ ಇಂದಿನ ವರೆಗೂ ನಿನ್ನ ದಾಸರಾದ ನಾವೂ ನಮ್ಮ ತಂದೆಗಳೂ ಮಂದೆಯನ್ನು ಕಾಯುವವರಾಗಿದ್ದೇವೆ ಎಂದು ಹೇಳ ಬೇಕು. ಯಾಕಂದರೆ ಕುರಿಕಾಯುವವರೆಲ್ಲಾ ಐಗುಪ್ತ್ಯ ರಿಗೆ ಅಸಹ್ಯವಾಗಿದ್ದಾರೆ ಅಂದನು.

ಟಿಪ್ಪಣಿಗಳು

No Verse Added

ಒಟ್ಟು 50 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 46 / 50
ಆದಿಕಾಂಡ 46:31
1 ಇಸ್ರಾಯೇಲನು ತನಗಿದ್ದದ್ದನ್ನೆಲ್ಲಾ ತಕ್ಕೊಂಡು ಬೇರ್ಷೆಬಕ್ಕೆ ಬಂದು ತನ್ನ ತಂದೆಯಾದ ಇಸಾಕನ ದೇವರಿಗೆ ಬಲಿಗಳನ್ನು ಅರ್ಪಿಸಿ ದನು. 2 ದೇವರು ಇಸ್ರಾಯೇಲನಿಗೆ ರಾತ್ರಿ ದರ್ಶನ ದಲ್ಲಿ ಮಾತನಾಡಿ--ಯಾಕೋಬನೇ, ಯಾಕೋಬನೇ ಅಂದನು. ಅದಕ್ಕವನು--ಇಗೋ, ಇದ್ದೇನೆ ಅಂದನು. 3 ಆತನು ಅವನಿಗೆ--ನಿನ್ನ ತಂದೆಯ ದೇವರಾಗಿರುವ ದೇವರು ನಾನೇ. ನೀನು ಐಗುಪ್ತಕ್ಕೆ ಇಳಿದು ಹೋಗು ವದಕ್ಕೆ ಭಯಪಡಬೇಡ; ಯಾಕಂದರೆ ಅಲ್ಲಿ ನಾನು ನಿನ್ನನ್ನು ದೊಡ್ಡಜನಾಂಗವಾಗ ಮಾಡುವೆನು. 4 ನಾನು ನಿನ್ನ ಸಂಗಡ ಐಗುಪ್ತಕ್ಕೆ ಹೋಗುವೆನು. ನಾನೇ ನಿಶ್ಚಯವಾಗಿ ನಿನ್ನನ್ನು ಮೇಲಕ್ಕೆ (ಕಾನಾನಿಗೆ) ತಿರಿಗಿ ಬರಮಾಡುವೆನು. ಯೋಸೇಫನು ನಿನ್ನ ಕಣ್ಣುಗಳ ಮೇಲೆ ತನ್ನ ಕೈ ಇಡುವನು ಅಂದನು. 5 ಆಗ ಯಾಕೋಬನು ಎದ್ದು ಬೇರ್ಷೆಬದಿಂದ ಹೊರಟನು. ಇಸ್ರಾಯೇಲನ ಮಕ್ಕಳು ತಮ್ಮ ತಂದೆಯಾದ ಯಾಕೋಬನನ್ನೂ ತಮ್ಮ ಚಿಕ್ಕವರನ್ನೂ ತಮ್ಮ ಹೆಂಡತಿಯರನ್ನೂ ಫರೋಹನು ಕಳುಹಿಸಿದ ಬಂಡಿಗಳ ಮೇಲೆ ಏರಿಸಿಕೊಂಡು ಹೋದರು. 6 ಅವರು ತಮ್ಮ ದನಗಳನ್ನೂ ಕಾನಾನ್ ದೇಶದಲ್ಲಿ ತಾವು ಸಂಪಾದಿಸಿದ ತಮ್ಮ ಸಂಪತ್ತನ್ನೂ ತಕ್ಕೊಂಡು ಐಗುಪ್ತಕ್ಕೆ ಬಂದರು. ಯಾಕೋಬನು ತನ್ನ ಎಲ್ಲಾ ಸಂತತಿಯೊಂದಿಗೆ ಬಂದನು. 7 ತನ್ನ ಕುಮಾರ ರನ್ನೂ ಕುಮಾರರ ಕುಮಾರರನ್ನೂ ಕುಮಾರ್ತೆಯರನ್ನೂ ಕುಮಾರರ ಕುಮಾರ್ತೆಯರನ್ನೂ ಅಂತೂ ತನ್ನ ಸಂತತಿ ಯನ್ನೆಲ್ಲಾ ತನ್ನೊಂದಿಗೆ ಐಗುಪ್ತಕ್ಕೆ ಕರಕೊಂಡು ಬಂದನು. 8 ಐಗುಪ್ತಕ್ಕೆ ಬಂದ ಇಸ್ರಾಯೇಲನ ಮಕ್ಕಳ ಹೆಸರು ಗಳು ಯಾವವಂದರೆ, ಯಾಕೋಬನು ಮತ್ತು ಅವನ ಮಕ್ಕಳು: ಯಾಕೋಬನ ಚೊಚ್ಚಲ ಮಗನಾದ ರೂಬೇ ನನು. 9 ರೂಬೇನನ ಕುಮಾರರು: ಹನೋಕ್ ಫಲ್ಲೂ ಹೆಚ್ರೋನ್ ಕರ್ಮಿ ಎಂಬವರು. 10 ಸಿಮೆಯೋನನ ಮಕ್ಕಳು: ಯೆಮೂವೇಲ್ ಯಾವಿಾನ್ ಓಹದ್ ಯಾಕೀನ್ ಚೋಹರ್ ಕಾನಾನ್ಯಳ ಮಗನಾದ ಸೌಲ ಎಂಬವರು. 11 ಲೇವಿಯ ಮಕ್ಕಳು: ಗೆರ್ಷೋನ್ ಕೆಹಾತ್ ಮೆರಾರೀ ಎಂಬವರು. 12 ಯೆಹೂದನ ಮಕ್ಕಳು: ಏರ್ ಓನಾನ್ ಶೇಲಾಹ ಪೆರೆಚ್ ಜೆರಹ. ಆದರೆ ಏರನೂ ಓನಾನನೂ ಕಾನಾನ್ ದೇಶದಲ್ಲಿ ಸತ್ತರು. ಪೆರೆಚನ ಮಕ್ಕಳು: ಹೆಚ್ರೋನ್ ಹಾಮೂಲ್ ಎಂಬವರು. 13 ಇಸ್ಸಾಕಾರನ ಮಕ್ಕಳು: ತೋಲಾ ಪುವ್ವಾ ಯೋಬ್ ಶಿಮ್ರೋನ್ ಎಂಬವರು. 14 ಜೆಬು ಲೂನನ ಮಕ್ಕಳು: ಸೆರೆದ್ ಏಲೋನ್ ಯಹ್ಲೇಲ್ ಎಂಬವರು. 15 ಇವರು ಲೇಯಳ ಮಕ್ಕಳು. ಆಕೆಯು ಇವರನ್ನೂ ತನ್ನ ಮಗಳಾದ ದೀನಳನ್ನೂ ಪದ್ದನ್ ಅರಾಮಿನಲ್ಲಿ ಯಾಕೋಬನಿಗೆ ಹೆತ್ತಳು. ಅವನ ಕುಮಾರರೂ ಕುಮಾರ್ತೆಯರೂ ಎಲ್ಲಾ ಮೂವತ್ತು ಮೂರು ಮಂದಿ. 16 ಗಾದನ ಮಕ್ಕಳು: ಚಿಪ್ಯೋನ್ ಹಗ್ಗೀ ಶೂನೀ ಎಚ್ಬೋನ್ ಏರೀ ಅರೋದೀ ಅರೇಲೀ ಎಂಬವರು. 17 ಆಶೇರನ ಮಕ್ಕಳು: ಇಮ್ನಾ ಇಷ್ವಾ ಇಷ್ವೀ ಬೆರೀಗಾ ಅವರ ಸಹೋದರಿಯಾದ ಸೆರಹ; ಬೆರೀಗಾ ಕುಮಾರರು: ಹೆಬೆರ್ ಮಲ್ಕಿಯೇಲ್ ಎಂಬ ವರು. 18 ಲಾಬಾನನು ತನ್ನ ಮಗಳಾದ ಲೇಯಳಿಗೆ ಕೊಟ್ಟ ಜಿಲ್ಪಳ ಮಕ್ಕಳು ಇವರೇ. ಹದಿನಾರು ಮಂದಿಯಾಗಿದ್ದ ಇವರನ್ನು ಆಕೆಯು ಯಾಕೋಬನಿಗೆ ಹೆತ್ತಳು. 19 ಯಾಕೋಬನ ಹೆಂಡತಿಯಾದ ರಾಹೇಲಳ ಕುಮಾರರು: ಯೋಸೇಫ್ ಬೆನ್ಯಾವಿಾನ್ ಎಂಬವರು. 20 ಯೋಸೇಫನಿಗೆ ಐಗುಪ್ತ ದೇಶದಲ್ಲಿ ಮಕ್ಕಳು ಹುಟ್ಟಿದರು: ಓನಿನ ಯಾಜಕನಾಗಿರುವ ಪೋಟೀಫೆರನ ಮಗಳಾದ ಆಸನತಳು ಮನಸ್ಸೆಯನ್ನೂ ಎಫ್ರಾಯಾಮ ನನ್ನೂ ಅವನಿಗೆ ಹೆತ್ತಳು. 21 ಬೆನ್ಯಾವಿಾನನ ಕುಮಾ ರರು: ಬಿಳಾ ಬೆಕೆರ್ ಅಶ್ಬೇಲ್ ಗೇರಾ ನಾಮಾನ್ ಏಹೀರೋಷ್ ಮುಪ್ಪೀಮ್ ಹುಪ್ಪೀಮ್ ಆರ್ದ ಎಂಬವರು. 22 ಇವರು ಯಾಕೋಬನಿಗೆ ಹುಟ್ಟಿದ ರಾಹೇಲಳ ಕುಮಾರರು. ಎಲ್ಲಾ ಕೂಡಿ ಹದಿನಾಲ್ಕು ಮಂದಿ. 23 ದಾನನ ಮಗನು ಹುಶೀಮನು. 24 ನಫ್ತಾ ಲಿಯ ಕುಮಾರರು: ಯಹೇಲ್ ಗೂನೀ ಯೇಚೆರ್ ಶಿಲ್ಲೇಮ್ ಎಂಬವರು. 25 ಲಾಬಾನನು ತನ್ನ ಮಗಳಾದ ರಾಹೇಲಳಿಗೆ ಕೊಟ್ಟಿದ್ದ ಬಿಲ್ಹಳ ಕುಮಾರರು ಇವರಾ ಗಿದ್ದರು. ಇವರನ್ನು ಆಕೆಯು ಯಾಕೋಬನಿಗೆ ಹೆತ್ತಳು. ಇವರು ಎಲ್ಲಾ ಕೂಡಿ ಏಳು ಮಂದಿ. 26 ಯಾಕೋಬನ ಕುಮಾರರ ಹೆಂಡತಿಯರ ಹೊರ ತಾಗಿ ಯಾಕೋಬನ ಸಂಗಡ ಐಗುಪ್ತಕ್ಕೆ ಬಂದವರೆಲ್ಲಾ ಅವನಿಂದ ಹುಟ್ಟಿದವರು. ಎಲ್ಲಾ ಕೂಡಿ ಅರವತ್ತಾರು ಜನರು. 27 ಇದಲ್ಲದೆ ಐಗುಪ್ತದಲ್ಲಿ ಯೋಸೇಫನಿಗೆ ಇಬ್ಬರು ಕುಮಾರರು ಹುಟ್ಟಿದರು. ಯಾಕೋಬನ ಮನೆಯವರಾಗಿ ಐಗುಪ್ತಕ್ಕೆ ಬಂದ ಜನರೆಲ್ಲಾ ಸೇರಿ ಒಟ್ಟು ಎಪ್ಪತ್ತು ಮಂದಿ. 28 ಇದಲ್ಲದೆ ಗೋಷೆನಿಗೆ ಮಾರ್ಗವನ್ನು ತೋರಿ ಸುವ ಹಾಗೆ ಅವನು ಯೆಹೂದನನ್ನು ತನ್ನ ಮುಂದಾಗಿ ಯೋಸೇಫನ ಬಳಿಗೆ ಕಳುಹಿಸಿದನು. ಅವರು ಗೋಷೆನ್ ದೇಶಕ್ಕೆ ಬಂದರು. 29 ಆಗ ಯೋಸೇಫನು ತನ್ನ ರಥವನ್ನು ಸಿದ್ಧಮಾಡಿಕೊಂಡು ತನ್ನ ತಂದೆಯಾದ ಇಸ್ರಾಯೇಲನಿಗೆ ಎದುರಾಗಿ ಗೋಷೆನಿಗೆ ಹೋಗಿ ಅವನನ್ನು ಸಂಧಿಸಿ ಅವನ ಕೊರಳನ್ನು ಅಪ್ಪಿಕೊಂಡು ಬಹಳ ಹೊತ್ತಿನ ವರೆಗೆ ಅತ್ತನು. 30 ಆಗ ಇಸ್ರಾಯೇ ಲನು ಯೋಸೇಫನಿಗೆ--ನಾನು ನಿನ್ನ ಮುಖವನ್ನು ಕಂಡು ನೀನು ಇನ್ನೂ ಜೀವದಿಂದಿರುವದನ್ನು ತಿಳು ಕೊಂಡದ್ದರಿಂದ ಸಂತೃಪ್ತನಾಗಿ ಸಾಯುವೆನು ಎಂದು ಹೇಳಿದನು. 31 ಯೋಸೇಫನು ತನ್ನ ಸಹೋದರರಿಗೂ ತನ್ನ ತಂದೆಯ ಮನೆಯವರಿಗೂ--ನಾನು ಹೋಗಿ ಫರೋಹನಿಗೆ--ಕಾನಾನ್ದೇಶದಲ್ಲಿದ್ದ ನನ್ನ ಸಹೋ ದರರೂ ನನ್ನ ತಂದೆಯ ಮನೆಯವರೂ ನನ್ನ ಬಳಿಗೆ ಬಂದಿದ್ದಾರೆ. 32 ಆದರೆ ಆ ಮನುಷ್ಯರು ಕುರಿಕಾಯುವವರು, ಅವರಿಗೆ ಮಂದೆಗಳು ಇವೆ; ತಮ್ಮ ಕುರಿ ದನಗಳನ್ನೂ ತಮಗಿದ್ದದ್ದೆಲ್ಲವನ್ನೂ ತಕ್ಕೊಂಡು ಬಂದಿದ್ದಾರೆ ಎಂದು ಹೇಳುವೆನು. 33 ಫರೋ ಹನು ನಿಮ್ಮನ್ನು ಕರೆಯಿಸಿ--ನಿಮ್ಮ ಕೆಲಸವೇನು ಎಂದು ಕೇಳುವನು. 34 ಗೋಷೆನ್ ದೇಶದಲ್ಲಿ ವಾಸವಾಗಿರು ವಂತೆ ನೀವು ಅವನಿಗೆ--ಚಿಕ್ಕಂದಿನಿಂದ ಇಂದಿನ ವರೆಗೂ ನಿನ್ನ ದಾಸರಾದ ನಾವೂ ನಮ್ಮ ತಂದೆಗಳೂ ಮಂದೆಯನ್ನು ಕಾಯುವವರಾಗಿದ್ದೇವೆ ಎಂದು ಹೇಳ ಬೇಕು. ಯಾಕಂದರೆ ಕುರಿಕಾಯುವವರೆಲ್ಲಾ ಐಗುಪ್ತ್ಯ ರಿಗೆ ಅಸಹ್ಯವಾಗಿದ್ದಾರೆ ಅಂದನು.
ಒಟ್ಟು 50 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 46 / 50
Common Bible Languages
West Indian Languages
×

Alert

×

kannada Letters Keypad References