1. ಇದಲ್ಲದೆ ಕರ್ತನು ನನಗೆ -- ಒಂದು ದೊಡ್ಡ ಸುರುಳಿಯನ್ನು ತೆಗೆದುಕೊಂಡು ಮನುಷ್ಯನ ಲೇಖನಿಯಿಂದಲೇ ಮಹೇರ್ ಶಾಲಾಲ್ ಹಾಷ್ ಬಜ್ (ಅಂದರೆ ಸೂರೆಗೆ ಆತುರ, ಕೊಳ್ಳೆಗೆ ಅವಸರ) ವಿಷಯವಾಗಿ ಬರೆ ಅಂದನು.
|
3. ಅನಂತರ ನಾನು ಪ್ರವಾದಿನಿ ಯನ್ನು ಕೂಡಲು ಆಕೆಯು ಬಸುರಾಗಿ ಒಬ್ಬ ಮಗನನ್ನು ಹೆತ್ತಳು. ಆಗ ಕರ್ತನು ನನಗೆ--ಅವನಿಗೆ ಮಹೇರ್ ಶಾಲಾಲ್ ಹಾಷ್ ಬಜ್ ಎಂದು ಹೆಸರಿಡು ಎಂದು ಹೇಳಿದನು.
|
4. ಆ ಮಗುವು--ಅಪ್ಪಾ, ಅಮ್ಮಾ ಎಂದು ಕೂಗಬಲ್ಲವನಾಗುವದರ ಮುಂಚೆ ಅಶ್ಯೂರದ ಅರಸ ನು ದಮಸ್ಕದ ಆಸ್ತಿಯನ್ನೂ ಸಮಾರ್ಯದ ಸೂರೆ ಯನ್ನೂ ತೆಗೆದುಕೊಂಡು ಹೋಗುವನು ಅಂದನು.
|
7. ಇಗೋ, ಕರ್ತನು ಎಲ್ಲಾ ಮಹಿಮೆಯಿಂದ ಕೂಡಿದ ಅಶ್ಯೂರದ ಅರಸನೆಂಬ ಮಹಾನದಿಯ ರಭಸವಾದ ದೊಡ್ಡ ಪ್ರವಾಹವನ್ನು ಇವರ ಮೇಲೆ ಬರಮಾಡುವನು; ಅದು ತನ್ನ ಕಾಲುವೆಗಳನ್ನೆಲ್ಲಾ ಒಳಗೊಂಡು ದಡಗಳನ್ನೆಲ್ಲಾ ವಿಾರಿ
|
8. ಯೆಹೂದ ದಲ್ಲಿಯೂ ನುಗ್ಗಿ ತುಂಬಿ ತುಳುಕಿ ಹಬ್ಬಿಕೊಂಡು ಕತ್ತಿ ನವರೆಗೂ ಏರುವದು; ಓ ಇಮ್ಮಾನುವೇಲನೇ, ಆ ಅರಸನ ರೆಕ್ಕೆಗಳು ಹರಡಿ ನಿನ್ನ ದೇಶದ ಅಗಲವನ್ನೆಲ್ಲಾ ಆವರಿಸಿಕೊಳ್ಳುವವು.
|
9. ಓ ಪ್ರಜೆಗಳೇ, ನೀವು ಕೂಡಿಕೊಳ್ಳಿರಿ; ನೀವು ಒಡೆದು ಚೂರುಚೂರಾಗುವಿರಿ; ಎಲ್ಲಾ ದೂರ ದೇಶದ ವರೇ, ಕಿವಿಗೊಡಿರಿ, ನಡುಕಟ್ಟಿಕೊಳ್ಳಿರಿ ನೀವು ಒಡೆದು ಚೂರು ಚೂರಾಗುವಿರಿ; ನಡುಕಟ್ಟಿಕೊಳ್ಳಿರಿ ನೀವು ಒಡೆದು ಚೂರು ಚೂರಾಗುವಿರಿ.
|
12. ಇವರು ಯಾವದನ್ನು ಒಪ್ಪಂದ ಎಂದು ಹೇಳುತ್ತಾರೋ ನೀವು ಅದನ್ನು ಒಪ್ಪಂದವೆನ್ನಬೇಡಿರಿ; ಅವರ ಭಯಕ್ಕೆ ನೀವು ಭಯಪಡಬೇಡಿರಿ, ಇಲ್ಲವೆ ಹೆದರಬೇಡಿರಿ.
|
14. ಆತನೇ ಪರಿಶುದ್ಧ ಸ್ಥಾನವಾಗಿರುವನು; ಆದರೆ ಇಸ್ರಾಯೇಲಿನ ಎರಡು ಮನೆಗಳಿಗೆ ಎಡವುವ ಕಲ್ಲು, ಮುಗ್ಗರಿಸುವ ಬಂಡೆಯು ಮತ್ತು ಯೆರೂ ಸಲೇಮಿನ ನಿವಾಸಿಗಳಿಗೆ ಬಲೆಯೂ ಬೋನೂ ಆಗಿರುವನು.
|
18. ಇಗೋ, ನನಗೆ ಕರ್ತನು ದಯಪಾಲಿಸಿದ ಮಕ್ಕಳೂ ನಾನೂ ಚೀಯೋನ್ ಪರ್ವತದಲ್ಲಿ ವಾಸವಾಗಿರುವ ಸೈನ್ಯಗಳ ಕರ್ತನಿಂದುಂಟಾದ ಗುರುತುಗಳಾಗಿಯೂ ಅದ್ಭುತ ಗಳಾಗಿಯೂ ಇಸ್ರಾಯೇಲಿನಲ್ಲಿದ್ದೇವೆ.
|
19. ಲೊಚಗುಟ್ಟುವ ಪಿಸುಮಾತಾಡುವ ಮಂತ್ರಗಾರ ರನ್ನೂ ಕಣಿಹೇಳುವವರನ್ನೂ ಹುಡುಕಿರಿ ಎಂದು ಅವರು ನಿಮಗೆ ಹೇಳುವಾಗ ಜನರು ತಮ್ಮ ದೇವರನ್ನೇ ಹುಡುಕುವದಿಲ್ಲವೋ? ಜೀವಿತರಿಗಾಗಿ ಸತ್ತವರಲ್ಲಿ ಹೋಗುವದುಂಟೋ?
|
21. ಅವರು ಘೋರ ಕಷ್ಟಕ್ಕೊಳಗಾಗಿ ಹಸಿದು ದೇಶದಲ್ಲಿ ಅಲೆಯು ವರು; ಅವರು ಹಸಿದಾಗ ರೇಗಿಕೊಂಡು ತಮ್ಮ ರಾಜ ನನ್ನೂ ದೇವರನ್ನೂ ಶಪಿಸಿ ಮೇಲಕ್ಕೆ ನೋಡುವರು.ಅವರು ಭೂಮಿಯನ್ನು ದೃಷ್ಟಿಸಿದರೂ ಇಗೋ, ಇಕ್ಕಟ್ಟೆಂಬ ಕತ್ತಲೂ ಸಂಕಟವೆಂಬ ಅಂಧಕಾರವೂ ಕವಿದುಕೊಂಡಿರುವದು; ಅವರು ಕಾರ್ಗತ್ತಲೆಗೆ ತಳ್ಳಲ್ಪ ಡುವರು.
|
22. ಅವರು ಭೂಮಿಯನ್ನು ದೃಷ್ಟಿಸಿದರೂ ಇಗೋ, ಇಕ್ಕಟ್ಟೆಂಬ ಕತ್ತಲೂ ಸಂಕಟವೆಂಬ ಅಂಧಕಾರವೂ ಕವಿದುಕೊಂಡಿರುವದು; ಅವರು ಕಾರ್ಗತ್ತಲೆಗೆ ತಳ್ಳಲ್ಪ ಡುವರು.
|